ಬಿಜೆಪಿಗೆ ಬಿಸಿತುಪ್ಪವಾದ ಶೋಭಾ ಕರಂದ್ಲಾಜೆ ಇ.ಡಿ. ಕೇಸ್‌; ಇಂದು ವಿಚಾರಣೆ

Date:

ಇ.ಡಿ. ಪ್ರಕರಣ ಮುನ್ನೆಲೆಗೆ ತಂದು ಶೋಭಾ ಅವರನ್ನು ಕಣದಿಂದ ಹಿಂದಕ್ಕೆ ಸರಿಸಲೂಬಹುದು ಎಂಬ ಚರ್ಚೆ ಪಕ್ಷದ ಒಳಗಡೆ ನಡೆಯುತ್ತಿರುವುದಾಗಿ ಮೂಲಗಳು ಹೇಳುತ್ತಿವೆ

ವಿರೋಧ ಪಕ್ಷಗಳ ಮೇಲೆ ಆದಾಯ ತೆರಿಗೆ (ಐಟಿ), ಜಾರಿ ನಿರ್ದೇಶನಾಲಯ (ಇ.ಡಿ.) ಬಳಸುವ ಬಿಜೆಪಿ ನಾಯಕರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.

ಚಿಕ್ಕಮಗಳೂರು- ಉಡುಪಿ ಕ್ಷೇತ್ರದ ಹಾಲಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಮೇಲಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣವು ಮತ್ತೆ ಮುನ್ನೆಲೆಗೆ ಬಂದಿದ್ದು ಮಾರ್ಚ್ 26, ಮಂಗಳವಾರ ವಿಚಾರಣೆ ನಡೆಯಲಿದೆ. ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರ ಎದುರು ಶೋಭಾ ಕರಂದ್ಲಾಜೆ ಹಾಜರಾಗಬೇಕಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಚಿಕ್ಕಮಗಳೂರು- ಉಡುಪಿ ಕ್ಷೇತ್ರದಲ್ಲಿ ಭಾರೀ ವಿರೋಧ ವ್ಯಕ್ತವಾದ ಬಳಿಕ ಶೋಭಾ ಕರಂದ್ಲಾಜೆ ಅವರು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಹೊತ್ತಿನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಅಕ್ರಮ ಅಬಕಾರಿ ನೀತಿ ಆರೋಪದ ಮೇಲೆ ಇ.ಡಿ. ಬಂಧಿಸಿದ್ದು, ಇಂತಹದ್ದೇ ಪ್ರಕರಣವನ್ನು ಎದುರಿಸುತ್ತಿರುವ ಶೋಭಾ ಕರಂದ್ಲಾಜೆ ಅವರಿಗೆ ಬಿಜೆಪಿ ಟಿಕೆಟ್ ನೀಡಿರುವುದು ಬಿಜೆಪಿಯೊಳಗೆಯೇ ಅಸಮಾಧಾನ ಭುಗಿಲೇಳಲು ಕಾರಣವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಭೂ ಹಗರಣದಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಜೈಲಿಗೆ ಹೋಗಿಬಂದಿದ್ದರು. ಕಟ್ಟಾ ಸುಬ್ರಮಣ್ಯ ನಾಯ್ಡು ಅವರು 87 ಕೋಟಿ ರೂ. ಅಕ್ರಮ ಹಣವನ್ನು ಹೊಂದಿದ್ದು, ಅದರಲ್ಲಿ 47 ಕೋಟಿ ರೂ. ಶೋಭಾ ಅವರಿಗೆ ಸಂದಿದೆ ಎಂದು ಜಾರಿ ನಿರ್ದೇಶನಾಲಯ ಪತ್ತೆ ಹಚ್ಚಿತ್ತು. ಅದರ ಆಧಾರದ ಮೇಲೆ ಜಾರಿ ನಿರ್ದೇಶನಾಲಯ, ಶೋಭಾ ಕರಂದ್ಲಾಜೆ ಅವರಿಗೆ ನೋಟಿಸ್ ನೀಡಿತ್ತು.

ಇದಕ್ಕೆ ಪುರಾವೆಯಾಗಿ 70 ಲಕ್ಷ ರೂಪಾಯಿಗಳು ಕರಂದ್ಲಾಜೆ ಖಾತೆಗೆ ವರ್ಗಾವಣೆಗೊಂಡಿದ್ದು ಕಂಡುಬಂದಿತ್ತು. ಆದರೆ ಬೇರೆ ಬೇರೆಯವರ ಖಾತೆಗೆ ಹಣವನ್ನು ವರ್ಗಾವಣೆ ಮಾಡಿಕೊಂಡು ನಂತರ ಆ ಹಣವನ್ನು ಪ್ರಭಾವಿಗಳು ಪಡೆದುಕೊಂಡಿದ್ದು ಎಂಬುದು ತನಿಖೆಯಲ್ಲಿ ಕಂಡುಬಂದಿತ್ತು. ಹೀಗಾಗಿ ಪ್ರಕರಣದ ಕೊನೆಯ ಆರೋಪಿಯಾಗಿ ಶೋಭಾ ಅವರನ್ನು ಹೆಸರಿಸಲಾಗಿತ್ತು.

ಕಟ್ಟಾ ಸುಬ್ರಮಣ್ಯ ನಾಯ್ಡು, ಅವರ ಪುತ್ರ ಕಟ್ಟಾ ಜಗದೀಶ್ ಸೇರಿದಂತೆ ಒಟ್ಟು 24 ಮಂದಿ ಆರೋಪಿಗಳು ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ಸೇರಿದ್ದಾರೆ.

26-03-2014ರಂದು ದಾಖಲಾಗಿದ್ದ ಈ ಪ್ರಕರಣ, ಮಂಗಳವಾರ ಹತ್ತನೇ ವರ್ಷಕ್ಕೆ ಕಾಲಿಡುತ್ತಿದೆ. ನಿಧಾನಗತಿಯ ವಿಚಾರಣೆಗಳು ನಡೆಯುತ್ತಲೇ ಇವೆ.

ಮತ್ತೊಂದೆಡೆ 2019ರ ಲೋಕಸಭಾ ಚುನಾವಣೆ ವೇಳೆ ಅಫಿಡವಿಟ್ ಸಲ್ಲಿಸುವಾಗ ಶೋಭಾ ಕರಂದ್ಲಾಜೆ ಅವರು ಸುಳ್ಳು ಮಾಹಿತಿಯನ್ನು ನೀಡಿದ್ದಾರೆಂಬುದು ತಿಳಿದು ಬಂದಿದೆ.

ಸದರಿ ಪ್ರಕರಣದ ದೂರನ್ನು ಖಾಸಗಿ ವ್ಯಕ್ತಿಯೊಬ್ಬರು ನ್ಯಾಯಾಧೀಶರಿಗೆ ನೀಡಿರುತ್ತಾರೆಂದು ಚುನಾವಣಾ ಆಯೋಗಕ್ಕೆ ಶೋಭಾ ಮಾಹಿತಿ ನೀಡಿದ್ದರು. ಆದರೆ ವಾಸ್ತವದಲ್ಲಿ ಸರ್ಕಾರಿ ಅಧಿಕಾರಿ ಅಂದರೆ ಜಾರಿ ನಿರ್ದೇಶನಾಲಯದ ಡೆಪ್ಯುಟಿ ಡೈರೆಕ್ಟರ್‌ (ಬೆಂಗಳೂರು) ಅವರು ಪ್ರಕರಣವನ್ನು (124/2014) ದಾಖಲಿಸಿರುವುದು ದಾಖಲೆಗಳಿಂದ ಸ್ಪಷ್ಟವಾಗುತ್ತದೆ.

ಇತ್ತೀಚೆಗೆ ತಮಿಳುನಾಡು ಜನರನ್ನು ಬಾಂಬ್ ತಯಾರಿಸುವವರೆಂದು ಆರೋಪಿಸಿ ಭಾರೀ ಟೀಕೆ ಮತ್ತು ಮುಜುಗರಕ್ಕೆ ಒಳಗಾಗಿದ್ದ ಶೋಭಾ ಕರಂದ್ಲಾಜೆ ಅವರ ಮೇಲೆ ಪಕ್ಷದ ಹೈಕಮಾಂಡ್‌ ಗರಂ ಆಗಿದೆ ಎನ್ನಲಾಗುತ್ತಿದೆ. ಇದು ಪಕ್ಷಕ್ಕೆ ಬೇಡವಾಗಿದ್ದ ವಿವಾದ ಎಂದು ಕಾರ್ಯಕರ್ತರೇ ಮಾತನಾಡಿಕೊಳ್ಳುತ್ತಿದ್ದಾರೆ.

ಉಡುಪಿ ಕ್ಷೇತ್ರದ ಜನರು ದೂರ ತಳ್ಳಿದ ವ್ಯಕ್ತಿಯನ್ನು ಬೆಂಗಳೂರು ಉತ್ತರ ಲೋಕಸಭೆಯ ಅಭ್ಯರ್ಥಿಯನ್ನಾಗಿ ಬಿಜೆಪಿ ನಾಯಕರು ಘೋಷಿಸಿರುವುದು ಯಾವ ಕಾರಣಕ್ಕೆ ಎಂಬ ಪ್ರಶ್ನೆ ಕಾರ್ಯಕರ್ತರಲ್ಲೇ ಮೂಡಿದೆ. ಹೀಗಾಗಿ ಇ.ಡಿ. ಪ್ರಕರಣವನ್ನು ಮುನ್ನೆಲೆಗೆ ತಂದು ಶೋಭಾ ಅವರನ್ನು ಕಣದಿಂದ ಹಿಂದಕ್ಕೆ ಸರಿಸಲೂಬಹುದು ಎಂಬ ಚರ್ಚೆ ಪಕ್ಷದ ಒಳಗಡೆ ನಡೆಯುತ್ತಿರುವುದಾಗಿ ಮೂಲಗಳು ಹೇಳುತ್ತಿವೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು: ಮೇಕೆ ಮೇಯಿಸುತ್ತಿದ್ದ ಮಹಿಳೆ ಹೊತ್ತೊಯ್ದ ಹುಲಿ

ಮೇಕೆಗಳನ್ನು ಮೇಯಿಸುತ್ತಿದ್ದಾಗ ಹುಲಿ ಯೊಂದು ಹಠಾತ್ ದಾಳಿ ನಡೆಸಿ ಮಹಿಳೆಯನ್ನು ಹೊತ್ತೊಯ್ದ...

ಹಾಸನದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ 6 ಜನರ ಸಾವು

ಇಂದು ಮುಂಜಾನೆ ಹಾಸನ ಹೊರವಲಯದ ಕಂಡ್ಲಿ ಈಚನಹಳ್ಳಿ ಗ್ರಾಮ ಬಳಿಯ ಬೆಂಗಳೂರು-ಮಂಗಳೂರು...

ನಿರ್ಗಮಿಸುವ ಪ್ರಧಾನಿ ತನ್ನನ್ನು ತಾನು ದೇವಮಾನವನೆಂದು ಭಾವಿಸಬಹುದು: ಕಾಂಗ್ರೆಸ್‌

"ನಿರ್ಗಮಿಸುತ್ತಿರುವ ಪ್ರಧಾನಿ ಸೋಲಿನ ವಾಸ್ತವ ತಿಳಿಯುತ್ತಿದ್ದಂತೆ, ಹೆಚ್ಚು ಭ್ರಮೆಯಲ್ಲಿದ್ದಾರೆ. ಅದಕ್ಕೆ ತನ್ನ...

ಕೊಪ್ಪಳ | ಜನಪರ ಚಳವಳಿಗಳ ಚೇತನವನ್ನು ನಾವು ಉಳಿಸಿಕೊಂಡಿಲ್ಲ : ಕೆ.ಫಣಿರಾಜ್

ದಶಕಗಳ ಹಿಂದೆ ನಡೆದಿರುವ ಜನಪರ ಚಳವಳಿಗಳ ಚೇತನವನ್ನು ನಾವು ಉಳಿಸಿಕೊಂಡಿಲ್ಲ. ಆದರೆ...