ವಿಂಡೀಸ್‌ ವಿರುದ್ಧ ದ್ವಿತೀಯ ಟೆಸ್ಟ್‌: ಕೊಹ್ಲಿಗೆ 500ನೇ ಪಂದ್ಯ, ಭಾರತಕ್ಕೆ ನೂರನೇ ಟೆಸ್ಟ್

Date:

ಇಂದಿನಿಂದ ಭಾರತ ಹಾಗೂ ವೆಸ್ಟ್​ ಇಂಡೀಸ್​ ನಡುವೆ ಆರಂಭವಾಗಲಿರುವ ದ್ವಿತೀಯ ಹಾಗೂ ಅಂತಿಮ ಟೆಸ್ಟ್‌ ಎರಡು ಪ್ರಮುಖ ಕಾರಣಗಳಿಗೆ ವಿಶೇಷವಾಗಲಿದೆ. ಮೊದಲನೆಯದು ಉಭಯ ತಂಡಗಳಿಗೂ ಇದು ಐತಿಹಾಸಿಕ 100ನೇ ಟೆಸ್ಟ್​ ಪಂದ್ಯವಾಗಿದೆ. ಹಾಗೆಯೇ ಸ್ಪೋಟಕ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರಿಗೆ ಈ ಪಂದ್ಯವು 500ನೇ ಅಂತರರಾಷ್ಟ್ರೀಯ ಪಂದ್ಯವಾಗಿದೆ.

ವೆಸ್ಟ್‌ ಇಂಡೀಸಿನ ಟ್ರಿನಿಡಾಡ್​ನ ಕ್ವೀನ್ಸ್​ ಪಾರ್ಕ್​ ಓವಲ್ ಮೈದಾನದಲ್ಲಿ ನಡೆಯಲಿರುವ 2ನೇ ಟೆಸ್ಟ್​ ಪಂದ್ಯದಲ್ಲೂ ಭಾರತ ಮೇಲುಗೈ ಸಾಧಿಸಿ ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ. ಡೊಮಿನಿಕಾದ ವಿಂಡ್ಸರ್​ ಪಾರ್ಕ್​ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್​​ ಪಂದ್ಯದಲ್ಲಿ ಅತಿಥೇಯ ತಂಡದ ವಿರುದ್ಧ ಭಾರತವು ಇನ್ನಿಂಗ್ಸ್​ ಜಯ ದಾಖಲಿಸಿತ್ತು.

ರೋಹಿತ್‌ ಶರ್ಮಾ ಸಾರಥ್ಯದ ಭಾರತ ತಂಡ ಸರಣಿ ಕ್ಲೀನ್​ ಸ್ವೀಪ್​ ಮೇಲೆ ಕಣ್ಣಿಟ್ಟಿದೆ. ಇತ್ತ ಕ್ರೈಗ್ ಬ್ರಾಥ್‌ವೈಟ್ ನೇತೃತ್ವದ ವೆಸ್ಟ್​ ಇಂಡೀಸ್ ತಂಡ ಸರಣಿ ಮುಖಭಂಗದಿಂದ ಪಾರಾಗುವ ಲೆಕ್ಕಾಚಾರದಲ್ಲಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

21 ವರ್ಷದಿಂದ ವಿಂಡೀಸ್‌ ವಿರುದ್ಧ ಭಾರತ ಸೋತಿಲ್ಲ

2002ರಿಂದಲೂ, ಕಳೆದ 21 ವರ್ಷದಿಂದಲೂ ಭಾರತ ತಂಡ ವಿಂಡೀಸ್‌ ವಿರುದ್ಧ ಒಂದೂ ಟೆಸ್ಟ್​ ಪಂದ್ಯವನ್ನೂ ಸೋಲದೆ ನಿರಂತರವಾಗಿ ಮೇಲುಗೈ ಸಾಧಿಸುತ್ತಿದೆ. ಇಲ್ಲಿಯವರೆಗೂ ಟೀಂ ಇಂಡಿಯಾ ಸತತ 8 ಮತ್ತು ಕೆರಿಬಿಯನ್ನರ ನೆಲದಲ್ಲಿ ಸತತ 4 ಸರಣಿ ಗೆಲುವು ದಾಖಲಿದೆ. ಏಕದಿನ ವಿಶ್ವಕಪ್​ಗೆ ಅರ್ಹತೆ ಪಡೆಯಲು ವಿಫಲವಾಗಿರುವ ವೆಸ್ಟ್​ ಇಂಡೀಸ್ ಕನಿ‍ಷ್ಠ ಈ ಪಂದ್ಯವನ್ನಾದರೂ ಗೆದ್ದು ಮಾನ ಉಳಿಸಿಕೊಳ್ಳುವ ಯೋಜನೆ ರೂಪಿಸುತ್ತದೆ.

ಈ ಸುದ್ದಿ ಓದಿದ್ದೀರಾ? ಪ್ರಥಮ ಟೆಸ್ಟ್‌ ಕ್ರಿಕೆಟ್ | ಅಶ್ವಿನ್ ಸ್ಪಿನ್ ಮೋಡಿ, ಜೈಸ್ವಾಲ್ ಯಶಸ್ವಿ ಬ್ಯಾಟಿಂಗ್ ಬಲದಿಂದ ಗೆದ್ದ ಭಾರತ

ಟೀಂ ಇಂಡಿಯಾದಲ್ಲಿ ಹೆಚ್ಚು ಬದಲಾವಣೆಯಿಲ್ಲ

ಆರ್​ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಜೋಡಿಯ ಸ್ಪಿನ್​ ಪ್ರಾಬಲ್ಯದಿಂದ ಮೊದಲ ಟೆಸ್ಟ್​​ನಲ್ಲಿ ಭಾರತ ಗೆಲುವು ದಾಖಲಿಸಿತ್ತು. ಎರಡನೇ ಪಂದ್ಯದಲ್ಲಿ ಹೆಚ್ಚಿನ ಬದಲಾವಣೆ ಮಾಡದಿದ್ದರೂ ಜಯದೇವ್ ಉನದ್ಕತ್​ರನ್ನು, ಈ ಪಂದ್ಯಕ್ಕೆ ಕೈಬಿಡುವ ಸಾಧ್ಯತೆ ಇದೆ. ಬದಲಿಗೆ ಸ್ವಿಂಗ್ ಬೌಲರ್​ ಮುಕೇಶ್ ಕುಮಾರ್ ಅಥವಾ ಅಕ್ಷರ್ ಪಟೇಲ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.

ಹಾಗೆಯೇ ವೆಸ್ಟ್ ಇಂಡೀಸ್​ ತಂಡದಲ್ಲಿ ಗಾಯದಿಂದ ಬಳಲುತ್ತಿರುವ ​ರಹಕೀಮ್ ಕಾರ್ನ್​ವಾಲ್ ಅವರನ್ನು ಹನ್ನೊಂದರ ಬಳಗದಲ್ಲಿ ಸೇರಿಕೊಳ್ಳುವ ಸಾಧ್ಯತೆ ಕಡಿಮೆಯಿದೆ. ಇವರ ಬದಲಿಗೆ ಯುವ ಆಲ್​ರೌಂಡರ್​ ಕೆವಿನ್ ಸಿಂಕ್ಲೆರ್​ ಟೆಸ್ಟ್​​ ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿದ್ದಾರೆ ಅಥವಾ ಅನುಭವಿ ವೇಗಿ ಶಾನನ್ ಗ್ಯಾಬ್ರಿಯಲ್ ಸ್ಥಾನ ಪಡೆಯಬಹುದು.

ಕೊಹ್ಲಿಗೆ 500ನೇ ಪಂದ್ಯ

ಭಾರತ ತಂಡದ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರಿಗೆ ಈ ಪಂದ್ಯವು 500ನೇ ಪಂದ್ಯವಾಗಲಿದೆ. 274 ಏಕದಿನ, 110 ಟೆಸ್ಟ್‌ ಹಾಗೂ 115 ಟಿ20 ಸೇರಿ ಇಲ್ಲಿಯವರೆಗೂ 499 ಪಂದ್ಯವಾಡಿದ್ದಾರೆ. ಈ ಟೆಸ್ಟ್‌ ಆಡಿದರೆ ಕೊಹ್ಲಿ ಈ ಸಾಧನೆ ಮಾಡಿದ ವಿಶ್ವದ 10ನೇ ಹಾಗೂ ಭಾರತದ 4ನೇ ಆಟಗಾರ ಎಂಬ ಖ್ಯಾತಿಗೂ ಒಳಗಾಗಲಿದ್ದಾರೆ. 499 ಪಂದ್ಯಗಳಲ್ಲಿ 75 ಶತಕಗಳ ಸಹಿತ 25461 ರನ್​ ಸಿಡಿಸಿದ್ದಾರೆ. 2018ರಿಂದಲೂ ವಿದೇಶಿ ನೆಲದಲ್ಲಿ ಕೊಹ್ಲಿ ಶತಕ ಸಿಡಿಸಿಲ್ಲ. ಕೊಹ್ಲಿ ಈ ವಿಶೇಷ ಪಂದ್ಯದಲ್ಲಿ ಶತಕದ ಬರ ನೀಗಿಸುವರೇ ಎಂಬ ಕುತೂಹಲ ಇದೆ. ಇಲ್ಲಿಯವರೆಗೂ ಭಾರತ ತಂಡದಲ್ಲಿ ಸಚಿನ್ ತೆಂಡೂಲ್ಕರ್ 664 ಪಂದ್ಯ, ಎಂ ಎಸ್​ ಧೋನಿ 538 ಪಂದ್ಯ, ರಾಹುಲ್ ದ್ರಾವಿಡ್ 509 ಪಂದ್ಯಗಳಲ್ಲಿ ಆಡಿದ್ದಾರೆ.

ಪಂದ್ಯವಾಡುವ ಉಭಯ ತಂಡಗಳ 11ರ ಬಳಗ

ಭಾರತ:

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್‌ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ (ಉಪನಾಯಕ), ರವೀಂದ್ರ ಜಡೇಜಾ, ಇಶಾನ್ ಕಿಶನ್, ಆರ್ ಅಶ್ವಿನ್, ಶಾರ್ದೂಲ್ ಠಾಕೂರ್/ನವದೀಪ್ ಸೈನಿ, ಜಯದೇವ್ ಉನದ್ಕತ್/ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್

ವೆಸ್ಟ್​ ಇಂಡೀಸ್:

ಕ್ರೈಗ್ ಬ್ರಾಥ್‌ವೈಟ್ (ನಾಯಕ), ಟಾಗೆನರಿನ್ ಚಂದ್ರಪಾಲ್, ಕಿರ್ಕ್ ಮೆಕೆಂಜಿ, ಅಲಿಕ್ ಅಥಾನಾಜೆ, ಜೆರ್ಮೈನ್ ಬ್ಲಾಕ್‌ವುಡ್, ಜೋಶುವಾ ಡಾ ಸಿಲ್ವಾ, ಜೇಸನ್ ಹೋಲ್ಡರ್, ಕೆವಿನ್ ಸಿಂಕ್ಲೇರ್/ರಹಕೀಮ್ ಕಾರ್ನ್‌ವಾಲ್, ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಶಾನನ್ ಗೇಬ್ರಿಯಲ್.

ಪಂದ್ಯ ಆರಂಭ: ಸಂಜೆ 7.30

ನೇರ ಪ್ರಸಾರ: ಜಿಯೋ ಸಿನಿಮಾ

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೋಲಿನೊಂದಿಗೆ ಐಪಿಎಲ್‌ಗೆ ವಿದಾಯ ಹೇಳಿದ ‘ಮ್ಯಾಚ್ ಫಿನಿಶರ್ ದಿನೇಶ್ ಕಾರ್ತಿಕ್’

17ನೇ ಆವೃತ್ತಿಯ ಫೈನಲ್ ತಲುಪುವ ಭರವಸೆ ಮೂಡಿಸಿದ್ದ ಅಭಿಮಾನಿಗಳ ಫೇವರೀಟ್ ತಂಡ...

ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೇ 22ರಂದು ನಡೆದ 2024ರ ಇಂಡಿಯನ್...

ಐಪಿಎಲ್ | ರಾಜಸ್ಥಾನಕ್ಕೆ ಜಯ: ಆರ್‌ಸಿಬಿ ಕಪ್ ಕನಸು ಮತ್ತೆ ಭಗ್ನ

ಲೀಗ್ ಹಂತದ ಪ್ರಮುಖ ಆರು ಪಂದ್ಯಗಳನ್ನು ಸತತವಾಗಿ ಗೆದ್ದು, ಪ್ಲೇ ಆಫ್...