ಮುಂಬೈ ಬೃಹನ್ ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ(ಬೃಹನ್ ಮುಂಬೈ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್‌ಪೋರ್ಟ್(ಬೆಸ್ಟ್) ಸಂಯುಕ್ತ ಕಾಮಗರ್ ಕೃತಿ ಸಮಿತಿ, 12 ಉದ್ಯೋಗಿ ಸಂಘಗಳ ಕ್ರಿಯಾ ಸಮಿತಿಯು ಬುಧವಾರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿತ್ತು. ಈ ಹಿನ್ನೆಲೆ ಇಂದಿನಿಂದ ಸಾರಿಗೆ ಉದ್ಯಮದ ಬೆಸ್ಟ್ ಕಾರ್ಮಿಕರ ಮುಷ್ಕರ ಆರಂಭವಾಗಿದೆ. ಸುಮಾರು 22,000 ಮಂದಿ ಕಾರ್ಮಿಕರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದರಿಂದ ಮುಂಬೈನ ಸಾರ್ವಜನಿಕ ಸಾರಿಗೆಯ ಮೇಲೆ ದೊಡ್ಡ ಪರಿಣಾಮ ಬೀರಿದೆ.
ಮುಂಬೈನ ರೈಲು ಸಾರಿಗೆಯ ನಂತರದ BEST ಉದ್ಯಮ ಎರಡನೇ ಅತಿದೊಡ್ಡ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿದ್ದು, ಪ್ರತಿದಿನ ಸುಮಾರು 23-25 ಲಕ್ಷ ಪ್ರಯಾಣಿಕರಿಗೆ ಸೇವೆ ನೀಡುತ್ತದೆ. ಆದರೆ ದೀರ್ಘಕಾಲದ ಬೇಡಿಕೆಗಳನ್ನು ಪೂರೈಸುವಲ್ಲಿ ಒಕ್ಕೂಟ ಮತ್ತು ಆಡಳಿತದ ಮಾತುಕತೆ ವಿಫಲವಾದ ನಂತರ ಈ ಆಂದೋಲನವನ್ನು ಪ್ರಾರಂಭಿಸಲಾಗಿದೆ.
ಮುಂಬೈನ ಕೈಗಾರಿಕಾ ನ್ಯಾಯಾಲಯವು ಬೃಹನ್ ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ (ಬೆಸ್ಟ್) ಸಂಸ್ಥೆಯ ಪರವಾಗಿ ತಾತ್ಕಾಲಿಕ ಆದೇಶವನ್ನು ನೀಡಿದ ನಂತರ ಮುಷ್ಕರ ಪ್ರಾರಂಭವಾಯಿತು. ಆದರೆ ನೌಕರರು ಮುಷ್ಕರ ನಡೆಸುವುದನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ಬೆಸ್ಟ್ ಜನರಲ್ ಮ್ಯಾನೇಜರ್ ಸೋನಿಯಾ ಸೇಥಿಯವರು, ಮಹಾರಾಷ್ಟ್ರ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ(ಮೆಸ್ಮಾ)ಯನ್ನು ಅನ್ವಯಿಸಿ ಸುತ್ತೋಲೆ ಹೊರಡಿಸಿದ್ದು, ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದರೆ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕಾರ್ಮಿಕರು ದೀರ್ಘಕಾಲದಿಂದ ಬಾಕಿ ಉಳಿದಿರುವ ಹಲವು ಸಮಸ್ಯೆಗಳನ್ನು ಎತ್ತಿದ್ದು, “BEST ಬಜೆಟ್‌ನ್ನು BMC(ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್) ಬಜೆಟ್‌ಗೆ ವಿಲೀನಗೊಳಿಸಬೇಕು. ಇದರಿಂದ BESTನ ಆರ್ಥಿಕ ಸ್ಥಿರತೆಗೆ ಸಹಾಯಕವಾಗುತ್ತದೆ. 2022ರಿಂದಲೂ ಬಾಕಿ ಉಳಿದಿರುವ ನಿವೃತ್ತ ಕಾರ್ಮಿಕರ ಗ್ರಾಚ್ಯುಟಿ, ಪೆನ್ಷನ್, ಕಾನೂನು ದಾವೆಗಳನ್ನು ಒಂದೇ ಬಾರಿಗೆ ನಿವಾರಿಸಬೇಕು, ಬೆಸ್ಟ್ ಮತ್ತು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ಬಜೆಟ್ ವಿಲೀನಗೊಳಿಸಲು ಮತ್ತು 2021-2026ರ ಅವಧಿಗೆ ಏಳನೇ ವೇತನ ಆಯೋಗದ ಶಿಫಾರಸನ್ನು ಜಾರಿಗೆ ತರಲು ಸಾರಿಗೆ ಕಾರ್ಮಿಕರು ಒತ್ತಾಯಿಸುತ್ತಿದ್ದಾರೆ. ಗುತ್ತಿಗೆ ಮತ್ತು ಹೊರಗುತ್ತಿಗೆ ವ್ಯವಸ್ಥೆಯನ್ನು ರದ್ದುಗೊಳಿಸಿ, ಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. BEST ಉದ್ಯಮದ ಖಾಸಗೀಕರಣ/PPP ಮಾದರಿಗಳನ್ನು ತಡೆದು, ಸ್ವಂತ 5,000 ಬಸ್‌ಗಳನ್ನು ವಿಲೀನಗೊಳಿಸಬೇಕು. ಡಿಪೋಗಳಲ್ಲಿ ಉತ್ತಮ ಸೌಲಭ್ಯಗಳನ್ನು ಒದಗಿಸಬೇಕು, ವೇತನ ವಿಳಂಬಗಳನ್ನು ತಡೆಗಟ್ಟಿ ಇತರ ಕಾರ್ಮಿಕ ಕಲ್ಯಾಣಕ್ಕೆ ಕ್ರಮಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಕರ್ಮಚಾರಿ ಸೇನಾ ಪ್ರಧಾನ ಕಾರ್ಯದರ್ಶಿ ಉದಯ್ ಅಂಬೋಂಕರ್ ಮಾತನಾಡಿ, “ಇತ್ತೀಚೆಗೆ 500 ಕೋಟಿ ರೂ. ಹಂಚಿಕೆ ಮಾಡಿರುವುದು ಸಕಾರಾತ್ಮಕ ಹೆಜ್ಜೆಯಾಗಿದೆ, ಆದರೆ ಆರ್ಥಿಕ ವಾಸ್ತವಗಳಿಗೆ ಇದು ಸಾಕಾಗುವುದಿಲ್ಲ” ಎಂದು ಹೇಳಿದ್ದಾರೆ.
ಬೆಸ್ಟ್‌ನ ಎಲ್ಲ ವಿಭಾಗಗಳು ಪ್ರತಿಭಟನೆಯಲ್ಲಿ ಭಾಗಿಯಾಗಿಲ್ಲ. ಶ್ರಮಿಕ ಉತ್ಕರ್ಷ್ ಸಭಾ ಮತ್ತು ಬೆಸ್ಟ್ ಕಾಮಗರ್ ಯೂನಿಯನ್, ಈ ಪ್ರತಿಭಟನೆಯಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.
ನಿತ್ಯ ಪ್ರಯಾಣಿಕರ ಮೇಲೆ ಪರಿಣಾಮ
ಬೆಸ್ಟ್ ಕಾರ್ಮಿಕರ ಮುಷ್ಕರವು ಮುಂಬೈನ ಜನರ ದೈನಂದಿನ ಜೀವನವನ್ನು ತೀವ್ರವಾಗಿ ತೊಂದರೆಗೀಡುಮಾಡಿದ್ದು, ಪ್ರಯಾಣಿಕರ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ. ಇದು 500 ಮಾರ್ಗಗಳಲ್ಲಿ ಬೃಹತ್ ಸಂಚಾರವನ್ನು ನಿರ್ವಹಿಸುತ್ತಿದ್ದು, 27 ಡಿಪೋಗಳಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಸಾರಿಗೆ ನೌಕರರು ಬೆಳಗಿನ ಪೀಕ್ ವೇಳೆಯಲ್ಲಿ ಬಹುತೇಕ ಬಸ್‌ಗಳನ್ನು ಡಿಪೋಗಳಿಂದ ಹೊರ ತೆಗೆಯದೆ ಮುಲುಂಡ್, ಧಾರಾವಿ ಇತ್ಯಾದಿ ಡಿಪೋಗಳಲ್ಲಿ ಪ್ರತಿಭಟನೆಗಳನ್ನು ನಡೆಸಿದರು.
ಪ್ರಯಾಣಿಕರು ಆಟೋರಿಕ್ಷಾ, ಟ್ಯಾಕ್ಸಿ, ಆ್ಯಪ್-ಆಧಾರಿತ ಕ್ಯಾಬ್‌ಗಳು, ಮೆಟ್ರೋ ಮತ್ತು ರೈಲುಗಳಲ್ಲಿ ಸಂಚರಿಸುವುದು ಅನಿವಾರ್ಯವಾಯಿಗಿದೆ. ಕ್ಯಾಬ್ ದರಗಳು ಏರಿಕೆಯಾಗಿವೆ. ಬಿಕೆಸಿ(ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್), ಕುರ್ಲಾ, ಬಾಂದ್ರಾ, ಸೌತ್ ಮುಂಬೈ, ಸೆಂಟ್ರಲ್ ಮತ್ತು ಈಸ್ಟರ್ನ್ ಸಬ ಅರ್ಬ್‌ಗಳಲ್ಲಿ ದೊಡ್ಡ ಪರಿಣಾಮ ಬೀರಿದೆ.
ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ), ಕುರ್ಲಾ, ಬಾಂದ್ರಾ, ದಕ್ಷಿಣ ಮುಂಬೈ ಮತ್ತು ಮಧ್ಯ ಮತ್ತು ಪೂರ್ವ ಉಪನಗರಗಳ ಕೆಲವು ಭಾಗಗಳಲ್ಲಿ ತೀವ್ರ ಅಡಚಣೆ ಉಂಟಾಗಬಹುದು. ಸುಮಾರು 23 ಲಕ್ಷದಿಂದ 25 ಲಕ್ಷ ಮಂದಿ ಪ್ರಯಾಣಿಕರು ಕೊನೆಯ ಮೈಲಿ ಸಂಪರ್ಕಕ್ಕಾಗಿ ಬೆಸ್ಟ್ ಬಸ್‌ಗಳನ್ನು ಅವಲಂಬಿಸಿದ್ದಾರೆ. ಅಲ್ಲದೆ ಬೆಸ್ಟ್ ನಗರದಾದ್ಯಂತ ಸುಮಾರು 10 ಲಕ್ಷ ನಿವಾಸಿಗಳಿಗೆ ವಿದ್ಯುತ್ ಸಂಪರ್ಕವನ್ನೂ ಒದಗಿಸುತ್ತದೆ. ಹೀಗಿರುವಾಗ ಮುಷ್ಕರದಿಂದ ಅಡಚಣೆಗಳು ಮತ್ತು ವಿಳಂಬಗಳು ಎದುರಾಗುವ ಸಾಧ್ಯತೆಯಿದೆ.
ಇದನ್ನೂ ಓದಿದ್ದೀರಾ? ಸುರಕ್ಷಿತ ಪಾದಚಾರಿ ಮಾರ್ಗಗಳಲ್ಲಿ ನಡೆಯುವುದು ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್
ಬೆಸ್ಟ್ ಅಧಿಕಾರಿಗಳು ಕೆಲವು ರೂಟ್‌ಗಳಲ್ಲಿ ಹೆಚ್ಚುವರಿ ಬಸ್‌ಗಳು ಮತ್ತು ಚಾಲೋ ಪ್ರೀಮಿಯಂ ಬಸ್‌ಗಳನ್ನು ನಿಯೋಜಿಸಿದ್ದಾರೆಯಾದರೂ ಪರಿಣಾಮ ಗಣನೀಯವಾಗಿದೆ. ಆದರೆ ಬೆಸ್ಟ್ ಮಾತ್ರ ಮುಷ್ಕರದ ಅಂತಿಮ ಪರಿಣಾಮವನ್ನು ದೃಢೀಕರಿಸುವ ಅಧಿಕೃತ ಹೇಳಿಕೆಯನ್ನು ಇನ್ನೂ ನೀಡಿಲ್ಲ.
ಒಟ್ಟಾರೆಯಾಗಿ, ಪ್ರಯಾಣಿಕರು ದೀರ್ಘ ಕ್ಯೂ, ಓವರ್‌ಕ್ರೌಡಿಂಗ್ ಮತ್ತು ವಿಳಂಬಗಳ ಬಗ್ಗೆ ದೂರಿದ್ದಾರೆ. ವಿದ್ಯಾರ್ಥಿಗಳು ಮತ್ತು ಕಚೇರಿ ಹೋಗುವವರು ತೊಂದರೆ ಅನುಭವಿಸಿದ್ದಾರೆ.




