ಒಳಗೆ ದ್ವೇಷದ ವಿಷ, ಹೊರಗೆ ಗೆಳೆತನದ ವೇಷ: ಬಾಬರ್ ನಾಡಿನ ಪ್ರಶಸ್ತಿಯಿಂದ ಕಳಚಿದ ಮೋದಿಯ ಮುಖವಾಡ

Date:

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಜ್ಬೇಕಿಸ್ತಾನ ಸರ್ಕಾರವು ತನ್ನ ಅತ್ಯುಚ್ಚ ಗೌರವವಾದ ‘ಓಲಿ ದಾರಾಜಲಿ ದೋಸ್ಲಿಕ್’ (ಉಚ್ಚಸ್ತರದ ಗೆಳೆತನ ಪ್ರಶಸ್ತಿ) ನೀಡಿ ಪುರಸ್ಕರಿಸಿರುವ ವಿದ್ಯಮಾನವು, ಆಂತರಿಕ ರಾಜಕಾರಣ ಹಾಗೂ ವಿದೇಶಾಂಗ ನೀತಿಯ ನಡುವಿನ ದೊಡ್ಡ ವೈರುಧ್ಯವನ್ನು ಮುನ್ನೆಲೆಗೆ ತಂದಿದೆ. ದೇಶದೊಳಗೆ ಮೊಗಲ್ ಆಡಳಿತಗಾರರ ವಿರುದ್ಧ ಸೃಷ್ಟಿಸಲಾಗುವ ತೀವ್ರ ರಾಜಕೀಯ ನಿರೂಪಣೆ ಮತ್ತು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತಳೆಯುವ ನಿಲುವುಗಳ ನಡುವಿನ ಇಬ್ಬಗೆಯನ್ನು ಈ ಬೆಳವಣಿಗೆ ಸ್ಪಷ್ಟವಾಗಿ ಬಿಂಬಿಸುತ್ತದೆ.

- Advertisement -

​ಮೋದಿ ಹಾಗೂ ಬಿಜೆಪಿಯ ರಾಜಕಾರಣವು ಬಾಬರ್ ಹಾಗೂ ಮೊಗಲರ ಆಳ್ವಿಕೆಯನ್ನು ತೀವ್ರವಾಗಿ ವಿರೋಧಿಸುತ್ತಾ, ಆ ಇತಿಹಾಸವನ್ನು ರಾಜಕೀಯ ಧ್ರುವೀಕರಣದ ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ. ಆದರೆ, ಇದೇ ಆಡಳಿತದ ಸಾರಥ್ಯ ವಹಿಸಿರುವ ಪ್ರಧಾನಿಯವರು, ಮೊಗಲ್ ಸಾಮ್ರಾಜ್ಯದ ಸಂಸ್ಥಾಪಕ ಬಾಬರ್ ಜನಿಸಿದ ಅದೇ ಉಜ್ಬೇಕಿಸ್ತಾನದ ನೆಲದಿಂದ ಅತ್ಯುಚ್ಚ ಗೌರವವನ್ನು ಮುಕ್ತಕಂಠದಿಂದ ಸ್ವೀಕರಿಸಿರುವುದು ಅವರ ರಾಜಕೀಯ ಅವಕಾಶವಾದಿತನವನ್ನು ಎತ್ತಿ ತೋರಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

​ಉಜ್ಬೇಕಿಸ್ತಾನದ ಅಧ್ಯಕ್ಷ ಶವ್ಕತ್ ಮಿರ್ಜಿಯೊಯೆವ್ ಅವರು ಪ್ರದಾನ ಮಾಡಿರುವ ಈ ಗೌರವವು, 2016 ರಿಂದೀಚೆಗೆ ಪ್ರಧಾನಿ ಮೋದಿಯವರು ವಿದೇಶಗಳಿಂದ ಪಡೆದಿರುವ 36ನೆಯ ಪ್ರಶಸ್ತಿಯಾಗಿದೆ. ದೇಶದೊಳಗಿನ ಆಡಳಿತಾತ್ಮಕ ವೈಫಲ್ಯಗಳು ಹಾಗೂ ಬೆಲೆ ಏರಿಕೆಯಂತಹ ನೈಜ ಸವಾಲುಗಳನ್ನು ಮರೆಮಾಚುವ ಉದ್ದೇಶದಿಂದ, ಕೇವಲ ವಿದೇಶಿ ಗೌರವಗಳ ಸಂಗ್ರಹದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ವ್ಯಕ್ತಿಗತ ವರ್ಚಸ್ಸು ವೃದ್ಧಿಸಿಕೊಳ್ಳುವ ಕಸರತ್ತು ನಡೆಸುತ್ತಿದ್ದಾರೆ ಎಂಬ ಟೀಕೆಗಳು ದಟ್ಟವಾಗಿವೆ.

​ಐತಿಹಾಸಿಕವಾಗಿ ನೋಡಿದರೆ, ಮೊಗಲ್ ಸಾಮ್ರಾಜ್ಯದ ಸಂಸ್ಥಾಪಕ ಬಾಬರ್ ಜನಿಸಿದ್ದು ಇಂದಿನ ಉಜ್ಬೇಕಿಸ್ತಾನದ ವ್ಯಾಪ್ತಿಯಲ್ಲಿರುವ ಫರ್ಗಾನಾ ಕಣಿವೆಯ ಅಂದಿಜಾನ್‌ನಲ್ಲಿ. ತಾಯಿಯ ಕಡೆಯಿಂದ ಚೆಂಗೀಝ್ ಖಾನ್ ಹಾಗೂ ತಂದೆಯ ಕಡೆಯಿಂದ ತೈಮೂ‌ರ್ ವಂಶಸ್ಥನಾಗಿದ್ದ ಬಾಬರ್, ಮಧ್ಯ ಏಷ್ಯಾದಿಂದ ಭಾರತದ ಕಡೆಗೆ ದಂಡೆತ್ತಿ ಬಂದಿದ್ದನು.

​1526ರ ಮೊದಲನೆಯ ಪಾಣಿಪತ್‌ ಯುದ್ಧದಲ್ಲಿ ದೆಹಲಿಯ ಅಂದಿನ ಸುಲ್ತಾನ ಇಬ್ರಾಹಿಂ ಲೋಧಿಯನ್ನು ಸೋಲಿಸುವ ಮೂಲಕ ಬಾಬರ್ ಭಾರತದಲ್ಲಿ ಮೊಗಲ್ ಸಾಮ್ರಾಜ್ಯ ಸ್ಥಾಪಿಸಿದ್ದ. 1526ರಿಂದ 1530ರ ತನಕ ನಾಲ್ಕು ವರ್ಷಗಳ ಕಾಲ ರಾಜ್ಯಭಾರ ಮಾಡಿದ ಆತ, 1530ರ ಡಿಸೆಂಬರ್‌ನಲ್ಲಿ ಆಗ್ರಾದಲ್ಲಿ ತನ್ನ 47ನೇ ವಯಸ್ಸಿನಲ್ಲಿ ಮರಣ ಹೊಂದಿದನು. ಈತನ ನಂತರ ಮಗ ಹುಮಾಯೂನ್ ರಾಜ್ಯವಾಳಿದ.

​ಸ್ಥಳೀಯವಾಗಿ ರಾಜಕೀಯ ಲಾಭಕ್ಕಾಗಿ ಬಾಬರ್‌ನ ಹೆಸರನ್ನು ನಿರಂತರವಾಗಿ ದ್ವೇಷದ ಸರಕನ್ನಾಗಿ ಬಳಸಿಕೊಳ್ಳುವ ಮೋದಿ ಹಾಗೂ ಅವರ ವ್ಯವಸ್ಥೆಯು, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಾತ್ರ ಅದೇ ಇತಿಹಾಸದ ಮೂಲ ನೆಲದೊಂದಿಗೆ ಗೆಳೆತನದ ಪ್ರಶಸ್ತಿ ಸ್ವೀಕರಿಸಿ ಬೀಗುತ್ತಿರುವುದು ಅವರ ಬೂಟಾಟಿಕೆಯನ್ನು ಪ್ರದರ್ಶಿಸುತ್ತದೆ. ದೇಶದೊಳಗೆ ಒಂದು ಸಿದ್ಧಾಂತ, ಹೊರಗೆ ಮತ್ತೊಂದು ಮುಖವಾಡ ಧರಿಸುವ ಇಂತಹ ನಡೆಗಳು ಮೋದಿಯವರ ನೈತಿಕತೆಯಿಲ್ಲದ ರಾಜಕಾರಣದ ಅಸಲಿಯತ್ತನ್ನು ಬಯಲು ಮಾಡಿವೆ.

ಆಂತರಿಕ ರಾಜಕಾರಣದಲ್ಲಿ ಮುಸ್ಲಿಂ ದ್ವೇಷದ ರಾಜಕಾರಣ ಮಾಡುವ ಮೋದಿ, ವಿದೇಶಿ ವೇದಿಕೆಗಳಲ್ಲಿ ಮಾತ್ರ ಪ್ರಶಸ್ತಿಗಳಿಗಾಗಿ ಮೃದು ಧೋರಣೆ ತೋರುತ್ತಿದ್ದಾರೆ. ದೇಶದ ಜನರ ನೈಜ ಸಮಸ್ಯೆಗಳನ್ನು ಬಗೆಹರಿಸುವ ಬದಲು, ಕೇವಲ ತಮ್ಮ ವೈಯಕ್ತಿಕ ವರ್ಚಸ್ಸು ಮತ್ತು ಪ್ರಶಸ್ತಿಗಳ ಹಪಾಹಪಿಗೆ ಆದ್ಯತೆ ನೀಡುತ್ತಿರುವುದು ಅವರ ಆಡಳಿತದ ವಿಪರ್ಯಾಸ. ಸ್ವದೇಶದಲ್ಲಿ ದ್ವೇಷ ಬಿತ್ತುವ ಮತ್ತು ವಿದೇಶದಲ್ಲಿ ಶಾಂತಿ, ಗೆಳೆತನದ ಮುಖವಾಡ ಧರಿಸುವ ಮೋದಿಯವರ ಈ ದ್ವಂದ್ವ ನೀತಿಯು, ಅವರ ಅಧಿಕಾರ ದಾಹ ಮತ್ತು ನೈತಿಕತೆಯಿಲ್ಲದ ರಾಜಕಾರಣವನ್ನು ಸಂಪೂರ್ಣವಾಗಿ ಬೆತ್ತಲೆ ಮಾಡಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ನ.28, 29ರಂದು 47ನೇ ಶರಣ ಕಮ್ಮಟ, ಅನುಭವಮಂಟಪ ಉತ್ಸವ

ವಿಶ್ವಬಸವಧರ್ಮ ಅನುಭವಮಂಟಪ, ಬಸವಕಲ್ಯಾಣ ವತಿಯಿಂದ ನವೆಂಬರ್ 28 ಮತ್ತು 29ರಂದು 47ನೇ...

ಕನ್ನಾಟ್ ಪ್ಲೇಸ್‌ನಲ್ಲಿ ಸಿಜೆಪಿ ಪ್ರತಿಭಟನೆ: ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರ

ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 16ರಂದು ದೆಹಲಿಯ...

ಜಂತರ್ ಮಂತರ್ ಪ್ರತಿಭಟನಾ ಸ್ಥಳ ರದ್ದು: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ನವದೆಹಲಿಯ ಐತಿಹಾಸಿಕ 'ಜಂತರ್ ಮಂತರ್' ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಅಧಿಕೃತವಾಗಿ...