ಭಾರತೀಯರಿಗೆ ಪುರಾಣ ಪಥ್ಯವಾಯಿತು, ವಾಸ್ತವ ಅಪಥ್ಯವಾಯಿತು

Date:

ಭಾರತದ ಇತಿಹಾಸದ ನೆಲೆಗಳೆಲ್ಲವೂ ವಾಸ್ತವದಲ್ಲಿ ಬೌದ್ಧ ಹಾಗೂ ಜೈನ ನೆಲೆಗಳು. ಇದಕ್ಕೆ ಸಾಕ್ಷಿಗಳಿವೆ. ಇಂತಹ ಇತಿಹಾಸದ ನೆಲವನ್ನು ಪುರಾಣದ ನೆಲವನ್ನಾಗಿ ಪರಿವರ್ತಿಸಿದ ನಂತರ ಇದೇ ಇತಿಹಾಸದ ಬುದ್ಧ ಹಾಗೂ ಮಹಾವೀರರ ನೆಲೆಗಳು ರಾಮಾಯಣ, ಮಹಾಭಾರತದ ನೆಲೆಗಳಾಗಿ ಪರಿವರ್ತನೆಗೊಂಡವು

 

ಬುದ್ಧ ಬಸವ ಅಂಬೇಡ್ಕರ್ ಅವರ ಸಂದೇಶಗಳು ಮನೆಮನೆಗೂ ತಲುಪಬೇಕು ಎಂಬುದು ಎಲ್ಲರ ಹಾಗೂ ಭಾರತದ ಸಂವಿಧಾನದ ಪ್ರಮುಖ ಆಶಯ. ಆದರೆ ಅವುಗಳನ್ನು ತಲುಪಿಸುವವರು ಯಾರು..? ಹೇಗೆ..? ಎಂಬ ಪ್ರಶ್ನೆಯ ಜೊತೆಗೆ ಏಕೆ ತಲುಪಿಸಲು ಆಗುತ್ತಿಲ್ಲ ಎಂಬ ಪ್ರಮುಖ ಪ್ರಶ್ನೆಯೂ ಸಂವಿಧಾನಾತ್ಮಕವಾಗಿ ನಮ್ಮೆಲ್ಲರಿಗೂ ಕಾಡುತ್ತದೆ. ಆದರೆ, ನಮ್ಮೆಲ್ಲರಿಗೂ ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಗೊತ್ತಿದ್ದರೂ ಸಹ ನಮ್ಮೊಳಗಿನ ಅಂಧಕಾರದ ಪ್ರಭುತ್ವದ ಆಕ್ರಮಣದಿಂದಾಗಿ ಪ್ರಶ್ನೆಗೆ ಮಾತು ಬಂದರೂ ಸಹ ಮೌನವಾಗಲು ಹಂಬಲಿಸುತ್ತೇವೆ.

ಆದರೆ, ಪುರಾಣ ಹಿನ್ನೆಲೆಯ ಕಥೆಗಳನ್ನು ವೈಭವಿಕರಿಸಿ ಯಾರು, ಯಾಕಾಗಿ, ಮನೆಮನೆಗೂ ತಲುಪಿಸುತ್ತಿದ್ದಾರೆ? ಇದರ ಹಿಂದಿನ ಉದ್ದೇಶಗಳೇನು ಎಂಬುವುದನ್ನು ಇಂದಿನ ಪ್ರಜ್ಞಾವಂತ ಪ್ರತಿಯೊಬ್ಬ ಭಾರತೀಯರೂ ಸಂವಿಧಾನದ ಹಿನ್ನೆಲೆಯಿಂದ ಅರಿಯಬೇಕಾಗಿದೆ.

ಈ ಭಾರತದಲ್ಲಿ ಇತಿಹಾಸದ ನೆಲೆಗಳೆಲ್ಲವೂ ವಾಸ್ತವದಲ್ಲಿ ಬೌದ್ಧ ಹಾಗೂ ಜೈನ ನೆಲೆಗಳೆ. ಇದಕ್ಕೆ ವಾಸ್ತವದ ಸಾಕ್ಷಿಗಳಿವೆ. ಇಂತಹ ಇತಿಹಾಸದ ನೆಲವನ್ನು ಪುರಾಣದ ನೆಲವನ್ನಾಗಿ ಪರಿವರ್ತಿಸಿದ ನಂತರ ಇದೇ ಇತಿಹಾಸದ ಬುದ್ಧ ಹಾಗೂ ಮಹಾವೀರರ ನೆಲೆಗಳು ರಾಮಾಯಣ, ಮಹಾಭಾರತದ ನೆಲೆಗಳಾಗಿ ಪರಿವರ್ತನೆಗೊಂಡವು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಭಾರತದ ಬಹುಸಂಖ್ಯಾ ಜನ ಅವಿದ್ಯಾವಂತರೇ ಆಗಿದ್ದ ಕಾರಣಕ್ಕಾಗಿ (ಅವಿದ್ಯಾವಂತರನ್ನಾಗಿ ಮಾಡಿದ್ದ ಕಾರಣಕ್ಕಾಗಿ) ಮೌಖಿಕ ಪರಂಪರೆಯನ್ನೇ ಒಪ್ಪಿಕೊಳ್ಳಲು ಹಂಬಲಿಸಿದ್ದ ಕಾರಣಕ್ಕಾಗಿ ವಾಸ್ತವದ ಚರಿತ್ರೆಯನ್ನು ಅರಿಯದೆ ಪುರಾಣದ ಚರಿತ್ರೆಗೆ ಹೆಚ್ಚು ಹಂಬಲಿಸಿದರೂ ಹಾಗೂ ಅಪ್ಪಿಕೊಂಡರು. ಇವುಗಳನ್ನು ತಮ್ಮ ಭೌತಿಕ ಕಥನದ ಮೂಲಕ ಹೇಳಿಕೊಂಡು ಆನಂದಪಟ್ಟರು. ಹೀಗೆ ಹೇಳುವುದಕ್ಕೆ ವಾಸ್ತವದ ದಾಖಲೆಗಳಿಗಿಂತ ಪುರಾಣ ದಾಖಲೆಗಳೆ ಹೆಚ್ಚಿನ ಪ್ರಭಾವ ಬೀರಿದ ಕಾರಣಕ್ಕಾಗಿ ಜನರ ಬಾಯಲ್ಲಿ ಪುರಾಣ ಉಳಿಯಿತು – ವಾಸ್ತವ ನಶಿಸಿತು. ಹೀಗೆ ಪರಿವರ್ತನೆಗೊಂಡ ಪುರಾಣದ ಕಥೆಗಳೇ ನಮಗೆ ಹತ್ತಿರವಾದಷ್ಟು ಇಂದಿಗೂ ಬುದ್ಧ ಬಸವ ಭೀಮರ ವಾಸ್ತವದ ಕಥೆಗಳು ಹತ್ತಿರವಾಗಲೇ ಇಲ್ಲ. ಇವರು ಒಂದಷ್ಟು ಭಾರತದ ಜನರಿಗೆ ಒಂದಷ್ಟು ಹತ್ತಿರವಾದದ್ದು ಸಹ ಬುದ್ಧನ ಕುರಿತು ತೆಗೆದ ಸಿನಿಮಾ ಹಾಗೂ ನಾಟಕಗಳು, ಬಸವಣ್ಣನ ಕುರಿತು ತೆಗೆದ ಸಿನಿಮಾ ಹಾಗೂ ನಾಟಕಗಳು, ಅಂಬೇಡ್ಕರ್ ಅವರ ಕುರಿತು ಈಗ ಕನ್ನಡ ಭಾಷೆಯಲ್ಲಿ ಪ್ರತಿಮೆಗೊಂಡು ಮೂಡಿದ ಮಹಾನಾಯಕ ಧಾರವಾಹಿಯ ನಂತರವೇ ನೋಡಿ, ಕೇಳಿ ಒಂದಷ್ಟು ಅರ್ಥ ಮಾಡಿಕೊಂಡಿದ್ದೇ ಹೊರತು, ವಾಸ್ತವದಲ್ಲಿ ದಾಖಲೆಗಳನ್ನು ಓದಿ ಅಲ್ಲ ಎಂಬುದನ್ನು ನಾವೆಲ್ಲರೂ ಅರಿಯಬೇಕಾಗಿದೆ. ಭಾರತದಲ್ಲಿ ಓದಿದವರ ಸಂಖ್ಯೆ 4% ಆದರೆ ಓದುದವರ ಪ್ರೆಸೆಂಟ್ 96% ಎಂಬುದನ್ನು ಮರೆಯಬಾರದು.

ಶ್ರೀನಿವಾಸ ಕಲ್ಯಾಣ ಕನ್ನಡ ಸಿನಿಮಾ ದೃಶ್ಯ

ನಾವು ಭಕ್ತ ಕುಂಬಾರ, ಶ್ರೀನಿವಾಸ ಕಲ್ಯಾಣ ಎಂಬ ಭಕ್ತಿ ಪ್ರಧಾನ ಚಲನಚಿತ್ರಗಳನ್ನು ನೋಡಿ ತಿರುಪತಿಗೆ ಅಧಿಕ ಸಂಖ್ಯೆಯಲ್ಲಿ ಭಕ್ತಿ ಭಾವದಿಂದ ಕೋಟ್ಯಾಂತರ ಜನರು ಅಲ್ಲಿರುವ ಅಜ್ಞಾನವನ್ನೇ ಜ್ಞಾನವೆಂದು ತಿಳಿದುಕೊಳ್ಳಲು ಪ್ರಯಾಣ ಮಾಡಿದರು. ಮಂತ್ರಾಲಯ ಮಹಾತ್ಮೆ, ನಾ ನಿನ್ನ ಬಿಡಲಾರೆ ಸಿನಿಮಾ ನೋಡಿ ಮಂತ್ರಾಲಯಕ್ಕೆ ತಂಡೋಪ ತಂಡವಾಗಿ ಅಂದಿನಿಂದ ಇಂದಿನವರೆಗೂ ಹೋಗುವುದನ್ನು ಮರೆಯಲಿಲ್ಲ, ಅಯ್ಯಪ್ಪ ಸ್ವಾಮಿಯ ಕುರಿತು ಬಂದ ಚಲನಚಿತ್ರಗಳನ್ನು ನೋಡಿ ಇನ್ನೂ ಹೆಚ್ಚು ಹೆಚ್ಚಿನ ಸಂಖ್ಯೆಯ ಜನರು ಅಯ್ಯಪ್ಪನಿಗೆ ಮೊರೆ ಹೋಗುವುದನ್ನು ತಪ್ಪಿಸಲಿಲ್ಲ. ಎಲ್ಲಮ್ಮ, ಹುಲುಗಮ್ಮ, ಗಾಳಮ್ಮ, ಮೂಕಾಂಬಿಕೆ ಮುಂತಾದ ಶಕ್ತಿ ದೇವತೆಗಳ ಕುರಿತು ವರ್ಣ ರಂಜಿತವಾಗಿ ಹೊರಬಂದ ಚಲನಚಿತ್ರಗಳನ್ನು ನೋಡಿ ಅನೇಕ ಶಕ್ತಿ ದೇವತೆಗಳ ಮಡಿಲಿಗೆ ಹೋಗಿ ಮಂಡೆ ಬೋಳಿಸಿಕೊಳ್ಳುವುದನ್ನು ತಪ್ಪಿಸಲಿಲ್ಲ. ಧಾರವಾಹಿಗಳು ಪ್ರತಿವಾರ ಪ್ರಸಾರ ಮಾಡುವ ಮೌಢ್ಯ ಆಧರಿತ ಪದ್ಧತಿಗಳು ನಮ್ಮ ಮನೆಯ ಸ್ವತ್ತು ಎಂದು ವಾರ ವಾರ ಆ ನೀತಿಯಂತೆ ಆಚರಿಸುವ ಪದ್ದತಿಯನ್ನು ಮಾತ್ರ ಗ್ರಹಿಸಿಕೊಂಡು ಬದುಕುವುದನ್ನು ನಾವು ತಪ್ಪಿಸಲಿಲ್ಲ. ಏಕೆಂದರೆ ಇದೆಲ್ಲವೂ ಪುರಾಣ. ಇದಕ್ಕೆ ವಾಸ್ತವತೆ ಇಲ್ಲ – ಬದಲಿಗೆ ಇದಕ್ಕೆ ಸುಂದರ ಇದೆ. ಮುಖ್ಯವಾಗಿ ಇದಕ್ಕೆ ದಾಖಲೆಗಳು ಬೇಕಾಗಿಲ್ಲ – ದಾಖಲೆಗಳನ್ನು ಮನಬಂದಂತೆ ತಮ್ಮ ಇಚ್ಛೆಗೆ ತೋಚಿದ ಹಾಗೆ ಸೃಷ್ಟಿ ಮಾಡಿಸಿಕೊಳ್ಳಲೂ ಬಹುದಾಗಿದೆ. ಹೀಗೆ ದಾಖಲೆಗಳನ್ನು ಮನಬಂದಂತೆ ಸೃಷ್ಟಿಮಾಡಿಕೊಳ್ಳುವುದನ್ನು ಸಹ ಯಾರೂ ಪ್ರಶ್ನೆ ಮಾಡದ ಹಾಗೆ ಇವು ನಿರ್ಮಾಣಗೊಂಡಿವೆ. ಮೆರೆದಿವೆ ಹಾಗೂ ಒಪ್ಪಿಸಿವೆ. ಏಕೆಂದರೆ ಇದು ಪುರಾಣ. ಭಾರತದ ಜನರ ಮನಸ್ಸನ್ನು ಶತಶತಮಾನಗಳಿಂದ ಏಕಮುಷ್ಟಿಯಿಂದ ವರ್ಣರಂಜಿತವಾಗಿ ಸೂರೆ ಗೊಂಡಿರುವ ಏಕೈಕ ಪ್ರಕಾರ ಎಂದರೆ ಅದು ಪುರಾಣ. ಆದರೆ ವಾಸ್ತವ ಹಿನ್ನೆಲೆಯಿಂದ ಹೊರಬಂದ ಗೆಜ್ಜೆಪೂಜೆ, ಬೆತ್ತಲೆ ಸೇವೆ ಇತ್ಯಾದಿ ಸಿನಿಮಾಗಳನ್ನು ಜನ ನೋಡಲು ಇಲ್ಲ, ನೋಡಿದರೂ ಇವತ್ತಿನ ತಮ್ಮ ಮಕ್ಕಳಿಗೆ ಗೆಜ್ಜೆ ಕಟ್ಟುವುದನ್ನು ಆಗಲಿ, ಬಸವಿ ಬಿಡುವುದನ್ನಾಗಲಿ, ದೇವದಾಸಿ ಪದ್ಧತಿಯನ್ನು ಆಚರಣೆ ಮಾಡುವುದನ್ನು ಆಗಲಿ ತಪ್ಪಿಸಲಿಲ್ಲ. ಏಕೆಂದರೆ ಇದು ಅವರ ಪುರಾಣಕ್ಕೆ ವಿರುದ್ಧವಾಗಿರುವಂತಹ ವಾಸ್ತವದ ಚಿತ್ರಗಳು.

ಚೋಮನ ದುಡಿ, ಬೆಳುವಲದ ಮಡಿಲಲ್ಲಿ, ಭೂದಾನ, ಮುನಿಯನ ಮಾದರಿ ಇತ್ಯಾದಿ ಈ ಪ್ರಕಾರದ ವಾಸ್ತವದ ಸಿನಿಮಾಗಳನ್ನು ನೋಡಿ ಯಾರೂ ಸಹ ದಲಿತರಿಗೆ ಸಂವಿಧಾನದ ಪ್ರಕಾರ ಭೂಮಿಯನ್ನು ಕೊಡಲೇ ಇಲ್ಲ. ಗೊರೂರು ಅವರ ಹೇಮಾವತಿ, ಪಡವರಹಳ್ಳಿ ಪಾಂಡವರು ಇಂದಿನ ನೂತನ ಚಲನಚಿತ್ರ ಕಾಟೇರ ನೋಡಿ, ಇಂದಿಗೂ ನೋಡುತ್ತಾ ಬರುತ್ತಿದ್ದರೂ ಅಸ್ಪೃಶ್ಯತೆಯ ಆಚರಣೆ ಮಾತ್ರ ಕಿಂಚಿತ್ತೂ ಕಡಿಮೆಯಾಗುತ್ತಿಲ್ಲ.

ಶಿವರಾಮ ಕಾರಂತರ ಕಾದಂಬರಿ ಆಧಾರಿತ ʼಚೋಮನ ದುಡಿʼ ಸಿನಿಮಾದ ದೃಶ್ಯ

ಏಕೆಂದರೆ, ಇದು “ನಾನು ಶ್ರೇಷ್ಠ ಕುಲದವನು” ಎಂದು ಒಂದು ವರ್ಗ ತಮಗೆ ತಾವೇ ನಿರ್ಧರಿಸಿಕೊಳ್ಳುವುದೇ ಕಾರಣವಾಗಿದೆ. ನಾನು ಹುಟ್ಟಿನಿಂದ ಶ್ರೇಷ್ಠ- ನೀನು ಹುಟ್ಟಿನಿಂದ ಕನಿಷ್ಠ, ನಾನು ವೃತ್ತಿಯಿಂದ ಶ್ರೇಷ್ಠ -ನೀನು ವೃತ್ತಿಯಿಂದ ಕನಿಷ್ಠ, ನಾನು ನನ್ನ ಆಹಾರ ಸೇವನೆಯಿಂದ ಶ್ರೇಷ್ಠ- ನೀನು ನಿನ್ನ ಆಹಾರ ಸೇವನೆಯಿಂದ ಕನಿಷ್ಠ, ನಾನು ವಾಸಿಸುವ ಸ್ಥಳದಿಂದ ಶ್ರೇಷ್ಠ – ನೀನು ವಾಸಿಸುವ ಸ್ಥಳದಿಂದ ಕನಿಷ್ಠ ಎಂದು ಯಾವುದೇ ತಳ ಬುಡ ಇಲ್ಲದ ಅಂಶಗಳಿಗೆ ದೇವರು ಹಾಗೂ ದೇವರ ಹಿನ್ನೆಲೆಯ ಧಾರ್ಮಿಕತೆಯನ್ನು ಬೆರೆಸಿ, ಈ ಅವೈಜ್ಞಾನಿಕ ಸಿದ್ಧಾಂತದ ಆಧಾರದ ಮೇಲೆಯೇ ಜಾತಿಗಳನ್ನು ನಿರ್ಮಾಣ ಮಾಡಿ, ಈ ಜಾತಿಗಳಲ್ಲಿ ನಾನೇ ಶ್ರೇಷ್ಠ ಎಂದು ತಮಗೆ ತಾವೇ ಸ್ವಘೋಷಿಸಿಕೊಂಡಿರುವ ಏಕಮುಖ ಚಿಂತನೆಯ ಚರಿತ್ರೆಯೇ ಇಂದಿಗೂ ರಚನೆ ಹಾಗೂ ಬೋಧನೆ ಆಗುತ್ತಿರುವ ಅಜ್ಞಾನದ ವಾಸ್ತವ ನಿದರ್ಶನ.

ಆದರೆ, ಇದೆಲ್ಲವನ್ನು ತಪ್ಪು ಅಂತ ಹೇಳಿ, ವಾಸ್ತವದ ಹಿನ್ನೆಲೆಯಿಂದ ಈ ನೆಲದ ಜನರನ್ನು ಬೌದ್ಧಿಕವಾಗಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಹಾಗೂ ಈ ರಾಷ್ಟ್ರದ ಚರಿತ್ರೆಯನ್ನು ವಾಸ್ತವದ ಹಿನ್ನೆಲೆಯಿಂದ ಬರೆದು, ವಾಸ್ತವದ ಹಿನ್ನೆಲೆಯಿಂದಲೇ ರಾಷ್ಟ್ರವನ್ನು ಭದ್ರಬುನಾದಿಯ ಆಧಾರದ ಮೇಲೆ ಕಟ್ಟಬೇಕು ಎಂಬ ಹಿನ್ನೆಲೆಯ ಸಂವಿಧಾನ ಹಾಗೂ ಇಂತಹ ಸಂವಿಧಾನದ ಹಿನ್ನೆಲೆಯಿಂದ ವಸ್ತುನಿಷ್ಠವಾಗಿ, ದಾಖಲೆಗಳನ್ನು ವೈಚಾರಿಕತೆಯ ಹಿನ್ನೆಲೆಯಲ್ಲಿ ಪರಿಶೀಲಿಸಿ ಇಂದಿನ ಜನಮಾನಸಕ್ಕೆ ತಲುಪಿಸುವ ಹಾಗೆ ಬಂದ ಚಲನಚಿತ್ರಗಳನ್ನು ಯಾರೂ ನೋಡುವುದೇ ಇಲ್ಲ. ಏಕೆಂದರೆ ಈ ಸಿನಿಮಾಗಳಿಗೆ ವರ್ಣರಂಜನೆ ಇಲ್ಲ ಬದಲಿಗೆ ವಾಸ್ತವತೆ ಇದೆ. ಈ ಸಿನಿಮಾಗಳು ಮನಬಂದಂತೆ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ಹೆಣ್ಣು ಗಂಡಾಗಲು ಸಾಧ್ಯವಿಲ್ಲ, ಗಂಡು ಹೆಣ್ಣಾಗಲು ಸಾಧ್ಯವಿಲ್ಲ, ಬದಲಿಗೆ ಎರಡು ರೂಪದ ಅರ್ಧನಾರೀಶ್ವರನು ಆಗಲು ಸಾಧ್ಯವಿಲ್ಲ. ಏಕೆಂದರೆ ಇಲ್ಲಿನ ಕಥೆ ಹಾಗೂ ಸಂದರ್ಭಗಳು ಸಂವಿಧಾನಾತ್ಮಕವಾಗಿ ಪ್ರಶ್ನೆ ಮಾಡುತ್ತವೆ. ಈ ಚಲನಚಿತ್ರಗಳು – ಧಾರವಾಹಿಗಳು ಇನ್ನೂ ಮುಖ್ಯವಾಗಿ ಈ ಕುರಿತು ಬರೆಯುವ ಸಂಶೋಧನಾ ಕೃತಿಗಳು ಅತಿ ಹಂತದಲ್ಲಿಯೂ ಅದಕ್ಕೆ ಪೂರಕವಾದ ಸಾಕ್ಷಿಯನ್ನು ಕೇಳುತ್ತವೆ. ಏಕೆಂದರೆ ಇದು ವಾಸ್ತವ.

ಅಂಬೇಡ್ಕರ್‌ ಜೀವನ ಆಧಾರಿತ ಮಹಾನಾಯಕ ಧಾರಾವಾಹಿಯ ದೃಶ್ಯ

ನಾನು ಮೇಲೆ ಹೇಳಿದಂತೆ ಪುರಾಣದ ಚಲನಚಿತ್ರಗಳಲ್ಲಿನ ಕಥೆಗಳು ಸಾಕ್ಷಿ ಕೇಳುವುದಿಲ್ಲ. ವಾಸ್ತವ ಚರಿತ್ರೆ ದಾಖಲೆಗಳ ಮೂಲಕ ಒಪ್ಪಿಸುವ ಚರಿತ್ರೆ. ಆದರೆ, ಪುರಾಣದ ಚರಿತ್ರೆ ಪುರಾಣದ ಮೂಲಕ ಕಥೆಯನ್ನು ನಿರೂಪಿಸಿ ಒಪ್ಪಿಸಿದ ಚರಿತ್ರೆ. ಹೀಗೆ “ಒಪ್ಪಿಸುವ” ಹಾಗೂ “ಒಪ್ಪಿಸಿದ” ಚರಿತ್ರೆಯ ನಡುವಿನ ಬಹುದೊಡ್ಡ ಬೌದ್ಧಿಕ ಸಂಘರ್ಷದ ಹಿನ್ನೆಲೆಯಿಂದ ಬರೆಯಬೇಕಾದ ಭಾರತದ ಇತಿಹಾಸ ಹಾಗೂ ಚರಿತ್ರೆ ನಮ್ಮ ಮುಂದಿನ ಬಹುದೊಡ್ಡ ಸವಾಲು. ಈ ಸಮಸ್ಯೆಯನ್ನು ಬೌದ್ಧಿಕವಾಗಿ ನಿವಾರಿಸಿಕೊಳ್ಳಲು ಬಾಬಾಸಾಹೇಬರ ಚಿಂತನೆ ಹಾಗೂ ಅವರೇ ನಮ್ಮೆಲ್ಲರಿಗೂ ಒಡಲಾಳದಿಂದ ರಚಿಸಿ ಕೊಟ್ಟಿರುವ ಭಾರತದ ಸಂವಿಧಾನ ಬಹುದೊಡ್ಡ ಪರಿಹಾರವನ್ನೇ ನೀಡುತ್ತದೆ. ಆದರೆ, ನಾವು ಅದರ ಕಡೆ ಗಮನಹರಿಸದೆ ಅದರ ವಿರುದ್ಧವಾಗಿರುವಂತಹ ಪುರಾಣದ ಕಡೆಗೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ವಾಸ್ತವ ಸೋಲುತಿದೆ. ಇದಕ್ಕಾಗಿ ಸಂವಿಧಾನ ಹಾಗೂ ಸಂವಿಧಾನದ ಹಿನ್ನೆಲೆಯಿಂದ ಬಂದ ಪುಸ್ತಕಗಳು, ಚಲನಚಿತ್ರಗಳು, ಧಾರಾವಾಹಿಗಳನ್ನು ಯಾರು ಸಹ ಓದುವುದಿಲ್ಲ – ನೋಡುವುದಿಲ್ಲ ಹಾಗೂ ಕೇಳುವುದಿಲ್ಲ. ಈ ಹಿನ್ನೆಲೆಯಿಂದ ಕಿಂಚಿತ್ತು ತಿಳಿದುಕೊಳ್ಳುವುದಿಲ್ಲ. ತಿಳಿದುಕೊಳ್ಳಲು ಕಿಂಚಿತ್ತಾದರೂ ಹಂಬಲಿಸುವುದೂ ಇಲ್ಲ. ಏಕೆಂದರೆ, ಇದು ವಾಸ್ತವ.

ಇದನ್ನೂ ಓದಿ ರಾಮ ಮಂದಿರ | ಮೊಸರಿನಲ್ಲಿ ಕಲ್ಲು ಹಾಕಿದವರು ಯಾರು?

ಈ ಹಂತದಲ್ಲಿ ಮಾತ್ರ ಆಳ್ವಿಕೆ ಮಾಡಬೇಕಾದ ಪಕ್ಷದ ಜವಾಬ್ದಾರಿ ಹೊಂದಿರುವ ‘ಸಂವಿಧಾನʼ ವಿರೋಧ ಪಕ್ಷದ ಸ್ಥಾನದಲ್ಲಿ ನಿಂತುಕೊಳ್ಳುತ್ತದೆ. ವಿರೋಧ ಪಕ್ಷದ ಸ್ಥಾನದಲ್ಲಿ ಇದ್ದು, ಶತ ಶತಮಾನಗಳಿಂದ ಹುಟ್ಟು ಹಾಕಿರುವ ಅವೈಜ್ಞಾನಿಕ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದ ‘ಪುರಾಣ’ ಆಳ್ವಿಕೆ ಪಕ್ಷದ ಸ್ಥಾನದಲ್ಲಿ ನಿಂತುಕೊಳ್ಳಲು ವಾಮಮಾರ್ಗವನ್ನಾದರೂ ಹಿಡಿದು ಮುಂಚೂಣಿಗೆ ಬರಲು ಎಗ್ಗಿಲ್ಲದೆ ಪ್ರಯತ್ನಿಸುತ್ತಿದೆ, ಹಂಬಲಿಸುತ್ತದೆ ಈ ಪ್ರಯತ್ನದಿಂದ ಸಫಲವು ಆಗಿ ಮುನ್ನುಗ್ಗುತಿದೆ.

ಇದನ್ನೂ ಓದಿ ಮಹಾತ್ಮ ಗಾಂಧೀಜಿಯವರ ಪರಿಕಲ್ಪನೆಯಲ್ಲಿ ರಾಮ, ರಾಮಾಯಣ, ರಾಮರಾಜ್ಯ, ಮಂದಿರಗಳು…

ಭಾರತೀಯರಿಗೆ ಪುರಾಣ ಇಷ್ಟವಾಗುವ ಹಾಗೆ ವಾಸ್ತವ ಇಷ್ಟ ಆಗುವುದಿಲ್ಲ ಎಂಬುದಕ್ಕೆ ಇದಕ್ಕಿಂತ ನಿದರ್ಶನ ಬೇಕೇ? ಈ ಹಿನ್ನೆಲೆಯಿಂದಲೇ ನಮ್ಮ ವಾಸ್ತವ ಚರಿತ್ರೆ ನಾಶವಾಗಿ – ವಾಸ್ತವ ಚರಿತ್ರೆಯ ಮೇಲೆ ಪುರಾಣ ಚರಿತ್ರೆ ಮೆರೆದ ಅಂಶವನ್ನು ದಾಖಲೆ ಸಹಿತ ನಿರೂಪಿಸುವುದೇ ಇಂದಿನ ಚರಿತ್ರೆಯ ರಚನೆ ಹಾಗೂ ಬೋಧನೆಯ ಜೀವಾಳ. ಆ ಮೂಲಕ ವಾಸ್ತವದ ಹಿನ್ನೆಲೆಯ ಪ್ರಬುದ್ಧ ಯುವ ಜನತೆ ಹಾಗೂ ವಿದ್ಯಾರ್ಥಿಗಳನ್ನು ನಿರ್ಮಾಣ ಮಾಡುವುದು ಸಂವಿಧಾನದ ಆಶಯವೂ ಆಗಿದೆ.

ಎನ್ ಚಿನ್ನಸ್ವಾಮಿ ಸೋಸಲೆ
+ posts

ಪ್ರಾಧ್ಯಾಪಕ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಎನ್ ಚಿನ್ನಸ್ವಾಮಿ ಸೋಸಲೆ
ಎನ್ ಚಿನ್ನಸ್ವಾಮಿ ಸೋಸಲೆ
ಪ್ರಾಧ್ಯಾಪಕ, ಲೇಖಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೃಷಿ ಸಚಿವರ ಸೂಚನೆಯನ್ನು ಗೌರವಿಸದ ಕುಲಪತಿ: ಕೃಷಿ ವಿವಿಗಳಿಗೇ ‘ಕಿಸಾನ್ ಸತ್ಯಾಗ್ರಹ’ ಬೇಡವಾಯಿತೇ?

ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದ ಹೋರಾಟದ 'ಕಿಸಾನ್ ಸತ್ಯಾಗ್ರಹ'ವನ್ನು ನೋಡುವ, ಆ ಮೂಲಕ...

ಬೆಹನೋಂ ಔರ್ ಭಾಯಿಯೋಂ… ಅಮೀನ್ ಸಯಾನಿ ಇನ್ನಿಲ್ಲ

ಭಾರತೀಯ ಉಪಖಂಡವನ್ನು ಹಲವು ತಲೆಮಾರುಗಳ ಕಾಲ ಉಲ್ಲಾಸಗೊಳಿಸಿದ, ಮೃದುಮಧುರ ಕಂಠದ ಒಡೆಯ...

ಸತ್ಯಶೋಧನೆ | ಮಂಗಳೂರಿನ ಸೇಂಟ್‌ ಜೆರೋಸಾ ಶಾಲೆ ಹಿಂದೂ ವಿರೋಧಿಯೇ?

ಇಲ್ಲಿ ಶಿಕ್ಷಕಿಯ ಮೇಲಿನ ಆರೋಪ ಮತ್ತು ತನಿಖೆ ಇಷ್ಟೇ ವ್ಯಾಪ್ತಿಯಲ್ಲಿರಬೇಕಾದ ವಿಚಾರ,...

ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ: ಸ್ವಾಯತ್ತತೆ ಉಳಿಸಿಕೊಳ್ಳಲೋ, ಸ್ವಪ್ರತಿಷ್ಠೆ ಪ್ರದರ್ಶಿಸಲೋ?

ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ತನ್ನ ಸ್ವಾಯತ್ತತೆಯನ್ನು ಉಳಿಸಿಕೊಳ್ಳಬೇಕು. ಹಾಗೇ ಅದು ನಿಷ್ಪಕ್ಷಪಾತವಾಗಿ...