ಅಬಕಾರಿ ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ; ಸದನದಲ್ಲೇ ವಿಪಕ್ಷಗಳ ರಾತ್ರಿ ಜಾಗರಣೆ

Date:

ಅಬಕಾರಿ ಇಲಾಖೆಯಲ್ಲಿ ಮದ್ಯ ಪರವಾನಗಿ ನೀಡಿಕೆ, ಅಧಿಕಾರಿಗಳ ವರ್ಗಾವಣೆಗಳಲ್ಲಿ ಲಂಚ-ಕಿಕ್‌ಬ್ಯಾಕ್ ಆರೋಪಗಳು ಕಳೆದ ಜನವರಿಯಿಂದಲೇ ಪ್ರಬಲವಾಗಿ ಕೇಳಿ ಬಂದವು. ಕರ್ನಾಟಕ ವೈನ್ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಗುರುಸ್ವಾಮಿ ಅವರ ಪತ್ರವೊಂದು 6000 ಕೋಟಿ ರೂಪಾಯಿ ಹಗರಣವನ್ನು ಉಲ್ಲೇಖಿಸಿತು. ಲೋಕಾಯುಕ್ತ ಪೊಲೀಸರು ಒಬ್ಬ ಅಬಕಾರಿ ಅಧಿಕಾರಿಯನ್ನು ಲಂಚ ತೆಗೆದುಕೊಳ್ಳುತ್ತಿದ್ದಾಗ ಬಂಧಿಸಿದರು.

- Advertisement -

ಕರ್ನಾಟಕ ವಿಧಾನಸಭೆಯಲ್ಲಿ ಫೆಬ್ರವರಿ 3 ರಾತ್ರಿ ಮತ್ತು 4ರ ಬೆಳಗ್ಗೆ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ನಡೆಸಿದ ಅಹೋರಾತ್ರಿ ಧರಣಿ ರಾಜ್ಯ ರಾಜಕೀಯದಲ್ಲಿ ಬಹಳಷ್ಟು ಸುದ್ದಿ ಮಾಡಿದೆ. ಅಬಕಾರಿ ಇಲಾಖೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕೇಳಿ ಬಂದ 6000 ಕೋಟಿ ರೂಪಾಯಿ ಕಿಕ್‌ಬ್ಯಾಕ್ ಪಡೆದ ಆರೋಪದ ಹಿನ್ನೆಲೆಯಲ್ಲಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ರಾಜೀನಾಮೆಗೆ ಒತ್ತಾಯಿಸಿ ವಿರೋಧ ಪಕ್ಷಗಳು ನಡೆಸಿದ ಈ ಪ್ರತಿಭಟನೆ ವಿಧಾನಸೌಧದೊಳಗೆ ರಾತ್ರಿ ಉಳಿದುಕೊಂಡು ನಿದ್ರಿಸುವುದು, ಬೆಳಗ್ಗೆ ವಾಕಿಂಗ್ ಇತ್ತು. ಅಧಿವೇಶನದ ಕೊನೆಯ ದಿನದಂದೇ ವಿಪಕ್ಷಗಳ ಸದ್ದು ಗದ್ದಲ ಆಡಳಿತ ಪಕ್ಷದ ನಿದ್ದೆಗೆಡಿಸಿದೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಅಬಕಾರಿ ಇಲಾಖೆಯಲ್ಲಿ ಮದ್ಯ ಪರವಾನಗಿ ನೀಡಿಕೆ, ಅಧಿಕಾರಿಗಳ ವರ್ಗಾವಣೆಗಳಲ್ಲಿ ಲಂಚ-ಕಿಕ್‌ಬ್ಯಾಕ್ ಆರೋಪಗಳು ಕಳೆದ ಜನವರಿಯಿಂದಲೇ ಪ್ರಬಲವಾಗಿ ಕೇಳಿ ಬಂದವು. ಕರ್ನಾಟಕ ವೈನ್ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಗುರುಸ್ವಾಮಿ ಅವರ ಪತ್ರವೊಂದು 6000 ಕೋಟಿ ರೂಪಾಯಿ ಹಗರಣವನ್ನು ಉಲ್ಲೇಖಿಸಿತು. ಲೋಕಾಯುಕ್ತ ಪೊಲೀಸರು ಒಬ್ಬ ಅಬಕಾರಿ ಅಧಿಕಾರಿಯನ್ನು ಲಂಚ ತೆಗೆದುಕೊಳ್ಳುತ್ತಿದ್ದಾಗ ಬಂಧಿಸಿದರು. ಜೊತೆಗೆ ಜಂಟಿ ಆಯುಕ್ತ ನಾಗರಾಜಪ್ಪ ಮತ್ತು ವಕೀಲರೊಬ್ಬರ ನಡುವಿನ ಆಡಿಯೋ ಟೇಪ್ ವೈರಲ್ ಆಯಿತು. ಆಡಿಯೋದಲ್ಲಿ 18 ಲಕ್ಷ ರೂಪಾಯಿ ಲಂಚದ ಬೇಡಿಕೆ, ಸಚಿವ ಮತ್ತು ಅವರ ಪುತ್ರ ವಿನಯ್‌ಗೆ ಹಣ ಹೋಗುತ್ತದೆ ಎಂಬ ಉಲ್ಲೇಖಗಳಿದ್ದವು. ವಿರೋಧ ಪಕ್ಷಗಳು ಇದನ್ನು ಆಧಾರವಾಗಿಟ್ಟುಕೊಂಡು ಸಚಿವರ ರಾಜೀನಾಮೆಗೆ ಪಟ್ಟು ಹಿಡಿದವು.

ಮಂಗಳವಾರ ಸದನ ಆರಂಭವಾದಾಗಲೇ ವಿರೋಧ ಪಕ್ಷ ನಾಯಕ ಆರ್. ಅಶೋಕ್ ಅವರು ಆಡಿಯೋ ಟ್ರಾನ್ಸ್‌ಕ್ರಿಪ್ಟ್ ಓದಿದರು, ಪೆನ್‌ಡ್ರೈವ್ ಸಲ್ಲಿಸಿದರು. ರಾಜ್ಯ ಅಬಕಾರಿ ಇಲಾಖೆ ಭ್ರಷ್ಟಾಚಾರದಲ್ಲಿ ಮುಂಚೂಣಿಯಲ್ಲಿದ್ದು, ತಿಮ್ಮಾಪುರ ಅವರಿಗೆ ಪಾಲು ಕೊಡಬೇಕೆಂಬ ಆಡಿಯೋ ವೈರಲ್ ಆಗಿದೆ. ಆ ಆಡಿಯೋ ದಾಖಲೆ ಈ ಪೆನ್‌ಡ್ರೈವ್‌ನಲ್ಲಿದೆ ಎಂದು ಆರ್ ಅಶೋಕ್​, ಸದನಕ್ಕೆ ಪೆನ್​ಡ್ರೈವ್ ತೋರಿಸಿದರು. “ನನ್ನ ಬಳಿ ಆ ಆಡಿಯೋದ ಪೆನ್ ಡ್ರೈವ್ ಇದೆ. ಇಷ್ಟಿದ್ರೂ ನಾನವನಲ್ಲ ಅಂತ ಸಚಿವರು ಹೇಳುತ್ತಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಪ್ರತಿ ತಿಂಗಳು ಒಂದೊಂದು ಅಂಗಡಿಯಿಂದ 10-15 ಸಾವಿರ ರೂ ಕಲೆಕ್ಷನ್ ಮಾಡಲಾಗ್ತಿದೆ. ಸರಾಸರಿ ಒಂದು ತಿಂಗಳಿ 21 ಕೋಟಿಯಂತೆ ವರ್ಷಕ್ಕೆ 252 ಕೋಟಿ ರೂ. ಕಲೆಕ್ಷನ್ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.

ಇದೇ ವೇಳೆ ಸಚಿವ ಆರ್.ಬಿ.ತಿಮ್ಮಾಪುರ ಅವರಿಂದ ಉತ್ತರ ನೀಡುವಂತೆ ಮತ್ತು ರಾಜೀನಾಮೆ ನೀಡುವಂತೆ ವಿಪಕ್ಷದವರು ಪಟ್ಟು ಹಿಡಿದರು. ಸ್ಪೀಕರ್ ಯು.ಟಿ. ಖಾದರ್ ಸಂಜೆ 6 ಗಂಟೆಗೆ ಸಚಿವರಿಂದ ಉತ್ತರ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ಸಂಜೆ ಆರು ಗಂಟೆಗೆ ತಮ್ಮ ವಿರುದ್ಧದ ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರಿಸಿದ ಸಚಿವ ಆರ್ ಬಿ ತಿಮ್ಮಾಪುರ ಅವರು, “ನಾನೇನು ತಪ್ಪು ಮಾಡಿಲ್ಲ. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ” ಎಂದರು. ಈ ಹಿಂದೆ ಶಶಿಕಲಾ ಜೊಲ್ಲೆ ಅವರ ವಿರುದ್ಧ ಮೊಟ್ಟೆ ಹಗರಣ ಕೇಳಿಬಂದಿತ್ತು. ಆಗ ಅವರು ರಾಜೀನಾಮೆ ನೀಡಿಲ್ಲ ಎಂದು ಅಬಕಾರಿ ಸಚಿವರು ಬಿಜೆಪಿ ಸದಸ್ಯರಿಗೆ ತಿರುಗೇಟು ನೀಡಿದರು.

ಸಚಿವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಮತ್ತು ಬಿಜೆಪಿ ಸದಸ್ಯರು ಸದನ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಸ್ಪೀಕರ್ ಯು.ಟಿ. ಖಾದರ್ ಸದನವನ್ನು ಮುಂದೂಡಿದರು. ಆದರೆ ಬಿಜೆಪಿ-ಜೆಡಿಎಸ್ ಶಾಸಕರು ಸದನದಿಂದ ಹೊರಗೆ ಹೋಗದೆ ಮೊಗಸಾಲೆಯಲ್ಲಿ ಉಳಿದುಕೊಂಡರು. ರಾತ್ರಿ ಊಟದ ನಂತರ ಶಾಸಕರು ವಿಧಾನಸಭೆ ಪ್ರವೇಶದ್ವಾರದಲ್ಲಿ ತಾಳ-ತಮಟೆ ಬಾರಿಸುತ್ತಾ, “ತಿಮ್ಮಾಪುರ್ ರಾಜೀನಾಮೆ ಕೊಡಬೇಕು!” ಎಂದು ಘೋಷಣೆ ಕೂಗಿದರು. ಬಳಿಕ ಅವರು ಸದನದೊಳಗೆ ಮತ್ತು ಮೊಗಸಾಲೆಯಲ್ಲಿ ಹಾಸಿಗೆಯನ್ನ ಹಾಸಿ ನಿದ್ರಿಸಿದರು. ಕೆಲವರು ಸೋಫಾಗಳಲ್ಲಿ, ಕೆಲವರು ನೆಲದ ಮೇಲೆ ಮಲಗಿದರು. ಬಿ.ವೈ. ವಿಜಯೇಂದ್ರ, ಆರ್. ಅಶೋಕ್ ಸೇರಿದಂತೆ ಹಲವು ನಾಯಕರು ರಾತ್ರಿ ಅಲ್ಲಿಯೇ ಕಳೆದರು.

ಬೆಳಗ್ಗೆ 8 ಗಂಟೆ ಸುಮಾರಿಗೆ ಎದ್ದ ಶಾಸಕರು ಚಹಾ ಕುಡಿದು ವಿಧಾನಸೌಧದ ಮುಂಭಾಗ ಮತ್ತು ಒಳ ಆವರಣದಲ್ಲಿ ವಾಕಿಂಗ್ ಮಾಡಿದರು. ಬಳಿಕ ಭಜನೆಗಳನ್ನು ಹಾಡುತ್ತಾ ಪ್ರತಿಭಟನೆ ಮುಂದುವರಿಸಿದರು. ಅವರುಗಳು ಹಿಡಿದ ಪ್ಲೇ ಕಾರ್ಡ್‌ಗಳಲ್ಲಿ “6000 ಕೋಟಿ ಹಗರಣ”, “ತಿಮ್ಮಾಪುರ್ ರಾಜೀನಾಮೆ ಕೊಡಬೇಕು” ಎಂದು ಬರೆದಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ “ಕೇವಲ ಆರೋಪಗಳ ಆಧಾರದ ಮೇಲೆ ರಾಜೀನಾಮೆ ಕೇಳುವುದು ಸರಿಯಲ್ಲ” ಎಂದಿದ್ದಾರೆ. ಕೆ.ಎಚ್. ಮುನಿಯಪ್ಪ ಅವರು “ಲೋಕಾಯುಕ್ತ ತನಿಖೆ ಮುಗಿಯಲಿ” ಎಂದು ಹೇಳಿದರು. ತಿಮ್ಮಾಪುರ್ ಅವರು ಪ್ರತಿಕ್ರಿಯಿಸಿ “ನಾನು ತಪ್ಪು ಮಾಡಿಲ್ಲ, ಹಿಂದೆಯೂ ಇಂತಹ ಆರೋಪಗಳು ಬಂದಿವೆ” ಎಂದು ಹೇಳಿದ್ದಾರೆ. 

ಫೆಬ್ರವರಿ 4ರಂದು ಸದನ ಮುಂದುವರಿದರೂ ವಿರೋಧ ಪಕ್ಷಗಳು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುವ ಸೂಚನೆ ನೀಡಿವೆ. “ಸಚಿವರು ರಾಜೀನಾಮೆ ನೀಡುವವರೆಗೆ ಧರಣಿ ಮುಂದುವರೆಯುತ್ತದೆ” ಎಂದು ಆರ್. ಅಶೋಕ್ ಹೇಳಿದ್ದಾರೆ.

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

SIR | ರಾಜ್ಯದಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು...