ಲೇಖನ ಸರಣಿ | ಪಂಚಮಸಾಲಿ ಇತಿಹಾಸ ಭಾಗ 2- ಪಂಚಮಸಾಲಿ ಪದ ನಿಷ್ಪತ್ತಿ

Date:

ಪಂಚಮಸಾಲಿಗಳ ಬಗ್ಗೆ ಮಧ್ಯಕಾಲೀನಲ್ಲಿ ಅನೇಕ ಚರಿತ್ರೆ ಕೃತಿಗಳು ನಮಗೆ ಲಭ್ಯವಿವೆ. ಇವುಗಳಲ್ಲಿ ಪ್ರಮುಖವಾಗಿ ‘ವಾಣಿಜ್ಯ ಉತ್ಪತ್ತಿ’ (ಕೃತಿಕಾರರು ಯಾರು ತಿಳಿಯದು), ಚನ್ನವೀರಾಚಾರ್ಯರಿಂದ ರಚಿತವಾದ ‘ವಾಣಿಜ್ಯೋತ್ಪತ್ತಿ’, ಗುಬ್ಬಿಯ ಮಲ್ಲಣ್ಣರಿಂದ ರಚಿತವಾದ ‘ವಣಿಗುತ್ಪತ್ತಿ’, ಇವುಗಳೊಂದಿಗೆ ‘ಪಂಚಮಸಾಲಿ ಉತ್ಪತ್ತಿ’, ‘ಪಂಚಮಿ ಶೆಟ್ಟಿಗಳ ವಿಸ್ತೀರ್ಣ’, ‘ಪಂಚಮ ಶಿವಭಕ್ತರ ಕುಲಾಗಮ’ ಗಳಲ್ಲದೆ ‘ಬ್ರಹ್ಮಾಂಡ ಪುರಾಣ’ ಮತ್ತು ‘ವಾತುಲಸುಪ್ರಭೇದ’ ಕೃತಿಗಳಲ್ಲಿಯೂ ಪಂಚಮಸಾಲಿಗಳ ಮೂಲ ಪುರುಷನ ಹೆಚ್ಚು ಕಡಿಮೆ ಒಂದು ಕಥೆಯನ್ನು ಉದ್ಧರಿಸಲಾಗಿದೆ.

- Advertisement -

“ಪಂಚಮಸಾಲಿ ಎಂದರೇನು?” ಎಂದು ಪ್ರಶ್ನಿಸುತ್ತಾರೆ ಸಂಶೋಧಕರಾದ ಡಾ. ಚಿದಾನಂದ ಮೂರ್ತಿಯವರು. ಇವರ ಸಮಕಾಲೀನವರಾದ ಡಾ. ಎಂ. ಎಂ. ಕಲಬುರ್ಗಿಯವರು ಕೂಡ ವಿಸ್ತ್ರತ ಸಂಶೋಧನೆಯನ್ನು ಮಾಡದೆ ಬಸವೋತ್ತರ ಕಾಲದ ರಚನೆಗಳಾದ ‘ಪಂಚಮಸಾಲಿ ಉತ್ಪತ್ತಿ’, ‘ಪಂಚಮಜಾತಿಯ ಲಕ್ಷಣವು’, ‘ಪಂಚಮಶೆಟ್ಟಿಗಳ ವಿಸ್ತೀರ್ಣ’, ‘ಪಂಚಮ ಶಿವಭಕ್ತರ ಕುಲಾಗಮ’ ಕೃತಿಗಳಲ್ಲಿ ಪಂಚಮಸಾಲಿಗಳ ಕುರಿತು ಪೌರಾಣಿಕ ಕಥೆಗಳನ್ನು ಸಮರ್ಥಿಸಿದಂತೆ ಮೆಲ್ನೋಟಕ್ಕೆ ಕಾಣುವುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೌಢ್ಯತೆಯೊಳಗೆ ನಾ ಕಂಡ ಭಾರತ

ಭಾರತವು ಏಕತೆಯಲ್ಲಿ ವೈವಿಧ್ಯತೆಯನ್ನು ಕಂಡ ದೇಶ. ಹಲವು ಭಾಷೆಗಳು, ಧರ್ಮಗಳು, ಸಂಸ್ಕೃತಿಗಳು, ಆಹಾರ ಪದ್ಧತಿಗಳು, ಜೀವನಶೈಲಿಗಳು ಮತ್ತು ಆಚರಣೆಗಳು ಇಲ್ಲಿನ ಸಾಮಾಜಿಕ ಬದುಕಿನ ವೈಶಿಷ್ಟ್ಯ. ಈ ವೈವಿಧ್ಯತೆಯೇ ಭಾರತದ ಶಕ್ತಿ. ಆದರೆ, ವೈವಿಧ್ಯತೆಯನ್ನು...

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬಸವಪೂರ್ವ ಕಾಲದ ಶೈವ ಧರ್ಮದಲ್ಲಿಯೇ ಪ್ರಗತಿಪರ ಪಂಥವೆಂದು ಭಾವಿಸಿದ ಕಾಳಾಮುಖ ಪಂಥದ ಸಿದ್ಧಾಂತ, ಆಚಾರ, ವಿಚಾರ ಮತ್ತು ಅವರು ಸಮಾಜಕ್ಕೆ ನೀಡಿದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಆಳವಾದ ಸಂಶೋಧನೆ ಕಾಣದಾಗಿದೆ. ಅವರ ಮಠಗಳಲ್ಲಿದ್ದ ಶಿಕ್ಷಣದ ಬಗ್ಗೆ ಆಳವಾದ ಸಂಶೋಧನೆಯಾದರೆ ಬಸವಣ್ಣನವರ ಸಾಮಾಜಿಕ ಚಿಂತನೆಯ ಕಾರಣಗಳು ಸಹ ಗೋಚರಿಬಹುದು. ಮೇಲಾಗಿ ಬಸವಣ್ಣನವರ ಪೂರ್ವದಲ್ಲಿರುವ ಸಮಾಜದ ಮೇಲೆ ಬೆಳಕು ಚೆಲ್ಲಬಹುದು. ಬಸವಪೂರ್ವ ಕಾಲದಲ್ಲಿದ್ದ ಆದ್ಯ ವಚನಕಾರರೆಂದು ಹೆಸರಾಗಿ, ಬಸವಣ್ಣನವರಿಂದಲೂ ಪ್ರಶಂಸಿಸಲ್ಪಟ್ಟ, ಹನ್ನೊಂದನೆಯ ಶತಮಾನದ ಜೇಡರ ದಾಸಿಮಯ್ಯರ ಕಾಲದಲ್ಲಿ ಪ್ರಚಲಿತವಿದ್ದ ‘ಲಿಂಗ’, ‘ಜಂಗಮ’ ಪದಗಳನ್ನು ಯಾರು ಯಾರಿಗಾಗಿ ಬಳಸಿದರು ಎಂಬ ಪ್ರಶ್ನೆಗೆ ಉತ್ತರ ಸಿಗಬಹುದು.

ಇನ್ನು ಪಂಚಮಸಾಲಿಗಳ ಬಗ್ಗೆ ಹೇಳುವುದಾದರೆ ಇವರ ಬಗ್ಗೆ ಮಧ್ಯಕಾಲೀನಲ್ಲಿ ಅನೇಕ ಚರಿತ್ರೆ ಕೃತಿಗಳು ನಮಗೆ ಲಭ್ಯವಿವೆ. ಇವುಗಳಲ್ಲಿ ಪ್ರಮುಖವಾಗಿ ‘ವಾಣಿಜ್ಯ ಉತ್ಪತ್ತಿ’ (ಕೃತಿಕಾರರು ಯಾರು ತಿಳಿಯದು), ಚನ್ನವೀರಾಚಾರ್ಯರಿಂದ ರಚಿತವಾದ ‘ವಾಣಿಜ್ಯೋತ್ಪತ್ತಿ’, ಗುಬ್ಬಿಯ ಮಲ್ಲಣ್ಣರಿಂದ ರಚಿತವಾದ ‘ವಣಿಗುತ್ಪತ್ತಿ’, ಇವುಗಳೊಂದಿಗೆ ‘ಪಂಚಮಸಾಲಿ ಉತ್ಪತ್ತಿ’, ‘ಪಂಚಮಿ ಶೆಟ್ಟಿಗಳ ವಿಸ್ತೀರ್ಣ’, ‘ಪಂಚಮ ಶಿವಭಕ್ತರ ಕುಲಾಗಮ’ ಗಳಲ್ಲದೆ ‘ಬ್ರಹ್ಮಾಂಡ ಪುರಾಣ’ ಮತ್ತು ‘ವಾತುಲಸುಪ್ರಭೇದ’ ಕೃತಿಗಳಲ್ಲಿಯೂ ಪಂಚಮಸಾಲಿಗಳ ಮೂಲ ಪುರುಷನ ಹೆಚ್ಚು ಕಡಿಮೆ ಒಂದು ಕಥೆಯನ್ನು ಉದ್ಧರಿಸಲಾಗಿದೆ.

ಆ ಕಥೆ ಹೀಗಿದೆ. ‘ಐಹೊಳೆ’ ಎಂಬ ರಾಜ್ಯವನ್ನು ವೀರಗಂಧರ್ವನೆಂಬ ರಾಜನು ಅಳುತ್ತಿದ್ದನು. ಅವನಿಗೆ ಸಮತಾದೇವಿ ಎಂಬ ಹೆಂಡತಿಯೂ, ಬಲಿದೇವಿ ಎಂಬ ಮಗಳಿದ್ದಳು. ಈ ರಾಜನು ತನ್ನ ರಾಜ್ಯವನ್ನು ಸುಭಿಕ್ಷವಾಗಿ ಆಳುತ್ತಿರಲು, ಗೋಮುಖಾಸುರನೆಂಬ ರಾಕ್ಷಸನು ಇವನ ಮೇಲೆ ದಂಡೆತ್ತಿ ಬಂದು ರಾಜನನ್ನು ಸೋಲಿಸಿ ಅವನನ್ನು ಬಂಧನದಲ್ಲಿರಿಸುತ್ತಾನೆ. ಗಂಡನ ಸಂಕಷ್ಟಗಳನ್ನು ಪರಿಹರಿಸಲು ರಾಣಿ ಸಮತಾದೇವಿ ಶಿವನಲ್ಲಿ ಮೊರೆ ಹೋಗಿ ತಪಸ್ಸು ಕೈಗೊಳ್ಳುತ್ತಾಳೆ. ಇವಳ ತಪಸ್ಸಿಗೆ ಮೆಚ್ಚಿದ ಶಿವನು ರಾಜನ ಸಂಕಷ್ಟವನ್ನು ಪರಿಹರಿಸಲು, ತನ್ನ ಕುಂಕುಳಿನಿಂದ “ಪಂಚಗಣಾಧೀಶ್ವರ”ನನ್ನು ಸೃಷ್ಟಿಸಿ ಗೋಮುಖಾಸುರನನ್ನು ಸಂಹರಿಸಲು ಆಜ್ಞೆ ಮಾಡುತ್ತಾನೆ.

ಆ ಪಂಚಗಣಾಧೀಶ್ವರನು ಗೋಮುಖಾಸುರನನ್ನು ಕೊಂದು ವೀರಗಂಧರ್ವನ ರಾಜ್ಯವಾದ ಐಹೊಳೆಯನ್ನು ಮರಳಿ ಸಂಪಾದಿಸಿಕೊಡುತ್ತಾನೆ. ತನಗೆ ಸಹಾಯ ಮಾಡಿದ ಮಹಾನುಭಾವನಿಗೆ ಪ್ರತ್ಯುಪಕಾರವಾಗಿ ಕಾಣಿಕೆಯ ರೂಪದಲ್ಲಿ ತನ್ನ ಮಗಳಾದ ಬಲಿದೇವಿಯನ್ನೇ ಪಂಚಗಣಾಧೀಶ್ವರನಿಗೆ ಧಾರೆ ಎರೆಯುತ್ತಾನೆ. ಈ ದಂಪತಿಗಳಿಗೆ (ಪಂಚಗಣಾಧೀಶ್ವರ ಮತ್ತು ಬಲಿದೇವಿ) ಒಂದು ಗಂಡು ಮಗು ಜನಿಸಿ ಆ ಮಗುವಿಗೆ ‘ಮಕಾರಿ’ ಎಂದು ನಾಮಕರಣ ಮಾಡುತ್ತಾರೆ. ಈ ಮಕಾರಿಯು ತನ್ನ ಯೌವನದಲ್ಲಿ ಪಾತಾಳಕ್ಕೆ ಹೋಗಿ ನಾಗರಾಜನ ಮಗಳಾದ ಫಣಾಮಣಿಯನ್ನು ಮದುವೆಯಾಗಿ ಅಲ್ಲಿಂದ ಮರಳುವಾಗ ಮಂಗಳ ಕಾರ್ಯಕ್ಕೆ ಬೇಕಾಗುವ ನಾಗವಲ್ಲಿ, ಕರತಾಳ, ಅಡಿಕೆ, ತೆಂಗು, ಅರಿಶಿಣ ಎಂಬ ಐದು ವಸ್ತುಗಳನ್ನು ತರುತ್ತಾನೆ.

ಈ ಐದು ವಸ್ತುಗಳನ್ನು ಮರು ಉತ್ಪತ್ತಿ ಮಾಡಿ ಅವುಗಳನ್ನು ಪೇಟೆಯಲ್ಲಿ ವ್ಯಾಪಾರ ಮಾಡಿ ಪ್ಯಾಟಿ, ಪಟ್ಟಣ ಕಟ್ಟಿಸಿ, ಪ್ಯಾಟಿ ಶೆಟ್ಟಿ ಎಂದು ಪ್ರಸಿದ್ಧನಾಗುತ್ತಾನೆ. ಈ ದಂಪತಿಗಳಿಗೆ ಐದು ಮಕ್ಕಳು ಜನಿಸುತ್ತಾರೆ. ಇವರಿಗೆ ಕ್ರಮವಾಗಿ ನಾಡನಾಳುವ ಶೆಟ್ಟಿ, ಮಹಾಜನ ಶೆಟ್ಟಿ, ಶೆಟ್ಟಿಗುತ್ತ, ಪಟ್ಟಣ ಶೆಟ್ಟಿ ಮತ್ತು ಮಿಂಡಗುದ್ದಲಿ ಶೆಟ್ಟಿ ಎಂದು ಹೆಸರಿಡುತ್ತಾರೆ. ನಂತರ ತಂದೆಯಾದ ಮಕಾರಿಯು ಇವರೆಲ್ಲರಿಗೂ ಒಂದೊಂದು ಜವಾಬ್ದಾರಿಯನ್ನು ವಹಿಸುತ್ತಾ ಐದನೆಯವನಾದ ಮಿಂಡಗುದ್ದಲಿ ಶೆಟ್ಟಿಗೆ ಹೊಲ, ತೋಟ, ಗದ್ದೆಗಳ ಜವಾಬ್ದಾರಿ ನೀಡಿ ಹದಿನೆಂಟು ತರಹದ ಧಾನ್ಯ ಬೆಳೆಯಲು ಹೇಳುತ್ತಾನೆ. ಈ ಮಿಂಡಗುದ್ದಲಿ ಶೆಟ್ಟಿಯೇ ಪಂಚಮಸಾಲಿ ಅಥವಾ ಪಂಚಮಸಾಲು ಸಮಾಜದ ಮೂಲಪುರುಷನೆನ್ನುತ್ತವೆ ಈ ಪೌರಾಣಿಕ ಹಿನ್ನೆಲೆಯ ಕಥೆಗಳು.

ಡಾ. ಎಂ. ಎಂ. ಕಲಬುರ್ಗಿಯವರು ತಮ್ಮ “ಪಂಚಮಸಾಲಿ ಹಾಗಂದರೇನು?” ಎಂಬ ನಾಲ್ಕು ಪುಟದ ಲೇಖನವನ್ನು ತಮ್ಮ ‘ಮಾರ್ಗ’ ದಲ್ಲಿ ಪ್ರಕಟಿಸುತ್ತಾ ಈ ಕಥೆಯ ಬಗ್ಗೆ ಟಿಪ್ಪಣೆ ಬರೆಯುತ್ತಾರೆ. “ಮೇಲೆ ಹೇಳಿದ ಎಲ್ಲ ಲಿಪಿಕಾರರ ಅಜ್ಞಾನದ ಕಾರಣವಾಗಿ ಶೀರ್ಷಿಕೆ ಬೇರೆಬೇರೆಯಾಗಿದ್ದರೂ ಐದು ಶೆಟ್ಟಿಗಳ ಕುರಿತು ಇವುಗಳ ಪಠ್ಯ ವಿವರಣೆ ಹೆಚ್ಚು ಕಡಿಮೆ ಒಂದೇ ಆಗಿದೆ. ಸಾಮಾಜಿಕರ ವೃತ್ತಿಗಳನ್ನು, ವೃತ್ತಿಕಾರರನ್ನು ಪೌರಾಣಿಕೀಕರಿಸಿ ಬರೆದ ಬರಹಗಳಿವು. ಇಲ್ಲಿಯ ವಾತುಲಾಗಮ, ಬ್ರಹ್ಮಪುರಾಣ ಇತ್ಯಾದಿ ಆಕರ ನಾಮಗಳೇ ಇದೆಲ್ಲ ವೈಭವೀಕೃತ ವಾಸ್ತವವೆಂದು ಸ್ಪಷ್ಟಪಡಿಸುತ್ತವೆ. ಈ ಐದು ಬಗೆಯ ಶೆಟ್ಟಿಯರ ಹೆಸರುಗಳಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ ಸಾಮಾನ್ಯವಾಗಿ ಐದನೆಯ ಶೆಟ್ಟಿಯ ಹೆಸರು ಮಿಂಡಗುದ್ದಲಿ ಶೆಟ್ಟಿ ಎಂದು ದಾಖಲಾಗಿದೆ. ಅಣ್ಣ ತಮ್ಮಂದಿರೆನಿಸುವ ಈ ಐದು ಶೆಟ್ಟಿಗಳೇ ಪಂಚಮಶೆಟ್ಟಿಗಳು. ಐದನೆಯವನಾದ ಮಿಂಡಗುದ್ದಲಿ ಶೆಟ್ಟಿಯೇ ಪಂಚಮಶೆಟ್ಟಿ. ಈ ಪಂಚಮಶೆಟ್ಟಿಯೇ ಪಂಚಮಸಾಲು ಅಥವಾ ಪಂಚಮಸಾಲಿ ಎಂದು ತಮ್ಮ ಖಚಿತವಾದ ಅಭಿಪ್ರಾಯ ಮಂಡಿಸುತ್ತಾರೆ”.

ಮುಂದುವರೆದು ಇದರ ಬಗ್ಗೆ ಸಂಶೋಧನೆ ಅವಶ್ಯ ಎನ್ನುತ್ತಾ ತಮ್ಮ’ಮಾರ್ಗ’ ಸಂಪುಟ ನಾಲ್ಕರಲ್ಲಿಯೇ ಇನ್ನೊಂದು ಲೇಖನದಲ್ಲಿ “ಪಂಚವಣಿಜಿಗರೆಂದರೆ ವಾತುಲಾಗಮದ ಪ್ರಕಾರ ನಾಡನಾಳುವ ಶೆಟ್ಟಿ, ಶೆಟ್ಟಿಗುತ್ತ, ಮಹಾಜನ ಶೆಟ್ಟಿ, ಪಟ್ಟಣ ಶೆಟ್ಟಿ ಮತ್ತು ಮಿಂಡಗುದ್ದಲಿ ಶೆಟ್ಟಿ. ಆದರೆ ನಿರಂಜನವಂಶ ರತ್ನಾಕರದ ಪ್ರಕಾರ ಕೋರಿ ಶೆಟ್ಟಿ, ಮಹಾನಾಡ ಶೆಟ್ಟಿ, ವಾಲಿ ಶೆಟ್ಟಿ, ಪಟ್ಟಣ ಶೆಟ್ಟಿ, ಮಿಂಡಗುದ್ದಲಿ ಶೆಟ್ಟಿ” –ಎಂದಿರುವುದನ್ನು ಕಾಣಿಸುತ್ತಾರೆ. ಈ ಐವರ ಸಹೋದರರಲ್ಲದೆ ಇನ್ನು ಕೆಲವು ಹೆಸರುಗಳು ಸೇರಿಕೊಂಡಿರುವ ಬಗ್ಗೆ ಮತ್ತೊಂದು ಜಿಜ್ಞಾಸೆಯನ್ನು ಹೊರಹಾಕುತ್ತಾರೆ. ಮೇಲಾಗಿ ಐದು ಶೈವ ಶೆಟ್ಟಿಗಳನ್ನು ಪ್ರತಿನಿಧಿಸುವುದೇ ‘ಪಂಚಮಮಠ ‘ವಾಗಿರಬಹುದೇ? ಎಂದು ಪಂಚಮಠಗಳ ಬಗ್ಗೆ “ಪಂಚಮಠ” ಲೇಖನದಲ್ಲಿ ಪ್ರಶ್ನಿಸುತ್ತಾರೆ.

ಇದೆ ಕಥೆಯನ್ನು ಹೊಂದಿರುವ ಒಂದು ೧೯೦೬ರಲ್ಲಿ ಪ್ರಕಟವಾದ, ವೇ. ನಂ. ಶಾ. ಶಿವಪ್ಪಶಾಸ್ತ್ರಿಗಳಿಂದ ರಚಿಸಲ್ಪಟ್ಟ ‘ಸ್ವಯಂಭುವಾಗಮ’ ಎಂಬ ಎಂಭತ್ತಾರು ಪುಟಗಳ ಒಂದು ಚಿಕ್ಕ ಕೃತಿ ನನಗೆ ಲಭ್ಯವಾಯಿತು. ಈ ಕೃತಿಯು ಸಂಸ್ಕೃತ ಶ್ಲೋಕಗಳನ್ನು ಒಳಗೊಂಡಿದ್ದು ಅವುಗಳ ಅರ್ಥವನ್ನು ಕನ್ನಡದಲ್ಲಿ ಪ್ರಕಟಿಸಲಾಗಿದೆ. ಈ ಕೃತಿಯಲ್ಲಿಯೂ ಕೂಡ ಮೇಲಿನ ಕಥೆಯನ್ನೇ ಶಿವನಿಂದ ಪಾರ್ವತಿಗೆ ಹೇಳಿಸಲಾಗಿದೆ. ಇದೇ ಪಂಚಮಸಾಲಿಗಳ ಮೂಲವೆಂದೂ ತಿಳಿಸಲಾಗಿದೆ. ಇದೇ ಪಂಚಮಸಾಲಿಗಳ ಇತಿಹಾಸವೆಂದು ಮುಗ್ಧ ಕೃಷಿಕರಾದ ಪಂಚಮಸಾಲಿಗಳನ್ನು ನಂಬಿಸಲಾಗಿದೆ.

ಮೇಲಿನ ಕೃತಿಗಳಲ್ಲಿರುವುದು ಪೌರಾಣಿಕ ಬರಹ. ಪುರಾಣದ ಭಾಷೆಯಲ್ಲಿ ದೇವರು ಮಾನವನಿಗೆ ನೀಡಿದ ಸಂದೇಶಗಳು ದೇವವಾಣಿಗಳಾಗಿರುವುದನ್ನು ನೀವೂ ಗಮನಿಸಿರಬಹುದು. ಪಂಚಮಸಾಲಿಗಳ ಉಗಮದ ಬಗ್ಗೆ ಶಿವ-ಪಾರ್ವತಿಯರ ಸಂಭಾಷಣೆಯಲ್ಲಿ ಬಿಂಬಿಸಲಾಗಿದೆ. ಇದು ಭಾರತದ ಮಹಾ ಕಾವ್ಯಗಳ ರಚನೆಗಳ ನಕಲುಗಳಂತೆ ಬಾಸವಾಗುವದು. ಶ್ರೇಷ್ಟತೆಯ ವ್ಯಸನದ ಹಿಂದೆ ಬಿದ್ದ ಲಿಂಗಾಯತರು ತಾವೂ ಕೂಡ ಬ್ರಾಹ್ಮಣರಂತೆ ಕಾವ್ಯಗಳನ್ನು ರಚಿಸಬಲ್ಲೆವು ಎಂದು ಸಿದ್ದಪಡಿಸಲು ಹೆಣಗಾಡಿದಂತಿದೆ. ಐತಿಹಾಸಿಕ “ಶ್ರುತಿ” ಗಳ ಗಾಂಭೀರ್ಯವನ್ನು ಈ ಕಥೆಗೂ ನೀಡುವ ಪ್ರಯತ್ನ ಮಾಡಲಾಗಿದೆ ಎನಿಸದಿರದು. ಸಾಮಾನ್ಯವಾಗಿ ಎಲ್ಲ ಪೌರಾಣಿಕ ಕಥೆಗಳಂತೆ ಈ ಕಥೆಯಲ್ಲಿಯೂ ಕೂಡ ಒಬ್ಬ ಜನಪ್ರಿಯರಾಜ – ದುಷ್ಟ ರಾಕ್ಷಸನ ಮಧ್ಯ ನಡೆದ ಹೋರಾಟವನ್ನು ಚಿತ್ರಿಸಲಾಗಿದೆ. ಪರಿಣಾಮ ಅಭಲೆಯಾದ ಹೆಣ್ಣು ದೇವರ ಮೊರೆ ಹೋಗುವದು, ದಯಮಯನಾದ ದೇವ(ಶಿವ)ನು ಪ್ರತ್ಯಕ್ಷನಾಗಿವುದೂ, ದುಷ್ಟ ರಾಕ್ಷಕನನ್ನು ಶಿಕ್ಷಿಸುವ ಕಥೆಯನ್ನು ಇಲ್ಲಿಯೂ ಹೆಣೆಯಲಾಗಿದೆ. ದೇವ ದೇವತೆಗಳ ಸಂಭಾಷಣೆ ಎಂದು ಕಾಲ್ಪನಿಕ ಕಥೆ ಬಿಂಬಿಸಲಾಗಿದೆ. ‘ದೇವ ವಾಣಿ ‘ ಎಂದು ಮುಗ್ಧ ಜನರನ್ನು ನಂಬಿಸಿ ಇತಿಹಾಸಕ್ಕೆ ಅಪಚಾರ ಎಸಗುವ ಪ್ರಯತ್ನ ಮಾಡಲಾಗಿದೆ.

WhatsApp Image 2026 04 30 at 1.37.08 PM

ಆದರೆ, ಇಲ್ಲೊಂದು ಸತ್ಯ ಘಟನೆಯ ಸುಳಿವೂ ಇದೆ. ಅದೆ ಐತಿಹಾಸಿಕ ಪ್ರಸಿದ್ಧಿ ಹೊಂದಿದ ಐಹೊಳೆಯ ವೀರಬಣಂಜುಗಳ ಚರಿತ್ರೆಯೊಂದಿಗೆ ಪಂಚಮಸಾಲಿಗಳನ್ನು ಬೆರಸುವ ಪ್ರಯತ್ನವೂ ಇದಾಗಿರಬಹುದು.

ತಳ ಬುಡವಿಲ್ಲದ ಪೌರಾಣಿಕ ಕಥೆಯನ್ನು ಒಂದು ಸಮಾಜದ ಇತಿಹಾಸವೆಂದು ತಿಳಿಸುವದು ಸಂಶೋಧನೆಯಲ್ಲ. ಬಸವ ಪೂರ್ವ ಕಾಲದಲ್ಲಿ ಐತಿಹಾಸಿಕ ಐಹೊಳೆಯ ವೀರಬಣಂಜುಗಳು ಬಗ್ಗೆ ಶಾಸನಗಳಲ್ಲಿ ಉಲ್ಲೇಖವಿದೆ.

ಐಹೊಳೆಯ ವೀರಬಣಂಜುಗಳು

ಕರ್ನಾಟಕದ ಇಂದಿನ ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲ್ಲೂಕಿನ ‘ಐಹೊಳೆ’ ಎಂಬ ಪುಟ್ಟ ಗ್ರಾಮದ ವ್ಯಾಪಾರಿಗಳು ಕ್ರಿ. ಶ. ೧೦೫೦ರಲ್ಲಿ ಇಡೀ ಏಷ್ಯಾ ಖಂಡದ ವ್ಯಾಪಾರ ನಿಯಂತ್ರಿಸುತ್ತಿದ್ದರೆಂದು ಶಾಸನಗಳು ಹೇಳುತ್ತವೆ. ಇವೆ ಶಾಸನಗಳಲ್ಲಿ ಇವರನ್ನು ‘ಸಮಸ್ತ ಭುವನ ವಿಖ್ಯಾತ ಪಂಚಶತ’ ಎಂದು ವರ್ಣಿಸುತ್ತವೆ. ಇವರನ್ನು ಐಹೋಳೆಯ ‘ಐನೂರೊರ್ವರು’ ಎಂದೂ ಕರೆಯುತ್ತಾರೆ. ಈ ವ್ಯಾಪಾರಿಗಳ ಒಕ್ಕೂಟದ ಬಗ್ಗೆ ನೂರಾರು ಶಾಸನಗಳು ಲಭ್ಯವಿವೆ. “The Virabananju traders who later constituted the most powerful section of the Veerashaiva and are today known as Banajiga and Ling Banajiga included many Jains…. the five hundred swamis of Aihole, a Powerful Merchant Guild of Medival Karnataka, seems to have many Jain traders. A Shikaripur record of A.D.1050 highlights the Jain descent of the five hundred swamis of Aihole (EC7Sk118) ” ಶಾಸನಗಳ ಪುರಾವೆ ಸಹಿತ ಬರೆಯುತ್ತಾರೆ ಖ್ಯಾತ ಸಂಶೋಧಕ ಡಾ. ಆರ್. ಎನ್. ನಂದಿ.

ವೀರಬಣಂಜುಗಳ ವ್ಯಾಪ್ತಿಯ ಬಗ್ಗೆ ಅನೇಕ ಶಾಸನಗಳು ಕರ್ನಾಟಕದ ರಾಜ್ಯದ ಐಹೊಳೆ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಶಿವಮೊಗ್ಗ ಜಿಲ್ಲೆಗಳಲ್ಲದೆ, ತಮಿಳುನಾಡು, ಆಂಧ್ರಪ್ರದೇಶ, ಶ್ರೀಲಂಕಾ, ಸುಮಾತ್ರಾ (ಇಂಡೋನೇಷ್ಯಾ) ಮತ್ತು ಮ್ಯಾನ್ಮಾರ್‌ ದೇಶಗಳಲ್ಲಿಯೂ ದೊರಕಿವೆ. ಇದು ಇವರ ಅಂತಾರಾಷ್ಟ್ರೀಯ ವ್ಯಾಪಾರದ ಸಂಬಂಧವನ್ನು ಸಾಬೀತುಪಡಿಸುತ್ತದೆ.

ಐಹೊಳೆಯನ್ನು ಈ ಒಕ್ಕೂಟದ ‘ಆರ್ಯಪುರ’ ಅಥವಾ ಕೇಂದ್ರಸ್ಥಾನ ಎಂದು ಕರೆಯಲಾಗುತ್ತಿತ್ತು (ಐಹೊಳೆಯ ಶಾಸನ). ಇಲ್ಲಿನ ಅನೇಕ ದೇವಾಲಯಗಳ ಗೋಡೆಗಳು ಮತ್ತು ಸ್ತಂಭಗಳ ಮೇಲೆ ಇವರ ದಾನ-ದತ್ತಿಗಳ ಬಗ್ಗೆ ಉಲ್ಲೇಖಗಳಿವೆ. ಇವರು ತಮಗಾಗಿ ಪ್ರತ್ಯೇಕವಾದ ‘ಪ್ರಶಸ್ತಿ’ ಯನ್ನು (Inscriptional Eulogy) ಹೊಂದಿದ್ದರು. ಶಾಸನಗಳಲ್ಲಿ ಇವರನ್ನು “ಅಹಿಚ್ಛತ್ರದಿಂದ ಬಂದವರು” ಮತ್ತು “ಐಹೊಳೆಯ ಐನೂರು ಸ್ವಾಮಿಗಳ ಮಕ್ಕಳು” ಎಂದು ವರ್ಣಿಸುತ್ತವೆ.ಇವರಲ್ಲಿ ಅಂತರರಾಷ್ಟ್ರೀಯ ವ್ಯಾಪಾರಿಗರನ್ನು ‘ನಾನಾದೇಶಿ’ ಗಳೆಂದೂ, ಸ್ವದೇಶಿ ವ್ಯಾಪಾರಿಗರನ್ನು ‘ಉಭಯನಾನಾದೇಸಿ’ ಗಳೆಂದು ಕರೆದಿದ್ದನ್ನು ಶಾಸನಗಳು ಊಲ್ಲೇಖಿಸುತ್ತವೆ. (ಆರ್. ಎನ್. ನಂದಿ).

WhatsApp Image 2026 04 30 at 1.37.16 PM1

ಇವರ ಶಾಸನಗಳಲ್ಲಿ “ಪೃಥ್ವಿ ಸೆಟ್ಟಿ” ಅಥವಾ “ಲೋಕೇಶ್ವರ” ದೇವರಿಗೆ ನೀಡಿದ ದಾನಗಳು, ಜೈನ ಬಸದಿಗಳಿಗೆ ನೀಡಿದ ಭೂಮಿಯ ಬಗ್ಗೆ ವಿವರವಾದ ಮಾಹಿತಿಯನ್ನು ಕಾಣಬಹುದು. ಇವರು ಬೆಲೆಬಾಳುವ ರತ್ನ, ಸಾಂಬಾರ ಪದಾರ್ಥಗಳನ್ನಲ್ಲದೆ ಆನೆ ಮತ್ತು ಕುದುರೆಗಳ ವ್ಯಾಪಾರ ಮಾಡುತ್ತಿದ್ದರೆಂಬ ದಾಖಲೆಗಳಿವೆ. ಇವರು ಮಹಾಮಾಂಡಲಿಕರಂತೆ ತಮ್ಮದೆ ಆದ ಧ್ವಜ ಮತ್ತು ಲಾಂಛನ ಹೊಂದಿದ್ದರು. ಇವರು ತಮ್ಮ ಸುರಕ್ಷತೆಗಾಗಿ ಸೈನ್ಯವನ್ನು ಹೊಂದಿದ್ದರು. ಇವರ ಧ್ವಜದಲ್ಲಿ ‘ಗೂಳಿ’ (ಬಸವ) ಚಿತ್ರಗಳಿರುವುದನ್ನು ಕಾಣಬಹುದು. ಶಿಕಾರಿಪುರದಲ್ಲಿ ದೊರೆತ ಶಾಸನವು ವೀರಬಣಂಜುಗಳ ಸಂಘಟನೆ ಮತ್ತು ಅವರ ವೀರತ್ವದ ಬಗ್ಗೆ ವಿವರಿಸುತ್ತದೆ. ಬೆಳಗಾವಿಯ ಜಿಲ್ಲೆಯ ಶಾಸನಗಳಲ್ಲಿ ಈ ವ್ಯಾಪಾರಿಗಳು ತೂಕ ಮತ್ತು ಅಳತೆಯ ಮೇಲೆ ವಿಧಿಸುತ್ತಿದ್ದ ಸುಂಕದ ಬಗ್ಗೆ ಮಾಹಿತಿ ನೀಡುತ್ತವೆ. ತಮಿಳುನಾಡಿನಲ್ಲಿ ದೊರೆತ ಶಾಸನಗಳಲ್ಲಿ ಇವರನ್ನು “ನಾನಾದೇಶಿ” ಅಥವಾ “ಐನೂರುವರು” ಎಂದು ಕರೆಯಲಾಗಿದೆ.

ಇದನ್ನೂ ಓದಿ ಪಂಚಮಸಾಲಿಗಳ ‘ಫಜೀತಿ’: ಧರ್ಮದರ್ಶಿ ಬಿ ಸಿ ಉಮಾಪತಿಯವರು ಹಗ್ಗ ಕೊಟ್ಟು ಕೈ ಕಟ್ಟಿಸಿಕೊಳ್ಳುವರೇ?

ಇಂದಿನ ತುಮಕೂರು ಸಿದ್ದಗಂಗಾ ಹಳೆಯ ಮಠದ ರೂವಾರಿಗಳು ಇದೇ ವೀರಬಣಂಜುಗಳು. ತುಮಕೂರಿನ ಮಾರ್ಗವಾಗಿ ಐಹೊಳೆಯಿಂದ ತಮೀಳನಾಡಿಗೆ ವ್ಯಾಪಾರಕ್ಕೆ ಹೋಗುವ ಮಾರ್ಗದಲ್ಲಿ ತುಮಕೂರಿನಲ್ಲಿ ತಂಗಲು ಒಂದು ತಂಗುದಾಣ ನಿರ್ಮಸಿ ಆ ತಂಗುದಾಣಕ್ಕೆ ಮಠವೆಂದು ಹೆಸರಿಸಿ, ಆ ಮಠದ ವ್ಯವಸ್ಥೆಗಾಗಿ ಒಬ್ಬ ವ್ಯವಸ್ಥಾಪಕರು( ಸ್ವಾಮಿ)ರನ್ನು ನೇಮಿಸಿ, ಈ ಮಠದ ಕರ್ಚು ವೆಚ್ಚಕ್ಕಾಗಿ ಸ್ಥಳೀಯ ಭೂಮಿಯನ್ನು ಖರಿದಿಸಿ ಮಠಕ್ಕೆ ನೀಡಿದ ಉಲ್ಲೇಖಗಳಿವೆ. ತುಮಕೂರಿನ ಸಿದ್ಧಗಂಗಾ ಮಠದ ಮೂಲ ಸ್ವಾಮಿಗಳನ್ನು ನೇಮಿಸಿದವರು ವೀರಬಣಂಜುಗಳೆಂದು ಚೆನ್ನಪ್ಪ ಯರೆಸೀಮೆಯವರು ಸಿದ್ದಗಂಗಾ ಮಠವು ಹೊರತಂದಿರುವ ‘ಸಿದ್ದಶೈಲ’ ಎಂಬ ಬೃಹತ್ ಗ್ರಂಥದಲ್ಲಿ ಉಲ್ಲೇಖಿಸುತ್ತಾರೆ.

ಲೇಖನ ಸರಣಿ | ಪಂಚಮಸಾಲಿ ಸಮುದಾಯ: ಇತಿಹಾಸದ ಹಾದಿ ಮತ್ತು ಇಂದಿನ ತಲ್ಲಣಗಳು- ಭಾಗ…

ವೀರಬಣಂಜುಗಳು ಶೈವ ಧರ್ಮದ ಪಾಲಕರು. ಶೈವರಾದ ಇವರು ವೀರಯೋಧರಾಗಿ ತಮ್ಮ ಸಂಪತ್ತನ್ನು ಉಳಿಸಿಕೊಳ್ಳುವ ಕಾರಣವಾಗಿ ವೀರತನ ಪ್ರದರ್ಶನ ಮಾಡಿದ್ದು ಸಹಜ. ಹೀಗಾಗಿ ಇವರನ್ನು “ವೀರಶೈವರು” ಎಂದು ಕರೆದಿರುವ ಸಾಧ್ಯತೆ ಇಲ್ಲದಿಲ್ಲ. ಡಾ ಆರ್.ಎನ್.ನಂದಿಯವರ ಹೇಳಿಕೆಯಂತೆ ಇವರಲ್ಲಿ ಜೈನ ಧರ್ಮೀಯರು ಇದ್ದಿರುವದಾಗಿ ಅಭಿಪ್ರಾಯ ಪಡುತ್ತಾರೆ. ಅಥವಾ ಇವರು ಸರ್ವಧರ್ಮಗಳನ್ನು ಸಮಾನತೆಯಿಂದ ಕಾಣುವುದರಿಂದ ಜೈನ ಬಸದಿಗಳಿಗೆ ದಾನ – ದತ್ತಿಗಳನ್ನು ಮಾಡಿರಬಹುದು. ಇಲ್ಲೊಂದು ವಿಷಯ ಗಮನಿಸಬೇಕು ಜೇನ ಸಾಹಿತ್ಯದಲ್ಲೂ ಪಂಚಮಸಾಲಿಗಳ ಬಗ್ಗೆ ಉಲ್ಲೇಖವಿದೆ. ಬಸವಪೂರ್ವ ಕಾಲದಲ್ಲಿದ್ದ ಶೈವಧರ್ಮದ ಕಾಪಾಲಿಕ, ಕಾಳಾಮುಖ, ನಾಥ, ಜೈನ, ಇನ್ನೂ ಅನೇಕ ಧರ್ಮಿಯರು ಬಸವಣ್ಣನವರ ಅನುಯಾಯಿಗಳಾಗಿ ಲಿಂಗಾಯತ ಧರ್ಮ ಸ್ವೀಕರಿಸಿ ಲಿಂಗಾಯತ ಧರ್ಮ ಅಸ್ತಿತ್ವಕ್ಕೆ ಬಂದಿದೆ.

ಮುಂದುವರಿಯುವುದು…

IMG 20260430 WA0003
ಜಿ ಬಿ ಪಾಟೀಲ್‌
+ posts

ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಪೋಸ್ಟ್ ಹಂಚಿಕೊಳ್ಳಿ:

ಜಿ ಬಿ ಪಾಟೀಲ್‌
ಜಿ ಬಿ ಪಾಟೀಲ್‌
ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

30 ದಿನ ಕಳೆದರೂ ʼRTIʼಗೆ ಉತ್ತರವಿಲ್ಲ; ECI ಮೇಲೊಂದು ಪ್ರಶ್ನಾರ್ಥಕ ಚಿಹ್ನೆ! 

'ಚುನಾವಣಾ ಆಯೋಗ ಏನು ಮುಚ್ಚಿಡಲು ಪ್ರಯತ್ನಿಸುತ್ತಿದೆ?' ಎಂಬ ಗಂಭೀರ ಅನುಮಾನ ಈಗ...

ನ.1ರಂದು ʼದಿಲ್ಲಿ ಚಲೋʼ | ಪ್ರಜಾಪ್ರಭುತ್ವ ಉಳಿಸಲು ಎಲ್ಲರೂ ಜೊತೆಗೂಡುವಂತೆ ರಾಹುಲ್ ಗಾಂಧಿ ಕರೆ

ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು, ಮತಗಳ್ಳತನವನ್ನು ತಡೆಯಲು ಹಾಗೂ ಸಂವಿಧಾನವನ್ನು ರಕ್ಷಿಸಲು ನವೆಂಬರ್...

SIR ಸಂಚು: 10 ಕೋಟಿ ಜನರಲ್ಲಿ ಸಿಕ್ಕಿದ್ದು ಬರಿ 1,600 ವಿದೇಶಿಯರು!

ದೇಶಾದ್ಯಂತ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ನಡೆಸುತ್ತಿರುವುದು ದೇಶದ...

ಅಪ್ರಾಪ್ತ ಪುತ್ರನಿಂದ ಕಾರು ಅಪಘಾತ: ಕೇರಳದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ

ಕೊಚ್ಚಿಯಲ್ಲಿ 17 ವರ್ಷದ ಅಪ್ರಾಪ್ತ ಮಗ ಚಲಾಯಿಸುತ್ತಿದ್ದ ಮರ್ಸಿಡಿಸ್-ಬೆಂಜ್ ಕಾರು ಡಿಕ್ಕಿ...