ಚಂಡೀಗಢದ ಮುಲ್ಲನ್‌ಪುರದ ಹೊಸ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 23ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು 2 ರನ್‌ಗಳಿಂದ ರೋಚಕವಾಗಿ ಸೋಲಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡವು ನಿತೀಶ್ ರೆಡ್ಡಿ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 182 ರನ್‌ಗಳನ್ನು ಕಲೆಹಾಕಿ, ಪಂಜಾಬ್ ಕಿಂಗ್ಸ್ ತಂಡಕ್ಕೆ 183 ರನ್‌ಗಳ ಗುರಿ ನೀಡಿತ್ತು.
A FINAL OVER DRAMA IN MULLANPUR…!!!! 🤯🔥
Punjab needed 29 – Ashutosh gave his best with Shashank, but fell short by just 2 runs. An IPL epic between PBKS and SRH. 👌 pic.twitter.com/uBLYQ18GaN
— Mufaddal Vohra (@mufaddal_vohra) April 9, 2024
ಈ ಗುರಿಯನ್ನು ಬೆನ್ನಟ್ಟುವಲ್ಲಿ ಕೊನೆಯ ಓವರ್‌ನಲ್ಲಿ ಎಡವಿದ ಪಂಜಾಬ್, ನಿಗದಿತ 20 ಓವರುಗಳಲ್ಲಿ 6 ವಿಕೆಟ್ ಕಳೆದುಕೊಂಡು 180 ರನ್ ಗಳಿಸಲಷ್ಟೇ ಶಕ್ತವಾಯಿತು.
ಕೊನೆಯ ಓವರ್‌ನಲ್ಲಿ ಪಂಜಾಬ್‌ಗೆ ಗೆಲ್ಲಲು 29 ರನ್‌ಗಳ ಅವಶ್ಯಕತೆ ಇತ್ತು. ಈ ವೇಳೆ ಕ್ರೀಸ್‌ನಲ್ಲಿದ್ದ ಅಶುತೋಶ್ ಶರ್ಮಾ ಉನಾದ್ಕಟ್ ಎಸೆತದಲ್ಲಿ ಎರಡು ಸಿಕ್ಸರ್ ಹಾಗೂ ಶಶಾಂಕ್ ಸಿಂಗ್ ಒಂದು ಸಿಕ್ಸರ್ ಬಾರಿಸಿದರಾದರೂ ಗೆಲುವಿನ ಹತ್ತಿರದಲ್ಲೇ ಎಡವಿದರು. 180 ರನ್ ಮಾಡಲಷ್ಟೇ ಶಕ್ತವಾದದ್ದರಿಂದ 2 ರನ್‌ಗಳಿಂದ ವಿರೋಚಿತ ಸೋಲು ಕಂಡರು.
Well tried, Ashutosh Sharma!!
PBKS needed 29 in 6 balls – 6,WD,WD,6,2,2,WD,1,6. He smashed 33* (15), Punjab lost the match by just 2 runs. Ashutosh stood out. 👏💥 pic.twitter.com/v4BXy2dtf0
— Mufaddal Vohra (@mufaddal_vohra) April 9, 2024
ಅಶುತೋಶ್ ಶರ್ಮಾ 15 ಎಸೆತಗಳಲ್ಲಿ 33 ರನ್(2 ಸಿಕ್ಸರ್, 3 ಬೌಂಡರಿ) ಹಾಗೂ ಶಶಾಂಕ್ ಸಿಂಗ್ 26 ಎಸೆತಗಳಲ್ಲಿ 46 ರನ್(6 ಫೋರ್, 1 ಸಿಕ್ಸರ್) ಬಾರಿಸಿ, ಔಟಾಗದೆ ಉಳಿದರು.
ಉಳಿದಂತೆ ಪಂಜಾಬ್ ಪರ ಬ್ಯಾಟಿಂಗ್‌ನಲ್ಲಿ ಸ್ಯಾಮ್ ಕರಣ್ 29, ಸಿಕಂದರ್ ರಝಾ 28 ರನ್ ಬಾರಿಸುವ ಮೂಲಕ ತಮ್ಮದೇ ಆದ ಕೊಡುಗೆ ನೀಡಿದರು.
ಸನ್‌ರೈಸರ್ಸ್ ಪರ ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್ 2, ಪ್ಯಾಟ್ ಕಮ್ಮಿನ್ಸ್, ನಟರಾಜನ್, ನಿತೀಶ್ ಕುಮಾರ್ ರೆಡ್ಡಿ, ಉನಾದ್ಕಟ್ ತಲಾ ಒಂದೊಂದು ವಿಕೆಟ್‌ಗಳನ್ನು ಹಂಚಿಕೊಂಡರು.