ವಚನ ಕಲ್ಯಾಣ | ಪರಧನ, ಪರಸ್ತ್ರೀ, ಪರದೈವಂಗಳಿಗೆರಗದಿಪ್ಪುದೆ ನೇಮ!

Date:

ಅರ್ಚನೆ ಪೂಜನೆ ನೇಮವಲ್ಲ; ಮಂತ್ರ ತಂತ್ರ ನೇಮವಲ್ಲ;
ಧೂಪ ದೀಪಾರತಿ ನೇಮವಲ್ಲ; ಪರಧನ ಪರಸ್ತ್ರೀ ಪರದೈವಂಗಳಿಗೆರಗದಿಪ್ಪುದೆ ನೇಮ.
ಶಂಭುಜಕ್ಕೇಶ್ವರನಲ್ಲಿ ಇವು ಕಾಣಿರಣ್ಣಾ ನಿತ್ಯನೇಮ.

- Advertisement -

12ನೇ ಶತಮಾನದ ಶಿವಶರಣೆಯಲ್ಲಿ ಸತ್ಯಕ್ಯ ಕೂಡ ಒಬ್ಬರು. ತಮ್ಮ ಹೆಸರೇ ಸೂಚಿಸುವಂತೆ ಸಮಾಜದಲ್ಲಿ ನಡೆಯುವ ಅವೈಜ್ಞಾನಿಕ, ಅವೈಚಾರಿಕ ಆಚರಣೆಗಳನ್ನು ನೇರವಾಗಿ ಖಂಡಿಸುವ ಮುಖಾಂತರ ಸತ್ಯದ ಹುಡುಕಾಟಕ್ಕಾಗಿ ಹಂಬಲಿಸಿದವರು ಶರಣೆ ಸತ್ಯಕ್ಕ. ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಸಮೀಪದ ಹಿರೇಜಂಬೂರು ಸತ್ಯಕ್ಕನ ಜನ್ಮಸ್ಥಳ ಎಂದು ಹೇಳಲಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಮನೆ ಅಂಗಳ ಕಸಗೂಡಿಸುವುದು ಸತ್ಯಕ್ಕನ ಕಾಯಕವಾಗಿತ್ತು. ಜಂಭುಜಕ್ಕೇಶ್ವರ ಅಂಕಿತದಿಂದ ಬರೆದ ಸತ್ಯಕ್ಕನ 27 ವಚನಗಳು ದೊರೆತಿವೆ. ಸತಿಪತಿಭಾವ, ಲಿಂಗಸಮಾನತೆ, ಢಾಂಬಿಕತೆ, ಗುರು-ಶಿಷ್ಯರು ಮುಂತಾದ ವಿಷಯಗಳ ಕುರಿತು ಸತ್ಯಕ್ಕ ತನ್ನ ವೃತ್ತಿ ಪರಿಭಾಷೆಯನ್ನು ಬಳಸಿ ವಚನ ರಚಿಸಿರುವುದು ಗಮನಿಸಬಹುದು.

ನಮ್ಮ ದಿನನಿತ್ಯದ ಬದುಕಿನಲ್ಲಿ ಯಾವುದು ನಿಯಮವಾಗಬೇಕು ಎಂಬುವುದರ ಕುರಿತು ಸತ್ಯಕ್ಕ ಸ್ಪಷ್ಟವಾಗಿ ಮೇಲಿನ ವಚನದಲ್ಲಿ ತಿಳಿಸುತ್ತಾರೆ. ಸಮಾಜದಲ್ಲಿ ದೇವರ ದರ್ಶನಕ್ಕಾಗಿ ಮನುಷ್ಯ ಕಠಿಣ ತಪಸ್ಸು ನಡೆಸುತ್ತಾನೆ. ದೇವರನ್ನು ಕಂಡುಕೊಳ್ಳಲು ಅರ್ಚನೆ, ಪೂಜೆ, ಧೂಪ, ಆರತಿ ಸೇರಿದಂತೆ ನಾನಾ ಆಚರಣೆ ಕೈಗೊಳ್ಳುತ್ತಾನೆ. ಕೆಲವೊಮ್ಮೆ ಗುರುವಿಗೆ ಒಲಿಸಿಕೊಳ್ಳುವುದಕ್ಕಾಗಿ ತನ್ನ ಕಾಯಕವು ತೊರೆಯುತ್ತಾನೆ. ಆದರೆ, ವಚನಕಾರರು ʼಕಾಯಕದಲ್ಲಿ ನಿರತನಾದಡೆ ಗುರುದರ್ಶನವಾದರೂ ಮರೆಯಬೇಕುʼ ಎಂದು ಹೇಳುತ್ತಾರೆ.

ವಚನಕಾರರಲ್ಲಿ ಸಾಮಾಜಿಕ ಕಳಕಳಿ, ವೈಚಾರಿಕ ಪ್ರಜ್ಞೆ, ವೈಜ್ಞಾನಿಕ ಮನೋಭಾವ ಕಾಣುತ್ತೇವೆ. ಹಾಗೇ ಕಸಗುಡಿಸುವ ಕಾಯಕದಲ್ಲಿ ತೊಡಗಿದ ನಿಷ್ಠಾವಂತ ಶರಣೆ ಸತ್ಯಕ್ಕ ಆತ್ಮಗೌರವದ ಪ್ರತೀಕವಾಗಿದ್ದಾಳೆ. ದೇವರಿಗೆ ಒಲಿಸಿಕೊಳ್ಳುವ ಭರದಲ್ಲಿ ಮನುಷ್ಯನು ಮಂತ್ರ, ತಂತ್ರದ ಮೊರೆ ಹೋಗಿ ವಿನೂತನ ಪ್ರಯೋಗಕ್ಕೆ ಪ್ರಯತ್ನಿಸುತ್ತಾನೆ. ‘ಮಂತ್ರದಿಂದ ಮಾವಿನಕಾಯಿ ಉದುರುವುದಿಲ್ಲ’ ಎಂಬ ಸತ್ಯವನ್ನು ಅವರು ತಿಳಿಸುತ್ತಾರೆ.

ವಚನಕಾರರು ʼದೇವನೊಬ್ಬ ನಾಮ ಹಲವುʼ ಎಂಬ ಏಕದೇವೋಪಾಸನೆ ತತ್ವಕ್ಕೆ ಹೆಚ್ಚು ಒತ್ತು ನೀಡಿದರು. ʼದೇಹವೇ ದೇವಾಲಯ’ ಎಂದು ಇಷ್ಟಲಿಂಗದಲ್ಲಿ ದೈವತ್ವ ಕಾಣಬಯಸಿದರು. ದೇವರನ್ನು ದೇವ ಮಂದಿರದಿಂದ ದೇಹ ಮಂದಿರಕ್ಕೆ ತಂದುಕೊಟ್ಟವರು ಶರಣರು. ಶರಣರು ಕಾಯಕತತ್ವಕ್ಕೆ ಪ್ರಥಮಾದ್ಯತೆ ಕೊಟ್ಟು ಸ್ವಾವಲಂಬಿ ಬದುಕು ನಡೆಸಿದರು. ಕಾಯಕದಲ್ಲೇ ಆನಂದ, ಘನತೆಯ ಜೀವನ ಕಳೆಯುವವರು ನಾಳೆಗಾಗಿ ಚಿಂತಿಸುವವರಲ್ಲ. ಅವರು ಸತ್ಯ ಶುದ್ಧ, ನಿಸ್ವಾರ್ಥ ಬದುಕಿಗಾಗಿ ಚಿಂತನೆ ಮಾಡುವವರು. ಅಸತ್ಯ, ಮೋಸದಿಂದ ದೂರ ಉಳಿದು ಸರಳ ಜೀವನ ರೂಢಿಸಿಕೊಂಡು ನೆಮ್ಮದಿ ಕಾಣಬೇಕೆಂದು ಸತ್ಯಕ್ಕೆ ಹೇಳುತ್ತಾರೆ.

ಮನುಷ್ಯನಿಗೆ ಯಾವುದು ನಿತ್ಯ ನೇಮ(ನಿಯಮ) ಆಗಬಾರದು ಎಂಬುದನ್ನು ಕೂಡ ಸ್ಪಷ್ಟವಾಗಿ ತಿಳಿಸುತ್ತಾರೆ. ಮನಸ್ಸಿನಲ್ಲಿ ಚಂಚಲತೆ, ದ್ವೇಷ, ಕಾಮ, ಮತ್ಸರ ತುಂಬಿಕೊಂಡರೆ ದೇವರಿಗೆ ಅದೆಷ್ಟೇ ಪೂಜೆ, ಅರ್ಚನೆ, ಧೂಪ, ದೀಪಾರತಿ ಕೈಗೊಂಡರೂ ವ್ಯರ್ಥವೇ ಸರಿ ಎಂದು ಹೇಳುತ್ತಾರೆ. ಇಲ್ಲಿ ಇನ್ನೊಂದು ವಿಶಿಷ್ಟವೆಂದರೆ ಸತ್ಯಕ್ಕ ಹೇಳಿರುವ “ಪರಧನ ಪರಸ್ತ್ರೀ ಪರದೈವಂಗಳಿಗೆರಗದಿಪ್ಪುದೆ ನೇಮ” ಎಂಬ ಎಚ್ಚರದ ಮಾತುಗಳು ವಾಸ್ತವ ಸತ್ಯ ಎನಿಸುತ್ತವೆ.

ಸಮಾಜದಲ್ಲಿರುವ ಪ್ರತಿಯೊಬ್ಬರೂ ಅನ್ಯರ ಆಸ್ತಿ, ಧನದ ಮೇಲೆ ಕಣ್ಣು ಇಡುವುದು ಲಂಚಕ್ಕೆ ಸಮ. ಈ ಭ್ರಷ್ಟಚಾರ ಎಂಬುದೇ ಹುಟ್ಟಿಕೊಳ್ಳುತ್ತಿಲ್ಲವೇನೊ, ಭ್ರಷ್ಟರಿಗೆ ಚಾಟಿ ಬೀಸುವ ಲೋಕಾಯುಕ್ತ ಪೊಲೀಸರ ಅಗತ್ಯವೂ ಇರುತ್ತಿರಲಿಲ್ಲ ಎಂದೆನಿಸುತ್ತದೆ. ಪರಸ್ತ್ರೀಯರನ್ನು ಕೆಟ್ಟದೃಷ್ಟಿಯಿಂದ ಕಾಣುವುದನ್ನು ಬಿಟ್ಟರೆ ಸಮಾಜದಲ್ಲಿ ಅನೇಕ ಅತ್ಯಾಚಾರದಂತಹ ಅನೇಕ ಸಾಮಾಜಿಕ ಪಿಡುಗು ತಪ್ಪಿಸಬಹುದಿತ್ತೆನೊ. ಇನ್ನು ಬಹುದೇವೋಪಾಸನೆಗಿಂತ ಏಕದೇವರ ಪರಿಕಲ್ಪನೆ ಬಗ್ಗೆ ತಿಳಿಸುವ ಸತ್ಯಕ್ಕ, ʼದೇಹವೇ ದೇವಾಲಯʼ ತತ್ವಕ್ಕೆ ಅತಿಹೆಚ್ಚು ಮಹತ್ವ ನೀಡುತ್ತಾರೆ. ದುಡಿಮೆಯ ಗಳಿಕೆಯಿಂದ ಮಾತ್ರ ಜೀವನ ನಡೆಸಬೇಕು. ಮತ್ತೊಬ್ಬರ ಹಣ ಲಪಟಾಯಿಸುವುದು ನಮ್ಮ ನಿಯಮ ಆಗಬಾರದು. ಮದುವೆಯಾಗಿ ಸಾರ್ಥಕ ಬದುಕು ಕಂಡುಕೊಳ್ಳಬೇಕು ಎಂದು ವಿವರಿಸುತ್ತಾರೆ.

ಕೊಲೆ, ಮೋಸ, ಸುಲಿಗೆ, ಅತ್ಯಾಚಾರ, ದೌರ್ಜನ್ಯಗಳಂತಹ ಸಮಾಜಘಾತುಕ ಕೃತ್ಯಗಳಿಂದ ಈ ಸಮಾಜ ನಲುಗುತ್ತಿದೆ. ಇಂತಹ ದುಷ್ಕೃತ್ಯಗಳಿಗೆ ಪರಧನ, ಪರಸ್ತ್ರೀ ಸೇರಿದಂತೆ ಅನೇಕ ದುರಾಸೆಗಳೂ ಕಾರಣವಾಗಿವೆ. “ಪಾಪಿಯ ಧನ ಪ್ರಾಯಶ್ಚಿತಕ್ಕಲ್ಲದೇ ಸತ್ಪಾತ್ರಕ್ಕೆ ಸಲ್ಲದಯ್ಯಾ” ಎಂಬ ಬಸವಣ್ಣನವರ ನಿಲುವು ಕೂಡ ಅದೇ ಆಗಿತ್ತು. ಬೆವರು ಸುರಿಸಿ ಗಳಿಸಿದ ಹಣ ಮಾತ್ರ ಶುಭಕಾರ್ಯಗಳಿಗೆ ಸಲ್ಲುತ್ತದೆ. ಅನ್ಯಾಯ, ಮೋಸ, ವಂಚನೆಯಿಂದ ಬಂದ ಆಸ್ತಿ ಮನಸ್ಸು ಮಲೀನಗೊಳಿಸಿ ಬದುಕು ಕೇಡಿನತ್ತ ಕೊಂಡೊಯ್ಯುತ್ತದೆ ಎಂಬುದು ಶರಣರ ಸದಾಶಯ.

‘ನೂರು ದೇವರುಗಳ ನೂಕಾಚೆ ದೂರ’ ಎಂದು ಕುವೆಂಪು ಕೂಡ ಒತ್ತಿ ಹೇಳಿದರು. ನೂರಾರು ದೇವರಲ್ಲಿ ನಂಬಿಕೆಯಿಟ್ಟರೆ ಯಾವುದೂ ಫಲಿಸುವುದಿಲ್ಲ. ʼಎನ್ನ ಕಾಲೇ ಕಂಬ ದೇಹವೇ ದೇವಾಲಯʼ ಎಂದರಿತು ʼಅರಿವೇ ಗುರುʼ ತತ್ವ ಮೈಗೂಡಿಸಿಕೊಂಡರೆ ಸಾತ್ವಿಕ ಬದುಕು ನಮ್ಮದಾಗುತ್ತದೆ. ಇಂತಹ ಶರಣತತ್ವ ಸಿದ್ದಾಂತ ನಮಗೆ ಆದರ್ಶವಾಗಬೇಕು. ಬದುಕಿಗೆ ಕಂಟಕವಾದ ದ್ವೇಷ, ಸುಳ್ಳು, ಮೋಸ, ವಂಚನೆ, ಹಿಂಸೆ, ಕೊಲೆ, ಲಂಚ, ವ್ಯಭಿಚಾರ, ಸ್ವಾರ್ಥಕ್ಕೆ ಅಸ್ಪದ ಕೊಡದೆ ಸತ್ಯ-ಶುದ್ಧವುಳ್ಳ ಕಾಯಕದಲ್ಲಿ ನಿರತನಾಗಿ ಸದಾಚಾರ ಮಾರ್ಗದಲ್ಲಿ ಸಾಗಬೇಕು.

ಲಂಚ ಪಡೆಯುವ ಕರಾಳ ಸ್ವರೂಪ ಎಲ್ಲಾ ಕಡೆಯೂ ವ್ಯಾಪಿಸಿದೆ. ಜನರು ಕೂಡ ಅದನ್ನು ಸಾಮಾನ್ಯ, ಬದುಕಿನ ಭಾಗವೆಂದು ಸಹಿಸಿಕೊಂಡು ಹೋಗುತ್ತಿರುವುದು ನೋಡುತ್ತಿದ್ದೇವೆ. ಆದರೆ, ಸತ್ಯಕ್ಕ ಶ್ರಮವಿಲ್ಲದೆ ಅನ್ಯಾಯದಿಂದ ದೂರವಿದ್ದೇನೆ ಎಂದು ಧೈರ್ಯವಾಗಿ ಹೇಳುತ್ತಾಳೆ. ತಾನು ಕಸಗುಡಿಸುವ ಕಾಯಕದ ಸಂದರ್ಭದಲ್ಲಿ ಬೆಲೆಯುಳ್ಳ ವಸ್ತುಗಳಾದ ಚಿನ್ನಾಭರಣ, ಬಟ್ಟೆ ಇತ್ಯಾದಿ ಬೀದಿಯಲ್ಲಿ ಬಿದ್ದರೂ ಕಾಲಕಸದಂತೆ ನೋಡುತ್ತೇನೆ, ಅವುಗಳನ್ನು ಕೈಮುಟ್ಟಿ ತೆಗೆಯುವುದಿಲ್ಲ ಎಂದು ದೃಢನಿಲುವಿನ ಪ್ರತಿಜ್ಞೆ ಮಾಡಿ ಹೇಳುವುದು ಸತ್ಯಕ್ಕನ ಸತ್ಯದ ನಿಷ್ಠೆಗೆ ಸಾಕ್ಷಿ.

ಶರಣ ಪರಂಪರೆಯಲ್ಲಿ ಕಾಯಕಕ್ಕೆ ಹೆಚ್ಚು ಮಹತ್ವವಿದೆ. ಕಾಯಕದ ಮೂಲಕವೇ ಜೀವನ ನಡೆಸಬೇಕೇ ಹೊರತು ಪರದ್ರವ್ಯ ಮೇಲೆ ಆಸೆ ಪಡಬಾರದು. ನನಗೆ ಮತ್ತೊಬ್ಬರ ಆಸ್ತಿ, ಧನದ ಮೇಲೆ ಆಸೆಯಿಲ್ಲ. ಈ ರೀತಿ ಆಸೆಬುರುಕತನ ತೋರಿದರೆ ನನ್ನನ್ನು ಆಗಲೇ ನರಕಕ್ಕೆ ಅಟ್ಟಿ ನನ್ನಿಂದ ದೂರ ಹೋಗು ಎಂದು ಸತ್ಯಕ್ಕ ದೇವರಿಗೆ ನಿರ್ಭಿಡೆಯಿಂದ ಹೇಳುತ್ತಾಳೆ.

“ಮೊಲೆ ಮುಡಿ ಇದ್ದುದೆ ಹೆಣ್ಣೆಂದು ಪ್ರಮಾಣಿಸಲಿಲ್ಲ. ಕಾಸೆ ಮೀಸೆ ಕಠಾರವಿದ್ದುದೆ ಗಂಡೆಂದು ಪ್ರಮಾಣಿಸಲಿಲ್ಲ. ಅದು ಜಗದ ಹಾಹೆ; ಬಲ್ಲವರ ನೀತಿಯಲ್ಲ. ಏತರ ಹಣ್ಣಾದಡೂ ಮಧುರವೆ ಕಾರಣ, ಅಂದವಿಲ್ಲದ ಕುಸುಮಕ್ಕೆ ವಾಸನೆಯೆ ಕಾರಣ. ಇದರಂದವ ನೀನೇ ಬಲ್ಲೆ ಶಂಭುಜಕ್ಕೇಶ್ವರಾ” ಎಂಬ ವಚನದಲ್ಲಿ ಸತ್ಯಕ್ಕ ಮಹಿಳಾ ಸಂವೇದನಾ ಕುರಿತು ಬಹಳ ಮಾರ್ಮಿಕವಾಗಿ ಹೇಳುತ್ತಾರೆ. ಹೆಣ್ಣು-ಗಂಡು ಎಂಬ ಭೇದ ಇರುವುದು ರೂಪದಲಲ್ಲ, ಗುಣದಲ್ಲಿ ಎಂಬುದನ್ನು ಹಣ್ಣು ಮತ್ತು ಹೂವಿನ ರೂಪಕ ಕೊಟ್ಟು ಹೇಳುತ್ತ ಸ್ತ್ರೀ ಪುರುಷ ಸಮಾನತೆಯ ಉದ್ದಾತ್ತತೆಯನ್ನು ಎತ್ತಿಹಿಡಿಯುತ್ತಾಳೆ.

ಇದನ್ನೂ ಓದಿ : ವಚನ ಕಲ್ಯಾಣ | ನಿಷ್ಠೆಯುಳ್ಳ ಭಕ್ತ ನಟ್ಟಡವಿಯಲ್ಲಿದ್ದಡೇನು? ಅದು ಪಟ್ಟಣವೆಂದೆನಿಸೂದು

(ಆ.12ರಿಂದ ಶ್ರಾವಣ ಮಾಸ ಆರಂಭಗೊಂಡಿದೆ. ತನ್ನಿಮಿತ್ತ ಪ್ರತಿದಿನ ಬಸವಾದಿ ಶಿವಶರಣರ ವಚನ ಅನುಭಾವವನ್ನು “ವಚನ ಕಲ್ಯಾಣ” ಹೆಸರಿನಲ್ಲಿ ವಿಶೇಷ ಬರಹಗಳು ʼಈದಿನ ಡಾಟ್ ಕಾಮ್‌ʼನಲ್ಲಿ ಪ್ರಕಟವಾಗಲಿದೆ. ಓದಿ…ಓದಿಸಿ)

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನ ಕಲ್ಯಾಣ | ಏಳ್ನೂರೆಪ್ಪತ್ತು ಅಮರಗಣಂಗಳ ಶ್ರೀಪಾದಕ್ಕೆ ಶರಣೆಂದು ಬದುಕಿದೆನು ಕಾಣಾ!

ಎನಗೆ ಗುರುಸ್ಥಲವ ತೋರಿದಾತ ಸಂಗನ ಬಸವಣ್ಣನು. ಎನಗೆ ಲಿಂಗಸ್ಥಲದ ತೋರಿದಾತ ಚನ್ನಬಸವಣ್ಣನು....

ಅಲ್ಲಮನ ಅನನ್ಯ ಪದಪ್ರಯೋಗಗಳು | ನಡೆದಡೆ ನುಡಿದಡೆ 

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ವಚನ ಕಲ್ಯಾಣ | ಮರ್ತ್ಯಲೋಕದ ಮಹಾಮನೆ ಶೂನ್ಯವಾಯಿತ್ತಲ್ಲಾ ಬಸವಣ್ಣಾ…

ಬಸವಣ್ಣಾ, ನೀವು ಮರ್ತ್ಯಕ್ಕೆ ಬಂದು ನಿಂದಡೆ ಭಕ್ತಿಯ ಬೆಳವಿಗೆ ದೆಸೆದೆಸೆಗಲ್ಲಾ ಪಸರಿಸಿತ್ತಲ್ಲಾ!...

ಅವಳ ಕಣ್ಣೋಟ | ‘ಗಾಂಧಾರಿ’: ಕಣ್ಣು ಕಳೆದುಕೊಂಡವಳು, ಕುರುಡಳಂತೆ ನಟಿಸಿದವಳು

ಮಕ್ಕಳ ಕಳ್ಳಸಾಗಣೆಯ ಜಾಲವನ್ನು ಚಿತ್ರದ ಕೇಂದ್ರ ಸಮಸ್ಯೆಯಾಗಿ ಇಟ್ಟಿರುವುದು ಮಹತ್ವದ ಸಂಗತಿ....