ಸಚಿವ ಬೈರತಿ ಬಸವರಾಜ್ ವಿರುದ್ಧ ಲೋಕಾಯುಕ್ತಕ್ಕೆ ದೂರು; ನಿರ್ಮಾಣ ಮಾಡದ ಕಟ್ಟಡಕ್ಕೆ 97ಕೋಟಿ ಬಿಲ್

Date:

  • ಕಟ್ಟಡ ನಿರ್ಮಿಸದೆ 97 ಕೋಟಿ ರೂಪಾಯಿ ಬಿಲ್ ಪಡೆದುಕೊಂಡ ಆರೋಪ
  • ಲೋಕಾಯುಕ್ತರಿಗೆ ದೂರು ನೀಡಿದ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಾಹಂ

ನಿರ್ಮಾಣ ಮಾಡದ ಕಟ್ಟಡಕ್ಕೆ 97 ಕೋಟಿ ರೂಪಾಯಿ ಬಿಲ್ ಪಡೆದ ಆರೋಪ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹೆಗಲೇರಿದೆ.

ಈ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಾಹಂ ಅವರು ಬಸವರಾಜು ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಕೆ.ಆರ್.ಪುರಂನ ರಾಜೀವ್‌ಗಾಂಧಿ ನಗರದಲ್ಲಿರುವ ದೇವಸಂದ್ರ ವಾರ್ಡ್‌ನಲ್ಲಿ 8 ಸರ್ಕಾರಿ ಕಟ್ಟಡ ನಿರ್ಮಿಸಿರುವುದಾಗಿ ಹೇಳಿಕೊಂಡು ಕಂಟ್ರಾಕ್ಟರ್ ಆಗಿರುವ ಸಚಿವ ಬಸವರಾಜು ಬಿಬಿಎಂಪಿಗೆ ಬಿಲ್ ಸಲ್ಲಿಸಿದ್ದಾರೆ.

ಆದರೆ ಇದಕ್ಕೆ ಮಹಾದೇವಪುರ ಕ್ಷೇತ್ರದ ಬಿ.ನಾರಾಯಣಪುರದಲ್ಲಿ ಇರುವ ಕಟ್ಟಡದ ಫೋಟೋ ನೀಡಿದ್ದಾರೆ. ಕೇವಲ ದಾಖಲೆಗಳಲ್ಲಿ ಮಾತ್ರ ಕಟ್ಟಡ ನಿರ್ಮಾಣ ಮಾಡಲಾಗಿದೆ.

ಶೌಚಾಲಯ ನಿರ್ಮಾಣ ಮಾಡದೆ ಫೋಟೋ ನೀಡಿ ಬಿಲ್ ಪಡೆದಿದ್ದಾರೆ. ಕಟ್ಟಡ ನಿರ್ಮಿಸದೆ 8 ಫೈಲ್ ನೀಡಿ ಬಿಲ್ ಪಡೆದಿದ್ದಾರೆ. ಈ ಎಲ್ಲ ದಾಖಲೆಗಳನ್ನು ಒಳಗೊಂಡ ದೂರನ್ನು ಟಿ ಜೆ ಅಬ್ರಾಹಂ ಲೋಕಾಯುಕ್ತರಿಗೆ ಸಲ್ಲಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? :ಮಾಡಾಳು ವಿರೂಪಾಕ್ಷಪ್ಪ ಜಾಮೀನು ರದ್ದು: ಬಂಧನ ಭೀತಿಯಲ್ಲಿ ಬಿಜೆಪಿ…

ಒಟ್ಟಾರೆ 97 ಕೋಟಿ ರೂಪಾಯಿಗಳ ಮೊತ್ತದ ಬಿಲ್ ಇದಾಗಿದ್ದು, ಕಾಮಗಾರಿ ಹೆಸರಿನಲ್ಲಿ ಹಗರಣ ನಡೆದಿದೆ ಎಂದು ಟಿ ಜೆ ಅಬ್ರಾಹಂ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅವರು ಆಗ್ರಹಿಸಿದ್ದಾರೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತನಿಖೆ ಆಗುವವರೆಗೂ ಸದನಕ್ಕೆ ಹೋಗಲ್ಲ; ತಮ್ಮದೇ ಸರ್ಕಾರದ ವಿರುದ್ಧ ಬಿ.ಆರ್ ಪಾಟೀಲ್ ಕಿಡಿ

ಕಳೆದ ಸದನದಲ್ಲಿ ನನ್ನ ಪ್ರಶ್ನೆಗೆ ಉತ್ತರಿಸಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ...

ಕಲಬುರಗಿ | ಸಕಾಲ ಅರ್ಜಿ ವಿಲೇವಾರಿ : ಕಲಬುರಗಿಗೆ ರಾಜ್ಯದಲ್ಲೇ ನಂಬರ್‌ 1 ಸ್ಥಾನ

ಕಾಲಮಿತಿಯಲ್ಲಿ ಸರ್ಕಾರಿ ಸೇವೆ ನೀಡುವ ಸಕಾಲ ಯೋಜನೆಯಡಿ ನವೆಂಬರ್ ತಿಂಗಳ ಅರ್ಜಿ...

3ನೇ ಕಂತಿಗಾಗಿ ಮತ್ತೆ ಬಂದ ಸುರ್ಜೇವಾಲ: ಸಿ ಟಿ ರವಿ ಆರೋಪ

ಕಾಂಗ್ರೆಸ್ ಯಾವಾಗಲೂ ಚುನಾವಣೆ ನಡೆಸುವುದೇ ಕಡೇ 3 ದಿನದಲ್ಲಿ ...