ತೆಲಂಗಾಣ | ಮಳೆ ಅನಾಹುತಕ್ಕೆ ಭಾನುವಾರ 12 ಮಂದಿ ಬಲಿ

Date:

ದಕ್ಷಿಣ ಭಾರತದ ನಾನಾ ಭಾಗಗಳಲ್ಲಿ ಅಕಾಲಿಕ ಮಳೆಯ ಅಬ್ಬರ ಹೆಚ್ಚಾಗಿದೆ. ಭಾನುವಾರವೂ ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮಳೆಯಾಗಿದೆ. ಕಲಬುರಗಿಯಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದರೆ, ತೆಲಂಗಾಣದಲ್ಲಿ ಮಳೆ ಅನಾಹುತಕ್ಕೆ 12 ಮಂದಿ ಬಲಿಯಾಗಿದ್ದಾರೆ.

- Advertisement -

ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯ ತಾಂಡೂರಿನಲ್ಲಿ ನಿರ್ಮಾಣ ಹಂತದಲ್ಲಿದ್ದ ಡೈರಿ ಫಾರ್ಮ್‌ನ ಕಾಂಪೌಂಡ್ ಗೋಡೆ ಕುಸಿದು, 10 ವರ್ಷದ ಬಾಲಕಿ ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ರಾಮದುರ್ಗ, ಸವದತ್ತಿ ಬರ ಘೋಷಣೆಗೆ ರೈತರ ಆಗ್ರಹ: 10...

"ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ ಅದು ಆಗಿಲ್ಲ. ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಇನ್ನೂ ಅವಕಾಶವಿದೆ" ಎಂದು ಕೃಷಿ ಅಧಿಕಾರಿಗಳು ಹೇಳಿದರು. ಮುಂಗಾರು ಆರಂಭದಲ್ಲಿ ಉತ್ತಮ...

ಕರಗುವ ಹಿಮಾಲಯ, ಕುಸಿಯುವ ಆರ್ಥಿಕತೆ: ಹಿಮಪ್ರಳಯದ ಹಾದಿಯಲ್ಲಿ ಭಾರತದ...

ಹಿಮಾಲಯವು ಕೇವಲ ಮಂಜಿನ ಬೆಟ್ಟಗಳ ಸಮೂಹವಲ್ಲ; ಅದು ಭಾರತದ ಆರ್ಥಿಕ ಸ್ಥಿರತೆ, ಆಹಾರ ಭದ್ರತೆ ಮತ್ತು ಶಕ್ತಿ ಭದ್ರತೆಯ ತಾಣ. ಇಂದಿನ ಜಾಗತಿಕ ತಾಪಮಾನ ಏರಿಕೆಯ ಸವಾಲನ್ನು ಭಾರತವು ಕೇವಲ ಪರಿಸರ ಸಮಸ್ಯೆಯಾಗಿ...

ಈ ದಿನ ಕವಿತೆ | ಇಸ್ರೇಲಿನ ವಾಯುದಾಳಿಯ ರಾತ್ರಿಯಲಿ...

ಈ ಬಾರಿ ಪ್ಯಾಲೆಸ್ತೀನ್‌ನ ಕವಿ ಮೊಸಾಬ್ ಅಬು ತೋಹಾ ಅವರ ಕವನವನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ತಂದಿದ್ದಾರೆ ಸಿ ಎಚ್‌ ಭಾಗ್ಯ ಅವಳು ತನ್ನ ಹಾಸಿಗೆಯ ಸುತ್ತಾ ಇರುವ ಮಕ್ಕಳನ್ನು ಒಟ್ಟೈಸುವಳು.ಹೊಟೇಲ್ ಬಿಡುವ...

ಮೃತರನ್ನು ತೋಟದ ಮಾಲೀಕ ಬೆಳ್ಳೆ ಮಲ್ಲೇಶ್ (38), ಅವರ ಪುತ್ರಿ ಅನುಷಾ (10) ಹಾಗೂ ಇಬ್ಬರು ಕಾರ್ಮಿಕರಾದ ಎಸ್ ರಾಮುಲು (35) ಮತ್ತು ಅವರ ಪತ್ನಿ ಚೆನ್ನಮ್ಮ (34) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಹೈದರಾಬಾದ್ ಆಸ್ಪತ್ರೆಗೆ ರವಾನಿಸಲಾಗಿದೆ.

ಹೈದರಾಬಾದ್‌ನ ಹಫೀಜ್‌ಪೇಟೆಯ ಸಾಯಿ ನಗರದಲ್ಲಿ ಮನೆಯ ಬಾಲ್ಕಾನಿಯ ಛಾವಣಿ ಕುಸಿದು ಮೂರು ವರ್ಷದ ಬಾಲಕ ಮತ್ತು 45 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಅದೇ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದ ರಶೀದ್ ಎಂಬಾತನ ವಿರುದ್ಧ ಇಟ್ಟಿಗೆಗಳು ಬಿದ್ದು, ಆತ ಅಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಇನ್ನು, ತೆಲಕಪಲ್ಲಿ ಮಂಡಲ ಪ್ರದೇಶದಲ್ಲಿ 12 ವರ್ಷದ ಬಾಲಕ ದಂಡು ಲಕ್ಷ್ಮಣ್ ಸಾವನ್ನಪ್ಪಿದ್ದು, ನಾಗರಕರ್ನೂಲ್ ಜಿಲ್ಲೆಯ ನೂಕಲಚಿಂತಾ ತಾಂಡಾದಲ್ಲಿ ಸಿಡಿಲು ಬಡಿದು ಜೈಪಾಲ್ ನಾಯ್ಕ್ ಎಂಬಾತ ಗಾಯಗೊಂಡಿದ್ದಾರೆ. ನಂದಿವಡ್ಡೆಮಾನ್ ಪಲ್ಲಿಯಲ್ಲಿ ಕಬ್ಬಿಣದ ಶೆಡ್ ಬಿದ್ದು ವೇಣು (38) ಎಂಬವರು ಮೃತಪಟ್ಟಿದ್ದಾರೆ.

ಇದೇ ವೇಳೆ, ಸಿದ್ದಿಪೇಟೆ ಜಿಲ್ಲೆಯ ಮುಳುಗು ಮಂಡಲದ ಕ್ಷೀರಸಾಗರದಲ್ಲಿ ಕೋಳಿ ಫಾರಂನ ಗೋಡೆ ಕುಸಿದು ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಮೃತರನ್ನು ಗೌರಿ ಶಂಕರ್ (45) ಮತ್ತು ಭಾಗ್ಯಮ್ಮ (40) ಎಂದು ಗುರುತಿಸಲಾಗಿದೆ.

ಮೇಡ್ಚಲ್ ಜಿಲ್ಲೆಯ ಕೀಸರದಲ್ಲಿ ದ್ವಿಚಕ್ರ ವಾಹನದ ಮೇಲೆ ಮರ ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ.

ನಾಗರಕರ್ನೂಲ್, ವಿಕಾರಾಬಾದ್, ಕಾಮರೆಡ್ಡಿ ಮತ್ತು ಯಾದಾದ್ರಿ-ಭುವನಗಿರಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಸಾಧಾರಣದಿಂದ ಭಾರಿ ಮಳೆಗೆ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

Formula E Case: ಎಸಿಬಿ ನ್ಯಾಯಾಲಯಕ್ಕೆ ಕೆಟಿಆರ್ ಹಾಜರು; ‘ದುರುದ್ದೇಶಪೂರಿತ ಪ್ರಚಾರ’ ಎಂದು ವಾಗ್ದಾಳಿ

ಫಾರ್ಮುಲಾ ಇ ರೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಆರ್‌ಎಸ್ ಕಾರ್ಯಾಧ್ಯಕ್ಷ ಹಾಗೂ ತೆಲಂಗಾಣ...

ಪಂಜಾಬ್: ಬಿಜೆಪಿ ನಾಯಕ ರವನೀತ್ ಸಿಂಗ್ ಬೆಂಗಾವಲು ಪಡೆಯ ಮೇಲೆ ದಾಳಿ

ಪಂಜಾಬ್‌ನಲ್ಲಿ ಆಯೋಜಿಸಲಾಗಿದ್ದ ಬಿಜೆಪಿಯ ಮಾದಕವಸ್ತು ವಿರೋಧಿ ಅಭಿಯಾನದಲ್ಲಿ ಪಾಲ್ಗೊಳ್ಳಲು ಪಠಾಣ್‌ಕೋಟ್‌ನತ್ತ ತೆರಳುತ್ತಿದ್ದ...

ರಾಜಸ್ಥಾನ ಸ್ಥಳೀಯ ಚುನಾವಣೆ: 86 ಗೆದ್ದರೂ ಮಿಷನ್-200 ಸಾಧಿಸಲು ಬಿಜೆಪಿ ಹರಸಾಹಸ; ‘ಆಪರೇಷನ್ ಲೋಟಸ್’ ಸದ್ದು!

ರಾಜಸ್ಥಾನದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಒಟ್ಟು 200...

ಅಮೆರಿಕದ ಶೇ 100 ಸುಂಕದಿಂದ ಭಾರತದ ಆರ್ಥಿಕತೆಗೆ ಕಾದಿದೆ ಭಾರಿ ಆಪತ್ತು

ವಾಷಿಂಗ್ಟನ್‌ನಿಂದ ಹೊರಬಿದ್ದಿರುವ ಈ ನಿರ್ಧಾರ ಭಾರತದ ಆರ್ಥಿಕತೆಯ ಪಾಲಿಗೆ ಅಕ್ಷರಶಃ ಮರಣಶಾಸನವಾಗಿ...