ದೊಡ್ಡ ಕಾರ್ಯಕ್ರಮಗಳಲ್ಲಿ ಕೆಲವು ದೋಷಗಳು ಸಾಮಾನ್ಯ: AI ಶೃಂಗಸಭೆಯನ್ನು ಶ್ಲಾಘಿಸಿದ ಶಶಿ ತರೂರ್!

Date:

ಚೀನಾದ ರೋಬೋಟ್‌ಗಳನ್ನು ಭಾರತದ ಉತ್ಪನ್ನಗಳಂತೆ ಪ್ರದರ್ಶಿಸಲಾಗಿರುವ ವಿಚಾರದಲ್ಲಿ ‘ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್ 2026’ (India AI Impact Summit 2026) ಅನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸುತ್ತಿದೆ. ಈ ನಡುವೆ ಕಾಂಗ್ರೆಸ್ ಸಂಸದ ಶಶಿ ತರೂರ್ ಗುರುವಾರ AI ಶೃಂಗಸಭೆಯನ್ನು ಶ್ಲಾಘಿಸಿದ್ದಾರೆ. “ಶೃಂಗಸಭೆಯು ಮೊದಲ ಎರಡು ದಿನಗಳು ತುಂಬಾ ಚೆನ್ನಾಗಿ ನಡೆದವು. ಅಂತಾರಾಷ್ಟ್ರೀಯ ನಾಯಕರ ಹಾಜರಾತಿ ಪ್ರಭಾವಶಾಲಿ” ಎಂದಿದ್ದಾರೆ.

- Advertisement -

AI ಶೃಂಗಸಭೆ ಎಕ್ಸ್‌ಪೋದಲ್ಲಿ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ಸ್ಟಾಲ್‌ನಲ್ಲಿ ಚೀನಾ ನಿರ್ಮಿತ ರೋಬೋಟ್ ಅನ್ನು ಭಾರತದ್ದು ಎಂಬಂತೆ ಪ್ರದರ್ಶಿಸಲಾಗಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ. ಹಲವು ವಿಪಕ್ಷ ನಾಯಕರುಗಳು ಈ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಆದರೆ ಶಶಿ ತರೂರ್, “ಯಾವುದೇ ದೊಡ್ಡ ಕಾರ್ಯಕ್ರಮದಲ್ಲಿ ಕೆಲವು ದೋಷಗಳು ಸಂಭವಿಸುವುದು ಸಾಮಾನ್ಯ” ಎಂದು ಹೇಳಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿಜಯಪುರ | ಪ್ಲಾಟ್‌ಫಾರ್ಮ್‌ ಮೇಲೆ ಹರಿವ ಚರಂಡಿ ನೀರು;...

"ಚರಂಡಿ ನೀರಿನ್ಯಾಗ ದಿನ ಹೋಗಾಕ ಹತ್ತಿವಿ…" ಇದು ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಪ್ರತಿನಿತ್ಯ ಆಗಮಿಸುವ ಸಾವಿರಾರು ಪ್ರಯಾಣಿಕರ ಅಳಲು. ಪ್ಲಾಟ್‌ಫಾರ್ಮ್‌-1ರಲ್ಲಿ ಕೊಳಚೆ ನೀರು ಹರಿಯುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಜವಾಬ್ದಾರಿಯಿಂದ...

ಏಷ್ಯನ್ ಗೇಮ್ಸ್ : ತಂಡಗಳ ಯಶಸ್ಸಿನ ನಡುವೆ ವೈಯಕ್ತಿಕ...

ಭಾರತದ ಸಾಂಪ್ರದಾಯಿಕ ಕ್ರೀಡಾ ಶಕ್ತಿಗಳಾದ ಅಥ್ಲೆಟಿಕ್ಸ್ ಮತ್ತು ಶೂಟಿಂಗ್ ವಿಭಾಗಗಳು ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮಿಂಚದೆ ಹಿನ್ನಡೆ ಅನುಭವಿಸಿವೆ. ಕಳೆದ ಹಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಈ ಎರಡು ವಿಭಾಗಗಳಿಂದ ಬರೋಬ್ಬರಿ 51...

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಇದನ್ನು ಓದಿದ್ದೀರಾ? ಕೇರಳ ಚುನಾವಣೆ | ಪ್ರಚಾರ ಸಮಿತಿಯಲ್ಲಿ ಶಶಿ ತರೂರ್‌ಗೆ ಪ್ರಮುಖ ಸ್ಥಾನ; ಭಿನ್ನಮತ ಬದಿಗೊತ್ತಿದ ಕಾಂಗ್ರೆಸ್ ತಂತ್ರವೇನು?

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ಕಾರ್ಯಕ್ರಮವನ್ನು “ಅಸ್ತವ್ಯಸ್ತಗೊಂಡ ಪಿಆರ್ ಪ್ರದರ್ಶನ” ಎಂದು ಕರೆದಿದ್ದಾರೆ. ಕೇವಲ ಪ್ರಚಾರಕ್ಕಾಗಿ ಸರ್ಕಾರವು ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ನೆಪದಲ್ಲಿ ಭಾರತೀಯರ ದತ್ತಾಂಶವನ್ನು (Data) ಮಾರಾಟಕ್ಕೆ ಇಡಲಾಗಿದೆ ಎಂದು ದೂರಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಹಿರಿಯ ಕಾಂಗ್ರೆಸ್ ನಾಯಕರುಗಳೂ ಈ ಕಾರ್ಯಕ್ರಮವನ್ನು ಟೀಕಿಸಿದ್ದಾರೆ. ಚೀನಾದ ವಸ್ತುಗಳನ್ನು ಭಾರತದ್ದು ಎಂಬಂತೆ ಪ್ರದರ್ಶಿಸಿದ್ದು ದೇಶಕ್ಕೆ ಮುಜುಗರ ಉಂಟು ಮಾಡಿದೆ ಎಂದು ಹೇಳಿದ್ದಾರೆ. “ಪ್ರದರ್ಶಕರಿಗೆ ಆಹಾರ ಮತ್ತು ನೀರಿನ ಕೊರತೆಯಾಗಿತ್ತು. ಜಾಗತಿಕ ಮಟ್ಟದ ಕಾರ್ಯಕ್ರಮದಲ್ಲಿ ಯುಪಿಐ ಪಾವತಿ ಬದಲು ನಗದು ಕೇಳಲಾಗುತ್ತಿತ್ತು. ಇಂಟರ್ನೆಟ್ ಸಂಪರ್ಕದ ಸಮಸ್ಯೆಗಳಿದ್ದವು” ಎಂದು ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆದರೆ ಶಶಿ ತರೂರ್ ಮಾತ್ರ ವಿಭಿನ್ನವಾದ ಹೇಳಿಕೆಯನ್ನು ನೀಡಿದ್ದಾರೆ. ನಾರಾಯಣ ಗುರುಗಳ ಕುರಿತಾದ ತಮ್ಮ ಹೊಸ ಪುಸ್ತಕ ಬಿಡುಗಡೆ ಕಾರ್ಯಕ್ರಮದ ನಂತರ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ತರೂರ್, “ನನಗೆ ಶೃಂಗಸಭೆಗೆ ಹೋಗಲು ಅವಕಾಶ ಸಿಗದಿದ್ದರೂ, ನಾಳೆ ಅಲ್ಲಿ ಹೋಗಲಿದ್ದೇನೆ. ನನಗೆ ತಿಳಿದಂತೆ ಮೊದಲ ಎರಡು ದಿನಗಳು ತುಂಬಾ ಚೆನ್ನಾಗಿ ಕಾರ್ಯಕ್ರಮ ನಡೆದಿವೆ. ಕೆಲವು ದೋಷಗಳು, ಕೆಲವು ಸಾಂಸ್ಥಿಕ ವಿಷಯಗಳು ನಡೆದಿವೆ, ಇವುಗಳು ದೊಡ್ಡ ಕಾರ್ಯಕ್ರಮದಲ್ಲಿ ನಡೆಯುತ್ತವೆ” ಎಂದಿದ್ದಾರೆ.

“ಆದರೆ ಸಾಮಾನ್ಯವಾಗಿ ಪ್ರಭಾವಶಾಲಿಯಾಗಿ ಕಂಡುಬಂದಿರುವುದು ಹಾಜರಾತಿ. ಹಲವು ದೇಶಗಳ ಅಧ್ಯಕ್ಷರು, ಪ್ರಧಾನ ಮಂತ್ರಿಗಳು ಮತ್ತು ವಿಶ್ವ ನಾಯಕರು ಇಲ್ಲಿದ್ದಾರೆ. AI ಅಭಿವೃದ್ಧಿಯಲ್ಲಿ ಹೊಸದಾಗಿ ಜಗತ್ತನ್ನು ಕಾಣುವ ಸಂದೇಶದೊಂದಿಗೆ ಜಾಗತಿಕ ನಾಯಕರು ಇಲ್ಲಿಗೆ ಆಗಮಿಸಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನು ಓದಿದ್ದೀರಾ? ಬದಲಾದ‌ ಟ್ರಂಪ್‌ ವರಸೆಯನ್ನು ಭಾರತ ಬೇಗ ನಂಬಬಾರದು: ಕಾಂಗ್ರೆಸ್ ಸಂಸದ ಶಶಿ ತರೂರ್‌ ಸಲಹೆ

ಇನ್ನು ಭಾರತದಿಂದ ರಫೇಲ್ ಜೆಟ್‌ಗಳ ಖರೀದಿ ಮತ್ತು ಒಪ್ಪಂದದ ಮೇಕ್ ಇನ್ ಇಂಡಿಯಾ ಘಟಕದ ಬಗ್ಗೆ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಹೇಳಿಕೆಗಳ ಬಗ್ಗೆ ಕೇಳಿದಾಗ, “ಫ್ರೆಂಚ್ ರಫೇಲ್‌ನ ಕೆಲವು ಭಾಗಗಳನ್ನು ಭಾರತದಲ್ಲಿ ತಯಾರಿಸಲಾಗುತ್ತಿದೆ. ಅದು ಒಪ್ಪಂದದ ಬಹಳ ಮುಖ್ಯವಾದ ಅಂಶವಾಗಿದೆ. ಇದು ರಕ್ಷಣೆಯನ್ನು ಬಲಪಡಿಸುವ ಭಾಗ. ಜೊತೆಗೆ ರಕ್ಷಣಾ ವಲಯದಲ್ಲಿ ನಮ್ಮ ಸ್ವಾವಲಂಬನೆಯನ್ನು ಹೆಚ್ಚಿಸುತ್ತದೆ” ಎಂದು ಅಭಿಪ್ರಾಯಿಸಿದ್ದಾರೆ.

ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಿಲುವಿಗಿಂತ ಭಿನ್ನವಾದ ನಿಲುವನ್ನು ಹೊಂದಿದ್ದವರು ಹಿರಿಯ ರಾಜಕಾರಣಿ ಶಶಿ ತರೂರ್. ಇತ್ತೀಚೆಗೆ ಪಕ್ಷಕ್ಕೂ ತರೂರ್‌ಗೂ ಹಲವು ಭಿನ್ನಾಭಿಪ್ರಾಯಗಳಿರುವುದು ಎದ್ದು ಕಾಣುತ್ತಿದೆ. ಪ್ರಧಾನಿ ನರೇಂದ್ರ ಮೋದಿಯನ್ನು ತರೂರ್ ಬಹಿರಂಗವಾಗಿ ಹೊಗಳಿರುವುದೂ ಇದಕ್ಕೆ ಕಾರಣ. ಆದರೆ ಕೇರಳ ವಿಧಾನಸಭೆ ಚುನಾವಣೆ ಬರುತ್ತಿದ್ದಂತೆ ಆ ಎಲ್ಲಾ ಭಿನ್ನಾಭಿಪ್ರಾಯವನ್ನು ಕಾಂಗ್ರೆಸ್ ಬದಿಗೊತ್ತಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಪಕ್ಷವನ್ನು ಗೆಲುವಿನತ್ತ ಕೊಂಡೊಯ್ಯುವ ಪ್ರಮುಖ ಜವಾಬ್ದಾರಿಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್‌ಗೆ ವಹಿಸಿದೆ. ತರೂರ್ ಅವರನ್ನು ಕಾಂಗ್ರೆಸ್ ಪ್ರಚಾರ ಸಮಿತಿಯ ಸಹ-ಅಧ್ಯಕ್ಷರನ್ನಾಗಿ ನೇಮಿಸಿಕೊಂಡಿದೆ. ಇವೆಲ್ಲವುದರ ನಡುವೆಯೇ ಶಶಿತರೂರ್ ಮತ್ತೆ ಕೇಂದ್ರದ ತಪ್ಪನ್ನು ಬಿಜೆಪಿ ನಾಯಕರಂತೆ ಸಮರ್ಥಿಸಿಕೊಂಡಿರುವುದು ಕಾಂಗ್ರೆಸ್‌ ಅನ್ನು ಇಕ್ಕಟ್ಟಿಗೆ ಸಿಲುಕಿಸುವಂತಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಾಮೀನಿನ ಮೇಲೆ ಹೊರಬಂದು ಅತ್ಯಾಚಾರ ಸಂತ್ರಸ್ತೆಯ ವೀಡಿಯೋ ಲೀಕ್ ಮಾಡಿದ ದುಷ್ಕರ್ಮಿ: ಶೀಘ್ರ ಬಂಧನಕ್ಕೆ ಒತ್ತಾಯ

ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದ ಆರೋಪಿಯೊಬ್ಬ, ಸಂತ್ರಸ್ತೆಯ ಖಾಸಗಿ...

ತಮಿಳುನಾಡು | ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ

ತಮಿಳುನಾಡು ಸರ್ಕಾರವು ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರಿ ಬಸ್‌ಗಳಲ್ಲಿ ಜಾರಿಗೆ...

ಉತ್ತರಾಖಂಡ | ₹135.95 ಕೋಟಿ ಸಂಸದರ ನಿಧಿಯಲ್ಲಿ ಬಳಕೆಯಾಗಿದ್ದು ಕೇವಲ ಶೇ.18 ಮಾತ್ರ

ಉತ್ತರಾಖಂಡದ ಲೋಕಸಭೆ ಮತ್ತು ರಾಜ್ಯಸಭೆಯ ಹಾಲಿ ಸಂಸದರು ತಮಗೆ ಅಭಿವೃದ್ಧಿ ಕಾಮಗಾರಿಗಳಿಗಾಗಿ...