ಕನ್ಯಾಕುಮಾರಿಯಲ್ಲಿ ಧ್ಯಾನ ಆರಂಭಿಸಿದ ಪ್ರಧಾನಿ: ಸಾಮಾಜಿಕ ಮಾಧ್ಯಮಗಳಲ್ಲಿ ಗೋ ಬ್ಯಾಕ್ ಮೋದಿ

Date:

ಚುನಾವಣಾ ಪ್ರಚಾರದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ(ಮೇ.30) ಸಂಜೆ ತಮಿಳುನಾಡಿನ ಕನ್ಯಾಕುಮಾರಿಗೆ ಆಗಮಿಸಿದ್ದು, ಅಲ್ಲಿನ ಪ್ರಸಿದ್ಧ ವಿವೇಕಾನಂದ ಶಿಲಾ ಸ್ಮಾರಕದಲ್ಲಿ 45 ತಾಸುಗಳ ಧ್ಯಾನವನ್ನು ಆರಂಭಿಸಿದರು.

- Advertisement -

ತಿರುವನಂತಪುರದಿಂದ ಹೆಲಿಕಾಪ್ಟರ್‌ನಲ್ಲಿ ಕನ್ಯಾಕುಮಾರಿಗೆ ಆಗಮಿಸಿದ ಮೋದಿ ಭಗವತಿ ಅಮ್ಮನ್ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಆನಂತರ ಫೆಗ್ರಿ ದೋಣಿಯ ಮೂಲಕ ವಿವೇಕಾನಂದ ಸ್ಮಾರಕವನ್ನು ತಲುಪಿ, ಧ್ಯಾನವನ್ನು ಆರಂಭಿಸಿದರು. ಜೂನ್ 1ರವರೆಗೆ ಧ್ಯಾನವು ಮುಂದುವರಿಯಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Epstein’ ವಿವಾದದ ನಡುವೆಯೂ ಹರದೀಪ್ ಪುರಿಗೆ ಮಣೆ: ಸಿಖ್...

'Epstein files' ವಿವಾದವು ಹರದೀಪ್ ಸಿಂಗ್ ಪುರಿ ಅವರ ರಾಜಕೀಯ ಬದುಕಿನಲ್ಲಿ ಸಣ್ಣದೊಂದು ಬಿರುಗಾಳಿ ಎಬ್ಬಿಸಿದ್ದು ಸುಳ್ಳಲ್ಲ. ವಿರೋಧ ಪಕ್ಷಗಳ ಟೀಕೆಗಳು ಮತ್ತು ನೈತಿಕ ಹೊಣೆಗಾರಿಕೆಯ ಪ್ರಶ್ನೆಗಳು ಅವರನ್ನು ಸಂಪುಟದಿಂದ ಹೊರಗಟ್ಟುವ ಹಂತಕ್ಕೆ...

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು,...

ಧೋತಿ ಹಾಗೂ ಬಿಳಿ ಶಾಲು ಧರಿಸಿದ ಮೋದಿ ಅವರು ಧ್ಯಾನವನ್ನು ಆರಂಭಿಸುವ ಮುನ್ನ ಧ್ಯಾನ ಮಂಟಪದ ಮೆಟ್ಟಲುಗಳಲ್ಲಿ ಕುಳಿತು ಕೆಲ ಸಮಯ ಕಳೆದರು.

ಜೂನ್ 1ರಂದು ಮೋದಿ ಅವರು ವಿವೇಕಾನಂದ ಸ್ಮಾರಕದಿಂದ ನಿರ್ಗಮಿಸುವ ಮುನ್ನ ಸಮೀಪದಲ್ಲೇ ಇರುವ ತಿರುವಳ್ಳುವ‌ರ್ ಪ್ರತಿಮೆ ಇರುವ ಸ್ಥಳಕ್ಕೂ ಭೇಟಿ ನೀಡಲಿದ್ದಾರೆ. ವಿವೇಕಾನಂದ ಸ್ಮಾರಕ ಹಾಗೂ 133 ಅಡಿ ಎತ್ತರದ ತಿರುವಳ್ಳುವ‌ರ್ ವಿಗ್ರಹವನ್ನು ಎರಡು ಪ್ರತ್ಯೇಕವಾದ ಪುಟ್ಟ ದ್ವೀಪಗಳಲ್ಲಿ ನಿರ್ಮಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೋರಾಟಗಳನ್ನು ಹತ್ತಿಕ್ಕಿದ ಗೌಡರ ಹಾಸನದಲ್ಲಿ ಮತ್ತೆ ಮೊಳಗಿದ ಹೋರಾಟದ ಕೂಗು

ಕನ್ಯಾಕುಮಾರಿಯಲ್ಲಿ ಮೋದಿಯವರು ಚುನಾವಣಾ ಉದ್ದೇಶದಿಂದ ಧ್ಯಾನವನ್ನು ನಡೆಸುತ್ತಿದ್ದಾರೆಂದು ಆರೋಪಿಸಿ ತಂದೈ ಪೆರಿಯಾರ್ ದ್ರಾವಿಡ ಕಳಗಂನ ಕಾರ್ಯಕರ್ತರು ಮದುರೈನಲ್ಲಿ ಕಪ್ಪು ಬಾವುಟ ಪ್ರದರ್ಶನ ನಡೆಸಿದರು.

ಜೂನ್ 1ರ ಲೋಕಸಭಾ ಚುನಾವಣೆಯ ಅಂತಿಮ ಹಾಗೂ 7ನೇ ಹಂತದ ಚುನಾವಣೆಯ ಸಂದರ್ಭ ಮೋದಿ ಅವರ ಧ್ಯಾನ ಕಾರ್ಯಕ್ರಮವನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದಕ್ಕೆ ಪ್ರತಿಪಕ್ಷಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ತಮಿಳುನಾಡು ಕಾಂಗ್ರೆಸ್‌ ಕೂಡ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

ಇದಲ್ಲದೆ ಸಾಮಾಜಿಕ ಜಾಲತಾಣ ಎಕ್ಸಲ್ಲಿ ನೆಟ್ಟಿಗರಿಂದ ಗೋ ಬ್ಯಾಕ್ ಮೋದಿ ಹ್ಯಾಶ್‌ಟ್ಯಾಗ್‌ ಪೋಸ್ಟ್‌ಗಳ ಮಹಾಪೂರವೇ ಹರಿದುಬಂದಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆತ್ಮಹತ್ಯೆ ಮಾಡಿಕೊಂಡ ರೈತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಬೇಡಿ: ಶಿವಸೇನೆ ಶಾಸಕನ ವಿವಾದಾತ್ಮಕ ಹೇಳಿಕೆ

ರೈತರು ಆತ್ಮಹತ್ಯೆ ಮಾಡಿಕೊಂಡರೆ ಅವರ ಅಂತ್ಯಕ್ರಿಯೆಯಲ್ಲಿ ಯಾರೂ ಪಾಲ್ಗೊಳ್ಳಬಾರದು, ಮೃತದೇಹಗಳನ್ನು ಪ್ರಾಣಿಗಳು...

ಅಸ್ಸಾಂ: ಬಾಲ್ಯವಿವಾಹದ ವಿರುದ್ಧ ಕಾರ್ಯಾಚರಣೆ ತೀವ್ರ, 500ಕ್ಕೂ ಹೆಚ್ಚು ಮಂದಿ ಬಂಧನ

ಅಸ್ಸಾಂನಲ್ಲಿ ಬಾಲ್ಯವಿವಾಹದ ವಿರುದ್ಧ ರಾಜ್ಯ ಸರ್ಕಾರವು ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಪ್ರಸ್ತುತ...

ಬಾಂಧವ್ಯವೇ ಸತ್ತ ಮೇಲೆ ಬರಿ ಕಾನೂನಿನ ಮದುವೆ ಯಾಕೆ? ಒಡಿಶಾ ಹೈಕೋರ್ಟ್!

ದಂಪತಿಗಳ ನಡುವೆ ಪರಸ್ಪರ ಗೌರವ, ನಂಬಿಕೆ ಹಾಗೂ ಸಾಂಗತ್ಯವೇ ಇಲ್ಲದಾಗ, ಕೇವಲ...

ಗುಜರಾತ್‌ ಗೋಮಾಂಸ ಪ್ರಕರಣ: ಮನುಸ್ಮೃತಿಯ ಶ್ಲೋಕ ಉಲ್ಲೇಖಿಸಿ ಮೂವರಿಗೆ ಜೀವಾವಧಿ ಶಿಕ್ಷೆ!

ಗುಜರಾತ್‌ನ ಗಾಂಧಿನಗರ ಜಿಲ್ಲೆಯ ಕಲೋಲ್ ಸೆಷನ್ಸ್ ನ್ಯಾಯಾಲಯವು 277 ಕೆ.ಜಿ. ಗೋಮಾಂಸ...