ಡಿ.19ರಂದು ಮೋದಿ ಸರ್ಕಾರ ಪತನ: ಪೃಥ್ವಿರಾಜ್ ನಂತರ ಸಂಜಯ್ ರಾವತ್ ಹೇಳಿಕೆ​

Date:

ಎರಡು ದಿನಗಳ ಹಿಂದಷ್ಟೆ ಮಹಾರಾಷ್ಟ್ರದ ಮಾಜಿ ಸಿಎಂ ಪೃಥ್ವಿರಾಜ್​ ಚೌಹಾಣ್, ಕೇಂದ್ರದಲ್ಲಿ ಪ್ರಧಾನಿ ಬದಲಾಗಲಿದ್ದಾರೆ ಎಂದು ಹೇಳಿರುವ ಬೆನ್ನಲ್ಲೇ ಶಿವಸೇನೆ (ಯುಬಿಟಿ) ನಾಯಕ ಸಂಜಯ್​ ರಾವತ್​ ಕೂಡ ಅಂಥದ್ದೇ ಹೇಳಿಕೆ ನೀಡಿದ್ದಾರೆ. ದೆಹಲಿಯಲ್ಲಿ ರಾಜಕೀಯ ಭೂಕಂಪನ ಸಂಭವಿಸಲಿದ್ದು, 2025ರ ಡಿಸೆಂಬರ್​ 19ರಂದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

- Advertisement -

ಕೇಂದ್ರ ಸರ್ಕಾರ ಪತನದ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಡಿಸೆಂಬರ್​ 19ರಂದು ದೆಹಲಿ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗುತ್ತದೆ ಎಂಬ ಗುಸುಗುಸು ಸುದ್ದಿ ಇದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಈ ರಾಜಕೀಯ ಬದಲಾವಣೆಯಲ್ಲಿ ಅಮೆರಿಕ ಸರ್ಕಾರದ ಪಾತ್ರವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಸೇನಾ (ಯುಬಿಟಿ) ವಕ್ತಾರ, ರಾಜಕೀಯ ಭೂಕಂಪನದ ಕೇಂದ್ರ ಅಮೆರಿಕದಲ್ಲಿದೆ. ಕೆಲವು ದಿನದ ಹಿಂದೆ ಪೃಥ್ವಿರಾಜ್​ ಚೌಹಾಣ್​ ಹೇಳಿದಂತೆ, ಈ ಕುರಿತು ಚರ್ಚೆ ನಡೆಯುತ್ತಿದೆ ಎಂದರು.

ಬಿಜೆಪಿ ತನ್ನೆಲ್ಲ ನಾಯಕರನ್ನು ದೆಹಲಿಯಲ್ಲಿಯೇ ಇರಲು ಕೇಳಿಕೊಂಡಿದೆ. ಎಲ್ಲ ಬಿಜೆಪಿ ನಾಯಕರು ದೆಹಲಿಯಲ್ಲೇ ಇರಬೇಕೆಂದು ಮತ್ತು ನಗರ ತೊರೆಯದಂತೆ ಕೇಳಿಕೊಳ್ಳಲಾಗಿದೆ. ಹಾಗಾಗಿ, ಸ್ಪಷ್ಟವಾಗಿ ಏನೋ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಂಡ್ಯದ ಹೆಣ್ಣು ಭ್ರೂಣ ಹತ್ಯೆ ಮತ್ತು ಹೆಣ್ಣು ಸಿಗದ ಯುವಕರ ಹತಾಶೆ

ಕೆಲವು ದಿನಗಳ ಹಿಂದೆ ಕಾಂಗ್ರೆಸ್​ ನಾಯಕ ಮತ್ತು ಮಾಜಿ ಮಹಾರಾಷ್ಟ್ರ ಸಿಎಂ ಪೃಥ್ವಿರಾಜ್​ ಚೌಹಾಣ್​ ಕೂಡಾ ಅಕ್ಟೋಬರ್​ 19ರಂದು ದೇಶದ ರಾಜಕೀಯದಲ್ಲಿ ದೊಡ್ಡ ಭೂಕಂಪನವಾಗಲಿದೆ. ದೇಶದ ಪ್ರಧಾನಿ ಬದಲಾಗಲಿದ್ದಾರೆ. ಮರಾಠಿ ವ್ಯಕ್ತಿ ದೇಶದ ಪ್ರಧಾನಿಯಾಗಲಿದ್ದಾರೆ ಎಂದಿದ್ದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇಮಕಾತಿ ಸಂದರ್ಭದಲ್ಲೂ ಕೂಡ ಇದೇ ರೀತಿಯ ಊಹಾಪೋಹ ಹರಿದಾಡಿತ್ತು. ಕೇಂದ್ರ ಸಚಿವ ನಿತಿನ್​ ಗಡ್ಕರಿ ಹೆಸರು ಚರ್ಚೆಗೆ ಬಂದಿತು. ಗಡ್ಕರಿ ಆರ್​ಎಸ್​ಎಸ್​ ಬೆಂಬಲ ಹೊಂದಿದ್ದು, ಮೋದಿ ಆಪ್ತವಲಯದಲ್ಲಿದ್ದಾರೆ. ಈ ಸುದ್ದಿಗಳ ನಡುವೆ ಬಿಜೆಪಿ ಐದು ಬಾರಿ ಶಾಸಕರಾಗಿದ್ದ ಬಿಹಾರದ ನಿತಿನ್​ ನಬಿನ್​ ಅವರನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಈ ನಡುವೆ ಶಿವಸೇನಾ (ಯುಬಿಟಿ) ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ ಸೀಟು ಹಂಚಿಕೆ ಅಂತಿಮ ಘಟ್ಟ ತಲುಪಿದ್ದು, ಇನ್ನೊಂದೆರಡು ದಿನಗಳಲ್ಲಿ ಈ ಕುರಿತು ಘೋಷಿಸಲಾಗುವುದು. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಜೊತೆಗೆ ಥಾಣೆ, ಕಲ್ಯಾಣ್-ಡೊಂಬಿವಿಲಿ ಮತ್ತು ನವಿ ಮುಂಬೈಗೆ ಸೀಟು ಹಂಚಿಕೆ ಘೋಷಣೆಗಳನ್ನು ಮಾಡಲಾಗುವುದು ಎಂದು ರಾವತ್ ಹೇಳಿದರು.

ಸರ್ಕಾರ ಪತನದ ಕುರಿತು ಸಂಜಯ್ ರಾವತ್ ಹೇಳಿಕೆಗಳಿಗೆ ಬಿಜೆಪಿ ಪ್ರತಿಕ್ರಿಯಿಸಿಲ್ಲ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ ಅಸ್ತ್ರ!

ಭಾರತೀಯ ಪ್ರಜಾಪ್ರಭುತ್ವದ ಬೆನ್ನೆಲುಬನ್ನೇ ಮುರಿಯುವ, ಪ್ರಜೆಗಳ ಪವಿತ್ರವಾದ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ...

ಪದ್ಮಭೂಷಣ ಸಣ್ಣ ವಿಷಯ, ಅವರನ್ನೇ ಪಿಎಂ ಮಾಡಿ: ಗ್ಯಾನೇಶ್‌ರನ್ನು ಹೊಗಳಿಸಿ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ತಿರುಗೇಟು

ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ಕಾರ್ಯವೈಖರಿಯನ್ನು ಪಶ್ಚಿಮ...

ನಾಗಾಲ್ಯಾಂಡ್‌ನಲ್ಲಿ ಕಳ್ಳಭಟ್ಟಿ ಹಾವಳಿ; 19 ಮಂದಿ ಬಲಿ, 3 ಸಾವಿರ ಬಾಟಲಿ ವಶ

ಕಳ್ಳಭಟ್ಟಿ ಸೇವಿಸಿ ಕನಿಷ್ಠ 19 ಮಂದಿ ಮೃತಪಟ್ಟಿರುವ ಆಘಾತಕಾರಿ ಘಟನೆ ನಾಗಾಲ್ಯಾಂಡ್‌ನಲ್ಲಿ...

CEC ಗ್ಯಾನೇಶ್‌ ಕುಮಾರ್‌ ವಿರುದ್ಧ ತನಿಖೆಗೆ ಸುಪ್ರೀಂನಲ್ಲಿ ಅರ್ಜಿ; ಆಯೋಗದ ಡೇಟಾಬೇಸ್‌ ಆಡಿಟ್‌ಗೆ ಮನವಿ

ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ವಿರುದ್ಧದ ಆರೋಪಗಳ ತನಿಖೆಗೆ...