ಹಲ್ದ್ವಾನಿ ಶುದ್ಧೀಕರಣ ವಿವಾದ | ರಾಹುಲ್‌ ವಿರುದ್ಧ FIR; ದಲಿತ ಖರ್ಗೆ ವಿರುದ್ಧ ದಲಿತನನ್ನೇ ಎತ್ತಿ ಕಟ್ಟಿತೇ ಬಿಜೆಪಿ?

Date:

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸಿದ ಪ್ರಕರಣದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಎತ್ತಿರುವ ಅಸ್ಪೃಶ್ಯತೆ ಆರೋಪಕ್ಕೆ ಇದೀಗ ಮತ್ತೊಂದು ರಾಜಕೀಯ ತಿರುವು ಸಿಕ್ಕಿದೆ. ಖರ್ಗೆ ಪರವಾಗಿ ಅಸ್ಪೃಶ್ಯತೆ ಪ್ರಶ್ನೆ ಎತ್ತಿ ಶುದ್ಧೀಕರಣ ಹವನ ಮಾಡಿದವರ ವಿರುದ್ಧ ರಾಹುಲ್ ಗಾಂಧಿ ಎಫ್‌ಐಆರ್‌ಗೆ ಒತ್ತಾಯಿಸಿದ್ದರು. ಈ ಬೆನ್ನಲ್ಲೇ, ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಹಲ್ದ್ವಾನಿಯ ನಿವಾಸಿ ಅಮಿತ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ರಾಹುಲ್ ಗಾಂಧಿ ವಿರುದ್ಧವೇ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

- Advertisement -

ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 196 ಮತ್ತು 299 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989ರ ಸೆಕ್ಷನ್ 3(1)(q) ಅಡಿ ಪ್ರಕರಣ ದಾಖಲಿಸಲಾಗಿದೆ. ಹಲ್ದ್ವಾನಿಯ ಜವಾಹರ್ ನಗರ ಕಾಲೋನಿ ನಿವಾಸಿ ಹಾಗೂ ಶ್ರೀರಾಮ ಸೇನಾ ಧರ್ಮಾರ್ಥ ಸೇವಾ ಸಮಿತಿಯ ಸದಸ್ಯ ಅಮಿತ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಅಮಿತ್ ಕುಮಾರ್, ಆಗಸ್ಟ್ 11ರಂದು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ನಡೆದದ್ದು ಸಾಮಾನ್ಯ ಸ್ವಚ್ಛತಾ ಕಾರ್ಯವಾಗಿತ್ತು. ಆದರೆ ರಾಹುಲ್ ಗಾಂಧಿ ದೆಹಲಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಸ್ವಚ್ಛತಾ ಕಾರ್ಯಕ್ಕೆ ಜಾತಿಯ ಬಣ್ಣ ನೀಡಿ, ಅದನ್ನು ಅಸ್ಪೃಶ್ಯತೆ ಹಾಗೂ ಅಪರಾಧ ಎಂದು ಬಿಂಬಿಸಿದ್ದಾರೆ. ರಾಹುಲ್ ಗಾಂಧಿ ಅವರ ಹೇಳಿಕೆಗಳಿಂದ ಜಾತಿ ಭಾವನೆಗಳಿಗೆ ಧಕ್ಕೆಯಾಗಿದೆ. ಸುಳ್ಳು ಹಾಗೂ ಅಪೂರ್ಣ ಮಾಹಿತಿಯ ಆಧಾರದ ಮೇಲೆ ರಾಹುಲ್ ಗಾಂಧಿ ಪರಿಶಿಷ್ಟ ಜಾತಿ ಸಮುದಾಯದ ವಿರುದ್ಧ ಜಾತಿ ಸೂಚಕ ಮತ್ತು ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ. ಇದರಿಂದ ಸಮುದಾಯಗಳ ನಡುವೆ ದ್ವೇಷ ಮತ್ತು ಅಸಹನೆ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ನೈನಿತಾಲ್ ಜಿಲ್ಲೆಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಟಿ.ಸಿ. ಮಂಜುನಾಥ್ ಪ್ರಕರಣವನ್ನು ದೃಢಪಡಿಸಿದ್ದಾರೆ. “ಅಮಿತ್ ಅಗತ್ಯವಿರುವ ಎಲ್ಲ ಸಾಕ್ಷ್ಯಗಳನ್ನು ಸಲ್ಲಿಸಿದ್ದು, ಆರೋಪಗಳನ್ನು ಸಮರ್ಥಿಸಲು ಪುರಾವೆಗಳನ್ನು ಒದಗಿಸಿದ್ದಾರೆ. ಅದರ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಎಎಸ್‌ಪಿ ಅಮಿತ್ ಸೈನಿ ತನಿಖೆಯ ನೇತೃತ್ವ ವಹಿಸಲಿದ್ದಾರೆ” ಎಂದು ಅವರು ತಿಳಿಸಿದ್ದಾರೆ.

ಆಗಸ್ಟ್ 8ರಂದು ಮಲ್ಲಿಕಾರ್ಜುನ ಖರ್ಗೆ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಇದಾದ ಎರಡು ದಿನಗಳ ಬಳಿಕ, ಆಗಸ್ಟ್ 10ರಂದು ಬಲಪಂಥೀಯ ಸಂಘಟನೆಯಾದ ಶ್ರೀ ರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಸ್ ಸಂಘಟನೆಯ ಸದಸ್ಯರು ಮೈದಾನದ ‘ಶುದ್ಧೀಕರಣ’ಕ್ಕಾಗಿ ಹವನ ನಡೆಸಿದ್ದರು.

ಕಾಂಗ್ರೆಸ್ ಕಾರ್ಯಕರ್ತರು ರ‍್ಯಾಲಿಯಲ್ಲಿ ಕೂಗಿದ ಘೋಷಣೆಗಳು ಹಾಗೂ ಖರ್ಗೆ ಈ ಹಿಂದೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅನ್ನು ‘ವಿಷದ ಹಾವು’ ಎಂದು ಹೋಲಿಸಿದ್ದ ಹೇಳಿಕೆಗೆ ಪ್ರತಿಯಾಗಿ ಈ ಶುದ್ಧೀಕರಣ ವಿಧಿ ನಡೆಸಲಾಗಿದೆ ಎಂದು ಸಂಘಟನೆಯ ಸದಸ್ಯರು ಹೇಳಿದ್ದರು. ಈ ಘಟನೆಯನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿತ್ತು. ಬಳಿಕ ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದ ಖರ್ಗೆ, ಹಲ್ದ್ವಾನಿಯಲ್ಲಿ ವೇದಿಕೆಯನ್ನು ‘ಶುದ್ಧೀಕರಿಸಿದ’ವರ ವಿರುದ್ಧ ಅಸ್ಪೃಶ್ಯತೆ ತಡೆ ಕಾನೂನುಗಳ ಅಡಿ ಪ್ರಕರಣ ದಾಖಲಿಸಿ, ಸಂಬಂಧಪಟ್ಟವರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಒತ್ತಾಯಿಸಿದ್ದರು. ಈ ವಿಚಾರವಾಗಿ ಕಾಂಗ್ರೆಸ್ ಉತ್ತರಾಖಂಡದಾದ್ಯಂತ ಸರಣಿ ಪ್ರತಿಭಟನೆಗಳನ್ನೂ ನಡೆಸಿದೆ.

ರಾಜಕೀಯದಲ್ಲಿ ಜಾತಿ ಮತ್ತು ಸಮುದಾಯದ ಒಳಗಿನ ವಿಭಜನೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ತಂತ್ರ ಹೊಸದಲ್ಲ. ದಲಿತ ಸಮುದಾಯದೊಳಗಿನ ವಿವಿಧ ನಾಯಕತ್ವ, ಸಂಘಟನೆಗಳು ಮತ್ತು ಸಾಮಾಜಿಕ ಗುಂಪುಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಂಡಿದೆ ಎಂಬ ಆರೋಪಗಳು ಹಲವು ಸಂದರ್ಭಗಳಲ್ಲಿ ಕೇಳಿಬಂದಿವೆ. ಸದ್ಯ ಈ ಬೆಳವಣಿಗೆಯು ದಲಿತ ಸಮುದಾಯದ ವ್ಯಕ್ತಿಯನ್ನೇ ಮತ್ತೊಬ್ಬ ದಲಿತ ನಾಯಕನ ವಿರುದ್ಧ ಎತ್ತಿಕಟ್ಟುವ ಬಿಜೆಪಿಯ ‘ಒಡೆದು ಆಳುವ’ ತಂತ್ರದ ಮತ್ತೊಂದು ಉದಾಹರಣೆಯೇ ಆಗಿದೆ ಎನ್ನಲಾಗುತ್ತಿದೆ.

ಬಿಜೆಪಿ ಮೊದಲಿನಿಂದಲೂ ಕೇವಲ ಮುಸ್ಲಿಂ ವಿರುದ್ಧ ಹಿಂದು ಸಮುದಾಯವನ್ನು ಎತ್ತಿಕಟ್ಟುತ್ತಿದ್ದ. ಒಂದೇ ಧರ್ಮದ ಸಮುದಾಯಗಳ ನಡುವೆಯೂ ಇಂಥದ್ದೇ ಒಡಕು ನೀತಿ ಅನುಸರಿಸಿ ರಾಜಕೀಯ ಲಾಭ ಪಡೆದಿರುವುದು ಸತ್ಯ. 2014ರ ಲೋಕಸಭೆ ಮತ್ತು 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಯಾದವ್ ಪ್ರಾಬಲ್ಯದ OBC ರಾಜಕೀಯಕ್ಕೆ ಪರ್ಯಾಯವಾಗಿ non-Yadav OBC ಸಮುದಾಯಗಳನ್ನು ಸಂಘಟಿಸಿತು. ಕುರ್ಮಿ, ಲೋಧ್, ನಿಷಾದ್, ರಾಜ್ಭರ್ ಸೇರಿದಂತೆ ವಿವಿಧ ಹಿಂದುಳಿದ ಸಮುದಾಯಗಳ ರಾಜಕೀಯ ಪ್ರತಿನಿಧಿತ್ವದ ಪ್ರಶ್ನೆಯನ್ನು ಮುಂದಿಟ್ಟು, ಅವುಗಳನ್ನು ಎಸ್‌ಪಿ–ಯಾದವ್ ರಾಜಕೀಯದಿಂದ ಬೇರ್ಪಡಿಸುವ ತಂತ್ರ ಅನುಸರಿಸಿತು.

ಇದನ್ನೂ ಓದಿ: ಹಲ್ದ್ವಾನಿ ʼಶುದ್ಧೀಕರಣʼ ವಿವಾದ: ಕಾಂಗ್ರೆಸ್ ನಾಯಕರ ವಿರುದ್ಧವೇ ಖರ್ಗೆ ಅಸಮಾಧಾನ

ಮಾಯಾವತಿ ನೇತೃತ್ವದ BSPಯ ಪ್ರಮುಖ ಸಾಮಾಜಿಕ ಆಧಾರ ಜಾತವ್ ದಲಿತರು. ಇದಕ್ಕೆ ಪ್ರತಿಯಾಗಿ ಬಿಜೆಪಿ non-Jatav ದಲಿತ ಸಮುದಾಯಗಳಾದ ಪಾಸಿ, ವಾಲ್ಮೀಕಿ ಸೇರಿದಂತೆ ಇತರ ಗುಂಪುಗಳತ್ತ ಹೆಚ್ಚಿನ ಗಮನ ಹರಿಸಿತು. ಹಲ್ದ್ವಾನಿ ಪ್ರಕರಣವೂ ಅಂಥದ್ದೇ ನೀತಿಯ ಉದಾಹರಣೆ.

ಬಿಜೆಪಿ ತನ್ನ ಮೈತ್ರಿಯಲ್ಲಿ ಮೇಲ್ಜಾತಿ, non-Yadav OBC ಮತ್ತು ದಲಿತ ಮತದಾರರನ್ನು ಒಂದೇ ವೇದಿಕೆಯಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವಂತೆ ತೋರಿಸಿಕೊಳ್ಳುತ್ತದೆ. ಅಂದರೆ, ಒಂದು ದೊಡ್ಡ ಸಮುದಾಯವನ್ನು ಏಕ ಘಟಕವಾಗಿ ಎದುರಿಸುವ ಬದಲು, ಅದರೊಳಗಿನ ಸಣ್ಣ ಜಾತಿ-ಸಮುದಾಯಗಳ ನಡುವಿನ ಹಿತಾಸಕ್ತಿ ಮತ್ತು ಪ್ರಾತಿನಿಧ್ಯದ ವ್ಯತ್ಯಾಸಗಳನ್ನು ರಾಜಕೀಯವಾಗಿ ಬಳಸಿಕೊಳ್ಳುವ ತಂತ್ರವನ್ನ ಅನುಸರಿಸುತ್ತದೆ.

ಭಾಷಣ ಮಾಡಿದ ಸ್ಥಳದ ‘ಶುದ್ಧೀಕರಣ’ದಿಂದ ಆರಂಭವಾದ ವಿವಾದ, ಇದೀಗ ದಲಿತ ನಾಯಕನ ಪರ ಧ್ವನಿ ಎತ್ತಿದ ಮತ್ತೊಬ್ಬ ನಾಯಕರ ವಿರುದ್ಧ ದಲಿತ ಸಮುದಾಯದ ವ್ಯಕ್ತಿಯೇ ದೂರು ಕೊಡುವವರೆಗೆ ಬಂದು ನಿಂತಿದೆ. ಖರ್ಗೆ ಅವರ ಆರೋಪವಾಗಲೀ, ರಾಹುಲ್ ಗಾಂಧಿ ವಿರುದ್ಧದ ದೂರಿನಲ್ಲಿರುವ ಆರೋಪಗಳಾಗಲೀ ಪ್ರಾಮಾಣಿಕ ತನಿಖೆಯಿಂದಷ್ಟೇ ಹೊರಬರಬೇಕಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ನ.28, 29ರಂದು 47ನೇ ಶರಣ ಕಮ್ಮಟ, ಅನುಭವಮಂಟಪ ಉತ್ಸವ

ವಿಶ್ವಬಸವಧರ್ಮ ಅನುಭವಮಂಟಪ, ಬಸವಕಲ್ಯಾಣ ವತಿಯಿಂದ ನವೆಂಬರ್ 28 ಮತ್ತು 29ರಂದು 47ನೇ...

ಕನ್ನಾಟ್ ಪ್ಲೇಸ್‌ನಲ್ಲಿ ಸಿಜೆಪಿ ಪ್ರತಿಭಟನೆ: ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರ

ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 16ರಂದು ದೆಹಲಿಯ...

ಜಂತರ್ ಮಂತರ್ ಪ್ರತಿಭಟನಾ ಸ್ಥಳ ರದ್ದು: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ನವದೆಹಲಿಯ ಐತಿಹಾಸಿಕ 'ಜಂತರ್ ಮಂತರ್' ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಅಧಿಕೃತವಾಗಿ...