ಪಂಚಮಸಾಲಿ ಪೀಠಗಳ ಗೊಂದಲ- ಭಾಗ 6 : ‘ಬಸವಶೈವದಲ್ಲಿ ಹಿಂದುತ್ವ’ ಎನ್ನುವ ಲಿಂಗಾಯತ ಧರ್ಮ ಸಿದ್ಧಾಂತ ಕುಲಗೆಡಿಸುವ ಕೃತಿ

Date:

ಶರಣರನ್ನು ಮತ್ತು ಲಿಂಗಾಯತರನ್ನು ಹಿಂದೂ ಎಂದು ಸಾಧಿಸಬೇಕೆನ್ನುವುದು ವೈದಿಕರ ಗುಲಾಮರ ಹಗಲುಗನಸು ಮಾತ್ರ. 1871 ರ ಭಾರತದ ಮೊದಲ ಜನಗಣತಿಯಿಂದ ಹಿಡಿದು ಒಟ್ಟು ಏಳು ಜನಗಣತಿಯ ವರದಿಗಳು, ಜಿಲ್ಲಾ ಗೆಜೆಟಿಯರ್ ಗಳು, ನ್ಯಾಯಾಲಯದ ತೀರ್ಪುಗಳು, ಹಿಂದುಳಿದ ವರ್ಗಗಳ ಆಯೋಗದ ವರದಿಗಳ ಕುರಿತು ಏನೇನೂ ಗೊತ್ತಿಲ್ಲದ ಗಾಂಪರು ಮಾತ್ರ ಲಿಂಗಾಯತರನ್ನು ಮತ್ತು ಶರಣರನ್ನು ನ್ಯಾಯಾಲಯದ ಮೂಲಕ ಹಿಂದೂಗಳಾಗಿಸುತ್ತೇವೆ ಎನ್ನುತ್ತಾರೆ.

- Advertisement -

ಪಂಚಮಸಾಲಿ ಉಪವರ್ಗವನ್ನು ಲಿಂಗಾಯತ ಧರ್ಮದಿಂದ ಬೇರ್ಪಡಿಸುವ ವೈದಿಕರ ಹುನ್ನಾರದ ಭಾಗವಾಗಿ ಈ ಉಪಾಧ್ಯ ಬರೆಯುತ್ತಿದ್ದ ವಾಟ್ಸ್ಯಾಪ್‌ ಲೇಖನಗಳು ಸಂಪೂರ್ಣವಾಗಿ ಐತಿಹಾಸಿಕ ಅಂಶಗಳನ್ನು ಹೊಂದಿರಲಿಲ್ಲ. ಪಂಚಮಸಾಲಿಗಳಿಗು ಲಿಂಗಾಯತಕ್ಕೂ ಸಂಬಂಧವೆ ಇಲ್ಲ ಎನ್ನುವಂತೆ ಈ ಲೇಖನಗಳು ಬರುತ್ತಿದ್ದವು. ನಾನು ಈ ಮೊದಲು ಹೇಳಿದಂತೆ ಪಂಚಮಸಾಲಿಗಳೂ ಒಳಗೊಂಡಂತೆ ಎಲ್ಲಾ ಲಿಂಗಾಯತ ಉಪವರ್ಗಗಳ ಇತಿಹಾಸ ಆರಂಭಗೊಳ್ಳುವುದು ಹನ್ನೆರಡನೆಯ ಶತಮಾನದಿಂದ. ಆ ಮೊದಲು ಲಿಂಗಾಯತದೊಳಗಿನ ಬಹುತೇಕ ಉಪಪಂಗಡಗಳು ಕೆಳವರ್ಗದವರಾಗಿದ್ದರು ಎನ್ನುವುದರಲ್ಲಿ ಅನುಮಾನವಿಲ್ಲ. ಇನ್ನೊಂದು ಕಡೆ ಸಂಘಿ ಹಿನ್ನೆಲೆಯ ಜನಮೇಜಯ ಉಮರ್ಜಿ, ಡಂಕಿನ್ ಝಳಕಿ, ರಾಜಾರಾಮ ಹೆಗಡೆ ಮುಂತಾದ ವೈದಿಕ ಸನಾತನಿ ಮನಸ್ಥಿತಿಯವರು ತಮ್ಮ ಉದ್ದೇಶಿತ ಅವೈದಿಕ ಲಿಂಗಾಯತ ಧರ್ಮವನ್ನು ವೈದಿಕೀಕರಿಸುವ ಹುನ್ನಾರವನ್ನು ಮುಂದುವರೆಸಿದ್ದಾರೆ. ಅದರ ಭಾಗವಾಗಿ ಒಂದಷ್ಟು ಬೆರಳೆಣಿಕೆಯ ಪ್ರಕ್ಷಿಪ್ತ ವಚನಗಳನ್ನು ಹಾಗು ಲಿಂಗಾಯತ ಸಿದ್ಧಾಂತ ಪೂರ್ಣಗೊಳ್ಳುವ ಮೊದಲು ಶೈವದ ಪ್ರಭಾವದಲ್ಲಿ ಶರಣರು ಬರೆದ ವಚನಗಳನ್ನು ಇಟ್ಟುಕೊಂಡು ಬಸವಣ್ಣ ಕಿತ್ತು ಬಿಸಾಕಿದ ಜನಿವಾರವನ್ನು ಮತ್ತೆ ತೊಡಿಸುವ ಮತ್ತು ವಚನ ದರ್ಶನವನ್ನು ಬ್ರಾಹ್ಮಣೀಕರಿಸುವ ಪ್ರಯತ್ನದ ಭಾಗವಾಗಿ ಸೃಷ್ಟಿಯಾಗಿದ್ದೇ ಬಸವಶೈವದಲ್ಲಿ ಹಿಂದುತ್ವ ಎನ್ನುವ ವಿಕೃತ ಕೃತಿ. ಮರಳುಗಾಡಿನಿಂದ ವಲಸೆ ಗಿರಾಕಿ ಸನಾತನಿ ಜನಮೇಜಯ ಉಮರ್ಜಿ ಮತ್ತು ಅರೆಕಾಲಿಕ ಅನಿವಾಸಿ ಭಾರತೀಯ ವೀರಶೈವ ಆರಾಧ್ಯ ಬ್ರಾಹ್ಮಣನೊಬ್ಬ ವಚನ ಸಾಹಿತ್ಯವನ್ನು ತಿರುಚುತ್ತಿರುವುದು ಲಿಂಗಾಯತ ಚಳವಳಿಯಿಂದ ಭಯಂಕರ ಭಯಗ್ರಸ್ಥರಾಗಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಮರಳುಗಾಡಿನ ಸನಾತನ ಧರ್ಮದ ಜನಮೇಜಯ ಉಮರ್ಜಿಯು ತನ್ನ ವಚನ ದರ್ಶನ ಎಂಬ ವಿಕೃತಿಗೆ ಲಿಂಗಾಯತರು ಕೊಟ್ಟಿರುವ ಬಲವಾದ ಎದಿರು ಪೆಟ್ಟಿನಿಂದ ಚೇತರಿಕೊಳ್ಳದೆ ಇಂದಿಗೂ ಯಾರೂ ಓದದ ಪತ್ರಿಕೆಯಲ್ಲಿ ಆಗಾಗ ಕನಲುತ್ತಿರುತ್ತಾನೆ. ಈ ಮರಳುಗಾಡಿನ ಅಗ್ರಹಾರದ ಅರ್ಬನ್ ನಾಜಿಗಳು ಎಷ್ಟೇ ಪ್ರಯತ್ನಿಸಿದರೂ ಲಿಂಗಾಯತ ಚಳವಳಿ ವೈದಿಕ ವಿಕೃತಿಗಳಿಗೆ ಮುಖಾಮುಖಿಯಾಗಿ ಅಗಾಧವಾಗಿ ವಿಸ್ತರಣೆಗೊಳ್ಳುತ್ತಿದೆ. ಪ್ರಚಾರಕ್ಕಾಗಿ ಹಾಗು ವೈದಿಕರನ್ನು ಮೆಚ್ಚಿಸಲು ಬರೆದ ಈ “ಬಸವಶೈವದಲ್ಲಿ ಹಿಂದುತ್ವ” ಎನ್ನುವ ವಿಕೃತಿ ವಿಮೋಚನೆಗೊಳಿಸುವ ಅಭಿಯಾನದಲ್ಲಿ ಹರಿಹರದ ವೀರಶೈವ ಪಂಚಮಸಾಲಿ ಪೀಠದ ವಚನಾನಂದ ಸ್ವಾಮಿ ಭಾಗವಹಿಸಿದ್ದು ಪಂಚಮಸಾಲಿಗಳನ್ನು ಲಿಂಗಾಯತ ಧರ್ಮದಿಂದ ಬೇರ್ಪಡಿಸುವ ಹುನ್ನಾರದ ಭಾಗವಾಗಿ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಲಿಂಗಾಯತ ಉದ್ಯಮಿಗಳ ಮೇಳಕ್ಕೆ ಕನೇರಿಯ ವಿವಾದಾತ್ಮಕ ಹಾಗೂ ಅಷ್ಟೇ ಅನಾಗರಿಕ ಕಾವಿ ವ್ಯಕ್ತಿ ಬಾಪುಗೌಡ ಮೇಟಿಯನ್ನು(ಕನೇರಿ ಸ್ವಾಮಿ) ಕರೆಸಿದ್ದಕ್ಕೆ ಲಿಂಗಾಯತ ಗಣಾಚಾರಿಗಳು ನಡೆಸಿದ ಹಠಾತ್ ಪ್ರತಿಭಟನೆಗೆ ಹೆದರಿ ಶಾಸಕ ಅರವಿಂದ ಬೆಲ್ಲದ ಹುಬ್ಬಳ್ಳಿ-ಧಾರವಾಡದಲ್ಲಿ ಬಸವಶೈವದಲ್ಲಿ ಹಿಂದುತ್ವ ವಿಕೃತಿಯ ಬಿಡುಗಡೆ ಕಾರ್ಯಕ್ರಮಕ್ಕೆ ಮೊದಲು ಒಪ್ಪಿಕೊಂಡು ಆಮೇಲೆ ದೂರ ಉಳಿದ ಘಟನೆ ನಡೆಯಿತು. ಬಸವಶೈವದಲ್ಲಿ ಹಿಂದುತ್ವ ಎನ್ನುವ ಲಿಂಗಾಯತ ಧರ್ಮ ಸಿದ್ಧಾಂತ ಕುಲಗೆಡಿಸುವ ಮತ್ತು ಪಂಚಮಸಾಲಿ ಉಪವರ್ಗವನ್ನು ಲಿಂಗಾಯತ ಧರ್ಮದಿಂದ ಬೇರ್ಪಡಿಸುವ ವೈದಿಕರ ಹುನ್ನಾರದಿಂದ ಹುಟ್ಟಿರುವ ವಿಕೃತಿಗೆ ಸಮಾಜ ಯಾವುದೆ ರೀತಿಯಲ್ಲಿ ಗಂಭೀರವಾಗಿ ಸ್ಪಂದಿಸಲಿಲ್ಲ.

basava shaiva vachanananda swamy

ಇದನ್ನೂ ಓದಿ ಪಂಚಮಸಾಲಿ ಪೀಠಗಳ ಗೊಂದಲ- ಭಾಗ 1 | ಪಂಚಮಸಾಲಿಗರೇ ಪಂಚಪೀಠಗಳ ಆರ್ಥಿಕ ಮೂಲವಾಗಿದ್ದರು

ಬಸವಶೈವದಲ್ಲಿ ಹಿಂದುತ್ವ ಎಂಬ ವಿಕೃತ ಕೃತಿಗೆ ಉತ್ತರ ರೂಪದಲ್ಲಿ ಸರಿಯಾದ ಪೆಟ್ಟು ಕೊಡುವ ಕಾರ್ಯಗಳು ಲಿಂಗಾಯತ ಚಿಂತಕರು ಈಗ ಮಾಡುತ್ತಿದ್ದಾರೆ. ಒಟ್ಟು ಐನೂರಕ್ಕೂ ಹೆಚ್ಚು ವಚನಗಳಲ್ಲಿ ಶರಣರು ವೇದಾಗಮಗಳನ್ನು ತೀಕ್ಷ್ಣವಾಗಿ ವಿರೋಧಿಸಿದರೆ, ಹತ್ತಿಪ್ಪತ್ತು ವಚನಗಳಲ್ಲಿ ವೇದಗಳೊಳಗಿನ ಸಕಾರಾತ್ಮಕ ಅಂಶಗಳನ್ನು ಪೂರಕವಾಗಿ ಒಪ್ಪಿ ಅವನ್ನು ತಮ್ಮ ವಚನಗಳಲ್ಲಿ ಸಾಂದರ್ಭಿಕವಾಗಿ ಪ್ರಾಸ್ತಾಪಿಸಿದ್ದಾರೆ ಮತ್ತು ವೈದಿಕ ಪದ್ದತಿಯ ವಿವಾಹ ಪ್ರಸಂಗಗಳನ್ನು ಪ್ರಾಸಂಗಿಕವಾಗಿ ಪ್ರಸ್ತಾಪಿಸಿದ್ದಾರೆಯೇ ವಿನಃ ಅವನ್ನು ಲಿಂಗಾಯತ ಸಂಸ್ಕೃತಿ ಎಂದು ಹೇಳಿಲ್ಲ. ಅಷ್ಟಕ್ಕೂ ಬಾಸಿಂಗ, ಎಲೆ, ಅಡಿಕೆ, ತೆಂಗು, ಬಾಗೀನ, ಕಲಶ ಇವೆಲ್ಲ ಭಾರತೀಯ ಸಂಸ್ಕೃತಿಯ ಭಾಗವೇ ಹೊರತು ವಿದೇಶಿ ಆರ್ಯ ವೈದಿಕ ಸಂಸ್ಕೃತಿಯ ಭಾಗವಲ್ಲ. ಭಾರತೀಯ ಬಹುಜನರನ್ನು ಹಿಂದೂ ದ್ರಾವಿಡರು, ಹಿಂದೂ ಶೈವರು ಎಂದು ಪ್ರಚೋದಿಸಿ ಕರೆಯುವುದು ಒಬ್ಬ ವ್ಯಕ್ತಿಯ ಶತಮೂರ್ಖತನದ ಚಿನ್ಹೆ. ಹಿಂದೂ ಎನ್ನುವುದು ವೇದಗಳನ್ನು ಪ್ರಮಾಣವೆಂದು ಒಪ್ಪಿ ವೈದಿಕ ಆಚರಣೆ ಮಾಡುವವರಿಗೆ ಮಾತ್ರ ಅನ್ವಯವಾಗುವ ಪದ, ಅದನ್ನು ಸರ್ವೋಚ್ಛ ನ್ಯಾಯಾಲಯ ಕೂಡ ಸ್ಪಷ್ಟಪಡಿಸಿದೆ. ಅದಕ್ಕೆಂದೇ, ಪುರಾಣದ ವೀರಭದ್ರ ದಕ್ಷಯಜ್ಞವನ್ನು ಧ್ವಂಸ ಮಾಡಿದ ಕಾರಣದಿಂದ ಬಹುಜನರು ಅಗ್ನಿಯನ್ನು ಕಾಲಲ್ಲಿ ಹಾಕಿ ತುಳಿಯುತ್ತಾರೆ, ಇದು ಮೂರ್ಖರಿಗೆ ಅರ್ಥವಾಗದ ಸಂಗತಿ. ಗುಗ್ಗುಳ ಮೆರವಣಿಗೆ ಹಾಗು ಕೆಂಡ ಹಾಯುವ ಪದ್ದತಿಗಳು ಅಗ್ನಿ ಭಂಜಕ ಹಿಂದೂ ವೇದ ವಿರೋಧಿ ಆಚರಣೆಗಳು. ಹಿಂದೂ ಎಂದು ತಪ್ಪಾಗಿ ಕರೆಯಲ್ಪಡುವ ವೈದಿಕ ಧರ್ಮದವರು ಮೂಲದಲ್ಲಿ ಅಗ್ನಿ ಆರಾಧಕರು ಮತ್ತು ಇನ್ನೊಂದು ಕಡೆ ಅವೈದಿಕ ಬಹುಜನರು ಅಗ್ನಿ ಭಂಜಕರು.

ಇದನ್ನೂ ಓದಿ ಪಂಚಮಸಾಲಿ ಪೀಠಗಳ ಗೊಂದಲ- ಭಾಗ 2 | ಪಂಚಮಸಾಲಿಗಳ ಪ್ರತ್ಯೇಕ ಪೀಠಕ್ಕೆ ಮೂಲ ಪ್ರೇರಣೆ ಲಿಂಗೈಕ್ಯ ಡಾ. ಕಲಬುರ್ಗಿ

ಶರಣರನ್ನು ಹಾಗು ಲಿಂಗಾಯತರನ್ನು ಹಿಂದೂ ಎಂದು ಸಾಧಿಸಬೇಕೆನ್ನುವುದು ವೈದಿಕರ ಗುಲಾಮರ ಹಗಲುಗನಸು ಮಾತ್ರ. 1871 ರ ಭಾರತದ ಮೊದಲ ಜನಗಣತಿಯಿಂದ ಹಿಡಿದು ಒಟ್ಟು ಏಳು ಜನಗಣತಿಯ ವರದಿಗಳು, ಜಿಲ್ಲಾ ಗೆಜೆಟಿಯರ್ ಗಳು, ನ್ಯಾಯಾಲಯದ ತೀರ್ಪುಗಳು, ಹಿಂದುಳಿದ ವರ್ಗಗಳ ಆಯೋಗದ ವರದಿಗಳ ಕುರಿತು ಏನೇನೂ ಗೊತ್ತಿಲ್ಲದ ಹಳ್ಳಿ ಹೈದರು ಮತ್ತು ಗಾಂಪರು ಮಾತ್ರ ಲಿಂಗಾಯತರನ್ನು ಹಾಗು ಶರಣರನ್ನು ನ್ಯಾಯಾಲಯದ ಮೂಲಕ ಹಿಂದೂಗಳಾಗಿಸುತ್ತೇವೆ ಎನ್ನುತ್ತಾರೆ. ಉಪಾಧ್ಯನಂತಹ ಪೀತ ಪಂಡಿತರಾಗಲಿ, ಕನೇರಿ ಕಾವಿಯಂತಹ ಕಚ್ಚಾ ಮಾಲುಗಳಾಗಲಿ ಸಂಘೀ ವೈದಿಕರಿಂದ ಸುಪಾರಿ ಪಡೆದು ಲಿಂಗಾಯತವನ್ನು ಹಿಂದುತ್ವದ ಭಾಗವಾಗಿಸುವಲ್ಲಿ ಯಶಸ್ಸು ಕಾಣಲಾರರು, ಅದಕ್ಕೆ ಪ್ರತಿಯಾಗಿ ಸಂಘೀ ವೈದಿಕರಿಂದ ಭಕ್ಷೀಸು ಪಡೆಯಬಹುದಷ್ಟೆ. ತಮ್ಮನ್ನು ತಾವು ಮಾರಿಕೊಂಡು ವೈದಿಕರ ರಾಜಕೀಯ ಪಕ್ಷ ಮತ್ತು ಜಾತಿ ಸಂಘದ ಜೊತೆಗೆ ಗುರುತಿಸಿಕೊಂಡಿರುವ ಅನೇಕ ಲಿಂಗಾಯತ ಗುಲಾಮರಿಗೆ ಈಗ ಜ್ಞಾನೋದಯವಾಗುತ್ತಿದೆ. ಎರಡು ಪಂಚಮಸಾಲಿ ಟ್ರಸ್ಟ್ ಗಳಲ್ಲಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠವನ್ನು ನಿಯಂತ್ರಿಸುವ ಟ್ರಸ್ಟ್ ಅದು ಬಸವಪರ ಹಾಗು ಲಿಂಗಾಯತ ಧರ್ಮೀಯರಿಗೆ ಅಲ್ಪಸಂಖ್ಯಾತರ ಸೌಲಭ್ಯಕ್ಕಾಗಿ ನಡೆಯುತ್ತಿರುವ ಹೋರಾಟದ ಪರವಾಗಿದೆ. ಹರಿಹರ ಟ್ರಸ್ಟ್ ಮತ್ತು ಪೀಠ ಆರಂಭದಲ್ಲಿಯೇ ಯಡವಟ್ಟು ಮಾಡಿಕೊಂಡು ವೀರಶೈವ-ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಮತ್ತು ವೀರಶೈವ-ಲಿಂಗಾಯತ ಪಂಚಮಸಾಲಿ ಪೀಠ ಎಂದು ಹೆಸರಿಟ್ಟು ತಪ್ಪು ಹಾದಿ ತುಳಿದಿದೆ.

ಇದನ್ನೂ ಓದಿ ಪಂಚಮಸಾಲಿ ಪೀಠಗಳ ಗೊಂದಲ ಭಾಗ-3 |ಪಂಚಮಸಾಲಿಗಳು ಪಂಚಪೀಠಗಳ ಜಾತಿ ಜಂಗಮರ ಅಡ್ಡ ಪಲ್ಲಕ್ಕಿ ಹೊರುವುದು ನಿಲ್ಲಿಸಿದರೆ?

ದಾವಣಗೆರೆಯಲ್ಲಿ ಪಂಚಪೀಠಗಳ ವೀರಶೈವ ಜಾತಿ ಜಗದ್ಗುರುಗಳು ಮತ್ತು ಪಂಚಮಸಾಲಿ ಮುಖಂಡರ ನಡುವೆ ನಡೆದ ಮಾತುಕತೆ ವಿಫಲವಾಗಿ ಕೈಕೈ ಮಿಲಾಯಿಸುವ ಹಂತದಲ್ಲಿ ಸಭೆ ಮುಗಿದಿತ್ತು. ಆನಂತರ ಹರಿಹರದಲ್ಲಿರುವ ಟ್ರಸ್ಟ್ ನ ಸದಸ್ಯರಲ್ಲಿ ಬಹುತೇಕರು ವೀರಶೈವದ ಪರವಾಗಿರುವ ಮತ್ತು ಪಂಚಪೀಠಗಳ ಗಾಳಕ್ಕೆ ಸುಲಭವಾಗಿ ತುತ್ತಾಗುವವರೆ ಇರುವುದರಿಂದ ಆ ಟ್ರಸ್ಟ್ ಮತ್ತು ಪೀಠದ ಭವಿಷ್ಯ ಅಂದೇ ಡೋಲಾಯಮಾನ ಎನ್ನಿಸಿತ್ತು, ಅದು ಈಗ ನಿಜವಾಗಿದೆ. ಆ ಟ್ರಸ್ಟಿನಲ್ಲಿರುವ ಸದಸ್ಯರ ಸ್ವಾರ್ಥ, ಸಮಾಜದ ಬಗ್ಗೆ ಇರದಿರುವ ಕಾಳಜಿ, ವಿರೋಧಿಗಳೊಂದಿಗೆ ಒಡನಾಟ ಮುಂತಾದ ಕಾರಣಗಳಿಂದ ಹರಿಹರದ ವೀರಶೈವ ಪಂಚಮಸಾಲಿ ಟ್ರಸ್ಟ್ ಹಾಗು ಪೀಠ ಈಗ ಇಡೀ ರಾಜ್ಯದ ಜನರೆದುರಿಗೆ ನಗೆಪಾಟಲಿಗೆ ಈಡಾಗಿದೆ. ಹರಿಹರದಲ್ಲಿ ವೀರಶೈವ ಪಂಚಮಸಾಲಿ ಪೀಠ ಆರಂಭಿಸಬೇಕೆಂಬ ನಿರ್ಣಯದಿಂದ ಅತೃಪ್ತರಾಗಿ ದಾವಣಗೆರೆಯ ಇಂದಿನ ಬಸವ ಬಳಗದ ಮುಖ್ಯಸ್ಥರಾಗಿರುವ ಪಂಚಮಸಾಲಿ ಸಮಾಜದ ಸಭ್ಯ ವ್ಯಕ್ತಿ, ಸಮಾಜದ ಹಿರಿಯರಾದ ಹುಚ್ಚಪ್ಪ ಮೇಸ್ಟ್ರು ಮತ್ತು ಅವರೊಂದಿಗೆ ಇತರ ಅಪಾರ ಸಂಖ್ಯೆಯ ಬಸವ ಭಕ್ತರು ಹರಿಹರ ವೀರಶೈವ ಪಂಚಮಸಾಲಿ ಪೀಠದಿಂದ ದೂರ ಉಳಿಯಲು ನಿರ್ಧರಿಸಿದರು, ಹಾಗೆಯೇ ಮಾಡಿದರು ಕೂಡ. ಪಂಚಮಸಾಲಿ ಉಪವರ್ಗವೂ ಸೇರಿದಂತೆ ಇಡೀ ಲಿಂಗಾಯತ ಸಮಾಜ ತೊಂದರೆ ಅನುಭವಿಸುತ್ತಿರುವುದು ವೀರಶೈವ ಜಾತಿ ಜಂಗಮರಿಂದ.

ಇದನ್ನೂ ಓದಿ ಪಂಚಮಸಾಲಿ ಪೀಠಗಳ ಗೊಂದಲ ಭಾಗ 4: ಧರ್ಮದ ಶ್ರೇಷ್ಠತೆಯು ಅದರ ಪ್ರಾಚೀನತೆಯಿಂದ ನಿರ್ಧರಿಸಲಾಗದು

ಯಾವ ವೀರಶೈವ ಪಂಚಪೀಠಗಳ ಜಾತಿ ಜಂಗಮರ ವಿರುದ್ಧ ಪಂಚಮಸಾಲಿ ಪೀಠ ಸ್ಥಾಪನೆಯಾಗುತ್ತಿತ್ತೊ ಆ ಪೀಠಕ್ಕೆ ವೀರಶೈವ ಪಂಚಮಸಾಲಿ ಪೀಠ ಎಂದು ಹೆಸರಿಡುವ ನಿರ್ಧಾರ ಕೆಲವು ಜನರು ಮಾಡಿದರೊ ಆಗ ದಾವಣಗೆರೆ ಭಾಗದ ಪಂಚಮಸಾಲಿ ಉಪವರ್ಗದ ಉತ್ಕಟ ಬಸವ ಭಕ್ತರಿಗೆ ಇದು ಇರಿಸು ಮುರುಸು ಉಂಟುಮಾಡಿತ್ತು. ಆ ಕಾರಣದಿಂದ ಆ ಭಾಗದ ಬಸವ ಭಕ್ತರು ಹರಿಹರ ಪೀಠದಿಂದ ಆರಂಭದಲ್ಲಿಯೇ ಅಂತರ ಕಾಯ್ದುಕೊಂಡರು. ಹರಿಹರ ಪೀಠ ಆರಂಭಿಸಲು ಪಂಚಮಸಾಲಿಗರು ಮೊದಲು ಟ್ರಸ್ಟ್ ಆರಂಭಿಸಿ ಇನ್ನೇನು ಪೀಠ ಸ್ಥಾಪಿಸುತ್ತಾರೆ ಎನ್ನುವುದು ಖಾತ್ರಿಯಾಗುತ್ತಿದ್ದಂತೆ ವೀರಶೈವ ಪಂಚಪೀಠಗಳು ಒಳಗೊಳಗೆ ಮಸಲತ್ತು ಆರಂಭಿಸಿದವು. ಪೀಠ ಸ್ಥಾಪಿಸುವುದು ತಪ್ಪಿಸಲು ಆಗದಿದ್ದರೇನಂತೆ, ಪೀಠ ಮತ್ತು ಟ್ರಸ್ಟ್ ಎರಡೂ ಸಮರ್ಪಕವಾಗಿ ಕಾರ್ಯ ನಿರ್ವಹಿಸದಂತೆ ತಡೆಯುವ ಷಡ್ಯಂತ್ರಗಳು ಲಿಂಗಾಯತ ಹಾಗು ಪಂಚಮಸಾಲಿ ದ್ವೇಷಿಗಳು ತೆರೆಮರೆಯಲ್ಲಿ ಕಾರ್ಯ ಮಾಡಲಾರಂಭಿಸಿದರು. ಅದರ ಪರಿಣಾಮದಿಂದ ಇವತ್ತು ಈ ಗೊಂದಲಗಳು ಬೆಳಕಿಗೆ ಬಂದಿವೆ. ಈಗಲೂ ಸಹ ಹರಿಹರ ಪೀಠದ ಹಾಗು ಟ್ರಸ್ಟಿನ ಗದ್ದಲಗಳ ನಡುವೆ ವೀರಶೈವ ಪಂಚಪೀಠಗಳ ಜಾತಿ ಜಂಗಮರ ಪರವಾಗಿ ಕೆಲವರು ವಾದಿಸುತ್ತಿರುವುದನ್ನು ನೀವು ಗಮನಿಸಬೇಕು.

ಇದನ್ನೂ ಓದಿ ಪಂಚಮಸಾಲಿ ಪೀಠಗಳ ಗೊಂದಲ- ಭಾಗ 5 |ಪಂಚಮಸಾಲಿಗಳನ್ನು ಲಿಂಗಾಯತ ಧರ್ಮದಿಂದ ಬೇರ್ಪಡಿಸುವ ವೈದಿಕರ ಹುನ್ನಾರ

frontscrol

ಹರಿಹರ ವೀರಶೈವ ಪಂಚಮಸಾಲಿ ಟ್ರಸ್ಟ್ ನಲ್ಲಿ ಬಹುತೇಕ ವೀರಶೈವವಾದಿಗಳು, ಸ್ವಾರ್ಥಿಗಳು, ಸ್ವಹಿತಾಸಕ್ತರು ಸೇರಿದ್ದಾರೆ. ಅವರಲ್ಲಿ ಬಸವರಾಜ ದಿಂಡೂರ್ ಎನ್ನುವ ವ್ಯಕ್ತಿ ಈ ಹಿಂದೆ ಬಸವಣ್ಣನವರ ಕುರಿತು ದೊಡ್ಡ ವಿದ್ವಾಂಸರಂತೆ ಅಸಭ್ಯವಾಗಿ ಬಸವಣ್ಣನವರು ವಿಶ್ವಕರ್ಮ ಎಂದು ಹೇಳಿಕೆ ನೀಡಿದ ಘಟನೆ ನೀವು ಜ್ಞಾಪಿಸಿಕೊಳ್ಳಬೇಕು. ಮತ್ತೊಬ್ಬ ಟ್ರಸ್ಟ್ ಸದಸ್ಯ ಬಾವಿ ಬೆಟ್ಟಪ್ಪನವರು ಕೂಡ ಇದೇ ಗುಂಪಿಗೆ ಸೇರಿದ ವ್ಯಕ್ತಿ. ಇನ್ನು ಉಮಾಪತಿ ಎನ್ನುವ ವ್ಯಕ್ತಿ ದೊಡ್ಡ ಶ್ರೀಮಂತರಾಗಿದ್ದು ದಾವಣಗೆರೆಯ ಮತ್ತೊಬ್ಬ ಆಗರ್ಭ ಶ್ರೀಮಂತ ರಾಜಕಾರಣಿ ಹಾಗು ಉದ್ಯಮಿ ಲಿಂಗೈಕ್ಯ ಶಾಮನೂರು ಶಿವಶಂಕರಪ್ಪ ಅವರೊಂದಿಗೆ ಆಪ್ತ ಸಂಬಂಧ ಹೊಂದಿದ್ದರು. ಸಾದರ ಸಮುದಾಯಕ್ಕೆ ಸೇರಿದ ಶಿವಶಂಕರಪ್ಪನವರಿಗೆ ಚುನಾವಣೆಯಲ್ಲಿ ಪಂಚಮಸಾಲಿಗಳ ಬೆಂಬಲ ಬೇಕಿರುವುದು ರಾಜಕೀಯ ಅಗತ್ಯ, ಆ ಕಾರಣದಿಂದ ಉಮಾಪತಿಯವರೊಂದಿಗಿನ ಸಂಬಂಧ ಶಿವಶಂಕರಪ್ಪನವರಿಗೆ ಸಹಾಯ ಮಾಡಿರಬಹುದು. ಅದಕ್ಕಾಗಿ ಅವರು ಪಂಚಮಸಾಲಿ ಟ್ರಸ್ಟ್ ಗೆ ಯಥೇಚ್ಛವಾಗಿ ದೇಣಿಗೆಯನ್ನು ನೀಡಿರಬಹುದು. ಈ ಗುಂಪು ಟ್ರಸ್ಟ್ ನ ಸಾರಥ್ಯ ವಹಿಸಿದ ನಂತರ ಟ್ರಸ್ಟ್ ಹಾಗು ಪೀಠದ ಮೇಲೆ ಭಾರೀ ಬಿಗಿ ನಿಯಂತ್ರಣವನ್ನು ಸಾಧಿಸಿತು. ಪಂಚಮಸಾಲಿ ಸಮಾಜದ ಉಳಿದ ಯಾವುದೆ ಶ್ರೀಮಂತ ವ್ಯಕ್ತಿ ಅಥವಾ ರಾಜಕಾರಣಿಗಳು ಆ ಟ್ರಸ್ಟ್ ಅಥವಾ ಪೀಠದ ಕಡೆಗೆ ತಲೆ ಹಾಕದಂತೆ ಸದಾ ಎಚ್ಚರಿಕೆಯನ್ನು ವಹಿಸಿತು. ಟ್ರಸ್ಟ್ ಗೆ ಅಪಾರ ಪ್ರಮಾಣದ ದೇಣಿಗೆ ಸಂಗ್ರಹಿಸಿದರೂ ಈಗ ಅದರ ಸೂಕ್ತ ಸದ್ವಿನಿಯೋಗ ಮತ್ತು ಸರಿಯಾದ ಲೆಕ್ಕಪತ್ರ ಇಡುವಲ್ಲಿ ಪಾರದರ್ಶಕತೆ ನಿರ್ವಹಿಸಲಿಲ್ಲ ಎನ್ನುವುದು ಪಂಚಮಸಾಲಿ ಸಮಾಜದ ಬಹುತೇಕ ಜನರ ಆರೋಪವಾಗಿದೆ. ಅದಕ್ಕೆಂದೇ ಒಂದು ಗುಂಪು ಇವರ ವಿರುದ್ಧ ಲೆಕ್ಕ ಕೊಡಿ ಆಂದೋಲನ ಆರಂಭಿಸಿದೆ.

ಮುಂದುವರೆಯುವುದು….

WhatsApp Image 2025 11 17 at 3.54.12 PM
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಜನವರಿಯಲ್ಲಿ ಅಗ್ನಿವೀರ ಸೇನಾ ಭರ್ತಿ ರ‍್ಯಾಲಿ

ಬೀದರ್‌ ನಗರದಲ್ಲಿ 2027ರ ಜನವರಿ ತಿಂಗಳಲ್ಲಿ 15 ದಿನಗಳ ಕಾಲ ಅಗ್ನಿವೀರ...

ದೇವಿಯಿಂದ ಕತ್ತಿ ಪಡೆದ ರಾಜರ ಕಥೆಗಳು ಶಾಲಾ ಪಠ್ಯದಲ್ಲಿ; NCERTಯಿಂದ ಮತ್ತೊಂದು ವಿವಾದ?

"ಭಾರತದಲ್ಲಿ ದೇವಿಯರ ಆರಾಧನೆಗೂ, ಯುದ್ಧಕ್ಕೂ ಅನಾದಿ ಕಾಲದಿಂದಲೂ ಅವಿನಾಭಾವ ಸಂಬಂಧವಿದೆ. ಪ್ರಾಚೀನ...

‘INDIA’ ಮೈತ್ರಿಕೂಟದ ಸಭೆಗಾಗಿ ದೆಹಲಿಗೆ ಮಮತಾ ಪ್ರಯಾಣ: ‘ದಿಮಾಗಿ ನಕ್ಸಲರ’ ಜತೆ ಸಮಾಲೋಚನೆ ಎಂದ ಸುವೇಂದು ಅಧಿಕಾರಿ

ಬುಧವಾರ ನಡೆಯಲಿರುವ 'INDIA' ಮೈತ್ರಿಕೂಟದ ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳಲು ಪಶ್ಚಿಮ ಬಂಗಾಳದ...

ಮೋದಿ ಪ್ರಮಾಣಪತ್ರ ವಿವಾದ: ಕೇಜ್ರಿವಾಲ್ ಮೇಲ್ಮನವಿ ವಜಾಗೊಳಿಸಿದ ಗುಜರಾತ್ ಹೈಕೋರ್ಟ್

ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿ ಪ್ರಮಾಣಪತ್ರವನ್ನು ಬಹಿರಂಗಪಡಿಸುವಂತೆ ಗುಜರಾತ್...