ಚುನಾವಣೆ 2023 | ಕಾಂಗ್ರೆಸ್ ನಾಯಕ ಮನೋಹರ್ ತಹಶೀಲ್ದಾರ್‌ ಏ. 7ಕ್ಕೆ ಜೆಡಿಎಸ್‌ ಸೇರ್ಪಡೆ

Date:

  • ಕಾಂಗ್ರೆಸ್ ಪಕ್ಷ ದ್ರೋಹ ಬಗೆದಿದೆ ಎಂದ ಮನೋಹರ್
  • ಪಂಚರತ್ನ ರಥಯಾತ್ರೆ ವೇಳೆ ಜೆಡಿಎಸ್‌ ಸೇರ್ಪಡೆ

ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಪಕ್ಷಾಂತರ ಪರ್ವ ಜೋರಾಗಿದೆ. ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್‌ ಸೇರುವುದಾಗಿ ಘೋಷಿಸಿದ್ದಾರೆ.

ಹಾನಗಲ್‌ನಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಹಿರಿಯ ನಾಯಕ ಮನೋಹರ್ ತಹಶೀಲ್ದಾರ್ ಅಧಿಕೃತ ಘೋಷಣೆ ಮಾಡಿದ್ದಾರೆ. ಏಪ್ರಿಲ್‌ 7ರಂದು ಜೆಡಿಎಸ್‌ನ ಮಹತ್ವಾಕಾಂಕ್ಷೆಯ ಪಂಚರತ್ನ ರಥಯಾತ್ರೆಯ ವೇಳೆ ಪಕ್ಷ ಸೇರ್ಪಡೆಯಾಗಲಿದ್ದಾರೆ.

ಕಾಂಗ್ರೆಸ್ ತೊರೆಯುತ್ತಿರುವ ಕುರಿತು ಮಾತನಾಡಿದ ಅವರು, “ಕಾಂಗ್ರೆಸ್‌ ನನಗೆ ದ್ರೋಹ ಬಗೆಗಿದೆ. ಆದ್ದರಿಂದಲೇ ನಾನು ಈ ನಿರ್ಧಾರಕ್ಕೆ ಬಂದಿರುವೆ” ಎಂದು ಹೇಳಿದ್ದಾರೆ.

“ಐದು ದಶಕಗಳ ಕಾಲ ನಾನು ಕಾಂಗ್ರೆಸ್‌ನಲ್ಲಿದ್ದೆ. ಶಾಸಕನಾಗಿ, ಸಚಿವನಾಗಿ ಮತ್ತು ವಿಧಾನಸಭೆಯ ಉಪಸಭಾಪತಿಯಾಗಿ ಕೆಲಸ ಮಾಡಿದ್ದೇನೆ. ಆದರೂ ಪಕ್ಷ ನನಗೆ ದ್ರೋಹ ಬಗೆದಿದೆ. ಮತ್ತೆಂದೂ ನಾನು ಕಾಂಗ್ರೆಸ್ ಕಡೆ ತಲೆ ಹಾಕುವುದಿಲ್ಲ” ಎಂದು ಹರಿಹಾಯ್ದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೋಲಾರ | ಹಿಟ್ಲರ್‌, ಮುಸಲೋನಿ ನಾಯಕತ್ವ ಒಪ್ಪಿಕೊಂಡವರು ದೇಶ ನಡೆಸುತ್ತಿದ್ದಾರೆ: ಸಿದ್ದರಾಮಯ್ಯ

“ಈ ಬಾರಿ ನನಗೆ ಹಾನಗಲ್‌ನಿಂದ ಟಿಕೆಟ್ ನೀಡುವಂತೆ ದೆಹಲಿಯವರೆಗೂ ಹೋಗಿ ಮನವಿ ಮಾಡಿದೆ. ಆದರೆ, ಶ್ರೀನಿವಾಸ ಮಾನೆ ಅವರಿಗೆ ಟಿಕೆಟ್‌ ಘೋಷಣೆಯಾಗಿದೆ. ಸೌಜನ್ಯಕ್ಕಾದರೂ ಕಾಂಗ್ರೆಸ್ ನಾಯಕರು ನನ್ನ ಸಂಪರ್ಕ ಮಾಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಕಳೆದ 50 ವರ್ಷಗಳಿಂದ ಕಾಂಗ್ರೆಸ್ ಪಕ್ಷ ನನಗೆ ತಾಯಿಯಾಗಿತ್ತು, ಪಕ್ಷವನ್ನು ತಾಯಿಯಂತೆ ನೋಡಿಕೊಂಡ ನನಗೆ ತಾಯಿಯ ಹಾಲು ವಿಷವಾಗಿ ಪರಿಣಮಿಸಿದೆ” ಎಂದಿದ್ದಾರೆ.

ಹಾನಗಲ್ ಕಾಂಗ್ರೆಸ್​​ ಟಿಕೆಟ್ ಆಕಾಂಕ್ಷಿಯಾಗಿದ್ದ ಮನೋಹರ್​​ ತಹಶೀಲ್ದಾರ್​​ ದೆಹಲಿ ನಾಯಕರನ್ನು ಭೇಟಿಯಾಗಿ ಟಿಕೆಟ್​ಗಾಗಿ ಲಾಭಿ ನಡೆಸಿದ್ದರು.

ಮನೋಹರ್ ತಹಶೀಲ್ದಾರ್ ಅವರು 1978 ರಿಂದ 2013ರವರೆಗಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹಾನಗಲ್‌ ಕ್ಷೇತ್ರದಿಂದಲೇ ಸ್ಪರ್ಧಿಸಿದ್ದಾರೆ. 1978, 1989, 1999 ಮತ್ತು 2013ರಲ್ಲಿ ಶಾಸಕಾಗಿ ಆಯ್ಕೆಯಾಗಿದ್ದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮನೋಹರ್‌ ತಹಶೀಲ್ದಾರ್ ಅವರು ಅಬಕಾರಿ ಮತ್ತು ಮುಜರಾಯಿ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಇನ್ನೂ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನ ಅಭ್ಯರ್ಥಿಗಳ ಪೂರ್ಣ ಪ್ರಮಾಣದ ಪಟ್ಟಿ ಬಿಡುಗಡೆಯಾಗಿಲ್ಲ. ಪಟ್ಟಿ ಬಿಡುಗಡೆ ನಂತರ ಮತ್ತಷ್ಟು ಮುಖಂಡರು ತಮ್ಮ ಪಕ್ಷಗಳನ್ನು ತೊರೆಯುವ ಸಾಧ್ಯತೆ ಹೆಚ್ಚಿವೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೇಶದಲ್ಲಿ ‘ಬ್ರ್ಯಾಂಡ್‌ ಬೆಂಗಳೂರು’ ನಂಬರ್ ಒನ್ ಆಗಿಸಬೇಕಿದೆ: ಸಿದ್ದರಾಮಯ್ಯ

'ದೇಶ ಸುಸ್ಥಿರವಾಗಿ ಬೆಳೆಯಬೇಕಾದರೆ ನಗರ-ಗ್ರಾಮೀಣ ಸುಸ್ಥಿರ ಬೆಳವಣಿಗೆ ಕಾಣಬೇಕು' 'ರಾಜ್ಯದ...

‘ಫ್ರೀಡಂ ಪಾರ್ಕ್’ನಿಂದ ನಮಗೆ ‘ಫ್ರೀಡಂ’ ಕೊಡಿ: ಸಿಎಂ ಸಿದ್ದರಾಮಯ್ಯಗೆ ‘ಮಹಾಧರಣಿ’ ಆಗ್ರಹ

ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ಪ್ರತಿಯೊಂದು ಪ್ರತಿಭಟನೆಗಳು ಕೇವಲ 'ಫ್ರೀಡಂ ಪಾರ್ಕ್‌'ಗೆ ಸೀಮಿತವಾಗಿದ್ದು,...

ಬೆಂಗಳೂರು | 20 ದಿನದ ಹಸುಗೂಸು ಮಾರಾಟ; ಸಿಸಿಬಿ ಪೊಲೀಸರ ಕಾರ್ಯಾಚರಣೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಹಸುಗೂಸು ಮಾರಾಟ ದಂಧೆ ಮತ್ತೆ ಬೆಳಕಿಗೆ...

ತೆಲಂಗಾಣ ಪತ್ರಿಕೆಗಳಲ್ಲಿ ಜಾಹೀರಾತು; ರಾಜ್ಯದ ಬೊಕ್ಕಸ ದುರ್ಬಳಕೆ: ಆರ್‌ ಅಶೋಕ ಕಿಡಿ

'ರಾಜ್ಯದ ಬೊಕ್ಕಸ ಬರಿದು ಮಾಡಿ, ಹೆಮ್ಮಾರಿಯಾದ ಕಾಂಗ್ರೆಸ್ ಸರ್ಕಾರ' 'ಅಭಿವೃದ್ಧಿಗೆ...