ದೆಹಲಿಯಲ್ಲಿ ಮತ್ತೊಂದು ಗ್ಯಾಂಗ್‌ರೇಪ್|‌ ನಿರ್ಭಯ ಹಾದಿಯಲ್ಲಿ ಮತ್ತಷ್ಟು ಸಂತ್ರಸ್ತೆಯರು; ಬದಲಾಗದ ವ್ಯವಸ್ಥೆ, ಅಳಿಯದ ಆತಂಕ

Date:

ಅತ್ಯಾಚಾರ ಪ್ರಕರಣಗಳು ಅಧಿಕವಾಗುತ್ತಿದ್ದರೂ ಆರೋಪಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಇಂದಿಗೂ ಕಡಿಮೆಯಾಗಿದೆ. ಇದರಿಂದಾಗಿ ಅಪರಾಧಿಗಳಲ್ಲಿ ಭಯ ಇಲ್ಲದಂತಾಗಿದೆ. ಸಂತ್ರಸ್ತರಿಗೆ ನ್ಯಾಯ ಮರೀಚಿಕೆಯಾಗುತ್ತಿದೆ. ಇಂದಿಗೂ ಈ ವ್ಯವಸ್ಥೆ ಬದಲಾಗುತ್ತಿಲ್ಲ, ಆತಂಕವೂ ಅಳಿಯುತ್ತಿಲ್ಲ.    

ದೇಶವನ್ನೇ ಬೆಚ್ಚಿಬೀಳಿಸಿದ ನಿರ್ಭಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಕೇವಲ ಒಂದು ಕ್ರೌರ್ಯವಾಗಿರದೆ, ಮಹಿಳೆಯರ ಸುರಕ್ಷತೆಯ ಬಗ್ಗೆ ದೇಶಾದ್ಯಂತ ಜಾಗೃತಿ ಮೂಡಿಸಲು ಕಾರಣವಾಯಿತು. ಆದರೆ, ಈಗ ನಾವು 2012ರ ನಿರ್ಭಯ ಪ್ರಕರಣವನ್ನು ಮತ್ತೆ ಮತ್ತೆ ನೆನೆಪಿಸಿಕೊಳ್ಳುವಂತಹ ಘಟನೆಗಳು ಪುನರಾವರ್ತನೆಯಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಮಹಿಳೆಯರಿಗೆ ಸುರಕ್ಷತೆಯಿಲ್ಲ, ನಾವು ಸುರಕ್ಷತೆ ನೀಡುತ್ತೇವೆ ಎಂದು ಆಗಾಗೇ ಹೇಳುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಕೊಂಚ ದೆಹಲಿ, ಇತರೆಡೆ ನಡೆಯುತ್ತಿರುವ ಈ ಭೀಕರ ಘಟನೆಗಳ ಬಗ್ಗೆ ಚಕಾರ ಎತ್ತದಿರುವುದು ಖೇದಕರ.

- Advertisement -

ದೆಹಲಿ ನಿರ್ಭಯ ಪ್ರಕರಣವು 2012ರ ಡಿಸೆಂಬರ್ 16ರಂದು ದೆಹಲಿಯ ಮುನಿರ್ಕಾ ಎಂಬಲ್ಲಿ ನಡೆಯಿತು. 23 ವರ್ಷದ ಫಿಸಿಯೋಥೆರಪಿ ವಿದ್ಯಾರ್ಥಿನಿ ‘ನಿರ್ಭಯ’ ಅವರ ಸ್ನೇಹಿತ ದೆಹಲಿಯಲ್ಲಿ ಸಿನಿಮಾ ಮುಗಿಸಿ ಮನೆಗೆ ಮರಳಲು ಖಾಸಗಿ ಬಸ್ ಹತ್ತಿದ್ದರು. ಬಸ್ಸಿನಲ್ಲಿದ್ದ ಆರು ಜನ ಕಾಮುಕರು ಯುವತಿ ಮತ್ತು ಆಕೆಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿ, ಚಲಿಸುತ್ತಿದ್ದ ಬಸ್ಸಿನಲ್ಲೇ ಯುವತಿ ಮೇಲೆ ಭೀಕರವಾಗಿ ಭೀಕರವಾಗಿ ಸಾಮೂಹಿಕ ಅತ್ಯಾಚಾರ ಎಸಗಿದರು. ಕಬ್ಬಿಣದ ರಾಡ್‌ನಿಂದ ಯೋನಿಯೊಳಗೆ ತೀವ್ರವಾದ ಗಾಯ ಮಾಡಿದ್ದರು. ಬಳಿಕ ಇಬ್ಬರನ್ನೂ ರಸ್ತೆಯ ಬದಿಗೆ ಎಸೆದು ಪರಾರಿಯಾಗಿದ್ದರು. ಆಂತರಿಕ ಗಾಯಗಳಿಂದಾಗಿ ಜ್ಯೋತಿ ಸಿಂಗ್ ಅವರು 2012ರ ಡಿಸೆಂಬರ್ 29ರಂದು ಸಾವನ್ನಪ್ಪಿದರು. ಈ ಭೀಕರ ಕೃತ್ಯ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿ, ಕಠಿಣ ಕಾನೂನುಗಳ ಜಾರಿಗೆ ನಾಂದಿ ಹಾಡಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಇದನ್ನು ಓದಿದ್ದೀರಾ? ಅತ್ಯಾಚಾರ ಪ್ರಕರಣ | ಭಾರೀ ಪ್ರತಿಭಟನೆಯಾದರೆ ಮಾತ್ರ ತ್ವರಿತ ವಿಚಾರಣೆಯೇ?!

ಕಠಿಣ ಕಾನೂನು ಜಾರಿಯಾದರೂ ಇಂತಹ ಘಟನೆಗಳು ದೇಶದಲ್ಲಿ ಮರುಕಳಿಸಿದೆ. 2020ರಲ್ಲಿ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ 17 ವರ್ಷದ ದಲಿತ ಯುವತಿಯ ಮೇಲೆ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಸಂತ್ರಸ್ತೆಯ ಮರಣದ ನಂತರ, ಪೊಲೀಸರು ಆಕೆಯ ಕುಟುಂಬದ ಒಪ್ಪಿಗೆಯಿಲ್ಲದೆ ಮಧ್ಯರಾತ್ರಿಯಲ್ಲಿ ಶವಸಂಸ್ಕಾರ ಮಾಡಿದ್ದರು. ಪ್ರಕರಣದ ಪ್ರಮುಖ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಉಳಿದವರು ಖುಲಾಸೆಗೊಂಡಿದ್ದಾರೆ. ಸಂತ್ರಸ್ತೆ ಕುಟುಂಬದ ಪಾಲಿಗೆ ನ್ಯಾಯ ಇನ್ನೂ ಮರೀಚಿಕೆ.

ಇದೀಗ ದೆಹಲಿಯಲ್ಲಿ ನಿರ್ಭಯ ಪ್ರಕರಣವನ್ನು ನೆನಪಿಸುವ ಪೈಶಾಚಿಕ ಕೃತ್ಯ ನಡೆದಿದೆ. ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಮಹಿಳೆಯನ್ನು ಎಳೆದುಕೊಂಡು ಹೋಗಿ ಚಲಿಸುತ್ತಿದ್ದ ಬಸ್‌ನಲ್ಲಿ ಇಬ್ಬರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸದ್ಯ ಆರೋಪಿಗಳಾದ ಬಸ್ ಚಾಲಕ, ನಿರ್ವಾಹಕನನ್ನು ಬಂಧಿಸಲಾಗಿದೆ.

ದೇಶದಲ್ಲಿ ಅತ್ಯಾಚಾರ ಪ್ರಕರಣಗಳ ಹೆಚ್ಚಳ

ದೇಶದಲ್ಲಿ ಮಹಿಳೆಯರ ವಿರುದ್ಧದ ದೌರ್ಜನ್ಯಗಳು, ವಿಶೇಷವಾಗಿ ಅತ್ಯಾಚಾರ ಪ್ರಕರಣಗಳು ಕಳವಳಕಾರಿಯಾಗಿ ಮುಂದುವರಿಯುತ್ತಿವೆ ಎಂಬುದನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿದ ಇತ್ತೀಚಿನ ದತ್ತಾಂಶಗಳು ದೃಢಪಡಿಸುತ್ತವೆ. ಎನ್‌ಸಿಆರ್‌ಬಿಯ ಕ್ರೈಮ್ ಇನ್ ಇಂಡಿಯಾ’ (ಭಾರತದಲ್ಲಿ ಅಪರಾಧ ಪ್ರಕರಣಗಳು) ವರದಿ ಪ್ರಕಾರ, ದೇಶದಲ್ಲಿ ಪ್ರತಿ ದಿನ ಸರಾಸರಿ 85 ರಿಂದ 90 ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. ಅಂದರೆ ಅಂದರೆ ಪ್ರತಿ 15 ರಿಂದ 16 ನಿಮಿಷಕ್ಕೊಮ್ಮೆ ಒಂದು ಪ್ರಕರಣ ವರದಿಯಾಗುತ್ತಿದೆ.

2022ರಲ್ಲಿ ಸುಮಾರು 31,516 ಪ್ರಕರಣಗಳು ದಾಖಲಾಗಿದ್ದರೆ, 2024ರ ವೇಳೆಗೆ ಈ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ವಿಶೇಷವಾಗಿ ಮಹಿಳೆಯರ ವಿರುದ್ಧದ ಒಟ್ಟು ಅಪರಾಧಗಳ ಸಂಖ್ಯೆ ವರ್ಷಕ್ಕೆ 4.45 ಲಕ್ಷಕ್ಕೂ ಅಧಿಕವಾಗಿದೆ. ರಾಜಸ್ಥಾನವು ದೇಶದಲ್ಲೇ ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗುವ ರಾಜ್ಯವಾಗಿ ಮುಂದುವರಿದಿದೆ. ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶವು ನಂತರದ ಸ್ಥಾನಗಳಲ್ಲಿವೆ. ಮೆಟ್ರೋ ನಗರಗಳ ಪೈಕಿ ದೆಹಲಿಯು ಮಹಿಳೆಯರ ಪಾಲಿಗೆ ಅತಿ ಹೆಚ್ಚು ಅಸುರಕ್ಷಿತ ನಗರವಾಗಿ ಮುಂದುವರಿದಿದೆ.

ಇದನ್ನು ಓದಿದ್ದೀರಾ? ತುಮಕೂರು | ಪೋಕ್ಸೊ ಪ್ರಕರಣ ಮರೆಮಾಚಿದ ಪೊಲೀಸರು; ಅಧಿಕಾರಿಗಳ ವಿರುದ್ಧ ಸೇವಾ ಕೇಂದ್ರ ಆಕ್ರೋಶ

ಅತ್ಯಂತ ಆಘಾತಕಾರಿ ವಿಷಯವೆಂದರೆ, ದಾಖಲಾದ ಪ್ರಕರಣಗಳಲ್ಲಿ ಸುಮಾರು 94% ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಅಪರಾಧಿಗಳು ಸಂತ್ರಸ್ತೆಗೆ ಮೊದಲೇ ಪರಿಚಯವಿರುವವರಾಗಿದ್ದಾರೆ. ಇದರಲ್ಲಿ ಕುಟುಂಬದ ಸದಸ್ಯರು, ಸ್ನೇಹಿತರು, ನೆರೆಹೊರೆಯವರು ಅತ್ಯಾಚಾರ ಮಾಡಿದ ಪ್ರಕರಣಗಳು ಹೆಚ್ಚಾಗಿದೆ. ಇನ್ನು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು (POCSO Act) 2023-24ರಲ್ಲಿ ಗಣನೀಯವಾಗಿ ಅಂದರೆ ಸುಮಾರು 9.2ರಷ್ಟು ಹೆಚ್ಚಳ ಕಂಡಿದೆ.

ಅತ್ಯಾಚಾರ ಪ್ರಕರಣಗಳು ಅಧಿಕವಾಗುತ್ತಿದ್ದರೂ ಆರೋಪಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಇಂದಿಗೂ ಕಡಿಮೆಯಾಗಿದೆ. ಆರೋಪಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಶೇ 27-30ರ ಆಸುಪಾಸಿನಲ್ಲಿದೆ. ಇದು ಅಪರಾಧಿಗಳಲ್ಲಿ ಭಯವಿಲ್ಲದಂತೆ ಮಾಡಿದೆ. ನ್ಯಾಯಾಲಯಗಳಲ್ಲಿ ಲಕ್ಷಾಂತರ ಪ್ರಕರಣಗಳು ಬಾಕಿ ಇದೆ. ಸಂತ್ರಸ್ತರಿಗೆ ನ್ಯಾಯ ಮರೀಚಿಕೆಯಾಗುತ್ತಿದೆ. ಇಂದಿಗೂ ಈ ವ್ಯವಸ್ಥೆ ಬದಲಾಗುತ್ತಿಲ್ಲ, ಆತಂಕವೂ ಅಳಿಯುತ್ತಿಲ್ಲ.

ಹೀಗೆ ಹತ್ರಾಸ್, ದಿಶಾ ಪ್ರಕರಣ, ಕಥುವಾ ಪ್ರಕರಣ, ಉನ್ನಾಂವ್ ಅತ್ಯಾಚಾರ ಪ್ರಕರಣ, ಕೋಲ್ಕತ್ತಾ ವೈದ್ಯೆಯ ಪ್ರಕರಣ ಹೀಗೆ ಬಹುತೇಕ ಪ್ರಕರಣಗಳು ದೇಶವನ್ನು ಬೆಚ್ಚಿ ಬೀಳಿಸಿದೆ. ಪಶುವೈದ್ಯೆಯೊಬ್ಬರನ್ನು ಅಪಹರಿಸಿ, ಅತ್ಯಾಚಾರ ಮಾಡಿ ನಂತರ ಕೊಲೆ ಮಾಡಿ ಸುಟ್ಟ ದಿಶಾ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ಪೊಲೀಸರ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದರು. ಈ ಎನ್‌ಕೌಂಟರ್ ಸಂಸ್ಕೃತಿಯನ್ನೂ ನಾವು ಒಪ್ಪಲಾಗದು. ಈ ಪ್ರಕರಣ ಹೊರತುಪಡಿಸಿ ಬಹುತೇಕ ಪ್ರಕರಣಗಳಲ್ಲಿ ಪ್ರಬಲ ವ್ಯಕ್ತಿಗಳ, ರಾಜಕಾರಣಿಗಳ ಕೈವಾಡವಿದೆ. ಈ ಪ್ರಬಲರು ತಮ್ಮ ಬಲ ಪ್ರಯೋಗಿಸಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಈ ಕಾಮುಕರಿಗೆ ರಕ್ಷಣೆ ನೀಡುವುದೇ ಈ ಮೋದಿ ಸರ್ಕಾರ ಅಲ್ಲವೇ?

ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಮುಖವಾಗಿ ಮಹಿಳೆಯರ ಸುರಕ್ಷತೆಯ ಪ್ರಸ್ತಾಪ ಮಾಡಿ ಈ ಹಿಂದಿನ ಟಿಎಂಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತ್ತು. ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಬಳಿಕ ಮಹಿಳೆಯರು ಮಧ್ಯರಾತ್ರಿಯಲ್ಲೂ ಸುರಕ್ಷಿತವಾಗಿ ಸಂಚರಿಸಬಹುದು ಮತ್ತು ಸ್ಕೂಟರ್ ಓಡಿಸಬಹುದು ಎಂದು ಅಮಿತ್ ಶಾ ಭರವಸೆ ನೀಡಿದ್ದರು. ಆದರೆ ಇದೇ ಬಿಜೆಪಿ ಸರ್ಕಾರವಿರುವ ದೆಹಲಿಯಲ್ಲಿ ನಡೆಯುತ್ತಿರುವುದೇನು? ಬಂಗಾಳದಲ್ಲಿ ಅಮಿತ್ ಶಾ ನೀಡುವುದಾಗಿ ಹೇಳುವ ಸುರಕ್ಷತೆಯನ್ನು ದೆಹಲಿಯಲ್ಲಿ ಬಿಜೆಪಿ ಸರ್ಕಾರ ನೀಡಲಾಗದೆ?

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು...

ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ ಆಶ್ರಮ’

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್...

ಸ್ಮರಣೆ | ʼಗಾಂಧಿ ನೀ ನಮ್ಮೆಲ್ಲರೊಳಗೂ ಇರುವೆʼ

ಗಾಂಧಿ ನಿನ್ನ ಚಾಳೀಸಿನೊಳಗೆ ತೂರಿಕೊಂಡ ಸ್ವಚ್ಚ ಭಾರತವಿನ್ನೂ ಚರಂಡಿಯಲ್ಲಿ ಹೊರಳಾಡುತ್ತಿದೆ. ಕಪ್ಪು...

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌: ಯಾಕೀ ವಿವಾದ?

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ....