ಆರ್‌ಜಿ ಕರ್ ನಂತರವೂ ಬದಲಾಗದ ಬಂಗಾಳದ ಚಿತ್ರಣ; ಅನ್ಯಾಯದ ಹತ್ಯೆಗಳಿಗೆ ಹೊಣೆ ಯಾರು?

Date:

ಪಶ್ಚಿಮ ಬಂಗಾಳದ ಬರುಯಿಪುರದ ಸೂರ್ಯಪುರ ಗ್ರಾಮದಲ್ಲಿ 11 ವರ್ಷದ ಬಾಲಕಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಮತ್ತು ಬರ್ಬರ ಹತ್ಯೆ ಇಡೀ ಪಶ್ಚಿಮ ಬಂಗಾಳದ ಆತ್ಮಸಾಕ್ಷಿಯನ್ನು ಮತ್ತೊಮ್ಮೆ ಕಲಕಿದೆ. ಈ ಘಟನೆ ಆರ್‌ಜಿ ಕರ್ ಪ್ರಕರಣದ ಕರಾಳ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ. ಒಂದೆಡೆ ಮಹಿಳೆಯರ ಮೇಲಿನ ನಿರಂತರ ದೌರ್ಜನ್ಯ, ಇನ್ನೊಂದೆಡೆ ಗುಂಪು ಹಲ್ಲೆಗಳು, ಭುಗಿಲೆದ್ದ ಜನಾಕ್ರೋಶ, ಮತ್ತೊಂದೆಡೆ ಸಂತ್ರಸ್ತರನ್ನೇ ತನ್ನ ರಾಜಕೀಯ ದಾಳವಾಗಿ ಬಳಸಿಕೊಳ್ಳುವ ಕುತಂತ್ರ ಮತಿಯ ಬಿಜೆಪಿಗೆ ಈಗ ಈ ಪ್ರಕರಣ ಅಕ್ಷರಶಃ ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ.

- Advertisement -

ಪಶ್ಚಿಮ ಬಂಗಾಳದ ಬರುಯಿಪುರದ 11 ವರ್ಷದ ಬಾಲಕಿಯೊಬ್ಬಳು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಳು. ಉಡುಗೊರೆ ಕೊಳ್ಳಲು ಅಂದು ಮಧ್ಯಾಹ್ನ ಆಕೆ ಅಮ್ಮನ ಬಳಿ ಹೇಳಿ, ಅಕ್ಕಪಕ್ಕದ ಅಂಗಡಿಗಳಿಗೆ ಹೋಗಿ ಬರುವುದಾಗಿ ಮನೆ ಬಿಟ್ಟಿದ್ದಳು. ಆದರೆ, ಸಂಜೆಯಾದರೂ ಮಗಳು ಮನೆಗೆ ಮರಳಲಿಲ್ಲ. ಮಗಳಿಗಾಗಿ ಕಾಯುತ್ತಿದ್ದ ಪೋಷಕರು ಗಾಬರಿಯಾಗಿ ನೆರೆಹೊರೆಯವರೊಂದಿಗೆ ಹುಡುಕಾಟ ಆರಂಭಿಸಿದರು. ಮಗಳು ಎಲ್ಲೂ ಪತ್ತೆಯಾಗಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ಮರುದಿನ ಮುಂಜಾನೆ, ಇಡೀ ಗ್ರಾಮವೇ ಬೆಚ್ಚಿಬೀಳುವಂತ ಸುದ್ದಿಯೊಂದು ಗಾಳಿಯಷ್ಟೇ ವೇಗವಾಗಿ ಹರಡಿತು. ಗ್ರಾಮದ ಹೊರವಲಯದಲ್ಲಿರುವ ಕೆರೆಯ ಬಳಿ ಬಾಲಕಿಯ ಮೃತದೇಹ ಚೀಲವೊಂದರಲ್ಲಿ ಪತ್ತೆಯಾಗಿತ್ತು. ಆಕೆಯ ಬಟ್ಟೆಗಳು ಅಸ್ತವ್ಯಸ್ತವಾಗಿದ್ದವು, ಮುಖದ ಮೇಲೆ ಹಿಂಸೆಯ ಗುರುತುಗಳು ಎದ್ದು ಕಾಣುತ್ತಿದ್ದವು. ಮೃತದೇಹವನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ವೈದ್ಯರ ವರದಿ ಇನ್ನಷ್ಟು ಭೀಕರತೆ ತೆರೆದಿಟ್ಟಿತ್ತು. ಬಾಲಕಿಯನ್ನು ಜೀವಂತವಾಗಿದ್ದಾಗಲೇ ಚೀಲವೊಂದರಲ್ಲಿ ತುಂಬಿ ಕೆರೆಗೆ ಎಸೆದಿರುವುದು ವರದಿಯಿಂದ ತಿಳಿದುಬಂದಿತ್ತು. ವರದಿಯ ಪ್ರಕಾರ, ಬಾಲಕಿಯ ಖಾಸಗಿ ಅಂಗಗಳ ಮೇಲೆ ಸುಟ್ಟಗಾಯಗಳೂ ಸೇರಿದಂತೆ ಭೀಕರವಾದ ಗಾಯಗಳ ಗುರುತುಗಳಿದ್ದವು. ತಲೆಯ ಹಿಂಭಾಗದಲ್ಲಿ ಗಟ್ಟಿಯಾದ ವಸ್ತುವಿನಿಂದ ಬಲವಾಗಿ ಹೊಡೆದ ಅಥವಾ ಬಲವಂತವಾಗಿ ಗಟ್ಟಿಯಾದ ಮೇಲ್ಮೈಗೆ ಅಪ್ಪಳಿಸಿದ ಪರಿಣಾಮವಾಗಿ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವವಾಗಿತ್ತು. ಆಕೆಯ ಶ್ವಾಸಕೋಶದಲ್ಲಿ ಕೆಸರು ನೀರು ಪತ್ತೆಯಾಗಿದ್ದು, ಆಕೆಯನ್ನು ಕೆರೆಗೆ ಎಸೆದಾಗ ಆಕೆ ಜೀವಂತವಾಗಿದ್ದಳು ಎಂಬುದನ್ನು  ಸೂಚಿಸುತ್ತಿತ್ತು. ವಿಪರೀತ ರಕ್ತಸ್ರಾವ ಮತ್ತು ನೀರಿನಲ್ಲಿ ಮುಳುಗಿ ಉಸಿರುಗಟ್ಟಿದ್ದು ಸಾವಿಗೆ ಮುಖ್ಯ ಕಾರಣಗಳೆಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

image 63 1

ಅದಾದ ಬಳಿಕ ಆಕ್ರೋಶದ ಭರದಲ್ಲಿ ಗುಂಪು ಸೇರಿದ್ದ ಜನ, ಆರೋಪಿಗಳ ಕೃತ್ಯಕ್ಕೆ ಸಿಟ್ಟುಗೊಂಡು, ಆರೋಪಿಯೊಬ್ಬನ ಸಹಚರನೆಂದು ಶಂಕಿಸಲಾದ ವ್ಯಕ್ತಿಯೊಬ್ಬನನ್ನು ಹಿಡಿದು ಥಳಿಸಿದರು. ಕಾನೂನನ್ನು ಕೈಗೆತ್ತಿಕೊಂಡ ಜನಸಮೂಹದ ಈ ವರ್ತನೆ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತು. ಅತ್ತ ತನಿಖೆಗಾಗಿ SIT ರಚಿಸಿತು. ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸಿಕ್ಕ ದೃಶ್ಯಗಳ ಆಧಾರದ ಮೇಲೆ ಪ್ರಮುಖ ಆರೋಪಿ ಆನಂದ್ ಸರ್ದಾರ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ನಾಲ್ವರ ಪೈಕಿ ಒಬ್ಬನಿಗೆ ರಾಜಕೀಯ ನಂಟಿದೆ ಎಂದು ವರದಿಯಾಗಿದೆ.

ಈ ಘಟನೆಯ ಬಿಸಿ ಆರುವ ಮುನ್ನವೇ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಇಂಗ್ಲಿಷ್ ಬಜಾರ್ ಪ್ರದೇಶದಲ್ಲಿ 12 ವರ್ಷದ ಬಾಲಕಿಯ ಮೇಲೆ ನೆರೆಯ ವ್ಯಕ್ತಿಯೊಬ್ಬ ಅಮಾನವೀಯವಾಗಿ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ. ಆರನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯನ್ನು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕ್ರೂರವಾಗಿ ನಡೆಸಿಕೊಂಡಿದ್ದಾನೆ. ಘಟನೆಯ ನಂತರ ತೀವ್ರ ಅಸ್ವಸ್ಥಗೊಂಡ ಬಾಲಕಿಯನ್ನು ಕುಟುಂಬದವರು ಕೂಡಲೇ ಮಾಲ್ಡಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದ್ದು, ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಅಪರಾಧ ಎಸಗಿದ ನಂತರ ಆರೋಪಿಯು ಪಶ್ಚಿಮ ಬಂಗಾಳದಿಂದ ಬಿಹಾರದ ಪೂರ್ಣಿಯಾಗೆ ಪರಾರಿಯಾಗಿದ್ದನು. ತಾಂತ್ರಿಕ ಕಣ್ಗಾವಲು (Technical Surveillance) ವ್ಯವಸ್ಥೆ ಬಳಸಿಕೊಂಡು ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಈ ಘಟನೆಯು ಆ ಭಾಗದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಅಪ್ರಾಪ್ತ ಬಾಲಕಿಯರ ಮೇಲಿನ ಸರಣಿ ದೌರ್ಜನ್ಯಗಳ ಬಗ್ಗೆ ಸಾರ್ವಜನಿಕರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಮಾಸದ ಆರ್‌ಜಿ ಕರ್‌ ಕರಾಳ ನೆನಪು

2024ರ ಆಗಸ್ಟ್ 9ರಂದು ಕೋಲ್ಕತ್ತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ನಡೆದ 31 ವರ್ಷದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯ ಘಟನೆಯು ಪಶ್ಚಿಮ ಬಂಗಾಳದ ಇತಿಹಾಸದಲ್ಲಿ ಕರಾಳ ಅಧ್ಯಾಯವಾಗಿ ದಾಖಲಾಗಿದೆ. ಕೆಲಸದ ಸ್ಥಳದಲ್ಲಿ ವೈದ್ಯರಿಗೆ ಸಿಗಬೇಕಾದ ಭದ್ರತೆಯು ಎಷ್ಟು ಶೋಚನೀಯವಾಗಿದೆ ಎಂಬುದನ್ನು ಈ ಘಟನೆ ಜಗಜ್ಜಾಹೀರು ಮಾಡಿತು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿನ ಕ್ರೂರ ಅಂಶಗಳು ಮತ್ತು ನಂತರದ ತನಿಖೆಯಲ್ಲಿನ ವೈಫಲ್ಯಗಳು ಇಡೀ ರಾಜ್ಯದ ವೈದ್ಯಕೀಯ ಸಮುದಾಯವನ್ನು ಬೀದಿಗಿಳಿಯುವಂತೆ ಮಾಡಿದ್ದವು. ವೈದ್ಯಕೀಯ ವೃತ್ತಿಪರರ ಸುರಕ್ಷತೆ ಮತ್ತು ಕಾರ್ಯನಿರ್ವಹಣಾ ಸ್ಥಳಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಇದು ರಾಷ್ಟ್ರಮಟ್ಟದ ಚರ್ಚೆಯನ್ನು ಹುಟ್ಟುಹಾಕಿತು.

image 65 2
ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ

ಈ ಘಟನೆ ಅಂದಿನ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ವಿರುದ್ಧದ ದೊಡ್ಡ ಜನಾಂದೋಲನವಾಗಿ ರೂಪಾಂತರಗೊಂಡಿತು. ಆಸ್ಪತ್ರೆಯ ಆಡಳಿತ ಮಂಡಳಿಯು ಘಟನೆಯನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಮತ್ತು ಪೊಲೀಸರು ತನಿಖೆಯಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂಬ ಆರೋಪಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದವು. ಸಾಕ್ಷ್ಯಗಳನ್ನು ನಾಶಪಡಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿ ಸಾರ್ವಜನಿಕರು ಮತ್ತು ವಿದ್ಯಾರ್ಥಿ ಸಂಘಟನೆಗಳು ನಡೆಸಿದ ಪ್ರತಿಭಟನೆಗಳು ದಿನ ಕಳೆದಂತೆ ಉಗ್ರರೂಪ ತಳೆದವು.

ಆರ್.ಜಿ. ಕರ್ ಪ್ರಕರಣದ ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಸೇರಿದಂತೆ ಹಲವು ವಿರೋಧ ಪಕ್ಷಗಳು ದೊಡ್ಡ ಮಟ್ಟದ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದವು. ಅಂದಿನ ರಾಜಕೀಯ ಹಗ್ಗಜಗ್ಗಾಟದಲ್ಲಿ ಬಲಿಪಶುವಾದ ಸಂತ್ರಸ್ತೆಯ ಕುಟುಂಬದ ನೋವು ಒಂದು ಕಡೆಯಾದರೆ, ಸರ್ಕಾರದ ವಿರುದ್ಧದ ಜನಾಕ್ರೋಶವು ಮತ್ತೊಂದು ಕಡೆಯಾಗಿತ್ತು. ಸಾರ್ವಜನಿಕರ ಈ ಆಕ್ರೋಶ ಮತ್ತು ಭದ್ರತೆಯ ಕುರಿತಾದ ಅತೃಪ್ತಿಯೇ ರಾಜ್ಯದಲ್ಲಿ ರಾಜಕೀಯ ಬದಲಾವಣೆಗಳಿಗೆ ಪ್ರಬಲವಾದ ಅಡಿಪಾಯ ಹಾಕಿತು.

ಅಂದು ಆರ್.ಜಿ. ಕರ್ ಪ್ರಕರಣದ ವಿರುದ್ಧ ಹೋರಾಡಿ ಅಧಿಕಾರಕ್ಕೆ ಬಂದವರು, ಇಂದು ಬರುಯಿಪುರದಂತಹ ಪ್ರಕರಣವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಇಡೀ ಬಂಗಾಳ ವೀಕ್ಷಿಸುತ್ತಿದೆ. ಈ ಪ್ರಕರಣಗಳು ಮಹಿಳಾ ಸುರಕ್ಷತೆಯ ಅಳತೆಗೋಲಾಗಿ ಸರ್ಕಾರಗಳನ್ನು ತಿವಿಯುತ್ತಿವೆ.

ಇಂದಿನ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ ಒಂದು ರೀತಿಯಲ್ಲಿ ‘ಪರಿವರ್ತನೆ’ ಮತ್ತು ‘ಭದ್ರತೆ’ಯ ಭರವಸೆ ನೀಡಿ. ಅನುಕಂಪದ ಮತಗಳನ್ನೂ ಸೆಳೆಯುವ ಉದ್ದೇಶದಿಂದ ಆರ್.ಜಿ. ಕರ್ ಪ್ರಕರಣದ ಸಂತ್ರಸ್ತೆಯ ತಾಯಿಯನ್ನು ಚುನಾವಣೆಯಲ್ಲಿ ಕಣಕ್ಕಿಳಿಸಿತ್ತು ಬಿಜೆಪಿ. ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ದೂರುತ್ತಲೇ ಬಂದಿದ್ದ ಬಿಜೆಪಿಗೆ, ಈಗ ಆಡಳಿತ ನಡೆಸುವಾಗ ಅದೇ ಸವಾಲು ಎದುರಾಗಿದೆ.

ಈಗಿನ ಪರಿಸ್ಥಿತಿಯಲ್ಲಿ ಸರ್ಕಾರದ ಪಾಲಿಗೆ ಅತಿದೊಡ್ಡ ಸಂದಿಗ್ಧತೆ ಏನೆಂದರೆ, ತಾನು ವಿರೋಧ ಪಕ್ಷದಲ್ಲಿದ್ದಾಗ ಮಮತಾ ಬ್ಯಾನರ್ಜಿ ಸರ್ಕಾರದ ಮೇಲೆ ಬಳಸಿದ ಅದೇ ಶಸ್ತ್ರಾಸ್ತ್ರಗಳನ್ನು ಈಗ ವಿರೋಧ ಪಕ್ಷಗಳು ತಮ್ಮ ವಿರುದ್ಧವೇ ಬಳಸುತ್ತಿವೆ. ಆರ್.ಜಿ. ಕರ್ ಪ್ರಕರಣದಲ್ಲಿ ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಒದಗಿಸುವುದಾಗಿ ವಚನ ನೀಡಿದ್ದ ಬಿಜೆಪಿ, ಬರುಯಿಪುರದ ಪ್ರಕರಣದಲ್ಲೂ ಅದೇ ರೀತಿಯಲ್ಲಿ ತ್ವರಿತ ನ್ಯಾಯ ಒದಗಿಸಬೇಕಾದ ಒತ್ತಡದಲ್ಲಿದೆ. ಒಂದು ವೇಳೆ ತನಿಖೆಯಲ್ಲಿ ಸಣ್ಣ ವಿಳಂಬವಾದರೂ ಅಥವಾ ಪೊಲೀಸ್ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡರೂ, ಅದು ವಿರೋಧ ಪಕ್ಷಗಳಿಗೆ ಸರ್ಕಾರದ ವರ್ಚಸ್ಸನ್ನು ಧ್ವಂಸ ಮಾಡಲು ದೊಡ್ಡ ಅಸ್ತ್ರವಾಗುತ್ತದೆ.

ರಾಜಕೀಯವಾಗಿ ಗಮನಿಸಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ, ಈ ಸರ್ಕಾರವು ಹಳೆಯ ರಾಜಕೀಯ ದ್ವೇಷಗಳನ್ನು ತೀರಿಸಿಕೊಳ್ಳುವ ಬದಲು ಆಡಳಿತಾತ್ಮಕವಾಗಿ ಎಷ್ಟು ಬಲಶಾಲಿಯಾಗಿದೆ ಎಂದು ಸಾಬೀತುಪಡಿಸಬೇಕಿದೆ. ಬಿಜೆಪಿ ಸರ್ಕಾರವು ಆರ್.ಜಿ. ಕರ್ ಪ್ರಕರಣದ ಸಂತ್ರಸ್ತೆಯ ತಾಯಿಯನ್ನು ಪ್ರತಿನಿಧಿಯಾಗಿಟ್ಟುಕೊಂಡು ರಾಜಕೀಯ ಮೈಲೇಜ್ ಪಡೆದಿತ್ತು. ಆಕೆಯನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದಕ್ಕಾಗಿ ಸರ್ಕಾರಕ್ಕೆ ಹೊಣೆಗಾರಿಕೆ ಹೆಚ್ಚಾಗಿದೆ. ಬರುಯಿಪುರ ಪ್ರಕರಣದ ನಂತರ ಸುವೇಂದು ಅಧಿಕಾರಿ ಅವರು SIT ರಚನೆ ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆಯ ಭರವಸೆಯನ್ನು ನೀಡಿದ್ದಾರಾದರೂ, ತಳಮಟ್ಟದಲ್ಲಿ ಅದನ್ನು ಕಾರ್ಯರೂಪಕ್ಕೆ ತರುವುದರ ಮೇಲೆ ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

image 64 2

ಈ ಸರ್ಕಾರದ ಮುಂದೆ ಇರುವ ಮತ್ತೊಂದು ಸವಾಲು ಅಂದರೆ, ಟಿಎಂಸಿ ಮತ್ತು ಎಡಪಕ್ಷಗಳ ಒಗ್ಗಟ್ಟಿನ ದಾಳಿಯನ್ನು ಎದುರಿಸುವುದು. ಮಹಿಳಾ ದೌರ್ಜನ್ಯ ಪ್ರಕರಣಗಳು ನಡೆದಾಗ, ಮಮತಾ ಬ್ಯಾನರ್ಜಿಯವರಂತಹ ಅನುಭವಿ ನಾಯಕರು ಪ್ರತಿಭಟನೆಗಳ ಮೂಲಕ ಸಾರ್ವಜನಿಕರನ್ನು ಹೇಗೆ ಪ್ರಚೋದಿಸಬಲ್ಲರು ಎಂಬುದನ್ನು ಬಿಜೆಪಿ ಈಗಾಗಲೇ ಅರಿತಿದೆ.

ಅಂದು ಆರ್.ಜಿ. ಕರ್ ಪ್ರಕರಣವನ್ನು ಮುಂದಿಟ್ಟುಕೊಂಡು “ಪರಿವರ್ತನೆ”ಯ ಮಂತ್ರ ಜಪಿಸುತ್ತಾ ಅಧಿಕಾರಕ್ಕೇರಿದ ಬಿಜೆಪಿಗೆ, ಇಂದು ಅದೇ ಸವಾಲುಗಳು ಸವಾಲಾಗಿ ಪರಿಣಮಿಸಿವೆ. ಸಂತ್ರಸ್ತೆಯ ಕುಟುಂಬದ ನೋವನ್ನು ರಾಜಕೀಯ ವೇದಿಕೆಯಾಗಿಸಿಕೊಂಡು, ನ್ಯಾಯದ ಭರವಸೆಯೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿದಿರುವ ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರಕ್ಕೆ, ಬರುಯಿಪುರ ಮತ್ತು ಮಾಲ್ಡಾದ ಘಟನೆಗಳು ಅಕ್ಷರಶಃ ‘ಅಗ್ನಿಪರೀಕ್ಷೆ’ಯಾಗಿ ನಿಂತಿವೆ. ವಿರೋಧ ಪಕ್ಷಗಳು ಎದುರು ನೋಡುತ್ತಿರುವ ಒಂದೇ ಒಂದು ತಪ್ಪು ಹೆಜ್ಜೆ ಕೂಡ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ತರಬಲ್ಲದು. ಭದ್ರತೆಯ ಭರವಸೆಯಲ್ಲಿದ್ದ ಜನ ಅದು ಹುಸಿಯಾಗುತ್ತಿದ್ದಂತೆಯೇ ಬೀದಿಗಿಳಿದಿದ್ದಾರೆ. ರಾಜಕೀಯ ಆರೋಪ-ಪ್ರತ್ಯಾರೋಪಗಳ ಆಟ ಒಂದು ಕಡೆಯಾದರೆ, ಜನರ ನಂಬಿಕೆ ಉಳಿಸಿಕೊಂಡು ಅವರಿಗೆ ಭದ್ರತೆ ಒದಗಿಸುವುದು ಈಗ ಸರ್ಕಾರದ ಮುಂದಿರುವ ದೊಡ್ಡ ಸವಾಲು.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು ಸಾಧ್ಯವಲ್ಲವೇ?

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ...

ಕ್ಯಾನ್ಸರ್ ರೋಗಿಗಳಿಗೆ ಗುಡ್‌ನ್ಯೂಸ್‌; ದುಬಾರಿ ಔಷಧಗಳ ಬೆಲೆ ಶೇ.70ರವರೆಗೆ ಇಳಿಕೆ?

ದೇಶದಲ್ಲಿ ದುಬಾರಿಯಾಗಿರುವ ಕೆಲವು ಕ್ಯಾನ್ಸರ್ ಔಷಧಗಳ ಬೆಲೆ ಶೀಘ್ರದಲ್ಲೇ ಭಾರಿ ಪ್ರಮಾಣದಲ್ಲಿ...