‌ʼಬ್ರಿಡ್ಜ್‌ ಮ್ಯಾನ್‌ʼ ಖ್ಯಾತಿಯ ಗಿರೀಶ್‌ ಭಾರದ್ವಾಜ್‌ ಅಸ್ತಂಗತ; ತೂಗುಸೇತುವೆಗಳ ಮೂಲಕ ಅಮರರಾದ ಎಂಜಿನಿಯರ್

Date:

ಡಾ. ಗಿರೀಶ್ ಭಾರದ್ವಾಜ್ ಅವರ ಅಗಲಿಕೆಯ ಸುದ್ದಿಯಿಂದ ತೂಗುಸೇತುವೆಗಳಿಂದ ಉಪಯೋಗ ಪಡೆದುಕೊಂಡ ಅಸಂಖ್ಯ ಹಳ್ಳಿಗರು, ಸ್ವಗ್ರಾಮದ ಜನರು, ದೇಶದ ಗಣ್ಯರು ಹಾಗೂ ತಾಂತ್ರಿಕ ಕ್ಷೇತ್ರದಲ್ಲಿ ಅವರೊಂದಿಗೆ ಕೆಲಸ ಮಾಡಿದ ಆಪ್ತರು ಕಂಬನಿ ಮಿಡಿದಿದ್ದಾರೆ. “ಕಾಯ ನಶಿಸಬಹುದು, ಕಾಯಕವಲ್ಲ” ಎಂಬಂತೆ ಅಗಲಿದ್ದೂ ಕಾಯವಷ್ಟೇ, ದೇಶದ ಹಳ್ಳಿ ಹಳ್ಳಿಗಳಲ್ಲಿ ಡಾ. ಗಿರೀಶ್ ಭಾರದ್ವಾಜ್ ನಿರ್ಮಿಸಿದ ತೂಗುಸೇತುವೆಗಳ ಮೇಲೆ ನಡೆವ ಪ್ರತಿ ಜೀವದೊಳಗೂ ಅವರ ಕಾಯಕದ ಮೂಲಕ ಗಳಿಸಿದ ಅಸ್ಮಿತೆ ಸದಾ ಜೀವಂತ.

ಸೇತುವೆ ಎಂಬುದು ಮನುಷ್ಯ ಜಗತ್ತನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಬೆಸೆವ ರೂಪಕ. ದಾರಿಯನ್ನಷ್ಟೇ ಅಲ್ಲ, ಭಾವವನ್ನೂ ಬೆಸೆವ ಹೊಣೆ ಹೊತ್ತ ಸೇತುವೆಗಳು ಇರದಿದ್ದರೆ ಹಳ್ಳಿಯ ನಡಿಗೆ ಪಟ್ಟಣವನ್ನು ಸೇರಿಸುವುದು, ದಟ್ಟ ಕಾಡು ಹಾಗೂ ಹರಿವ ಹೊಳೆಯಾಚೆಗಿನ ಬದುಕುಗಳು ತಮ್ಮ ಅಗತ್ಯಗಳನ್ನು ಸಂಧಿಸುವುದು ಅಸಾಧ್ಯವಾಗುತ್ತಿತ್ತು. ಈ ಅಸಾಧ್ಯತೆಯನ್ನು ಸಾಧ್ಯವಾಗಿಸುವ ಪಣ ತೊಟ್ಟು ನಿಂತವರಂತೆ ಕಾಣುತ್ತಿದ್ದರು ಡಾ. ಗಿರೀಶ್ ಭಾರದ್ವಾಜ್. ಇಂದು ಜುಲೈ 7ರ ಮುಂಜಾನೆ ಅವರು ಇಹಲೋಕ ತ್ಯಜಿಸಿದ್ದಾರೆ.

- Advertisement -

ಸುಳ್ಯದಲ್ಲಿ 1950 ಮೇ 2ರಂದು ಜನಿಸಿದ ಇವರು ಕಷ್ಟದ ವಾತಾವರಣದಲ್ಲಿ ಬೆಳೆದವರು. 11 ಜನ ಸಹೋದರರು ಮತ್ತು 3 ಜನ ಸಹೋದರಿಯರ ಒಡನಾಟದಲ್ಲಿ ಬೆಳೆದ ಇವರಿಗೆ ಎಳೆಯ ವಯಸ್ಸಿನಲ್ಲೇ ಮನೆಯ ಸಣ್ಣಪುಟ್ಟ ಹೊಣೆಗಳು ಹೆಗಲಿಗೆ ಬಿದ್ದಿದ್ದವು. ಮನೆಯವರಿಗೆ ಅಡುಗೆ ಮಾಡಿ ಶಾಲೆಗೆ ಅವಸರದಲ್ಲಿ ಓಡಿ, ಶಾಲೆಯಿಂದ ಬಂದ ಕೂಡಲೇ ಮತ್ತೆ ಅಡುಗೆಮನೆಯ ಜವಾಬ್ದಾರಿ ಗಿರೀಶರ ಬೆನ್ನಿಗಿತ್ತು. ಅವರೇ ಹೇಳುವಂತೆ ಶಾಲೆಯಲ್ಲಿ ಅತ್ಯಂತ ಬುದ್ಧಿವಂತ ವಿದ್ಯಾರ್ಥಿಯ ಸಾಲಿಗೆ ಸೇರದ, ಓದಿನಲ್ಲಿ ಹೆಚ್ಚೇನೂ ಆಸಕ್ತಿಯಿರದ ಇವರನ್ನು ಓದಲು ಉತ್ತೇಜಿಸಿದ್ದು ಇವರ ಸೋದರ ಮಾವ. ಅವರು ಬಿತ್ತಿದ ಎಂಜಿನಿಯರ್ ಕನಸನ್ನು ಹೊತ್ತು ಮಂಡ್ಯದ ಪಿ.ಇ.ಎಸ್. ಕಾಲೇಜು ಸೇರಿ 1973ರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...
ತೂಗುಸೇತುವೆ ೩

ಪದವಿ ಮುಗಿದ ನಂತರ ಎಲ್ಲರಂತೆ ಪಟ್ಟಣದಲ್ಲಿ ಉದ್ಯೋಗ ಅರಸಿಕೊಂಡು ಹೋಗದೆ ಊರಿನಲ್ಲೇ ಸಣ್ಣ ವರ್ಕ್‌ಶಾಪ್ ಸ್ಥಾಪಿಸಿ ಸ್ಥಳೀಯರಿಂದ ದೊರೆಯುವ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಸುಳ್ಯದಲ್ಲೇ ನೆಲೆಗೊಂಡರು. 1980ರಲ್ಲಿ ಆಟೋಮೊಬೈಲ್ ಕ್ಷೇತ್ರವನ್ನು ತೊರೆದು ತಾಂತ್ರಿಕ ಕ್ಷೇತ್ರವನ್ನೇ ಆರಿಸಿಕೊಂಡರು. ಪಂಪ್ ರಿಪೇರಿ, ಟಿಲ್ಲರ್ ರಿಪೇರಿ, ಗೋಬರ್ ಗ್ಯಾಸ್, ಮನೆ ವೈರಿಂಗ್ ಹೀಗೆ ಅವರು ಮುಟ್ಟದೆ ಉಳಿದ ಕೆಲಸವೇ ಇರಲಿಲ್ಲ.

Advertisements

ಕುಶಾಲನಗರದ ಕಾವೇರಿ ನಿಸರ್ಗಧಾಮದ ಬಳಿಯ ಸುಂಟಿಗುತ್ತಿ ಎಂಬಲ್ಲಿ 55 ಕಿ.ಮೀ. ಉದ್ದದ ಸೇತುವೆ ನಿರ್ಮಿಸಿದರು. ಇದು ಅವರ ಸೇತುವೆ ನಿರ್ಮಾಣದ ಮೊದಲ ಅಡಿಗಲ್ಲಾಗಿ ಉಳಿಯಿತು. ನಂತರ 1989ರಲ್ಲಿ ಸುಳ್ಯ ಸಮೀಪದ ಅರಂಬೂರಿನಲ್ಲಿ ಪಯಸ್ವಿನಿ ನದಿಗೆ ಕಡಿಮೆ ವೆಚ್ಚದಲ್ಲಿ ಸೇತುವೆ ನಿರ್ಮಿಸುವ ಮೂಲಕ ವಿನೂತನ ಸೇತುಕ್ರಾಂತಿಗೆ ಕಾರಣರಾದರು. ಈ ಸೇತುವೆಯ ಮೇಲೆ ಸುಧಾರಾಣಿ ಮತ್ತು ಶಶಿಕುಮಾರ್ ನಟನೆಯ ‘ಸ್ವಾತಿ’ ಸಿನಿಮಾದ ದೃಶ್ಯಗಳು ಚಿತ್ರೀಕರಣಗೊಂಡವು. ತರುವಾಯ ಹೊರಬಂದ ಪತ್ರಿಕಾ ಲೇಖನಗಳಿಂದ ನೆರೆಯ ಜಿಲ್ಲೆಗಳಿಂದ ಹೊರ ರಾಜ್ಯಗಳಿಗೂ ಅವರ ಕೀರ್ತಿ ಘನವಾಗಿ ಪಸರಿಸಿತು.

ಸರ್ಕಾರದ ನೆರವನ್ನು ಕಾಯದೆ, ತಮ್ಮದೇ ಜೇಬಿನಿಂದ ಹಣ ವ್ಯಯಿಸಿ ದಾರಿ ಕಾಣದ ಎಷ್ಟೋ ದಟ್ಟ ಅರಣ್ಯಗಳ ನಡುವಿನ ಗ್ರಾಮಗಳಿಗೆ ಸೇತುವೆಗಳನ್ನು ನಿರ್ಮಿಸಿದರು. ಮಳೆಗಾಲದಲ್ಲಿ ಪಶ್ಚಿಮ ಘಟ್ಟಗಳಲ್ಲಿ ತುಂಬಿ ಹರಿವ ನದಿಗಳಿಂದ ರಸ್ತೆಗಳು ಮುಳುಗುವ ಸಮಯದಲ್ಲಿ ಯಾರ ನೆರವಿಗೂ ಕಾದು ಕೂರದೆ, ಕಡಿಮೆ ವೆಚ್ಚದಲ್ಲಿ ಮರದ ಹಲಗೆ ಮತ್ತು ಹಗ್ಗಗಳನ್ನು ಬಳಸಿ ನದಿ ಹಾಗೂ ಹಳ್ಳಗಳಿಗೆ ತೂಗುಸೇತುವೆಗಳನ್ನು ನಿರ್ಮಿಸಿ ಹಳ್ಳಿಗರ ಸಂಕಷ್ಟಕ್ಕೆ ಪರಿಹಾರ ಒದಗಿಸಿದರು. ಯಾವುದೇ ಪ್ರಶಸ್ತಿ, ಹಿರಿಮೆ ಅಥವಾ ಗರಿಮೆಗಳ ದಾಸ್ಯಕ್ಕೆ ಒಳಗಾಗದ ಈ ಮೇರು ವ್ಯಕ್ತಿತ್ವ ರಾಜ್ಯದ ಜನರಿಂದ ಅಪಾರ ಪ್ರೀತಿ ಮತ್ತು ಗೌರವವನ್ನು ಸಂಪಾದಿಸಿತು.

ತೂಗು ಸೇತುವೆ

ಕೇರಳ, ಒಡಿಶಾ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ 140ಕ್ಕೂ ಹೆಚ್ಚು ಪರಿಸರ ಸ್ನೇಹಿ, ಕಡಿಮೆ ವೆಚ್ಚದ ತೂಗುಸೇತುವೆಗಳನ್ನು ನಿರ್ಮಿಸಿ ಹಳ್ಳಿಗಾಡಿನ ಕೃಷಿಕರು, ಶಾಲಾ ಮಕ್ಕಳು ಮತ್ತು ಕಾರ್ಮಿಕರ ದಿನನಿತ್ಯದ ಓಡಾಟವನ್ನು ಸಹನೀಯವಾಗಿಸಿ ‘ಬ್ರಿಡ್ಜ್ ಮ್ಯಾನ್’, ‘ತೂಗುಸೇತುವೆಗಳ ಸರದಾರ’ ಎಂದೇ ಹೆಸರಾದರು.

2017ರಲ್ಲಿ ಅವರ ಸೇವೆಯನ್ನು ಗುರುತಿಸಿ, ಗ್ರಾಮೀಣ ಸಂಪರ್ಕ ಮಾರ್ಗಗಳನ್ನು ಸುಗಮಗೊಳಿಸುವಲ್ಲಿ ಅವರು ನೀಡಿದ ಕೊಡುಗೆಗಳನ್ನು ಮನಗಂಡ ಸರ್ಕಾರವು ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲೊಂದಾದ ಪದ್ಮಶ್ರೀ ಗರಿಮೆಯನ್ನು ನೀಡಿ ಗೌರವಿಸಿತು. ಅಂದು ಪ್ರಶಸ್ತಿ ಸ್ವೀಕರಿಸಿ ದೆಹಲಿಯಿಂದ ಹಿಂದುರುಗಿದ ಭಾರದ್ವಾಜ್ ಅವರನ್ನು ಸುಳ್ಯದ ಜನ ಅದ್ದೂರಿಯಾಗಿ ಸ್ವಾಗತಿಸಿದರು. ನಾದವಾದ್ಯಗಳೊಂದಿಗೆ ಹೆಜ್ಜೆ ಹಾಕುತ್ತಾ ತಮ್ಮ ಹೃದಯವನ್ನೇ ಹೂಮಳೆಯಾಗಿ ಚೆಲ್ಲಿದರು.

ಇವರ ಅಗಲಿಕೆ ಒಬ್ಬ ತಾಂತ್ರಿಕ ಸಾಧಕನ ಅಗಲಿಕೆಯ ದುಃಖಕ್ಕಿಂತ ನೂರು ಪಟ್ಟು ಹೆಚ್ಚಿನದು. ಕಳೆದದ್ದು ಒಬ್ಬ ಅಸಾಧಾರಣ ಎಂಜಿನಿಯರ್‌ನ ಇರುವಿಕೆಯನ್ನಲ್ಲ, ಬದಲಿಗೆ ಗ್ರಾಮೀಣರ ಬದುಕಿನ ಕುರಿತು ತೀವ್ರ ಆಸ್ಥೆ ಹೊಂದಿದ್ದ ಮಾನವೀಯ ಮೌಲ್ಯಗಳಿಗೆ ಬದ್ಧರಾಗಿ ಬದುಕುತ್ತಿದ್ದ ನಿಸ್ವಾರ್ಥ ಮನೋಭಾವದ ಭಾವಸೇತುವನ್ನು. ಇದೇ ಕಾರಣಕ್ಕೆ ಸುಳ್ಯದ ಜನ ಅವರನ್ನು ಸುಳ್ಯದ ವಿಶ್ವೇಶ್ವರಯ್ಯ ಎಂದು ಪ್ರೀತಿಯಿಂದ ಕರೆಯುತ್ತಿದ್ದರು.

ಎಲ್ಲಿಂದೆಲ್ಲಿಗೆ ಬಂಧ ಬೆಸೆದಿತ್ತು ತೂಗುಸೇತು?

ಬಾಳೆಗದ್ದೆ- ಖಾಂಡ್ಯ ಸಂಪರ್ಕಿಸುವ ಸೇತುವೆ: ಗಿರೀಶ್‌ ಭಾರದ್ವಾಜ್‌ ಬಾಳೆಗದ್ದೆಯನ್ನು ಖಾಂಡ್ಯದೊಂದಿಗೆ ಸಂಪರ್ಕಿಸುವ ಸೇತುವೆಯನ್ನು ನಿರ್ಮಿಸಿದ್ದರು. ಈ ಸೇತುವೆ ದುರಸ್ತಿಗೆ ಬಂದಿದ್ದ ಸಂದರ್ಭದಲ್ಲಿ ಬಾಳೆಗದ್ದೆಯ ಎಂಜಿನಿಯರ್‌ ವಿದ್ಯಾರ್ಥಿನಿ ಸೇತುವೆ ಪುನರ್ನಿಮಾಣಕ್ಕೆ ಮನವಿ ಮಾಡಿದ್ದರು, ಈ ಸೇತುವೆಯಿಂದಲೇ ತಾನು ಎಂಜಿನಿಯರಿಂಗ್‌ ಕಲಿಯಲು ಸಾಧ್ಯವಾಯಿತು ನನ್ನಂತಹ ಹಲವು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಳ್ಳಿಗಳನ್ನು ಮುಖ್ಯ ಭೂಮಿಕೆಗೆ ಸಂಪರ್ಕಿಸುವ ಈ ತೂಗುಸೇತುವೆಗಳಿಂದ ಪ್ರಯೋಜನ ಪಡೆದಿದ್ದಾರೆ ಎಂದು ಸ್ಮರಿಸಿದ್ದರು.

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕು, ಮಂಗಳೂರು ತಾಲೂಕಿನ ಕುಪ್ಪೆಪದವು ಸೇರಿದಂತೆ ಪಶ್ಚಿಮ ಘಟ್ಟಗಳ
ಅತ್ಯಂತ ದುರ್ಗಮ ಹಳ್ಳಿಗಳಲ್ಲಿ ಇವರು ಹಲವಾರು ಸೇತುವೆಗಳನ್ನು ನಿರ್ಮಿಸಿದ್ದಾರೆ.

ದೇಲಂಪಾಡಿ ತೂಗುಸೇತುವೆ: ಕೇರಳದಲ್ಲಿ 30ಕ್ಕೂ ಹೆಚ್ಚು ಕಡಿಮೆ ವೆಚ್ಚದ ತೂಗು ಸೇತುವೆಗಳನ್ನು ನಿರ್ಮಿಸಿದರು. ಕಾಸರಗೋಡು ಜಿಲ್ಲೆ ದೇಲಂಪಾಡಿಯಲ್ಲಿ 105 ಮೀಟರ್ ತೂಗು ಪಾದಚಾರಿ ಸೇತುವೆ. ಇದು ಮಳೆಗಾಲದಲ್ಲಿ ಪಯಸ್ವಿನಿ ನದಿಯಿಂದ ಸಂಪರ್ಕ ಕಡಿತಗೊಂಡ ಗ್ರಾಮಸ್ಥರ ದಶಕಗಳ ಗೋಳನ್ನು ಪರಿಹರಿಸಿತು.

ಲಕ್ನವರಂ ತೂಗುಸೇತುವೆ: ಲಕ್ನವರಂ ತೆಲಂಗಾಣದ ವಾರಂಗಲ್‌ನ ನಕ್ಸಲ್ ಪ್ರಾಬಲ್ಯವಿರುವ ಈ ಪ್ರದೇಶ. ಇಲ್ಲಿ ಸೇತುವೆ ನಿರ್ಮಿಸಲು ನಿರ್ಮಾಣಕಾರರನ್ನು ಹುಡುಕುವುದು ಸರ್ಕಾರಕ್ಕೆ ಸವಾಲಿನ ಕೆಲಸವಾಗಿತ್ತು, ಆ ಸವಾಲನ್ನು ದಿಟ್ಟತನದಿಂದ ಸ್ವೀಕರಿಸಿದವರು ಗಿರೀಶ್‌ ಭಾರದ್ವಾಜ್‌. ಲಕ್ನವರಂ ಸೇತುವೆ ಇಂದು ಪ್ರವಾಸಿಗರ ಪ್ರಮುಖ ಆಕರ್ಷಣೀಯ ತಾಣಗಳ ಪಟ್ಟಿಯಲ್ಲಿದೆ. ಸುಮಾರು 160 ಮೀಟರ್ ಉದ್ದದ ಈ ತೂಗುಸೇತುವೆ ನೀರಿನ ಮಧ್ಯೆ ಇರುವ ಸುಂದರ ದ್ವೀಪಗಳಿಗೆ ಸಂಪರ್ಕಿಸುತ್ತದೆ.







WhatsApp Image 2026 03 09 at 18.17.26
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಪಶು ವೈದ್ಯರ ಖಾಲಿ ಹುದ್ದೆ ಭರ್ತಿಗೆ ರೈತಸಂಘ ಆಗ್ರಹ

ಪಶು ಇಲಾಖೆಯಲ್ಲಿ ಖಾಲಿ ಇರುವ ಪಶು ವೈದ್ಯರ ಹುದ್ದೆಗಳನ್ನು ತಕ್ಷಣ ಭರ್ತಿ...

ಉತ್ತರ ಕನ್ನಡದಲ್ಲಿ ಮೃತ್ಯುಕೂಪವಾಗಿರುವ NH-66: RSS ವರ್ತಕರ ಆಟ ಮತ್ತು IRB ಕಂಪನಿ ಕಾಟ!

ಉತ್ತರ ಕನ್ನಡದ ಭಟ್ಕಳದಿಂದ ಕಾರವಾರದ ತನಕದ ಸುಮಾರು 160 ಕಿಮೀ ಚತುಷ್ಪಥ...

‘ಸಮಸ್ತ’ ಆ್ಯಪ್ ಸಮಸ್ಯೆ ಪರಿಹರಿಸಿ, ಗೃಹಲಕ್ಷ್ಮಿ ಹೆಚ್ಚುವರಿ ಕೆಲಸ ಕೈಬಿಡಿ: ಆಶಾ ಕಾರ್ಯಕರ್ತೆಯರ ಆಗ್ರಹ

‘ಸಮಸ್ತ’ ಆ್ಯಪ್‌ನಲ್ಲಿ ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು, ಗೃಹಲಕ್ಷ್ಮಿ ಯೋಜನೆಯ...

ಇಳಕಲ್ | SIR ರದ್ದು, ಜ್ಞಾನೇಶ್ ಕುಮಾರ್ ವಜಾಕ್ಕೆ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಗಂಭೀರ ಲೋಪಗಳು...