ಕ್ಷಮೆ ಕೇಳಿದರೂ ನಿಲ್ಲದ ಬೇಟೆ: ʼಭಕ್ತಗಣʼ ಕಲಿತದ್ದು ಇದೇನಾ?

Date:

“ಬೇಟಿ ಬಚಾವೋ, ಬೇಟಿ ಪಢಾವೋ” ಎಂಬ ಘೋಷಣೆಯ ಹಿಂದೆ ನಿಜವಾಗಿಯೂ ಹೆಣ್ಣುಮಕ್ಕಳ ಸುರಕ್ಷತೆ, ಘನತೆ ಮತ್ತು ಮಾನಸಿಕ ನೆಮ್ಮದಿಯನ್ನು ಕಾಪಾಡುವ ಬದ್ಧತೆ ಇದೆಯೇ? ಒಂದು ಅಪ್ರಾಪ್ತ ಬಾಲಕಿ ಸಾರ್ವಜನಿಕವಾಗಿ ಕ್ಷಮೆ ಕೇಳಿದ ಬಳಿಕವೂ ಆಕೆಯ ವಿರುದ್ಧದ ದ್ವೇಷ ನಿಲ್ಲದಿದ್ದರೆ, ಆ ಘೋಷಣೆಯ ನೈತಿಕ ಅರ್ಥವೇನು ಪ್ರಶ್ನೆಯೂ ಈಗ ಮುನ್ನೆಲೆಗೆ ಬರುತ್ತಿದೆ.

- Advertisement -

ಒಂದು 15 ವರ್ಷದ ಬಾಲಕಿಯ ಆವೇಗದ ಮಾತು, ಅದಕ್ಕೆ ಪ್ರತಿಯಾಗಿ ದೇಶವ್ಯಾಪಿ ಎದ್ದ ವಿರೋಧದ ಬಿರುಗಾಳಿ, ಆನ್‌ಲೈನ್ ಟ್ರೋಲ್ ಪಡೆಗಳ ಬೆದರಿಕೆ, ಕುಟುಂಬವನ್ನೇ ಊರು ಬಿಡುವಂತೆ ಮಾಡಿದ ಡಿಜಿಟಲ್ ಬೇಟೆ, ಕೊನೆಗೆ ಪ್ರಧಾನಮಂತ್ರಿಯವರ ಸಂದೇಶ.. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯವನ್ನು ಪ್ರಸ್ತುತ ಹೇಗೆ ಸ್ವೀಕರಿಸಲಾಗುತ್ತಿದೆ, ಹೆಣ್ಣುಮಕ್ಕಳ ಘನತೆಯ ಬಗ್ಗೆ ನಾಯಕರ ಬದ್ಧತೆ ಎಷ್ಟಿದೆ, ಆ ನಾಯಕರನ್ನು ಪೂಜಿಸುವ ʼಭಕ್ತಗಣʼದ ಮನೋಭಾವ ಎಷ್ಟು ಅಪಾಯಕಾರಿ ಮಟ್ಟಕ್ಕೆ ಬೆಳೆದಿದೆ ಮತ್ತು ರಾಜಕೀಯ ಬೆಂಬಲ ಎಂಬುದು ಯಾವ ಹಂತದಲ್ಲಿ ಅಂಧ ನಿಷ್ಠೆಯಾಗಿ ಪರಿವರ್ತನೆಯಾಗುತ್ತಿದೆ ಎಂಬುದನ್ನು ಬಿಚ್ಚಿಟ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ರಾಮದುರ್ಗ, ಸವದತ್ತಿ ಬರ ಘೋಷಣೆಗೆ ರೈತರ ಆಗ್ರಹ: 10...

"ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ ಅದು ಆಗಿಲ್ಲ. ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಇನ್ನೂ ಅವಕಾಶವಿದೆ" ಎಂದು ಕೃಷಿ ಅಧಿಕಾರಿಗಳು ಹೇಳಿದರು. ಮುಂಗಾರು ಆರಂಭದಲ್ಲಿ ಉತ್ತಮ...

ಕರಗುವ ಹಿಮಾಲಯ, ಕುಸಿಯುವ ಆರ್ಥಿಕತೆ: ಹಿಮಪ್ರಳಯದ ಹಾದಿಯಲ್ಲಿ ಭಾರತದ...

ಹಿಮಾಲಯವು ಕೇವಲ ಮಂಜಿನ ಬೆಟ್ಟಗಳ ಸಮೂಹವಲ್ಲ; ಅದು ಭಾರತದ ಆರ್ಥಿಕ ಸ್ಥಿರತೆ, ಆಹಾರ ಭದ್ರತೆ ಮತ್ತು ಶಕ್ತಿ ಭದ್ರತೆಯ ತಾಣ. ಇಂದಿನ ಜಾಗತಿಕ ತಾಪಮಾನ ಏರಿಕೆಯ ಸವಾಲನ್ನು ಭಾರತವು ಕೇವಲ ಪರಿಸರ ಸಮಸ್ಯೆಯಾಗಿ...

ಈ ದಿನ ಕವಿತೆ | ಇಸ್ರೇಲಿನ ವಾಯುದಾಳಿಯ ರಾತ್ರಿಯಲಿ...

ಈ ಬಾರಿ ಪ್ಯಾಲೆಸ್ತೀನ್‌ನ ಕವಿ ಮೊಸಾಬ್ ಅಬು ತೋಹಾ ಅವರ ಕವನವನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ತಂದಿದ್ದಾರೆ ಸಿ ಎಚ್‌ ಭಾಗ್ಯ ಅವಳು ತನ್ನ ಹಾಸಿಗೆಯ ಸುತ್ತಾ ಇರುವ ಮಕ್ಕಳನ್ನು ಒಟ್ಟೈಸುವಳು.ಹೊಟೇಲ್ ಬಿಡುವ...

‘ನೀಟ್’ ಪರೀಕ್ಷೆಯ ಅಕ್ರಮಗಳ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿ ಸಮುದಾಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗಳು ನಡೆದಿದ್ದವು. ಈ ಪ್ರತಿಭಟನಾ ಸ್ಥಳಕ್ಕೆ ತನ್ನ ಸ್ನೇಹಿತೆಯರೊಂದಿಗೆ ತೆರಳಿದ್ದ ನೋಯ್ಡಾದ ಹದಿನೈದು ವರ್ಷದ ಬಾಲಕಿ ರುಚಿಕಾ ಸಿಂಗ್, ಆವೇಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಳು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿತ್ತು.

ಬೌದ್ಧಿಕವಾಗಿ ಪರಿಪಕ್ವಗೊಳ್ಳದ, ತಕ್ಷಣದ ಭಾವನೆಗಳಿಗೆ ಅಥವಾ ಗುಂಪಿನ ಪ್ರಭಾವಕ್ಕೆ ಸುಲಭವಾಗಿ ಒಳಗಾಗುವ ಹದಿಹರೆಯದ ವಯಸ್ಸಿನಲ್ಲಿ ಆಕೆ ಸ್ಥಳಕ್ಕೆ ತೆರಳಿದಾಗ, ಅಲ್ಲಿನ ಕೆಲ ವ್ಯಕ್ತಿಗಳು ಪ್ರತಿಭಟನೆ ಕುರಿತು ಆಕೆಯ ಪ್ರತಿಕ್ರಿಯೆ ಪಡೆಯಲು ಮುಂದಾದರು. ಆ ವೇಳೆ ಆವೇಗದಲ್ಲಿ ಆಕೆ ಆಡಿದ ಮಾತುಗಳು ಮುಂದೆ ಆಕೆಯ ನೆಮ್ಮದಿಯನ್ನೇ ಕಸಿದುಕೊಂಡವು. ಈ ವಿಡಿಯೋ ಭಾರೀ ವಿವಾದಕ್ಕೆ ಕಾರಣವಾಗಿ, ದೇಶಾದ್ಯಂತ ತೀವ್ರ ಆಕ್ರೋಶ ಹಾಗೂ ಚರ್ಚೆಗೆ ಗ್ರಾಸವಾಯಿತು. ಆರಂಭದಲ್ಲಿ ಆಕೆಯ ವಿರುದ್ಧ ಕಾನೂನು ಕ್ರಮಗಳು ಮತ್ತು ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆಗಳು ನಡೆದವು. ಆದರೆ, ತಾನು ಬಾಲಕಿಯೆಂದೂ, ಅರಿಯದ ವಯಸ್ಸಿನಲ್ಲಿ ಆಡಿದ ಮಾತುಗಳಿಗೆ ಪಶ್ಚಾತಾಪವಿದೆ ಎಂದೂ ಆಕೆ ಮತ್ತು ಆಕೆಯ ತಾಯಿ ಬಹಿರಂಗವಾಗಿ ಕ್ಷಮೆಯಾಚಿಸಿದರು.

ಸಾಮಾಜಿಕ ಜಾಲತಾಣಗಳು ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಇರುವ ವೇದಿಕೆ ನಿಜ. ಅದೇ ವೇಳೆ ಅದು ದ್ವೇಷ ಮತ್ತು ಅಸಹಿಷ್ಣುತೆಯ ಅಖಾಡವಾಗಿ ಬದಲಾಗುತ್ತಿರುವುದೂ ನಿಜ. ವಿಡಿಯೋ ವೈರಲ್ ಆದ ತಕ್ಷಣ, ಹಿಂದೆ ಮುಂದೆ ಯೋಚಿಸದ ಆನ್‌ಲೈನ್ ಟ್ರೋಲ್ ಪಡೆಗಳು, ಕೆಲ ಮೋದಿ ಭಕ್ತರು, ಬಿಜೆಪಿ ಬೆಂಬಲಿಗರು ಆ ಮಗುವಿನ ಮೇಲೆ ಮುಗಿಬಿದ್ದರು. ಆಕೆಯ ಮೊಬೈಲ್ ಸಂಖ್ಯೆಯನ್ನು ಸಾರ್ವಜನಿಕವಾಗಿ ಸೋರಿಕೆ ಮಾಡಿ, ದೈಹಿಕ ಹಲ್ಲೆ ಹಾಗೂ ಅತ್ಯಾಚಾರದ ಬೆದರಿಕೆಗಳನ್ನು ಒಡ್ಡುವ ಮಟ್ಟಕ್ಕೆ ಇಳಿದರು. ತಪ್ಪಿನ ಅರಿವಾಗಿ ಆ ಹೆಣ್ಣು ಮಗು ಸಾರ್ವಜನಿಕವಾಗಿ ಕೈಮುಗಿದು, ಕಣ್ಣೀರಿನೊಂದಿಗೆ ತನ್ನ ಜೀವನದ “ಮೊದಲ ಮತ್ತು ಕೊನೆಯ ತಪ್ಪು” ಎಂದು ಕ್ಷಮೆ ಯಾಚಿಸಿದರೂ, ಆನ್‌ಲೈನ್‌ನಲ್ಲಿ ಆಕೆಯ ಮೇಲಿನ ಬೇಟೆ ನಿಲ್ಲಲಿಲ್ಲ. ಪರಿಣಾಮವಾಗಿ, ಆಕೆಯ ಕುಟುಂಬವು ತಮ್ಮ ವಾಸಸ್ಥಳವನ್ನು ತೊರೆದು, ಮುಖ ಮುಚ್ಚಿಕೊಂಡು, ದಿಕ್ಕು ತೋಚದೆ ಬದುಕುವ ದುಸ್ಥಿತಿ ನಿರ್ಮಾಣವಾಯಿತು. “ಎರಡನೇ ಜನ್ಮ ಸಿಕ್ಕಂತಾಗಿದೆ” ಎಂದು ಆ ಬಾಲಕಿ ಹಾಗೂ ಆಕೆಯ ತಾಯಿ ಕಣ್ಣೀರಿಟ್ಟಿರುವುದನ್ನು ನೋಡಿದರೆ, ಆಕೆಯ ಮೇಲೆ ಬಿದ್ದ ಮಾನಸಿಕ ಆಘಾತ ಮತ್ತು ಭಯದ ತೀವ್ರತೆ ಎಷ್ಟಿತ್ತು ಎಂಬುದನ್ನು ಊಹಿಸಬಹುದು.

ಘಟನೆ ಆದ ಬಳಿಕ ಪ್ರಧಾನಿ ಮೋದಿ ಪ್ರತಿಕ್ರಿಯಿಸಿ, “ತಮ್ಮ ಹಾಗೂ ತಮ್ಮ ದಿವಂಗತ ತಾಯಿಯ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿದ “ದಾರಿತಪ್ಪಿದ ಮಕ್ಕಳನ್ನು” ದೊಡ್ಡ ಮನಸ್ಸಿನಿಂದ ಕ್ಷಮಿಸಬೇಕು ಮತ್ತು ಅವರನ್ನು ದಂಡಿಸುವ ಬದಲು ಪ್ರೀತಿಯಿಂದ ತಿದ್ದಬೇಕು ಎಂದರು. ದೇಶದಲ್ಲಿ ನೀಟ್ (NEET) ಪರೀಕ್ಷೆಯ ಅಕ್ರಮಗಳು, ನಿರುದ್ಯೋಗ ಮತ್ತು ಪರೀಕ್ಷಾ ವ್ಯವಸ್ಥೆಯ ಲೋಪಗಳಿಂದಾಗಿ ಹತಾಶರಾಗಿ ಆತ್ಮಹತ್ಯೆ ಮಾಡಿಕೊಂಡ ಅಸಂಖ್ಯಾತ ಯುವ ವಿದ್ಯಾರ್ಥಿಗಳ ಸಾವಿನ ನೈತಿಕ ಹೊಣೆಯನ್ನು ಪ್ರಧಾನಿಯವರು ಹೊತ್ತು, ಇಡೀ ದೇಶದ ಜನತೆಯಲ್ಲಿ ಸ್ವತಃ ಅವರೇ ಕ್ಷಮೆ ಯಾಚಿಸಬೇಕು ಎಂದು ಪ್ರತಿಭಟನಾಕಾರರು ಮತ್ತು ವಿರೋಧ ಪಕ್ಷಗಳು ಆಗ್ರಹಿಸುತ್ತಿವೆ. ಇಂತಹ ಗಂಭೀರ ರಾಷ್ಟ್ರೀಯ ಸಮಸ್ಯೆಗಳ ಸಂದರ್ಭದಲ್ಲಿ, ಸರ್ಕಾರದ ವೈಫಲ್ಯಗಳಿಗೆ ಹೊಣೆಗಾರರಾಗಬೇಕಾದವರು ತಮ್ಮ ಮೇಲಿನ ವೈಯಕ್ತಿಕ ಟೀಕೆಗಳಿಗೆ ಪ್ರತಿಕ್ರಿಯಿಸಿ ಮಕ್ಕಳನ್ನು ಕ್ಷಮಿಸಿದ್ದೇನೆ ಎಂದು ಬಿಂಬಿಸುವುದು ಎಷ್ಟು ಸರಿ ಎಂದು ವಿಪಕ್ಷ ನಾಯಕರು, ಸಾರ್ವಜನಿಕರು ಟೀಕಿಸಲಾರಂಭಿಸಿದರು.

ಪ್ರಜಾಪ್ರಭುತ್ವದಲ್ಲಿ ಯಾವುದೇ ನಾಯಕನನ್ನು ಟೀಕಿಸುವ ಹಕ್ಕಿದೆ. ಆದರೆ, ಒಂದು ಅಪ್ರಾಪ್ತ ವಯಸ್ಸಿನ ಬಾಲಕಿಯ ಮಾತುಗಳನ್ನು ನೆಪವಾಗಿಸಿಕೊಂಡು ಆಕೆಯ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುವುದು, ಬೆದರಿಕೆ ಹಾಕುವುದು, ಕುಟುಂಬವನ್ನು ಗುರಿಯಾಗಿಸುವುದು ಅಥವಾ ಸಾಮಾಜಿಕ ಬಹಿಷ್ಕಾರಕ್ಕೆ ಗುರಿಪಡಿಸುವುದು ಯಾವ ಕಾರಣಕ್ಕೂ ಸಮರ್ಥನೀಯವಲ್ಲ. ಅದು ಕಾನೂನುಬಾಹಿರ ಕಿರುಕುಳ ಎಂದು ಹಲವರ ಅಭಿಪ್ರಾಯಪಟ್ಟರು.

ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಬೆಳೆಯುತ್ತಿರುವ ‘ಡಿಜಿಟಲ್ ಗುಂಪು ನ್ಯಾಯ’ (Digital Mob Justice) ಎಂಬ ಅಪಾಯಕಾರಿ ಪ್ರವೃತ್ತಿಯನ್ನೂ ಎತ್ತಿ ತೋರಿಸಿದೆ. ನ್ಯಾಯಾಲಯ, ಪೊಲೀಸ್ ಅಥವಾ ಕಾನೂನು ತನ್ನ ಕೆಲಸ ಮಾಡುವ ಮುನ್ನವೇ, ಸಾಮಾಜಿಕ ಮಾಧ್ಯಮದ ಗುಂಪುಗಳೇ ಆರೋಪಿಯನ್ನು ನಿರ್ಧರಿಸಿ, ಶಿಕ್ಷೆಯನ್ನೂ ವಿಧಿಸಲು ಮುಂದಾಗುತ್ತಿವೆ. ಈ ಪ್ರಕ್ರಿಯೆಯಲ್ಲಿ ಸತ್ಯ ಯಾವುದು, ಸುಳ್ಳು ಯಾವುದು, ಎದುರಾಳಿಯ ವಯಸ್ಸು ಎಷ್ಟು, ಆತನ ಅಥವಾ ಆಕೆಯ ಮಾನಸಿಕ ಸ್ಥಿತಿ ಹೇಗಿದೆ ಎಂಬ ಯಾವುದೇ ಅಂಶಗಳು ಮುಖ್ಯವಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳ ಜವಾಬ್ದಾರಿಯೂ ಕಡಿಮೆಯಲ್ಲ. ತಮ್ಮ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ, ಬೆದರಿಕೆ ಮತ್ತು ವೈಯಕ್ತಿಕ ದಾಳಿಗಳನ್ನು ನಡೆಸಿದಾಗ ಅದನ್ನು ಖಂಡಿಸುವ ನೈತಿಕ ಧೈರ್ಯವನ್ನೂ ಎಲ್ಲ ಪಕ್ಷಗಳೂ ತೋರಿಸಬೇಕು. ತಪ್ಪು ಮಾಡಿದವರು ತಮ್ಮದೇ ಬೆಂಬಲಿಗರಾಗಿದ್ದರೂ ಅವರನ್ನು ಸಮರ್ಥಿಸಿಕೊಳ್ಳುವ ಬದಲು, ಕಾನೂನಿನ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಬೇಕು. ಪ್ರಜಾಪ್ರಭುತ್ವದಲ್ಲಿ ನಾಯಕನ ಮೇಲಿನ ನಿಷ್ಠೆ ಕಾನೂನಿಗಿಂತ ದೊಡ್ಡದಾಗಬಾರದು ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: ಇಲ್ಲಿ ಹೆಣ್ಣು ಮಕ್ಕಳನ್ನ ದಷ್ಟಪುಷ್ಟವಾಗಿ ಬೆಳೆಸುವುದು ಭದ್ರ ಭವಿಷ್ಯಕ್ಕಾಗಿ ಅಲ್ಲ, ʼಸಂಪಾದನೆʼಗಾಗಿ!

“ಬೇಟಿ ಬಚಾವೋ, ಬೇಟಿ ಪಢಾವೋ” ಎಂಬ ಘೋಷಣೆಯ ಹಿಂದೆ ನಿಜವಾಗಿಯೂ ಹೆಣ್ಣುಮಕ್ಕಳ ಸುರಕ್ಷತೆ, ಘನತೆ ಮತ್ತು ಮಾನಸಿಕ ನೆಮ್ಮದಿಯನ್ನು ಕಾಪಾಡುವ ಬದ್ಧತೆ ಇದೆಯೇ? ಒಂದು ಅಪ್ರಾಪ್ತ ಬಾಲಕಿ ಸಾರ್ವಜನಿಕವಾಗಿ ಕ್ಷಮೆ ಕೇಳಿದ ಬಳಿಕವೂ ಆಕೆಯ ವಿರುದ್ಧದ ದ್ವೇಷ ನಿಲ್ಲದಿದ್ದರೆ, ಆ ಘೋಷಣೆಯ ನೈತಿಕ ಅರ್ಥವೇನು ಪ್ರಶ್ನೆಯೂ ಈಗ ಮುನ್ನೆಲೆಗೆ ಬರುತ್ತಿದೆ.

ಪ್ರತಿಪಕ್ಷಗಳು ಪ್ರಶ್ನೆ ಮೇಲೆ ಪ್ರಶ್ನೆ ಎಸೆಯುತ್ತಿರಲಿ, ದೇಶದ ಯುವಜನತೆಗೆ ಕೆಲಸವಿಲ್ಲದೆ ನಿರುದ್ಯೋಗ ತಾಂಡವವಾಡುತ್ತಿರಲಿ, ಮಹಿಳೆಯರ ಸುರಕ್ಷತೆಯ ಮಟ್ಟ ಪಾತಾಳಕ್ಕೆ ಇಳಿದಿರಲಿ, ಕ್ರೈಂ ರೇಟ್‌ ಏರುತ್ತಲೇ ಇರಲಿ, ಪ್ರತಿಭಟನೆಗಳಾಗುತ್ತಿರಲಿ, ಎಂಥದ್ದೇ ಸಂದಿಗ್ಧ ಪರಿಸ್ಥಿತಿ ಇರಲಿ, ಪ್ರಧಾನಿ ನರೇಂದ್ರ ಮೋದಿಯವರು ಧೃತಿಗೆಡದೆ ಅತ್ಯಂತ ಶಾಂತವಾಗಿ ಸಮಯೋಚಿತವಾಗಿ ಪರಿಸ್ಥಿತಿಯನ್ನು ನಿಭಾಯಿಸುವುದನ್ನು ತಿಳಿದಿದ್ದಾರೆ. ಆದರೆ, ಅವರ ಭಕ್ತಗಣ ಮಾತ್ರ ಅಷ್ಟು ನಾಜೂಕುತನವನ್ನು ಇನ್ನೂ ಕಲಿಯಬೇಕಿದೆ ಎನಿಸುತ್ತದೆ. ಕತ್ತಲ ಕೋಣೆಯಲ್ಲಿ ನಿಂತು ಕಲ್ಲು ಹೊಡೆಯುವ ಮೊಂಡುತನ ಬಿಟ್ಟು ನಮ್ಮ ನಾಯಕರಂತೆ ಪ್ರತಿಭಟಿಸುವವರನ್ನ, ತಮ್ಮ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡುವವರನ್ನು ತಮ್ಮ ಸ್ನೇಹಿತರಂತೆಯೇ ನೋಡುವ ವಿಶಾಲ ದೃಷ್ಟಿಕೋನ, ಧೈರ್ಯ ಬೆಳೆಸಿಕೊಳ್ಳಬೇಕಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‌ಮೈಸೂರು ವಿವಿ ಸಂಜೆ ಕಾಲೇಜು: ಸಾಂಸ್ಕೃತಿಕ ಹಾಗೂ NSS ಚಟುವಟಿಕೆಗಳಿಗೆ ಚಾಲನೆ

ಮೈಸೂರು ವಿವಿ ಸಂಜೆ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಸಮಿತಿಯಿಂದ 2026-27ನೇ ಶೈಕ್ಷಣಿಕ...

ರಾಮದುರ್ಗ, ಸವದತ್ತಿ ಬರ ಘೋಷಣೆಗೆ ರೈತರ ಆಗ್ರಹ: 10 ದಿನಗಳಲ್ಲಿ ಘೋಷಣೆ – ಶಾಸಕ ಅಶೋಕ ಪಟ್ಟಣ

"ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ...

ಕರಗುವ ಹಿಮಾಲಯ, ಕುಸಿಯುವ ಆರ್ಥಿಕತೆ: ಹಿಮಪ್ರಳಯದ ಹಾದಿಯಲ್ಲಿ ಭಾರತದ ಭವಿಷ್ಯ!

ಹಿಮಾಲಯವು ಕೇವಲ ಮಂಜಿನ ಬೆಟ್ಟಗಳ ಸಮೂಹವಲ್ಲ; ಅದು ಭಾರತದ ಆರ್ಥಿಕ ಸ್ಥಿರತೆ,...

ಮಂಗಳೂರಿನಲ್ಲಿ ಕಿದ್ವಾಯಿ, ಜಯದೇವ ಆಸ್ಪತ್ರೆಗಳ ಶಾಖೆ ನಿರ್ಮಾಣಕ್ಕೆ ಸರ್ಕಾರ ಅಸ್ತು

"ಮಂಗಳೂರಿನಲ್ಲಿ ಕಿದ್ವಾಯಿ, ಜಯದೇವ ಆಸ್ಪತ್ರೆಗಳ ಶಾಖೆಗಳ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ...