ಐಟಿ ಇಲಾಖೆ ಪತ್ತೆ ಹಚ್ಚುವ ಮುನ್ನ ಲೂಟಿ ಹೊಡೆದ ಸಂಪತ್ತು ನೀವೇ ಕೊಟ್ಟುಬಿಡಿ: ಕಾಂಗ್ರೆಸ್‌ಗೆ ವಿಜಯೇಂದ್ರ ಸಲಹೆ

Date:

ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಸಂಸದರ ಮನೆಗೆ ಐಟಿ ದಾಳಿಯ ವೇಳೆಯಲ್ಲಿ ಸುಮಾರು 200 ಕೋಟಿ ನಗದು ಪತ್ತೆ ವಿಚಾರ ಈಗ ದೇಶಾದ್ಯಂತ ಸುದ್ದಿಯಾಗುತ್ತಿದೆ. ಈ ಬೆಳವಣಿಗೆಯ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, “ಐಟಿ ಇಲಾಖೆ ಪತ್ತೆ ಹಚ್ಚುವ ಮುನ್ನ ಲೂಟಿ ಹೊಡೆದ ಸಂಪತ್ತನ್ನು ನೀವೇ ಕೊಟ್ಟುಬಿಡಿ” ಎಂದು ಕಾಂಗ್ರೆಸ್‌ಗೆ ಸಲಹೆ ನೀಡಿದ್ದಾರೆ.

ತಮ್ಮ ಸುದೀರ್ಘ ಟ್ವೀಟ್‌ನಲ್ಲಿ, “ಈ ದೇಶದ ಸಂಪತ್ತು ಸಮಾನವಾಗಿ ಹಂಚಿಕೆಯಾಗುತ್ತಿಲ್ಲ, ಅದರಲ್ಲಿ ಮುಸ್ಲಿಮರಿಗೆ ಪಾಲು ಸಿಗುತ್ತಿಲ್ಲ ಎಂದು ಮೊನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಸ್ಲಿಂ ಓಲೈಕೆ ಭಾಷಣ ಮಾಡಿದ್ದರು. ಈ ದೇಶದ ಜನರ ಸಂಪತ್ತು ಯಾರ ಬಳಿ ಇದೆ? ಲೂಟಿ ಹೊಡೆದವರಾರು? ಎಂಬ ನಿಮ್ಮ ಆವೇಶಭರಿತ ಪ್ರಶ್ನೆಗಳಿಗೆ ಐಟಿ ಅಧಿಕಾರಿಗಳು ಇದೀಗ ಉತ್ತರ ದೊರಕಿಸಿಕೊಟ್ಟಿದ್ದಾರೆ” ಎಂದು ವಿಜಯೇಂದ್ರ ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ.

“ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಏಜೆಂಟರ ಮೇಲೆ ಐಟಿ ದಾಳಿ ನಡೆದಷ್ಟೂ, ಜನರಿಂದ ಲೂಟಿ ಹೊಡೆದ ಅಕ್ರಮ ಕಪ್ಪು ಹಣ ಪತ್ತೆಯಾಗುತ್ತಲೇ ಇದೆ. ಸದ್ಯ ನಡೆದಿರುವ ಐಟಿ ದಾಳಿಯಲ್ಲಿ ಜಾರ್ಖಂಡ್ ಕಾಂಗ್ರೆಸ್ ಸಂಸದ ಧೀರಜ್ ಸಾಹು ಬಳಿ ಸರಿ ಸುಮಾರು 156 ಚೀಲಗಳಲ್ಲಿ ಬರೋಬ್ಬರಿ 225 ಕೋಟಿ ನಗದು ಪತ್ತೆ ಪ್ರಕರಣ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಕರಾಳ ಮುಖ ದರ್ಶನ ಮಾಡಿಸಿದೆ” ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿದ್ದೀರಾ? ಮೂರು ರಾಜ್ಯಗಳಲ್ಲಿ ಮುಂದುವರೆದ ಐಟಿ ದಾಳಿ: ಪತ್ತೆಯಾಯ್ತು ಬರೋಬ್ಬರಿ ₹290 ಕೋಟಿ

“ಸುದೀರ್ಘ ಕಾಲ ಕಾಂಗ್ರೆಸ್ ಲೂಟಿ ಹೊಡೆದಿರುವ ಈ ದೇಶದ ಸಂಪತ್ತು ಎಲ್ಲೆಲ್ಲಿವೇ ಎಂಬುದನ್ನು ಐಟಿ ಇಲಾಖೆ ಪತ್ತೆ ಹಚ್ಚುವ ಮುನ್ನ ನೀವೇ ಹೊರತಂದು ಸಕ್ರಮ ಮಾರ್ಗದಲ್ಲಿ ಜನರಿಗೆ ಹಂಚಿಬಿಡಿ. ಈ ದೇಶದ ಸಂಪತ್ತು ಶತಮಾನಗಳಿಂದಲೂ ಲೂಟಿಯಾಗುತ್ತಲೇ ಇದೆ ಎಂಬುದಕ್ಕೆ ಇತಿಹಾಸವೇ ಇದೆ. ಮೊದಲಿಗೆ ಮೊಘಲರು,
ನಂತರ ಬ್ರಿಟೀಷರು, ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ಸಿಗರು ಎಂಬುದು ಅಸಲಿ ಸತ್ಯ ಎಂಬುದಕ್ಕೆ ಇಂದಿಗೂ ಪುರಾವೆಗಳು ಸಿಗುತ್ತಲೇ ಇವೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕಾಂಗ್ರೆಸ್ ಕಾಲೆಳೆದಿದ್ದಾರೆ.

ಇದೇ ವಿಚಾರವಾಗಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸಹ ತಮ್ಮ ಎಕ್ಸ್ ಖಾತೆಯಲ್ಲಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, “ದೇಶದ ಜನರ ಸಂಪತ್ತೆಲ್ಲಾ ಕಾಂಗ್ರೆಸ್ ನಾಯಕರ ಬಳಿಯೇ ಇದೆ. ಐಟಿ ಅಧಿಕಾರಿಗಳು ಈಗ ಅದನ್ನೆಲ್ಲ ಹೊರತೆಗೆಯುವ ಕಾರ್ಯ ಮಾಡುತ್ತಿದ್ದಾರೆ. ಜಾರ್ಖಂಡ್ ಕಾಂಗ್ರೆಸ್ ಸಂಸದನ ಬಳಿ ಪತ್ತೆಯಾಗಿರುವ ಕೋಟ್ಯಂತರ ಹಣ, ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ಮಾಡಿ ಬಚ್ಚಿಟ್ಟಿರುವ ಸಣ್ಣ ಸ್ಯಾಂಪಲ್” ಎಂದು ತಿಳಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚರ್ಚೆಗೆ ಸಿದ್ದ ಇದ್ದೇನೆ ಬನ್ನಿ; ಡಿಕೆ ಶಿವಕುಮಾರ್‌ಗೆ ಕುಮಾರಸ್ವಾಮಿ ಪ್ರತಿ ಸವಾಲು

"ಮಿಸ್ಟರ್​ ಕುಮಾರಸ್ವಾಮಿ, ಹೆದರಿ ಪಕ್ಕದ ಜಿಲ್ಲೆಗೆ ಹೋಗಿದ್ದೀಯ​. ಚರ್ಚೆ ಮಾಡಲು ಸದನಕ್ಕೆ...

ಯಾರಿಗೂ ಮುಖ ತೋರಿಸದ ಸನ್ನಿವೇಶ ಕುಮಾರಸ್ವಾಮಿಗೆ ನಿರ್ಮಾಣವಾಗಲಿದೆ: ಡಿಕೆ ಶಿವಕುಮಾರ್‌

ಕುಮಾರಸ್ವಾಮಿ ಅವರು ನನ್ನ ಮೇಲೆ ಮನಬಂದಂತೆ ಆರೋಪಿಸುವುದನ್ನು ನೋಡಿಯೂ ನಮ್ಮ ಸಮುದಾಯಕ್ಕಾಗಿ...

ಇಂಫಾಲ| ಮಣಿಪುರವನ್ನು ವಿಭಜಿಸಲು ಪಿತೂರಿ ಮಾಡಲಾಗುತ್ತಿದೆ ಎಂದ ಅಮಿತ್ ಶಾ!

ಮಣಿಪುರದ ಜನರನ್ನು ವಿಭಜಿಸಲು ಪಿತೂರಿ ಮಾಡಲಾಗುತ್ತಿದೆ, ಆದರೆ ಬಿಜೆಪಿ ರಾಜ್ಯದ ವಿಭಜನೆಗೆ...

ರೇಟ್ ಫಿಕ್ಸ್, ಬ್ಲ್ಯಾಕ್‌ಮೇಲ್ ಮಾಡುವುದು ಕುಮಾರಸ್ವಾಮಿ ಗುಣ: ಡಿಸಿಎಂ ಡಿ.ಕೆ.ಶಿವಕುಮಾರ್

"ಕುಮಾರಸ್ವಾಮಿ ಅವರು ಯಾವ ರೇಟು, ಎಂತಹ ರೇಟು ಎಂದು ಹೇಳಬೇಕು. ಕುಮಾರಣ್ಣ,...