ಕೇಂದ್ರ ಬಜೆಟ್‌ನಲ್ಲಿ ರೈತನಿಗೆ ಜಾಗವಿಲ್ಲ, ನೆಪಕ್ಕಾದರೂ ನಾಲಿಗೆಯ ಮೇಲೆ ಬಂದುಹೋಗಲಿಲ್ಲ

Date:

ಈ ಬಾರಿಯ ಬಜೆಟ್‌ ಪ್ರಕಾರ ಗ್ರಾಮ, ರೈತ ಮತ್ತು ಕೃಷಿ ಈಗ ಅಸ್ತಿತ್ವದಲ್ಲೇ ಇಲ್ಲ. ಆಳುವವರ ಹೃದಯದಲ್ಲಿ ಈಗ ರೈತ ಇಲ್ಲ. ನೆಪಕ್ಕಾದರೂ ನಾಲಗೆಯ ಮೇಲೆ ರೈತ ಬಂದುಹೋಗುತ್ತಿಲ್ಲ. 

2026-27ರ ಕೇಂದ್ರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಹಲವು ಪ್ರಮುಖ ಅನುದಾನಗಳು ಮತ್ತು ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ ಒಟ್ಟು ಅನುದಾನ 1.62 ಲಕ್ಷ ಕೋಟಿ ನೀಡಲಾಗಿದೆ. ಕಳೆದ ವರ್ಷಕ್ಕಿಂತ ಶೇ 7.12ರಷ್ಟು ಹೆಚ್ಚಿಸಲಾಗಿದೆ.

- Advertisement -

ದೇಶದಲ್ಲಿ ಕೃಷಿ ಬೆಳವಣಿಗೆಯಲ್ಲಿ ಕುಸಿತವಿದೆ ಎಂದು ಆರ್ಥಿಕ ಸಮೀಕ್ಷೆ ಸೂಚಿಸಿದ ಕೆಲವೇ ದಿನಗಳ ಬಳಿಕ, ಕೇಂದ್ರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಕೊಂಚ ಹೆಚ್ಚಳ ಮಾಡಲಾಗಿದೆ. ಇದು ಹಿಂದಿನ ವರ್ಷದ ಹಂಚಿಕೆಗೆ ಹೋಲಿಸಿದರೆ ಸುಮಾರು 3 ಸಾವಿರ ಕೋಟಿ ಅನುದಾನ ಹೆಚ್ಚಳವಾದಂತಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಈ ಬಾರಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಉತ್ತೇಜನ ನೀಡುವ ಯೋಜನೆಗಳ ಮೂಲಕ ಅನ್ನದಾತರ ಆದಾಯ ಹೆಚ್ಚಿಸುವ ಆಶಯವನ್ನು ಬಜೆಟ್‌ ಒಳಗೊಂಡಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅದಕ್ಕೆ ಪೂರಕವಾಗಿ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕೃಷಿ ವಲಯದಲ್ಲಿ ಉದ್ಯಮಶೀಲತೆ ಅಭಿವೃದ್ಧಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಅದಕ್ಕೆ ಪೂರಕವಾಗಿ ಹೊಸ ಯೋಜನೆಗಳು ಮತ್ತು ಘೋಷಣೆಗಳತ್ತ ಹೆಚ್ಚಿನ ಗಮನ ಹರಿಸಲಾಗಿದೆ.

ಇದನ್ನು ಓದಿದ್ದೀರಾ?: ‘ವಿಕಸಿತ ಭಾರತ’ದ ಆಕಾಶಕುಸುಮ: ಬುಲೆಟ್ ರೈಲು ಕೇವಲ ಪ್ರಚಾರದ ಸರಕಾಯ್ತೇ!

ಆ ಹೊಸ ಯೋಜನೆಯ ಫಲವಾಗಿ, ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನವನ್ನು ಮತ್ತಷ್ಟು ಹೆಚ್ಚಿಸಲು ಕೃತಕ ಬುದ್ಧಿಮತ್ತೆ (ಎಐ) ಸಾಧನ ಬಳಸಿಕೊಳ್ಳುವಂತೆ ಪ್ರೋತ್ಸಾಹಿಸಲಾಗಿದೆ. ಆ ನಿಟ್ಟಿನಲ್ಲಿ ಭಾರತ್ ವಿಸ್ತಾರ್- ಬಹುಭಾಷಾ ಎಐ ಆಧಾರಿತ ಸಾಧನವನ್ನು ಜಾರಿಗೆ ತರಲಾಗುವುದು. ಇದು ಕೃಷಿ ಪೋರ್ಟಲ್‌ಗಳು ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿ(ICAR) ಮಾಹಿತಿಯನ್ನು ಸಂಯೋಜಿಸಿ ರೈತರಿಗೆ ಸಲಹೆ ನೀಡುವ, ಉತ್ಪಾದಕತೆ ಹೆಚ್ಚಿಸುವ ಮಾರ್ಗದರ್ಶನ ನೀಡಲಾಗುವುದು. ಇದಕ್ಕಾಗಿ ಸುಮಾರು 150 ಕೋಟಿ ಅನುದಾನವನ್ನು ಎತ್ತಿಡಲಾಗಿದೆ ಎಂದಿದ್ದಾರೆ.

farmer 5

ಜೊತೆಗೆ ತೆಂಗು, ಕೋಕೋ, ಶ್ರೀಗಂಧ, ಬಾದಾಮಿ, ಗೋಡಂಬಿಗಳಂತಹ ಅತಿ ಹೆಚ್ಚು ಮೌಲ್ಯವುಳ್ಳ ಬೆಳೆಗಳನ್ನು ಉತ್ತೇಜಿಸಲು 350 ಕೋಟಿ ವ್ಯಯಿಸಲಾಗುವುದು. ಈ ಬೆಳೆಗಳ ಸ್ವಾವಲಂಬನೆ ಸಾಧಿಸಿ ರಫ್ತಿಗೆ ಉತ್ತೇಜನ ನೀಡಲಾಗುವುದು. ಆ ಮೂಲಕ 2030ರ ವೇಳೆಗೆ ಈ ಉತ್ಪನ್ನಗಳನ್ನು ಜಾಗತಿಕ ಪ್ರಿಮಿಯಂ ಬ್ರ್ಯಾಂಡ್‌ಗಳನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದಿದ್ದಾರೆ.  

ತೆಂಗು ಉತ್ಪಾದನೆ ವಲಯದಲ್ಲಿ ಸ್ಪರ್ಧೆ ಹೆಚ್ಚಿಸುವ ಉದ್ದೇಶದಿಂದ ತೆಂಗು ಉತ್ತೇಜನ ಯೋಜನೆಯನ್ನು ಘೋಷಿಸಲಾಗಿದೆ. ಅತಿ ಹೆಚ್ಚು ತೆಂಗು ಬೆಳೆಯುವ ರಾಜ್ಯಗಳಲ್ಲಿ ಹಳೆಯ ತೆಂಗಿನ ಮರಗಳ ಬದಲು ಹೊಸ ತಳಿಗಳನ್ನು ನೆಡುವುದು ಈ ಯೋಜನೆಯ ಆಶಯವಾಗಿದೆ. ಈ ಮೂಲಕ ಉತ್ಪಾದನೆ ಮತ್ತು ಮೌಲ್ಯವರ್ಧನೆ ಹೆಚ್ಚಿಸುವ ಉದ್ದೇಶವನ್ನು ಹೊಂದಲಾಗಿದೆ. ಭಾರತ ಜಗತ್ತಿನಲ್ಲೇ ಅತಿ ಹೆಚ್ಚು ತೆಂಗು ಬೆಳೆಯುವ ರಾಷ್ಟ್ರ. ಒಂದು ಕೋಟಿ ರೈತರು ಸೇರಿದಂತೆ ಸುಮಾರು ಮೂರು ಕೋಟಿ ಮಂದಿ ತೆಂಗು ಬೆಳೆ ಮೇಲೆ ಅವಲಂಬಿತರಾಗಿದ್ದಾರೆ. ಹಾಗಾಗಿ ಆ ಬೆಳೆಗೆ ಉತ್ತೇಜನ ನೀಡಲು, ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ.  

ಇನ್ನು ಮೀನುಗಾರಿಕೆ ಅಭಿವೃದ್ಧಿ ಕುರಿತು 500 ಜಲಾಶಯಗಳ ಸಮಗ್ರ ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸಲಾಗಿದೆ. ಮೀನುಗಾರಿಕೆ ಸರಪಳಿ ಬಲಪಡಿಸುವುದು, ಸ್ಟಾರ್ಟಪ್‌ಗಳು, ಮಹಿಳಾ ಗುಂಪುಗಳು ಮತ್ತು ರೈತ ಉತ್ಪಾದಕ ಸಂಘಗಳ ಮೂಲಕ ಮಾರುಕಟ್ಟೆ ಸಂಪರ್ಕ ವಿಸ್ತರಿಸುವ ಕುರಿತ ತಿಳಿಸಲಾಗಿದೆ. ಹಾಗೆಯೇ ಪಶುಸಂಗೋಪನೆ, ಜಾನುವಾರು ಕೃಷಿಕರ ಉತ್ಪಾದಕರ ಸಂಘಟನೆಗಳನ್ನು ಆರಂಭಿಸುವ ಮೂಲಕ ಈ ವಲಯಕ್ಕೆ ಹೊಸ ಸ್ಪರ್ಶ ನೀಡುವುದನ್ನು ಉಲ್ಲೇಖಿಸಲಾಗಿದೆ. ಕ್ರೆಡಿಟ್-ಲಿಂಕ್ಡ್ ಸಬ್ಸಿಡಿ ಯೋಜನೆ, ಆಧುನೀಕರಣ, ಏಕೀಕೃತ ಮೌಲ್ಯ ಸರಪಳಿ, ಪಶು ವೈದ್ಯಕೀಯ ಮತ್ತು ಬ್ರೀಡಿಂಗ್ ಸೌಲಭ್ಯಗಳಿಗೆ ಬೆಂಬಲ. ಗ್ರಾಮೀಣ ಉದ್ಯೋಗ ಸೃಷ್ಟಿ ಗುರಿ ಹೊಂದಲಾಗಿದೆ.

ಒಟ್ಟಾರೆ, ದೇಶದ ಕೃಷಿ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಬೆಳೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಉತ್ತೇಜನ ನೀಡುವ ಯೋಜನೆಗಳ ಮೂಲಕ ಅನ್ನದಾತರ ಆದಾಯ ಹೆಚ್ಚಿಸುವ ಆಶಯವನ್ನು ಈ ಬಾರಿಯ ಬಜೆಟ್‌ ಒಳಗೊಂಡಿದೆ ಎನ್ನುವುದನ್ನು ಭಾರತದ ಸುದ್ದಿ ಮಾಧ್ಯಮಗಳು ಬಹಳ ಉತ್ಸುಕತೆಯಿಂದ ವರದಿ ಮಾಡಿವೆ. ಕೇಂದ್ರ ಸರ್ಕಾರ ರೈತ ಪರ ಎಂಬುದನ್ನು ಬಿಂಬಿಸಿವೆ. ಅದಕ್ಕೆ ಬೇಕಾದ ಅಂಕಿ-ಅಂಶಗಳನ್ನು ಬಳಸಿಕೊಂಡು ಬಣ್ಣಿಸಿವೆ. ಆದರೆ, ವಸ್ತುಸ್ಥಿತಿ ಅದಕ್ಕೆ ಭಿನ್ನವಾಗಿದೆ.

ಇದನ್ನು ಓದಿದ್ದೀರಾ?: ವಿಬಿ-ಜಿ ರಾಮ್ ಜಿ | ₹95,692 ಕೋಟಿ ಹಂಚಿಕೆ; 125 ದಿನಗಳಿಗೆ ಅಲ್ಲ ಬರೀ 52 ದಿನಕ್ಕೆ ಸಾಕು: ತಜ್ಞರ ಎಚ್ಚರಿಕೆ

ಬಹಳ ಮುಖ್ಯವಾಗಿ, ದೇಶದ ರೈತ ಸಾಂಪ್ರದಾಯಿಕ ಬೆಳೆಗಳಿಂದ ಇನ್ನೂ ಬಿಡಿಸಿಕೊಂಡಿಲ್ಲ. ಬಿಡಿಸಿಕೊಂಡು ಭಿನ್ನ ಬೆಳೆಗಳೊಂದಿಗೆ ಬೆಳೆದವನೂ ಅಲ್ಲ. ಅಕಸ್ಮಾತ್ ಬೆಳೆದಿದ್ದರೂ, ಅವರ ಸಂಖ್ಯೆ ತೀರಾ ಕಡಿಮೆ ಇದೆ. ಇವತ್ತಿಗೂ ಯಾವ ಮಣ್ಣಿನಲ್ಲಿ ಯಾವ ಬೆಳೆ ಬೆಳೆಯಬೇಕು, ಯಾವಾಗ ಬೆಳೆಯಬೇಕು, ಎಷ್ಟು ಬೆಳೆಯಬೇಕೆಂಬ ಅರಿವೇ ಇಲ್ಲ. ಎಐ ಬಳಸಿಕೊಂಡು ಬೆಳೆಯುವಲ್ಲಿ ತಂತ್ರಜ್ಞಾನ ಕ್ಷೇತ್ರವೇ ಇನ್ನೂ ತಿಣುಕುತ್ತಿರುವಾಗ, ಕೃಷಿ ಕ್ಷೇತ್ರದಲ್ಲಿ ಎಐ ಬಳಕೆ ಎನ್ನುವುದು ಹಾಸ್ಪಾಸ್ಪದವೆನಿಸುವುದಿಲ್ಲವೇ? ಭವಿಷ್ಯದ ಅಭಿವೃದ್ಧಿಯನ್ನು ಕನ್ನಡಿಯಲ್ಲೇ ಕಾಣಬೇಕಾಗಬಹುದೇ?

ಜೊತೆಗೆ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ, ರೈತರ ಸಾಲ ಮನ್ನಾದ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪ ಇಲ್ಲ. ಎಂ.ಎಸ್. ಸ್ವಾಮಿನಾಥನ್ ವರದಿ ಜಾರಿಯ ಬಗ್ಗೆ ಮಾತನಾಡಿಲ್ಲ. ಕೃಷಿ ಸಾಲ ನೀತಿ ಮತ್ತು ಬೆಳೆ ವಿಮೆ ನೀತಿಯ ಕುರಿತ ಹೇಳಿಲ್ಲ. ಖರೀದಿ ಕೇಂದ್ರಗಳ ಆರಂಭಕ್ಕೆ ಕ್ರಮ ಕೈಗೊಂಡಿಲ್ಲ. ಅತಿವೃಷ್ಟಿ, ಮಳೆ ಹಾನಿ ಪರಿಹಾರ ನೀಡುವಾಗ ಎನ್‌ಡಿಆರ್‌ಎಫ್‌ ಮಾನದಂಡವನ್ನು ವೈಜ್ಞಾನಿಕವಾಗಿ ಬದಲಾಯಿಸಬೇಕು ಎನ್ನುವ ರೈತನ ಕೂಗನ್ನು ಕೇಂದ್ರ ಸರ್ಕಾರ ಕೇಳಿಸಿಕೊಳ್ಳುತ್ತಲೇ ಇಲ್ಲ.

farmer1

ದೇಶದ ಬೆನ್ನೆಲುಬು ರೈತ, ರೈತರು ಇಲ್ಲದೆ ಭಾರತದ ಅಭಿವೃದ್ಧಿ ಅಸಾಧ್ಯ ಎಂಬುದನ್ನು ಮೊದಲಿನಿಂದಲೂ ಹೇಳಿಕೊಂಡೇ ಬರಲಾಗಿದೆ. ಜೈ ಜವಾನ್ ಜೊತೆಗೆ ಜೈ ಕಿಸಾನ್ ಘೋಷಣೆಯೂ ಇದೆ. ಇದಕ್ಕೆ ಪೂರಕವಾಗಿ ದೇಶದ ಆರ್ಥಿಕತೆಗೆ ಮೊದಲಿನಿಂದ ಕೃಷಿ ವಲಯ ದೊಡ್ಡ ಕೊಡುಗೆ ನೀಡುತ್ತಾ ಬಂದಿದೆ. ಹೀಗಿದ್ದಾಗ್ಯೂ ದೇಶದ ರೈತರ ಆದಾಯವು ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ ಹಾಗೂ ಆತ್ಮಹತ್ಯೆಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್‌ಸಿಆರ್‍‌ಬಿ) ಪ್ರಕಾರ, ಮೋದಿಯವರು ಪ್ರಧಾನಮಂತ್ರಿಗಳಾದ ನಂತರ, 2014ರಿಂದ 2023ರವರೆಗೆ 1,10,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದೇಶದ ಕೃಷಿ, ಕೃಷಿಕರು ಮತ್ತವರ ಕಷ್ಟ-ನಷ್ಟಗಳ ಕುರಿತು ಗಂಭೀರವಾಗಿ ಚಿಂತಿಸುವ, ತರ್ಕಬದ್ಧ ವಿಚಾರ ಮಂಡಿಸುವ ಯೋಗೇಂದ್ರ ಯಾದವ್ ಅವರು ಕೇಂದ್ರದ ಕೃಷಿ ಬಜೆಟ್ ಕುರಿತು, ಕೊಂಚ ಕಟುವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಅವರ ಪ್ರಕಾರ, ‘ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಬಜೆಟ್ ನಲ್ಲಿ ರೈತನ ಉಲ್ಲೇಖವಿಲ್ಲ. ರೈತ ಈ ದೇಶದ ಭವಿಷ್ಯದ ಭಾಗವಾಗಿಲ್ಲ. ರೈತನಿಗಾಗಿ ಒಂದು ಯೋಜನೆಯೂ ಇಲ್ಲ. ಆಮೆ-ಸಿಂಹಗಳಿಗೆ ಯೋಜನೆಗಳಿವೆ. ರೈತನ ಉಲ್ಲೇಖವಿದೆ, ಅದು ದಿವ್ಯಾಂಗರ ಜೊತೆ, ಮಾನಸಿಕ ಅಸ್ವಸ್ಥರ ಜೊತೆ ಇದೆ. ಅಸಹಾಯಕರ ಕೆಟಗರಿಯಲ್ಲಿ ಈಗ ರೈತನಿದ್ದಾನೆ’ ಎಂದು ಕೊಂಚ ಖಾರವಾಗಿಯೇ ಮಾತನಾಡಿದ್ದಾರೆ. 

ಮುಂದುವರೆದು, ‘ಒಂದು ವೇಳೆ ನೀವು ರೈತರಾಗಿದ್ದು ಏನಾದರೂ ಬೆಳೆಯಬೇಕೆಂದು ಬಯಸಿದರೆ, ನಿಮಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೊಟ್ಟುಬಿಡುತ್ತೇವೆ. ನೀವು ಬಾದಾಮಿ, ಗೋಡಂಬಿ, ಕೋಕೋ ಬೆಳೆಯಿರಿ. ಒಂದು ವೇಳೆ ಬೆಳೆಯಲು ಸಾಧ್ಯವಾಗದಿದ್ದರೆ ಹಾಳಾಗಿ ಹೋಗಿ. ಇದು ನಮ್ಮ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜಿ ಅವರ ಸಂದೇಶ’ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನು ಓದಿದ್ದೀರಾ?: ಭರವಸೆಗಳ ಬರಿ ಸದ್ದು; ‘ಕಾಯಕ’ ಮತ್ತು ‘ದಾಸೋಹ’ ತತ್ವಗಳ ಅಡಿಯಲ್ಲಿ ಒಂದು ವಿಶ್ಲೇಷಣೆ

‘ಈ ಬಾರಿಯ ಬಜೆಟ್‌ ಗ್ರಾಮ, ರೈತ ಮತ್ತು ಕೃಷಿ ಈಗ ಅಸ್ತಿತ್ವದಲ್ಲೇ ಇಲ್ಲ ಎಂಬುದನ್ನು ಹೇಳುತ್ತಿದೆ. ಹಿಂದೆಯೂ ಆಳುವವರ ಮನಸ್ಸಿನಲ್ಲಿ ರೈತರಿರಲಿಲ್ಲ, ಕನಿಷ್ಠ ಪ್ರದರ್ಶನಕ್ಕಾಗಿಯಾದರೂ ಯೋಜನೆಗಳನ್ನು ಘೋಷಿಸಲಾಗುತ್ತಿತ್ತು. ಹಳ್ಳಿಗಳು, ಕೃಷಿ ಕಾರ್ಮಿಕರು ಮತ್ತು ಕೃಷಿಕರ ಬಗ್ಗೆ ಏನನ್ನಾದರೂ ಮಾತನಾಡಬೇಕಾದ ಅನಿವಾರ್ಯತೆ ಇತ್ತು. ಆದರೆ ಈ ಬಾರಿ ಅದನ್ನೂ ಕೊನೆಗೊಳಿಸಲಾಗಿದೆ’ ಎಂದು ಕೊಂಚ ಖೇದದಿಂದಲೇ ನುಡಿದಿದ್ದಾರೆ.

1200 675 25921569 858 25921569 1769686686084

ಅಂದರೆ, ಆಳುವವರ ಹೃದಯದಲ್ಲಿ ಈಗ ರೈತ ಇಲ್ಲ. ನೆಪಕ್ಕಾದರೂ ನಾಲಗೆಯ ಮೇಲೆ ರೈತ ಬಂದುಹೋಗುತ್ತಿಲ್ಲ. ಅದು ಈ ಬಾರಿಯ ಬಜೆಟ್‌ನಲ್ಲಿ ಎದ್ದುಕಾಣುತ್ತಿದೆ. ಈಗಾಗಲೇ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದು ರೈತರ ಕತೆ ಮುಗಿಸಲು ‘ಮೋಶಾ’ ಮುಂದಾಗಿದ್ದರು. ಭಾರೀ ಪ್ರತಿರೋಧದಿಂದಾಗಿ ಕಾಯ್ದೆಗಳನ್ನು ಹಿಂಪಡೆದಿದ್ದರು. ಆ ಅವಮಾನದ ಸೇಡನ್ನು ಈಗ ಬಜೆಟ್ ಮೂಲಕ ತೀರಿಸಿಕೊಂಡಿದ್ದಾರೆ. ರೈತನ ಬೆನ್ನೆಲುಬನ್ನೇ ಮುರಿಯುತ್ತಿದ್ದಾರೆ ಎಂಬುದು ರೈತ ಸಮುದಾಯದ ಅನಿಸಿಕೆಯಾಗಿದೆ. ಅದು ಭವಿಷ್ಯದಲ್ಲಿ ಚಾಲ್ತಿಗೆ ಬಂದರೂ, ಆಶ್ಚರ್ಯವಿಲ್ಲ.  

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

26 ಬಾರಿ ಸೋತರೂ ಕುಗ್ಗದ ಛಲ; 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕ ಹುದ್ದೆ ಪಡೆದ ವೃದ್ಧ

ಸರಿಯಾದ ಪ್ರಯತ್ನ ಮತ್ತು ಛಲವಿದ್ದರೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂಬುದನ್ನು...

1,870 ಕೋಟಿ ರೂ. ದೇಣಿಗೆ ದಂಧೆ ಆರೋಪ: ಗುಜರಾತ್‌ನ 3 ರಾಜಕೀಯ ಪಕ್ಷಗಳ ಅಕ್ರಮ ಬಯಲು

ಗುಜರಾತ್‌ನಲ್ಲಿ ನೋಂದಾಯಿತವಾಗಿದ್ದ, ಆದರೆ ಮಾನ್ಯತೆ ಪಡೆಯದ ಮೂರು ರಾಜಕೀಯ ಪಕ್ಷಗಳು ಆದಾಯ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ ಮಂಡಳಿಯ ಚಪ್ಪಾಳೆ

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ...

ತಮಗೆ ಬಿಜೆಪಿ‌ ಸೇರುವಂತೆ ಗ್ಯಾನೇಶ್ ಕುಮಾರ್ ಆಹ್ವಾನಿಸಿದ್ದರು: ನಿವೃತ್ತ ಐಎಎಸ್ ಜಿಜಿ ಥಾಮ್ಸನ್

ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರು 2016ರಲ್ಲಿ ಸರ್ಕಾರಿ ಸೇವೆಯಲ್ಲಿದ್ದಾಗ...