- ಒಂದು ವ್ಯವಸ್ಥೆಯಲ್ಲಿ ಎಚ್ಚರಿಕೆ ನೀಡುವ ಇನ್ನೊಂದು ವ್ಯವಸ್ಥೆ ಇರಬೇಕು
- ಗಡಿ ವಿಚಾರದಲ್ಲಿ ಮಹಾರಾಷ್ಟ್ರದ ಕ್ಯಾತೆಗೆ ನಮ್ಮ ನಿಲುವು ಸ್ಪಷ್ಟಪಡಿಸಲಾಗಿದೆ
ಕನ್ನಡಕ್ಕೆ ನಮ್ಮ ಸರ್ಕಾರ ಅತಿ ಹೆಚ್ಚು ಮಹತ್ವ ನೀಡಿದೆ. ಕನ್ನಡದ ವಿಚಾರದಲ್ಲಿ ಸರ್ಕಾರ ಎಂದೂ ರಾಜಿಯಾಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಇವರ ವತಿಯಿಂದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆಯ(ಕರವೇ-25) ಬೆಳ್ಳಿಹಬ್ಬ ಸಂಭ್ರಮ ಮತ್ತು ಕರ್ನಾಟಕ ಸಾಂಸ್ಕೃತಿಕ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅವರು ಪಾಲ್ಗೊಂಡಿದ್ದರು.
ಬಳಿಕ ಮಾತನಾಡಿದ ಬೊಮ್ಮಾಯಿ, ಗಡಿ ವಿಚಾರದಲ್ಲಿ ಮಹಾರಾಷ್ಟ್ರದವರು ಕ್ಯಾತೆ ತೆಗೆದಾಗ ಗಟ್ಟಿಯಾಗಿ ನಮ್ಮ ನಿಲುವು ಸ್ಪಷ್ಟ ಪಡಿಸಲಾಗಿದೆ. ಕನ್ನಡಕ್ಕಾಗಿ ಉದ್ಯೋಗ ನೀತಿ ರೂಪಿಸಿ ಎ, ಬಿ, ಸಿ.ಡಿ ಹುದ್ದೆಗಳಲ್ಲಿ ಶೇ 80 ರಷ್ಟು ಮೀಸಲಾತಿಯನ್ನು ಸರ್ಕಾರ ಕಲ್ಪಿಸಿದೆ ಎಂದರು.
ಪ್ರಾಮಾಣಿಕ ಹೋರಾಟ;
ಒಂದು ವ್ಯವಸ್ಥೆಯಲ್ಲಿ ಎಚ್ಚರಿಕೆ ನೀಡುವ ಇನ್ನೊಂದು ವ್ಯವಸ್ಥೆ ಇರಬೇಕು. ಆಗ ಆಡಳಿತಗಾರರು ಜಾಗೃತರಾಗುತ್ತಾರೆ. ಆ ಕೆಲಸವನ್ನು ಕರವೇ ಮಾಡಿಸೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಸಂಘಟನೆ ಅಧ್ಯಕ್ಷ ನಾರಾಯಣಗೌಡ, ಕಾವೇರಿ, ಕೃಷ್ಣ ಹೋರಾಟದಲ್ಲಿ ಪ್ರಾಮಾಣಿಕವಾಗಿ ಹೋರಾಡಿದ್ದಾರೆ. ಸಮಾಜ ಅವರ ಛಲ, ಕಿಚ್ಚು, ಶಕ್ತಿ ಗುರುತಿಸಿದೆ ಎಂದು ಬೊಮ್ಮಾಯಿ ಹೇಳಿದರು.