ಸಂವಿಧಾನಪರ ಸಂಘಟನೆಗಳ ಒಕ್ಕೂಟದ ಕರೆ: ಭಾರತ ಉಳಿಯಬೇಕಾದರೆ ಕಾಂಗ್ರೆಸ್ ಗೆಲ್ಲಬೇಕು

Date:

ಸಂವಿಧಾನ ವಿರೋಧಿ, ಪ್ರಜಾಸತ್ತೆಯ ಹತ್ಯಾರಿ ಬಿಜೆಪಿಯನ್ನು ಸೋಲಿಸುವುದು ನಮ್ಮ ದೇಶದ ಸ್ವಾತಂತ್ರ್ಯಪ್ರಿಯ ಮಹಾಜನತೆಯ ಪವಿತ್ರ ಕರ್ತವ್ಯವಾಗಿದೆ.

”ಫ್ಯಾಶಿಸ್ಟರ ಮೊದಲ ಕೆಲಸ ಮುಗ್ಧರನ್ನು ಮೂರ್ಖರನ್ನಾಗಿ ಮಾಡುವುದು; ಬುದ್ಧಿವಂತರನ್ನು ಪಾತಾಳಕ್ಕೆ ತಳ್ಳುವುದು; ಅಮಾಯಕ ಜನಪದರನ್ನು ಭಾವನಾತ್ಮಕವಾಗಿ ಬಡಿದೆಬ್ಬಿಸುವುದು; ಇದೆಲ್ಲವನ್ನು ತಡೆಯಲೆತ್ನಿಸುವ ಜನಪರ ಹೋರಾಟಗಾರರ ಮೇಲೆ ಭಯೋತ್ಪಾದನೆಯ ದುರ್ದಾಳಿ ನಡೆಸಿ ಅವರನ್ನು ನಿರ್ನಾಮಿಸುವುದು.”
-ಬರ್ಟ್ರಾಂಡ್  ರಸ್ಸೆಲ್, ವಿಶ್ವವಿಖ್ಯಾತ ತತ್ವಜ್ಞಾನಿ

ಪ್ರಿಯ ಬಂಧುಗಳೆ,

2014ರ ಲೋಕಸಭೆಯ ಚುನಾವಣೆಯ ಸಂದರ್ಭದಲ್ಲಿ, ಭಾರೀ ಭಾರೀ ಕಾರ್ಪೊರೇಟ್ ಕುಳಗಳ ಹಣಬೆಂಬಲ ಹಾಗೂ ಗುಲಾಮಿ ಸ್ವಭಾವದ ಮಾಧ್ಯಮಗಳ ಸಹಾಯದ ಮೂಲಕ ರಾಷ್ಟ್ರೀಯ ಕಾಂಗ್ರೆಸ್‌ನ ಸನ್ಮಾನ್ಯ ಮನಮೋಹನ್ ಸಿಂಗ್ ಅವರ ನೇತೃತ್ವದ ಸರ್ಕಾರದ ಮೇಲೆ ಭ್ರಷ್ಟಾಚಾರದ ಹಲವಾರು ಆರೋಪಗಳನ್ನು ಹೊರೆಸಿ, ಅಪಪ್ರಚಾರ ಮಾಡಿದ್ದಲ್ಲದೆ, ಖೋಟಾ ಆಶ್ವಾಸನೆಗಳನ್ನು ನೀಡಿ, ಜನರಲ್ಲಿ ಅನೇಕ ಭ್ರಮೆಗಳನ್ನು ಹುಟ್ಟಿಸಿ, ಮೋದಿಜಿಯವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮೋದಿಜಿಯವರ ಬಣ್ಣದ ಮಾತು ಮತ್ತು ಬಡಾಯಿಯ ಆಶ್ವಾಸನೆಗಳ ಮೋಹಜಾಲಕ್ಕೆ ಸಿಲುಕಿದ್ದ ಭಾರತದ ಮಹಾಜನತೆ, ಅಂದು ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ಏರಿಸಿದರು. ಆದರೆ, ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಮೋದಿಜಿಯವರ ಸರ್ಕಾರ, ಇಡೀ ಭಾರತ ದೇಶವನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿದೆ. ಹಿಂದೆ ಅವರ ಕೈಗೆ ಅಧಿಕಾರ ಕೊಟ್ಟಿದ್ದ ಮಹಾಜನತೆಯೇ ಈಗ ಪಶ್ಚಾತ್ತಾಪದಿಂದ ಬಾಯಿ ಬಾಯಿ ಬಡಿದುಕೊಳ್ಳುವ ದಾರುಣ ಸ್ಥಿತಿಗೆ ಬಂದು ತಲುಪಿದ್ದಾರೆ. ಪರಿಣಾಮವಾಗಿ, ಸದ್ಯ ನಮ್ಮ ದೇಶದ ಎಲ್ಲ ಜನವಿಭಾಗದ ಮಹನೀಯರು, ಮೋದಿಜಿ ನೇತೃತ್ವದ ಬಿಜೆಪಿಯ ಕ್ರೂರ, ದುಷ್ಟ, ಭ್ರಷ್ಟ, ಫ್ಯಾಶಿಸ್ಟ್ ಸರ್ಕಾರ ಸೋಲಬೇಕೆಂದು ಬಯಸುತ್ತಿದ್ದಾರೆ :

1. ದೇಶದ ಸಮಸ್ತ ರೈತರು ಮೋದಿಜಿಯವರನ್ನು ಸೋಲಿಸಬಯಸುತ್ತಿದ್ದಾರೆ.

2. ದೇಶದ ದಲಿತ ದಮನಿತರು ಮೋದಿಜಿ ಸರ್ಕಾರವನ್ನು ಸೋಲಿಸಲು ಬಯಸುತ್ತಿದ್ದಾರೆ.

3. ದೇಶದ ಸಮಸ್ತ ಮಧ್ಯಮವರ್ಗದವರು ಬಿಜೆಪಿಯನ್ನು ಸೋಲಿಸಬೇಕೆಂದು ಸೆಣಸುತ್ತಿದ್ದಾರೆ.

4. ಇಡೀ ರಾಷ್ಟ್ರದ ಸಣ್ಣ ಉದ್ದಿಮೆ ಮತ್ತು ವ್ಯಾಪಾರಿಗಳು ಬಿಜೆಪಿ ಸೋಲಬೇಕೆಂದು ಆಶಿಸುತ್ತಿದ್ದಾರೆ.

5. ಸಮಗ್ರ ದೇಶದ ಮಹಿಳೆಯರು ಬಿಜೆಪಿಯನ್ನು ಸೋಲಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ.

6. ಇಡೀ ದೇಶದ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಯುವಜನರು ಬಿಜೆಪಿಯನ್ನು ಸೋಲಿಸಲು ಕೃತ ಸಂಕಲ್ಪರಾಗಿ ಶ್ರಮಿಸುತ್ತಿದ್ದಾರೆ.

7. ಸಮಗ್ರ ದೇಶದ ಕೃಷಿಕಾರ್ಮಿಕರು, ಜನಸಾಮಾನ್ಯರು ಬಿಜೆಪಿಯನ್ನು ಸೋಲಿಸಲು ಮೋದಿಯವರ ದುಷ್ಟ, ಭ್ರಷ್ಟ ಅಧಿಕಾರವನ್ನು ಕೊನೆಗೊಳಿಸುವ ದೃಢ ಅಭಿಲಾಷೆಯಿಂದ ದುಡಿಯುತ್ತಿದ್ದಾರೆ.

ಮೋದಿಯವರು ತಮ್ಮ ಹತ್ತು ವರ್ಷಗಳ ಅವಧಿಯಲ್ಲಿ ದೇಶದ ಸಮಸ್ತ ಜನತೆಯ ರೋಷಕ್ಕೆ ಗುರಿಯಾಗಿದ್ದಾರಲ್ಲ, ಯಾಕೆ?

 • ಯಾಕೆಂದರೆ, ಬಿಜೆಪಿ ಒಂದು ಸ್ವತಂತ್ರವಾದ ರಾಜಕೀಯ ಪಕ್ಷವೇ ಅಲ್ಲ. ಅದು ನಿಜದಲ್ಲಿ ಫ್ಯಾಶಿಸ್ಟ್ ಧೋರಣೆಯ ಆರ್.ಎಸ್.ಎಸ್.ನ ರಾಜಕೀಯ ಶಾಖೆಯಾಗಿದೆ. ಹಾಗಾಗಿ ಅದು, ಸಂಘೀ ಗ್ಯಾಂಗಿನ ವೈದಿಕಶಾಹಿ ನಿರ್ದೇಶನದಲ್ಲಿಯೇ ನಡೆಯುವ ಕೊಳಕು ಚಿಂತನೆಯ ಕೋಮುವಾದಿ ಪಕ್ಷವಾಗಿದೆ. ಜನರಲ್ಲಿ ಪರಸ್ಪರ ದ್ವೇಷಭಾವನೆ ಹುಟ್ಟಿಸುವ ವಿಚ್ಛಿದ್ರಕಾರಿ ಒಡಕಿನ ಕುತಂತ್ರವೇ ಅದರ ಪ್ರಾಣ ಜೀವಾಳವಾಗಿದೆ.
 • ಬಿಜೆಪಿಯು ಮನುವಾದಿ ಧೋರಣೆಯ ಬಂಡವಾಳಶಾಹಿ ಪಕ್ಷವಾಗಿದೆ. ಆದ್ದರಿಂದಲೇ ಅದು, ವಾಸ್ತವದಲ್ಲಿ ಸಮಸ್ತ ಶ್ರಮಜೀವಿಗಳ ದ್ರೋಹಿಯಾಗಿದೆ. ರೈತ, ದಲಿತ, ಅಲ್ಪಸಂಖ್ಯಾತ, ವಿದ್ಯಾರ್ಥಿ, ಯುವಜನರ, ಮಹಿಳೆಯರ, ಹಿಂದುಳಿದ ವರ್ಗಗಳ, ಆದಿವಾಸಿ ಬುಡಕಟ್ಟುಗಳ ವಿರೋಧಿ ಪಕ್ಷವಾಗಿದೆ. ಅಲೆಮಾರಿಗಳನ್ನೊಳಗೊಂಡು ಎಲ್ಲ ದಮನಿತರನ್ನು ಮತ್ತಷ್ಟು ತುಳಿದು ಅತಳ ಆಳಕ್ಕೆ ತಳ್ಳುವ ಅಮಾನವೀಯ ಪಕ್ಷವಾಗಿದೆ.
 • ಅಧಿಕಾರಕ್ಕೆ ಬಂದೊಡನೆಯೇ ಅದು ಕೈಗೊಂಡ ಪರಮ ಬುದ್ಧಿಗೇಡಿತನದ ರಾಷ್ಟ್ರ ವಿನಾಶದ ಕೆಲಸವೆಂದರೆ, ನೋಟ್ಬಂದಿಯ ಘೋಷಣೆ. ಆ ಮೂಲಕ ದೇಶದ ಕೋಟ್ಯಂತರ ಜನರ ಬದುಕನ್ನು ಮುರಾಬಟ್ಟೆ ಮಾಡಿದ್ದು.
 • ತನ್ನ ದುಷ್ಟ ದಾರಿಯಲ್ಲಿ ಎರಡನೇ ಹೆಜ್ಜೆಯಾಗಿ ದುರುದ್ದೇಶದ ಜಿಎಸ್ಟಿಯನ್ನು ಹೇರಿ, ಸಮಸ್ತ ಬಡ ಜನತೆಯನ್ನು ದರೋಡೆ ಮಾಡಿದ್ದು.
 • ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ದೇಶದ ಅನ್ನದಾತರಾದ ರೈತರನ್ನು ಕಂಗಾಲಾಗಿಸಿ, ಭಿಕಾರಿಗಳನ್ನಾಗಿ ಮಾಡಿ, ಬಂಡವಾಳಶಾಹಿಗಳ, ಕ್ರೋನಿ ಕ್ಯಾಪಿಟಲಿಸ್ಟ್‌ಗಳ ಸುಲಿಗೆಯ ತೆಕ್ಕೆಗೆ ನೂಕುವ ಉದ್ದೇಶದಿಂದ ಮೂರು ರೈತ ವಿರೋಧಿ ಕರಾಳ ಕಾನೂನುಗಳನ್ನು ರಚಿಸಿದ್ದು.
 • ಆ ರೈತ ವಿರೋಧಿ ಕಳ್ಳ ಕಾನೂನುಗಳ ವಿರುದ್ಧ ದೇಶದ ಸಮಸ್ತ ರೈತರು ಹೋರಾಟಕ್ಕಿಳಿದು, ಒಂದು ವರ್ಷಕ್ಕೂ ಹೆಚ್ಚುಕಾಲ ದೆಹಲಿಯ ಗಡಿಯಲ್ಲಿ ಸತ್ಯಾಗ್ರಹ ಹೂಡಿದ್ದಾಗ, ಹೋರಾಟನಿರತ ರೈತರನ್ನು ದೇಶದ್ರೋಹಿಗಳೆಂದೂ, ಚೀನಾ ಪಾಕಿಸ್ತಾನದ ಏಜೆಂಟರೆಂದೂ, ಖಲಿಸ್ತಾನಿಗಳೆಂದೂ ಆಪಾದಿಸಿ, ರೈತ ಸಮುದಾಯದ ಮುಖಕ್ಕೆ ಮಸಿ ಬಳಿದದ್ದು. ಗ್ರಾಮೀಣ ಉದ್ಯೋಗಖಾತ್ರಿ (ಮನರೇಗಾ) ಯೋಜನೆಯ ಬಜೆಟ್ಟನ್ನು ಪ್ರತಿವರ್ಷ ಕಡಿಮೆ ಮಾಡುತ್ತ ಬಂದು, ಗ್ರಾಮಾಂತರದ ಕೂಲಿಕಾರರ ಉದ್ಯೋಗದ ಅವಕಾಶಗಳನ್ನು ಕಸಿದುಕೊಂಡದ್ದು.
 • ಹೋರಾಟನಿರತ ರೈತರಲ್ಲಿ 754ರಷ್ಟು ರೈತಾಪಿಗಳು ಹುತಾತ್ಮರಾದಾಗ, ಎರಡು ಹನಿ ಕಣ್ಣೀರು ಸುರಿಸದಷ್ಟು ಅಮಾನವೀಯತೆಯನ್ನು ಮೆರೆದದ್ದು.
 • ಒಂದೆಡೆ ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಉದ್ಘೋಷಿಸುತ್ತಲೇ ಮಣಿಪುರದಲ್ಲಿ ಮಹಿಳೆಯರನ್ನು ಅಮಾನಿಸಿದಾಗ, ದೇಶಕ್ಕೆ ಕೀರ್ತಿ ತಂದ ಒಲಿಂಪಿಕ್ಸ್ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ, ಬಿಲ್ಕೀಸ್ ಬಾನು ಪ್ರಕರಣದ ಅಪರಾಧಿಗಳನ್ನು ಶಿಕ್ಷೆಯ ಅರ್ಧಾವಧಿಯಲ್ಲಿಯೇ ಬಿಡುಗಡೆ ಮಾಡಿದ್ದಾಗ, ಚಕಾರವೆತ್ತದೆ ಬಾಯಿ ಮುಚ್ಚಿಕೊಂಡು ಇದ್ದುದ್ದು.
 • ದೇಶದಲ್ಲಿಯ ಭ್ರಷ್ಟಾಚಾರ ಹಾಗೂ ಕಪ್ಪುಹಣದ ವ್ಯವಹಾರವನ್ನು ಕೊನೆಗೊಳಿಸುವ ಆಶ್ವಾಸನೆ ನೀಡಿ, ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ, ಅತೋಭ್ರಷ್ಟ, ತತೋಭ್ರಷ್ಟ ಮಾರ್ಗದಲ್ಲಿ ಹೆಜ್ಜೆ ಹಾಕುತ್ತ, ಯಾರ್‍ಯಾರನ್ನು ಪರಮ ಭ್ರಷ್ಟರೆಂದು ಜರಿದು, ಖಂಡಿಸಿತ್ತೋ, ಅಂಥವರನ್ನೆಲ್ಲ ತನ್ನ ಪಕ್ಷಕ್ಕೆ ಸೇರಿಸಿಕೊಂಡು ಚರಿತ್ರೆಯಲ್ಲಿಯೇ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಇಳಿದದ್ದು.
 • ತನಗೆ ಅಧಿಕಾರ ನೀಡಿದರೆ, ವರ್ಷಕ್ಕೆ ಯುವಕರಿಗಾಗಿ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಆಮಿಷ ತೋರಿ, ಅಧಿಕಾರಕ್ಕೆ ಬಂದ ನಂತರ, ಯುವಕರು ಪಕೋಡಾ ಮಾರಿ ಬದುಕಬೇಕೆಂದು ಅವಮಾನಿಸಿದ್ದುದ್ದು, ಜೊತೆಗೆ ಇದ್ದ ಉದ್ಯೋಗಗಳ ಅವಕಾಶಗಳನ್ನು ನಾಶಪಡಿಸಿದ್ದುದ್ದು.
 • ನಾ ಖಾವುಂಗಾ, ನಾ ಖಾನೆ ದೂಂಗಾ, ಎಂಬ ಬಣ್ಣದ ಮಾತುಗಳನ್ನಾಡಿ, ಅಧಿಕಾರ ದೊರೆತೊಡನೆಯೇ ಇಡೀ ದೇಶದ ಆಸ್ತಿಯನ್ನು ದೋಚಲು ಅದಾನಿ-ಅಂಬಾನಿಗಳಂಥ ಕಾರ್ಪೊರೇಟ್ ಕುಳಗಳಿಗೆ ಅಪೂರ್ವ ಅವಕಾಶ ಕಲ್ಪಿಸಿಕೊಟ್ಟುದ್ದು.
 • ಚರಿತ್ರೆಯಲ್ಲಿಯೇ ಮೊದಲ ಬಾರಿಗೆ ಕಲ್ಪನಾತೀತ ಬೆಲೆಯೇರಿಕೆಗೆ ಅವಕಾಶ ಮಾಡಿಕೊಟ್ಟು, ಇಡೀ ದೇಶದ ಬಡಜನತೆಯನ್ನು ಆರ್ಥಿಕ ದುರಂತದೆಡೆಗೆ ತಳ್ಳಿದ್ದು.
 • ದಿನಬೆಳಗಾದರೆ, ಕೋಮುವಾದಿ ಭಾವನೆಗಳನ್ನು ಕೆದಕುತ್ತ, ಅಲ್ಪಸಂಖ್ಯಾತರ, ದಲಿತರ ಬದುಕನ್ನು ನರಕವನ್ನಾಗಿಸಿದ್ದುದ್ದು.
 • ಸರ್ವರ ಮೇಲೂ ಜಿ.ಎಸ್.ಟಿ.ಯನ್ನು ಹೇರಿ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳ ಬದುಕನ್ನು ಹದಗೆಡಿಸಿದ್ದುದ್ದು.
 • ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಸ್ಕಾಲರ್‍‌ಶಿಪ್‌ಗಳನ್ನು ನಿರ್ದಯವಾಗಿ ನಿಲ್ಲಿಸಿದ್ದುದ್ದು. ಆ ಮೂಲಕ ಬಡ ವಿದ್ಯಾರ್ಥಿಗಳ ಬದುಕನ್ನು ದುರ್ಭರಗೊಳಿಸಿದ್ದುದ್ದು.
 • ಸಾಂವಿಧಾನಿಕ ಸಂಸ್ಥೆಗಳಾದ ಸಿಬಿಐ, ಇಡಿ, ಇನ್‌ಕಂಟ್ಯಾಕ್ಸ್ -ಮುಂತಾದವುಗಳನ್ನು ತನ್ನ ವಿರೋಧಿ ಪಕ್ಷಗಳ ಮೇಲೆ ಛೂ ಬಿಟ್ಟು, ಪ್ರಜಾತಂತ್ರ ವಿರೋಧಿ, ವಿಧ್ವಂಸಕಾರಿ ಕೆಟ್ಟ ರಾಜಕಾರಣಕ್ಕೆ ತೊಡಗಿದ್ದುದ್ದು. ರಾಜಕೀಯ ವಿರೋಧಿಗಳನ್ನು ಸಾರಾಸಗಟಾಗಿ ಜೈಲಿಗೆ ತಳ್ಳಿ, ಫ್ಯಾಶಿಸ್ಟ್ ಅಟ್ಟಹಾಸಗೈಯ್ಯುತ್ತಿರುವುದು.
 • ಇದೆಲ್ಲಕ್ಕೂ ಮಿಗಿಲಾಗಿ, ಚುನಾವಣಾ ಬಾಂಡ್‌ಗಳ ಮೂಲಕ, ಇಡೀ ದೇಶವನ್ನು ಕೊಳ್ಳೆ ಹೊಡೆದು, ಕೋಟ್ಯಂತರ ಹಣವನ್ನು ಕಳ್ಳಮಾರ್ಗದ ಮೂಲಕ ಸಂಗ್ರಹಿಸಿದ್ದುದ್ದು.
 • ಕಾರ್ಪೊರೇಟ್ ಖದೀಮರ ಲಕ್ಷಾಂತರ ಕೋಟಿ ಸಾಲ ಮಾಫ್ ಮಾಡಿ, ರೈತರು, ಬಡಜನರು, ವಿದ್ಯಾರ್ಥಿ ಯುವಜನರ ಸಾಲಗಳನ್ನು ಒದ್ದು ವಸೂಲಿ ಮಾಡುತ್ತಿರುವುದು.
 • ಈ ರೀತಿಯಾಗಿ ದೇಶದ ಸಮಸ್ತ ಜನತೆಯ ಬದುಕನ್ನು ಮುರಾಬಟ್ಟೆ ಮಾಡಿ, ನಮ್ಮ ಪ್ರಜಾಸತ್ತೆ ಹಾಗೂ ಗಣತಂತ್ರದ ಕೊಲೆ ಮಾಡಲು ಹವಣಿಸುತ್ತಿರುವ ಜನದ್ರೋಹಿ ಬಿಜೆಪಿಯನ್ನು ಸೋಲಿಸಿ, ಜನಪರವಾದ ಪ್ರಗತಿಪರ ಸರ್ಕಾರವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಸಮಸ್ತ ದೇಶಪ್ರೇಮಿ ಜನರು ಸಂವಿಧಾನದ ರಕ್ಷಣೆಗೆ ಸಿದ್ಧರಾಗಿದ್ದಾರೆ. ಬನ್ನಿ, ಸರ್ವಜನಾಂಗದ ಕಲ್ಯಾಣ ಬಯಸಿದ್ದ ಬಸವಣ್ಣನವರು ಹಾಗೂ ಸರ್ವಸಮತೆಯ ಬಂಧುತ್ವದ ಸ್ವಾಭಿಮಾನಿ ದೇಶವನ್ನು ಕಟ್ಟುವ ಅಭಿಲಾಷೆ ಹೊಂದಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ಕನಸಿನ ದೇಶವನ್ನು ನಿರ್ಮಿಸಲು ಜನದ್ರೋಹಿ ಬಿಜೆಪಿಯನ್ನು ಸೋಲಿಸಲು ಪಣ ತೊಟ್ಟಿರುವ ದೇಶದ ಸಮಗ್ರ ಜನತೆಯೊಂದಿಗೆ ನಾವೂ ಕೂಡ ಸೇರಿಕೊಳ್ಳೋಣ. ನಮ್ಮ ಸಂವಿಧಾನವನ್ನು ಸಂರಕ್ಷಿಸಿಕೊಂಡು, ಪ್ರಜಾಸತ್ತಾತ್ಮಕ ಗಣರಾಜ್ಯದ ಕಾವಲು ಸೈನಿಕರಾಗಿ ಕಾರ್ಯನಿರ್ವಹಿಸೋಣ.

ಅಧ್ಯಕ್ಷೀಯ ಮಂಡಳಿ: ದೇವನೂರ ಮಹಾದೇವ, ಪ್ರೊ. ಎಸ್.ಜಿ. ಸಿದ್ಧರಾಮಯ್ಯ, ಪ್ರೊ. ಪುರುಷೋತ್ತಮ ಬಿಳಿಮಲೆ, ಬಿ.ಟಿ. ಲಲಿತಾನಾಯಕ್, ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಕೆ. ಷರೀಫಾ, ಡಾ. ವಸುಂಧರಾ ಭೂಪತಿ, ಡಾ. ಬಂಜಗೆರೆ ಜಯಪ್ರಕಾಶ್, ಡಾ. ಡಿ.ಜಿ. ಸಾಗರ್, ಡಾ. ಮೀನಾಕ್ಷಿ ಬಾಳಿ, ಟಿ.ಸುರೇಂದ್ರ, ಪ್ರೊ. ಕೆ.ಆರ್. ದುರ್ಗಾದಾಸ್, ಪ್ರೊ. ರಹಮತ್ ತರೀಕೆರೆ, ಮಾವಳ್ಳಿ ಶಂಕರ್, ಸಿ. ಬಸವಲಿಂಗಯ್ಯ, ಇಂದೂಧರ ಹೊನ್ನಾಪುರ, ಗುರುಪ್ರಸಾದ್ ಕೆರಗೋಡು, ಶ್ರೀಧರ್ ಕಲಿವೀರ್, ಅಂಬಣ್ಣ ಅರೋಲಿ, ವಿ. ನಾಗರಾಜ್, ಎನ್.ವೆಂಕಟೇಶ್, ನ. ಮುನಿಸ್ವಾಮಿ, ಸಿ.ಎಂ. ಮುನಿಯಪ್ಪ, ಎಚ್. ಜನಾರ್ದನ ಜನ್ನಿ, ಅಲ್ಲಮಪ್ರಭು ಬೆಟ್ಟದೂರು, ಪ್ರೊ. ಕಾಶೀನಾಥ ಅಂಬಲಗೆ, ಪಿಚ್ಚಳ್ಳಿ ಶ್ರೀನಿವಾಸ್, ಬಸಣ್ಣ ಸಿಂಗೆ, ಡಾ. ಪ್ರಭು ಖಾನಾಪುರೆ, ಅರ್ಜುನ್ ಭದ್ರೆ, ಮಾರುತಿ ಗೋಖಲೆ, ಬಸವರಾಜ ಕೌತಾಳ್, ಡಾ. ದತ್ತಾತ್ರಯ ಇಕ್ಕಳಕಿ, ಎಸ್.ಆರ್. ಕೊಲ್ಲೂರು, ಸೋಮಶೇಖರ್ ಹಾಸನ, ಹೆಣ್ಣೂರು ಶ್ರೀನಿವಾಸ್, ಪರಶುರಾಮ ನೀಲ್ನಾಯಕ್, ಶಂಭುಲಿಂಗ ವಾಲ್ದೊಡ್ಡಿ, ಬಸಲಿಂಗಪ್ಪ ಗಾಯಕವಾಡ್, ಅನಂತ್ ನಾಯಕ್, ಲಕ್ಷ್ಮೀ ಬಾವುಗೆ, ವಿಶ್ವರಾಧ್ಯ ಸತ್ಯಂಪೇಟೆ, ಅಶ್ವಿನಿ ಮದನಕರ್, ಡಾ. ಆರ್.ವೆಂಕಟರೆಡ್ಡಿ

ಪ್ರಕಟಣೆ : ಪ್ರೊ. ಆರ್.ಕೆ. ಹುಡಗಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ‘ಭೂಮಿಕಾ’ ನಂ. ೧೧, ಎನ್.ಜಿ.ಓ. ಕಾಲೋನಿ, ಸೇಡಮ್ ರಸ್ತೆ, ಕಲಬುರಗಿ-05, ಮೊ.ನಂ. 7259881958

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಿರ್ಗಮಿಸುವ ಪ್ರಧಾನಿ ತನ್ನನ್ನು ತಾನು ದೇವಮಾನವನೆಂದು ಭಾವಿಸಬಹುದು: ಕಾಂಗ್ರೆಸ್‌

"ನಿರ್ಗಮಿಸುತ್ತಿರುವ ಪ್ರಧಾನಿ ಸೋಲಿನ ವಾಸ್ತವ ತಿಳಿಯುತ್ತಿದ್ದಂತೆ, ಹೆಚ್ಚು ಭ್ರಮೆಯಲ್ಲಿದ್ದಾರೆ. ಅದಕ್ಕೆ ತನ್ನ...

ಲೋಕಸಭಾ ಚುನಾವಣೆ | 6ನೇ ಹಂತದಲ್ಲಿ ಶೇ.59ರಷ್ಟು ಮತದಾನ: ಚುನಾವಣಾ ಆಯೋಗ

ಲೋಕಸಭೆ ಚುನಾವಣೆಯ ಏಳು ಹಂತಗಳ ಪೈಕಿ 6ನೇ ಹಂತದ ಮತದಾನ ಪ್ರಕ್ರಿಯೆ...

ಪಶ್ಚಿಮ ಬಂಗಾಳ | ಬಿಜೆಪಿ ಅಭ್ಯರ್ಥಿಯನ್ನು ಕಲ್ಲೆಸೆದು ಓಡಿಸಿದ ಆಕ್ರೋಶಿತ ಜನರ ಗುಂಪು; ವಿಡಿಯೋ ವೈರಲ್

ಲೋಕಸಭೆ ಚುನಾವಣೆಯ ಆರನೇ ಹಂತದ ಮತದಾನದ ವೇಳೆ ಪಶ್ಚಿಮಬಂಗಾಳದಲ್ಲಿ ಆಕ್ರೋಶಿತ ಜನರ...

ಮಾಜಿ ಶಾಸಕ ಕೆ ರಘುಪತಿ ಭಟ್ ಬಿಜೆಪಿಯಿಂದ ಉಚ್ಚಾಟನೆ

ವಿಧಾನ ಪರಿಷತ್ ಟಿಕೆಟ್ ನೀಡದ ಕಾರಣಕ್ಕಾಗಿ ಬಿಜೆಪಿಯೊಳಗೆ ಬಂಡಾಯ ಎದ್ದು, ನೈಋತ್ಯ...