ನರೇಂದ್ರ ಮೋದಿಯವರನ್ನು ಹೊಗಳುವ ಭರದಲ್ಲಿ ಮಾನವೀಯತೆ ಮರೆತ ಶೋಭಾ ಕರಂದ್ಲಾಜೆ

Date:

ಮಣಿಪುರದಲ್ಲಿ ಎರಡೂವರೆ ತಿಂಗಳಿನಿಂದ ನಡೆಯುತ್ತಿರುವ ಎರಡು ಸಮುದಾಯಗಳ ನಡುವಿನ ಗಲಭೆ, ಹಿಂಸಾಚಾರವನ್ನು ತಡೆಯುವ ನಿಟ್ಟಿನಲ್ಲಿ ಯಾವುದೇ ಶ್ರಮ ವಹಿಸದ ಮೋದಿ ಸರ್ಕಾರ ಮತ್ತು ಮಣಿಪುರದ ಬಿಜೆಪಿ ಸರ್ಕಾರ ಜಗತ್ತಿನ ಮುಂದೆ ಬೆತ್ತಲಾಗಿವೆ. ಆದರೂ ಒಬ್ಬ ಸ್ತ್ರೀಯಾಗಿ ಮಣಿಪುರದ ಹೆಣ್ಣುಮಕ್ಕಳ ಬೆತ್ತಲೆ ಮೆರವಣಿಗೆಯನ್ನು ಖಂಡಿಸಲಾಗದ ಸಚಿವೆ ಶೋಭಾ ಕರಂದ್ಲಾಜೆ ನಮ್ಮ ತುಳುನಾಡಿನವರು ಎಂದು ಹೇಳಲು ನಾಚಿಕೆಯಾಗುತ್ತಿದೆ

“ಮಣಿಪುರದಲ್ಲಿ ನಡೆಯುತ್ತಾ ಇರುವ ಗಲಭೆ ಮೋದಿಯವರ ಹೆಸರು ಕೆಡಿಸಲು ನಡೆಸುತ್ತಾ ಇರುವುದು” ಎಂದು ಸಚಿವೆ ಶೋಭಾ ಹೇಳಿರುವುದು ನೋಡಿ ಸಖೇದಾಶ್ಚರ್ಯವಾಯಿತು. ಒಮ್ಮೆಗೆ ಅದನ್ನು ಒಪ್ಪಿದರೂ ಮೋದಿ‌ ಹೆಸರು ಕೆಡಿಸಲು ಮಾಡುವ ಗಲಭೆಯನ್ನು ನಿಲ್ಲಿಸಲು ಮೋದಿಗೆ ಸಾಧ್ಯವಿಲ್ಲವೇ ಎಂಬ ಪ್ರಶ್ನೆಯನ್ನೂ ಅವರಿಗೆ ಕೇಳಬೇಕಾಗುತ್ತೆ. ಅದಕ್ಕೆ ಅವರು ಉತ್ತರ ನೀಡಲೇಬೇಕು.

ಹೆಣ್ಣುಮಕ್ಕಳನ್ನು ಸಾರ್ವಜನಿಕರ ಮುಂದೆ ಬೆತ್ತಲೆ ಮಾಡಿ‌, ಅವರ ಅಂಗಗಳ ಮೇಲೆಲ್ಲಾ ಅಸಭ್ಯವಾಗಿ ಕೈಯಾಡಿಸುತ್ತಾ ಮೆರವಣಿಗೆ ಮಾಡಿದ ಘಟನೆಯನ್ನು ಇಡೀ ವಿಶ್ವ ಒಕ್ಕೊರಲಿನಿಂದ ಖಂಡಿಸುತ್ತಾ ಇರುವಾಗ ಬಿಜೆಪಿ ಮತ್ತು ಶೋಭಾ ಕರಂದ್ಲಾಜೆಯಂತಹ ಹಲವರು ಇದನ್ನು‌ ಬಹು ಲಘುವಾಗಿ ಸ್ವೀಕರಿಸಿದ್ದು ನಾಚಿಕೆಗೇಡು. ಒಬ್ಬ ಮಹಿಳೆಯಾಗಿ ಆ ಇಬ್ಬರು ನಗ್ನರಾದ ಮಹಿಳೆಯರ ಮಾನಸಿಕ ವೇದನೆಯನ್ನು ಅರಿತುಕೊಳ್ಳದೇ ಇರುವುದು ಶೋಭಾರವರ ಅಸಂವೇದನೀಯ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.

ಯಾವುದೇ ಸರಕಾರಕ್ಕೆ ರಾಜ್ಯದಲ್ಲಿ‌ ಕಾನೂನು ಸುವ್ಯವಸ್ಥೆ ಇಂದಿನ ದಿನಗಳಲ್ಲಿ ಕಾಪಾಡಲು ಸಾಧ್ಯ ಇಲ್ಲ ಎಂಬುದು ನಂಬಲಾಗುವುದಿಲ್ಲ. ಇಷ್ಟೆಲ್ಲಾ ತಂತ್ರಜ್ಞಾನ ಇದ್ದಾಗ ಮನಸ್ಸು ‌ಮಾಡಿದರೆ ಕೂಡಲೇ ಶಾಂತಿ‌ ಸ್ಥಾಪನೆ ಮಾಡಬಹುದು. ಇಲ್ಲಿ ಹಿಂದೆ ಗುಜರಾತ್ ದಂಗೆ ಆದಾಗ ಯಾವ ರೀತಿ ಅಂದಿನ ಮುಖ್ಯಮಂತ್ರಿ ಜಾಣ‌ಕುರುಡುತನ ಹಾಗೂ ಕಿವುಡುತನ ತೋರಿದರೋ‌ ಅದೇ ರೀತಿ ಅದೇ‌ ಮೋದಿ ಪ್ರಧಾನಿ ಸ್ಥಾನದಲ್ಲಿ ಕೂತು ವರ್ತಿಸುತ್ತಿದ್ದಾರೆ. ಮಣಿಪುರದ ಮುಖ್ಯಮಂತ್ರಿಯೂ ಅದನ್ನೇ ಮಾಡುತ್ತಾ ಇದ್ದಾರೆ. ಶೋಭಾ‌‌ ಆದಿಯಾಗಿ ಬಿಜೆಪಿಯ‌ ಎಲ್ಲಾ ಐ ಟಿ‌ ಸೆಲ್ ನ ವೀರಾಧಿವೀರರು ನಿತ್ಯ ನಿರಂತರ ಮಣಿಪುರದ‌ ಬಗ್ಗೆ ಹೊಸ ಹೊಸ ಸುಳ್ಳುಗಳನ್ನು‌ ಸಂಶೋಧಿಸುವಲ್ಲಿ ಹಾಗೂ ಹರಡುವಲ್ಲಿ ಸಂಪೂರ್ಣವಾಗಿ ತೊಡಗಿಸಿ ಕೊಂಡಿದ್ದಾರೆ.

- Advertisement -

ಮಾನವೀಯತೆಯ ಮೌಲ್ಯಗಳನ್ನು ಅರಿಯದ ಭಾಜಪಾದ ನಾಯಕರು ಇವತ್ತು ಮಣಿಪುರದಲ್ಲಿ ನಡೆಯುತ್ತಾ ಇರುವ ಕೊಲೆ, ಅತ್ಯಾಚಾರ, ದೊಂಬಿ, ಹಲ್ಲೆ ಇವೆಲ್ಲವುದಕ್ಕೆ ಮೌನವಾಗಿ ಬೆಂಬಲ ಸೂಚಿಸುತ್ತಾ ಇದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...
1683414560 new project 2023 05 07t043757 638

ಶೋಭಾ‌ರವರು ಅಧಿಕಾರ‌ ಶಾಶ್ವತ ಅಲ್ಲ ಎಂಬ ಸತ್ಯಾಂಶ ತಿಳಿದು, ಕೂಡಲೇ ಮೋದಿಯವರ ಭಜನೆ ನಿಲ್ಲಿಸಿ ಜನಪರ ನಿಲುವನ್ನು ವ್ಯಕ್ತಪಡಿಸಬೇಕು. ಏಕೆಂದರೆ ಕರ್ನಾಟಕದ ಜನ ಮೊನ್ನೆಯಷ್ಟೇ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕಪಾಳಮೋಕ್ಷ ಮಾಡಿದ್ದಾರೆ. ಶೋಭಾ ಕರಂದ್ಲಾಜೆ, ನಳಿನ್‌ ಕುಮಾರ್,‌ ಪ್ರತಾಪ್‌ ಸಿಂಹ, ತೇಜಸ್ವಿ ‌ಸೂರ್ಯ‌ ಇನ್ನಿತರ ಸಂಸದರಿಗೆ ಮನೆ ಬಾಗಿಲನ್ನು ತೋರಿಸಲು‌ ಮತದಾರರು‌ ಸಜ್ಜಾಗಿದ್ದಾರೆ. ಇಂತಹ ಹೇಳಿಕೆಗಳು ಅವರ ಸೋಲಿನ ಅಂತರವನ್ನು‌ ಇನ್ನೂ‌ ಜಾಸ್ತಿ‌ ಮಾಡುತ್ತವೆ, ಹೊರತು‌‌ ಪಡಿಸಿ ಯಾವುದೇ ರಾಜಕೀಯ ‌ಲಾಭ‌‌ ತರುವುದಿಲ್ಲ ಎಂದು ಶೋಭಾ ಅರ್ಥಮಾಡಿಕೊಂಡರೆ ಒಳಿತು.

ಮೊನ್ನೆ ಮಣಿಪುರದಲ್ಲಿ‌ ಗಲಭೆ‌ ಪ್ರಾರಂಭವಾದಾಗ ಇದೇ ಶೋಭಾ ಮತ್ತು ರಾಜ್ಯದ ಬಿಜೆಪಿ ಮುಖಂಡರು ಇದೇ ಮೋದಿಯವರಿಗೆ ಪುಷ್ಪವರ್ಷ ಮಾಡುವುದರಲ್ಲಿ‌‌ ಮಗ್ನರಾಗಿದ್ದರು. ರಾಜ್ಯದ ಪುಣ್ಯ, ಮೋದಿಯವರ ಅಪಾರ ಅಬ್ಬರದ‌ ಪ್ರಚಾರದ ಬಳಿಕವೂ ಬಿಜೆಪಿ‌‌ ಹೀನಾಯವಾಗಿ ಸೋತಿತು. ಮಣಿಪುರದಲ್ಲಿ ಶಾಂತಿ‌ ನೆಲೆಸಬೇಕಾದರೆ ಬಿಜೆಪಿ ವಿರುದ್ಧ ‌ದೇಶದಾದ್ಯಂತ ಅಲೆ ಏಳಬೇಕು. ಅದನ್ನು ಶೀಘ್ರದಲ್ಲೇ ಆಶಿಸೋಣ‌.

WhatsApp Image 2025 11 17 at 3.16.03 PM
ಅಮೃತ್‌ ಶೆಣೈ
+ posts

ಅಧ್ಯಕ್ಷರು, ʼಸಹಬಾಳ್ವೆʼ ಉಡುಪಿ‌

ಪೋಸ್ಟ್ ಹಂಚಿಕೊಳ್ಳಿ:

ಅಮೃತ್‌ ಶೆಣೈ
ಅಮೃತ್‌ ಶೆಣೈ
ಅಧ್ಯಕ್ಷರು, ʼಸಹಬಾಳ್ವೆʼ ಉಡುಪಿ‌

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನ ಕಲ್ಯಾಣ | ಸತ್ಯಶುದ್ಧವಿಲ್ಲದುದು ಕಾಯಕವಲ್ಲ

ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ;ಸತ್ಯಶುದ್ಧವಿಲ್ಲದುದು ಕಾಯಕವಲ್ಲ;ಆಸೆಯೆಂಬುದು ಭವದ ಬೀಜ;ನಿರಾಸೆಯೆಂಬುದು ನಿತ್ಯಮುಕ್ತಿ.ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ ವಚನ...

ವಚನ ಕಲ್ಯಾಣ | ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ?

ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ? ಸುಮ್ಮನೇಕೆ ಹೊತ್ತಗಳೆವಿರಿ ಸ್ವಾಮಿಗಳಿರಾ? ಮಾಡ ಬನ್ನಿ...

ವಚನ ಕಲ್ಯಾಣ | ಒಬ್ಬರ ಮನವ ಘಾತವ ಮಾಡಿ, ಗಂಗೆಯ ಮುಳುಗಿದಡೇನಾಗುವುದಯ್ಯಾ?

ಒಬ್ಬರ ಮನವ ನೋಯಿಸಿ, ಒಬ್ಬರ ಮನವ ಘಾತವ ಮಾಡಿ, ಗಂಗೆಯ ಮುಳುಗಿದಡೇನಾಗುವುದಯ್ಯಾ?...

ಧರೆಯ ಗರ್ಭದಿಂದ ಸಂವಿಧಾನದವರೆಗೆ: ಅಸ್ಪೃಶ್ಯತೆಯ ಬೇರು ಸವರಲು ಬಸವ-ಭೀಮ ಮಾರ್ಗ

 ‘ಜೈ ಭೀಮ್’ ಎಂಬುದು ಕೇವಲ ಒಂದು ಘೋಷಣೆಯಲ್ಲ, ಅದು ನಮ್ಮೊಳಗಿನ ಕ್ರಾಂತಿಯ...