ಯಾದಗಿರಿ ಬಿಜೆಪಿಯಲ್ಲಿ ಬಂಡಾಯ: ಶಾಸಕರ ವಿರುದ್ಧ ಸ್ಥಳೀಯ ನಾಯಕರ ಮುನಿಸು

Date:

  • ಯಾದಗಿರಿಯಲ್ಲಿ ಆಡಳಿತ ವಿರೋಧಿ ಅಲೆ 
  • ವೆಂಕಟರೆಡ್ಡಿ ಮುದ್ನಾಳ್ ವಿರುದ್ಧ ದೂರು

ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ಟಿಕೆಟ್‌ ಹಂಚಿಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಒಂದೆಡೆ ಆಕಾಂಕ್ಷಿಗಳ ನಡುವೆ ಜಿದ್ದಾಜಿದ್ದಿ ನಡೆಯುತ್ತಿದ್ದರೆ, ಮತ್ತೊಂದೆಡೆ ಪಕ್ಷದ ಶಾಸಕರ ವಿರುದ್ಧವೇ ಕಾರ್ಯಕರ್ತರು ದೂರು ನೀಡುತ್ತಿದ್ದಾರೆ.

ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲು ತಿಣುಕಾಡುತ್ತಿದೆ. ಈ ನಡುವೆ, ಟಿಕೆಟ್ ಆಕಾಂಕ್ಷಿಗಳ ಪ್ರತಿಭಟನೆ, ಗೋ ಬ್ಯಾಕ್‌ ಅಭಿಯಾನ ಸೇರಿದಂತೆ ಕಾರ್ಯಕರ್ತರ ಪ್ರತಿಕ್ರಿಯೆಗೆ ಬಿಜೆಪಿ ಕಂಗಾಲಾಗಿದೆ.

ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್‌ ಎರಡೂ ಪಕ್ಷಗಳು ತಮ್ಮ ಎರಡನೇ ಪಟ್ಟಿಯ ಬಿಡುಗಡೆ ಹಂತದಲ್ಲಿವೆ. ಆದರೆ, ಬಿಜೆಪಿ ಆಕಾಂಕ್ಷಿಗಳ ಮೊದಲ ಪಟ್ಟಿ ಈಗ ತಾನೆ ದೆಹಲಿ ಪಡಸಾಲೆಗೆ ಹೋಗಿದೆ.

ಯಾದಗಿರಿ ಶಾಸಕರ ವಿರುದ್ಧ ಕಾರ್ಯಕರ್ತರ ದೂರು

ರಾಜ್ಯ ರಾಜಕಾರಣದಲ್ಲಿ ಒಂದು ಕಡೆ ಪಕ್ಷಾಂತರ ಪರ್ವ ಶುರುವಾದರೆ, ಮತ್ತೊಂದು ಕಡೆ ಟಿಕೆಟ್ ಗೊಂದಲ ಶುರುವಾಗಿದೆ. ಯಾದಗಿರಿ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ್‌ ಅವರ ವಿರುದ್ಧ ಬಿಜೆಪಿ ಜಿಲ್ಲಾ ನಾಯಕರೇ, ಬಿ ಎಸ್‌ ಯಡಿಯೂರಪ್ಪ ಮುಂದೆ ಧ್ವನಿ ಎತ್ತಿದ್ದಾರೆ.

ಯಾದಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಶರಣ ಭೂಪಾಲರೆಡ್ಡಿ ನೇತೃತ್ವದಲ್ಲಿ ಕೆಲವು ಕಾರ್ಯಕರ್ತ ಯಡಿಯೂರಪ್ಪ ಅವರಿಗೆ ವೆಂಕಟರೆಡ್ಡಿ ಮುದ್ನಾಳ್ ವಿರುದ್ಧ ದೂರು ನೀಡಿದ್ದಾರೆ. ಆ ಮೂಲಕ ಯಾದಗಿರಿಯ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ, ಭಿನ್ನಮತ ತಾಂಡವವಾಡುತ್ತಿರುವುದು ಬಹಿರಂಗಗೊಂಡಿದೆ.

“ಯಾದಿಗಿರಿ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಶಾಸಕ ಮುದ್ನಾಳ್‌ ಅವರು ತಾವೇ ದೊಡ್ಡವರು ಎನ್ನುವಂತೆ ವರ್ತಿಸುತ್ತಾರೆ. ಕಳೆದ ಚುನಾವಣೆಯಿಂದ ಈವರೆಗೆ ಶಾಸಕರು ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ” ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶರಣ ಭೂಪಾಲರೆಡ್ಡಿ ಆರೋಪಿಸಿದ್ದಾರೆ.

“ಶಾಸಕರ ಆಡಳಿತದಲ್ಲಿ ಅವರ ಕುಟುಂಬಸ್ಥರೇ ಶಾಮೀಲಾಗಿದ್ದಾರೆ. ಈ ಎಲ್ಲ ಕಾರಣದಿಂದ ಅವರಿಗೆ ಟಿಕೆಟ್ ನೀಡಬೇಡಿ” ಎಂದು ಮನವಿ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬಿಜೆಪಿಯ 40 ಹಾಲಿ ಶಾಸಕರು ಅಪರಾಧದ ಹಿನ್ನೆಲೆ ಉಳ್ಳವರು: ರಮೇಶ್ ಬಾಬು ಆರೋಪ

ಬಿಜೆಪಿಯ ಸ್ಥಳೀಯ ಮಟ್ಟದ ನಾಯಕರ ದೂರನ್ನು ಅಸ್ತ್ರವಾಗಿಸಿಕೊಂಡಿರುವ ಕಾಂಗ್ರೆಸ್ ಬಿಜೆಪಿ ವರ್ಸಸ್‌ ಬಿಜೆಪಿ ಎನ್ನುವ ಹ್ಯಾಶ್‌ಟ್ಯಾಗ್‌ನಡಿ ಟ್ವೀಟ್ ಮಾಡಿ, “ಬಿಜೆಪಿಯ ಬಹುತೇಕ ಶಾಸಕರಿಗೆ ಟಿಕೆಟ್ ನೀಡದಂತೆ ಬಿಜೆಪಿ ಕಾರ್ಯಕರ್ತರೇ ಬಂಡಾಯವೆದ್ದಿದ್ದಾರೆ. ಇದು ಸರ್ಕಾರದ ದುರಾಡಳಿತದ ಪರಿಣಾಮವೋ, ಶಾಸಕರ ವೈಫಲ್ಯದ ಕಾರಣವೋ?” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದೆ.ಬಿಜೆಪಿ ಟಿಕೆಟ್ ಹಂಚಿಕೆ

“40% ಕಮಿಷನ್ ಭ್ರಷ್ಟಾಚಾರದ ಬಿಜೆಪಿ ಅತಿ ಹೀನಾಯ ಆಡಳಿತ ನೀಡಿದೆ ಎನ್ನಲು ಬಿಜೆಪಿ ಕಾರ್ಯಕರ್ತರ ಬಂಡಾಯವೇ ಸಾಕ್ಷಿ ಹೇಳುತ್ತಿದೆ” ಎಂದು ಲೇವಡಿ ಮಾಡಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಂಚರಾಜ್ಯಗಳ ಫಲಿತಾಂಶ; ಜನರ ತೀರ್ಮಾನ ಗೌರವಿಸುತ್ತೇವೆ: ಸಿದ್ದರಾಮಯ್ಯ

ತೆಲಂಗಾಣ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದು, ಇನ್ನುಳಿದ ಮೂರು...

ಬೆಂಗಳೂರು | ನಿವೃತ್ತ ಐಎಎಸ್‌ ಅಧಿಕಾರಿ ವಿರುದ್ಧ ಅತ್ಯಾಚಾರ ಆರೋಪ: ದೂರು ದಾಖಲು

ಪಾನೀಯದಲ್ಲಿ ಮತ್ತು ಬರಿಸುವ ಪದಾರ್ಥ ಬೆರೆಸಿ ಅತ್ಯಾಚಾರ ಎಸಗಿದ್ದಾರೆ ಎಂದು 28...

ಎಚ್‌ ಡಿ ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ

ಸಾಮಾಜಿಕ ಹೋರಾಟಗಾರ ಸಿ ಎಸ್ ​ಸಿದ್ದರಾಜು ಅವರಿಂದ ದೂರು ಚುನಾವಣಾ...