ಜನ ಸೇವೆ ಮೂಲಕವೇ ಜನನಾಯಕರಾಗಿದ್ದ ಡಿ. ಸುಧಾಕರ್: ಕೆಲಸದ ಮೂಲಕ ಕೀರ್ತಿ

Date:

ಚಿತ್ರದುರ್ಗ ಜಿಲ್ಲೆಯು ಸಜ್ಜನ ರಾಜಕೀಯ ನಾಯಕನನ್ನು ಕಳೆದುಕೊಂಡು ಶೋಕದಲ್ಲಿ ಮುಳುಗಿದೆ. ಸಚಿವ ಡಿ. ಸುಧಾಕರ್ ಪ್ರತಿನಿಧಿಸಿದ್ದ ಹಿರಿಯೂರು ಹಾಗೂ ಚಳ್ಳಕೆರೆ ಕ್ಷೇತ್ರದಲ್ಲಿ ನೀರವ ಮೌನ ಅವರಿಸಿದೆ. ಜಾತಿ, ಮತದ ಎಲ್ಲೆ ಮೀರಿ ಪ್ರೀತಿಯ ಕೋಟೆ ಕಟ್ಟಿ ನಾಲ್ಕು ಬಾರಿ ಶಾಸಕರಾಗಿದ್ದ ಸಚಿವ ಸುಧಾಕರ್ ಇನ್ನು ನೆನಪು ಮಾತ್ರ. ಜನರ ನೆರವಿಗೆ ನಿಲ್ಲುವ ಮೂಲಕವೇ ಜನ ಬೆಂಬಲ ಗಳಿಸಿದ್ದ ಸುಧಾಕರ್ ಎರಡು ಬಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದು, ವಿನೂತನ ರಾಜಕೀಯ ಮಾದರಿಯೊಂದನ್ನು ಹಾಕಿಕೊಟ್ಟಿದ್ದರು.

- Advertisement -

ಹಿರಿಯೂರು ಹಾಗೂ ಚಳ್ಳಕೆರೆ ಕ್ಷೇತ್ರಗಳಲ್ಲಿ ನಾಲ್ಕು ಬಾರಿ ಶಾಸಕರಾಗಿದ್ದ ಸುಧಾಕರ್ ಶ್ರೀಮಂತ ಜೈನ ವ್ಯಾಪಾರಿ ಕುಟುಂಬದಲ್ಲಿ ಜನಿಸಿದ್ದರು. ಜನರೊಂದಿಗೆ ಬೆರತು ಜನನಾಯಕರಾಗಿ ಹೊರಹೊಮ್ಮಿದ್ದರು. ಹಿರಿಯೂರು ಕ್ಷೇತ್ರದಲ್ಲಿ ಮೂರು ಬಾರಿ ಹಾಗೂ ಚಳ್ಳಕೆರೆ ಕ್ಷೇತ್ರದಲ್ಲಿ ಒಂದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ರೖತರ ಹಿತಕ್ಕೆ ಶ್ರಮಿಸುತ್ತ ಸತತ ಐದು ಬಾರಿ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ವಿನೂತನ ಕಾರ್ಯಕ್ರಮಗಳ ಮೂಲಕ ರೖತರ ಹಿತಕ್ಕೆ ದುಡಿದಿದ್ದಾರೆ. ಇವರ ಅವಧಿಯಲ್ಲಿ ರಾಷ್ಟ್ರದ 2ನೇ ಅತ್ಯುತ್ತಮ ಸಹಕಾರ ಬ್ಯಾಂಕ್‌ ಎಂಬ ಗೌರವಕ್ಕೆ ಪಾತ್ರವಾಗಿ ರಾಷ್ಟ್ರ ಪ್ರಶಸ್ತಿ(2022) ಮುಡಿಗೇರಿಸಿಕೊಂಡಿತ್ತು. ಬ್ಯಾಂಕ್ ಮೂಲಕ ಶೂನ್ಯ ಬಡ್ಡಿದರದಲ್ಲಿ ರೈತರಿಗೆ ₹3 ಲಕ್ಷದವರೆಗೆ ಸಾಲ ವಿತರಣೆ, ಮಹಿಳಾ ಸ್ವ-ಸಹಾಯ ಸಂಘ, ಗುಂಪುಗಳಿಗೆ ಸೌಲಭ್ಯಗಳನ್ನು ವಿತರಿಸುವ ಮಹತ್ವದ ಕೆಲಸ ಮಾಡಿದ್ದರು ಎಂದು ಇಲ್ಲಿನ ರೖತರು ಸ್ಮರಿಸಿದರು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

2017ರಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ರೖತರು ಬರದಿಂದ ತತ್ತರಿಸಿದ್ದರು. 500 ಎಕರೆಯಲ್ಲಿ ಮೇವು ಬೆಳೆಸಿ ಮೂಖಪ್ರಾಣಿಗಳ ಮೇವಿನ ಕೊರತೆ ನೀಗಿಸಿ ಜಾನುವಾರುಗಳ ಹಸಿವಿನ ದವಡೆಯಿಂದ ಪಾರುಮಾಡಿದ್ದರೆಂದು ಇಲ್ಲಿನ ರೖತರು ನೆನಪಿಸಿಕೊಳ್ಳುತ್ತಾರೆ.

ಚಳ್ಳಕೆರೆ ಕ್ಷೇತ್ರದಿಂದ 2 ಬಾರಿ(1978, 1989) ಶಾಸಕರಾಗಿದ್ದ ಜಯಣ್ಣ ಅವರ ಉತ್ತರಾಧಿಕಾರಿಯಾಗಿ ರಾಜಕೀಯಕ್ಕೆ ಬಂದ ಸುಧಾಕರ್ ಅವರು ರಾಜಕೀಯವಾಗಿ ಇಲ್ಲಿಯವರೆಗೂ ಹಿಂದಿರುಗಿ ನೋಡಲಿಲ್ಲ.

ಜಯಣ್ಣ ಅವರಿಗೆ ಮಕ್ಕಳಿರಲಿಲ್ಲ. ಆದ್ದರಿಂದ ಅಣ್ಣನ ಮಗ ಸುಧಾಕರ್‌ಗೆ ಈ ಅವಕಾಶ ದೊರೆತಿತ್ತು. 2004ರಲ್ಲಿ ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೊದಲ ಯತ್ನದಲ್ಲೇ ಗೆದ್ದಿದ್ದರು. 2008ರಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದರು. ಚಳ್ಳಕೆರೆ ಕ್ಷೇತ್ರವು ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕಾರಣ, ಸಾಮಾನ್ಯ ಕ್ಷೇತ್ರವಾಗಿ ಬದಲಾದ ಹಿರಿಯೂರಿಗೆ ವಲಸೆ ಬಂದು ಎರಡು ಬಾರಿ ಶಾಸಕರಾಗಿ ಪ್ರಸ್ತುತ ಸಚಿವರಾಗಿಯೂ ಸೇವೆ ಸಲ್ಲಿಸುತ್ತಿದ್ದರು.

ಬಿಜೆಪಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಹಾಗೂ ಕ್ರೀಡಾ ಸಚಿವರಾಗಿದ್ದ ಸುಧಾಕರ್ ಅವರು ಬಿ ಎಸ್‌ ಯಡಿಯೂರಪ್ಪ ಸರ್ಕಾರಕ್ಕೆ ಬಹುಮತ ಸಿಗದಿದ್ದಾಗ ಆಸರೆಯಾದ್ದರು. ಪಕ್ಷೇತರರಲ್ಲಿ ನಂತರ ಶಾಸಕ ಸ್ಥಾನದಿಂದ ಅನರ್ಹಗೊಂಡು ಸುಪ್ರೀಂ ಕೋರ್ಟ್‌ನಿಂದ ಸ್ಥಾನ ಮರಳಿ ಪಡೆದುಕೊಂಡಿದ್ದರು. 2013ರ ಚುನಾವಣೆಯಲ್ಲಿ ಸುಧಾಕರ್ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ನಂತರ ಆ ಚುನಾವಣೆಯಲ್ಲಿ ಸುಧಾಕರ್, ಕೃಷ್ಣಪ್ಪನವರ ವಿರುದ್ಧ ಗೆಲುವು ಸಾಧಿಸಿದ್ದರು. ನಂತರ 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್ ವಿರುದ್ಧ ಸುಧಾಕ‌ರ್ ಸೋತಿದ್ದರು. 2023ರ ಚುನಾವಣೆಯಲ್ಲಿ ಪೂರ್ಣಿಮಾ ವಿರುದ್ಧ ಗೆದ್ದು ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿ ಕೆಲಸ ಮಾಡುತ್ತಿದ್ದರು ಎಂಬುದು ಅವರ ಅಭಿಮಾನಿಗಳ ನುಡಿಗಳು…

ಇದನ್ನೂ ಓದಿದ್ದೀರಾ? ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ ಮತ್ತೆ ಮುನ್ನಲೆಗೆ: ಉತ್ತರ ಕರ್ನಾಟಕ ರೈತರ ಬದುಕಿಗೆ ಆಸರೆಯ ನಿರೀಕ್ಷೆ

ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಸುಧಾಕ‌ರ್ ಹೋರಾಟ ಮಾಡಿದ್ದರು. ಹೀಗಾಗಿ, ಈ ನೀರಾವರಿ ಯೋಜನೆಗೆ ಅವರ ಹೆಸರಿಡುವ ಬಗ್ಗೆ ಯೋಚಿಸಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾ‌ರ್ ಹೇಳಿಕೆ ಸುಧಾಕರ್ ಅವರ ಹೋರಾಟದ ತೀವ್ರತೆಯನ್ನು ಬಿಂಬಿಸುತ್ತದೆ.

ಒಟ್ಟಾರೆ ಯಾವುದೇ ಪ್ರಬಲ ಜಾತಿ ಬಲ ಇಲ್ಲದೆ ರಾಜಕಾರಣವನ್ನು ಯಾವ ರೀತಿ ಮಾಡಬಹುದು ಹಾಗೂ ಜನ ಸೇವೆಯಿಂದಲೇ ಜನನಾಯಕರಾಗುವ ಹೊಸ ಮಾದರಿಯೊಂದನ್ನು ಸುಧಾಕರ್ ಬಿಟ್ಟುಹೋಗಿದ್ದಾರೆ.

WhatsApp Image 2024 08 09 at 10.52.48 1578a566
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR | ರಾಜ್ಯದಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು...

ರಾಜ್ಯದ 17 ಜಿಲ್ಲೆಗಳಲ್ಲಿ ಮುಂದಿನ 4 ದಿನ ಭಾರೀ ಮಳೆ: ಹವಾಮಾನ ಇಲಾಖೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡಿದೆ. ಪರಿಣಾಮ, ಕರ್ನಾಟಕದ 17 ಜಿಲ್ಲೆಗಳಲ್ಲಿ ಮುಂದಿನ ನಾಲ್ಕು...