ಸ್ವಾಮಿ ವಿವೇಕಾನಂದರನ್ನು ತಿಳಿಯಲು ಮತ್ತೊಬ್ಬ ವಿವೇಕಾನಂದ ಹುಟ್ಟಿ ಬರಬೇಕಾಗುತ್ತದೆ ಎಂದು ಬಾಗೇವಾಡಿ ಕಾಲೇಜಿನ ಪ್ರೊ. ಅಶೋಕ ಹಂಚಲಿ ಹೇಳಿದರು.
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕನಾಂದರ 161ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ವಿವೇಕನಾಂದರು ಹೊಂದಿರುವ ಜ್ಞಾನವನ್ನು ಮತ್ತೆ ಯಾರೂ ಹೊಂದಿರಲಿಲ್ಲ. ಅದಕ್ಕೆ ಅವರನ್ನು ತಿಳಿದುಕೊಳ್ಳಬೇಕೆಂದರೆ ಮತ್ತೊಬ್ಬ ವಿವೇಕಾನಂದರು ಹುಟ್ಟ ಬೇಕಾಗುತ್ತದೆ” ಎಂದು ಹೇಳಿದರು. ಇದೇ ವೇಳೆ ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಹಮ್ಮಿಕೊಂಡಿದ್ದ ಭಾಷಣ, ಚಿತ್ರಕಲೆ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಮಂತ್ರಿಸ್ಥಾನಕ್ಕಾಗಿ ಸಭಾಧ್ಯಕ್ಷ ಸ್ಥಾನ ನೀರಾಕರಿಸಬೇಡಿ: ಯು ಟಿ ಖಾದರ್
ಕಾರ್ಯಕ್ರಮದಲ್ಲಿ ಪ್ರದರ್ಶಕ ಕಲೆಗಳ ವಿದ್ಯಾರ್ಥಿನಿಯರು ಪ್ರಾರ್ಥನೆ ಗೀತೆಯನ್ನು ಹಾಡಿದರು. ಡಾ.ಕಲಾವತಿ ಕಾಂಬಳೆ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಡಾ.ಹನುಮಂತಯ್ಯ ಪೂಜಾರಿ ಸ್ವಾಗತಿಸಿದರು. ಡಾ.ಶಾಂತಾದೇವಿ ಟಿ ವಂದಿಸಿದರು. ಡಾ. ತಹಮೀನಾ ಕೋಲಾರ ಕಾರ್ಯಕ್ರಮ ನಿರೂಪಿಸಿದರು.