- ವಕೀಲರ ದೂರಿನ ಬೆನ್ನಲ್ಲೇ ಸುದೀಪ್‌ಗೆ ಮತ್ತೊಂದು ಸಂಕಷ್ಟ
- ಚುನಾವಣಾ ಅಧಿಕಾರಿಗಳಿಗೆ ಜೆಡಿಎಸ್ ಕಾನೂನು ಘಟಕದ ಪತ್ರ
ಬಿಜೆಪಿ ಪರ ನಟ ಕಿಚ್ಚ ಸುದೀಪ್ ಪ್ರಚಾರ ವಿಚಾರಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ಜೆಡಿಎಸ್‌ನ ಕಾನೂನು ವಿಭಾಗ ಪತ್ರ ಬರೆದಿದೆ.
ಸುದೀಪ್ ಬಿಜೆಪಿಯ ಸ್ಟಾರ್ ಪ್ರಚಾರಕ. ಸುದೀಪ್ ಅವರ ಚಿತ್ರಗಳೂ ಜನರ ಮೇಲೆ ಪ್ರಭಾವ ಬೀರಬಹುದು, ಹೀಗಾಗಿ ಚುನಾವಣೆ ಮುಗಿಯುವವರೆಗೆ ಚಿತ್ರ ಪ್ರದರ್ಶಿಸಬಾರದು. ಸುದೀಪ್ ಅವರ ಜಾಹೀರಾತುಗಳ ಪ್ರಸಾರಕ್ಕೆ ತಡೆ ನೀಡಬೇಕು ಎಂದು ಜೆಡಿಎಸ್ ಮನವಿ ಮಾಡಿದೆ.
ಸುದೀಪ್ ಅವರು ಬಿಜೆಪಿ ಪರ ಚುನಾವಣಾ ಅಖಾಡಕ್ಕೆ ದುಮುಕಿದ್ದೇ ತಡ ಒಂದಿಲ್ಲೊಂದು ಸಂಕಷ್ಟಗಳು ಅವರಿಗೆ ಎದುರಾಗುತ್ತಿವೆ. ಅವರ ಸಿನಿಮಾ ಮತ್ತು ರಿಯಾಲಿಟಿ ಶೋಗಳನ್ನು ಚುನಾವಣೆ ಮುಗಿಯುವವರೆಗೆ ನಿಷೇಧಿಸುವಂತೆ ಶಿವಮೊಗ್ಗ ವಕೀಲರು ಮನವಿ ಮಾಡಿದ್ದರು. ಬೆನ್ನಲ್ಲೇ ಜೆಡಿಎಸ್ ಮತ್ತೊಂದು ಮನವಿ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಬಿಜೆಪಿಗೆ ಕರ್ನಾಟಕದ ಅಸ್ಮಿತೆ ಬಗ್ಗೆ ಕಾಳಜಿ ಇಲ್ಲ : ಪ್ರಿಯಾಂಕ್ ಖರ್ಗೆ
ಈ ಕುರಿತು ಚುನಾವಣಾ ಜೆಡಿಎಸ್ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಅವರು ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
“ಖ್ಯಾತ ಚಲನಚಿತ್ರ ನಟರಾದ ಕಿಚ್ಚ ಸುದೀಪ್ ಅವರು ಪ್ರಸ್ತುತ ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕರಾಗಿರುವುದರಿಂದ ಇವರು ನಟಿಸಿರುವ ಜಾಹೀರಾತು, ಪೋಸ್ಟರ್ ಮತ್ತು ಪ್ರಚಾರ ಕಾರ್ಯಕ್ರಮಗಳನ್ನು ಚುನಾವಣೆ ಮುಗಿಯುವವರೆಗೆ ಟಿವಿ ಮತ್ತು ಮಾಧ್ಯಮಗಳಲ್ಲಿ ಪ್ರಸಾರವಾಗದಂತೆ ತಡೆಹಿಡಿಯಿರಿ” ಎಂದು ಮನವಿ ಮಾಡಿದ್ದಾರೆ.
“ಸುದೀಪ್ ಭಾವಚಿತ್ರವಿರುವ ಪೋಸ್ಟರ್ ಜಾಹೀರಾತುಗಳನ್ನು ಕೂಡಲೇ ತೆರವುಗೊಳಿಸಿ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ” ಎಂದಿದ್ದಾರೆ.