ಜನಾಗ್ರಹ ಸಭೆ | ಬಾಲನ್ಯಾಯ ಕಾಯ್ದೆ(JJ Act)ತಿದ್ದುಪಡಿಗೆ ಕೊಲೆಯಾದ ಪ್ರಬುದ್ಧ ತಾಯಿ ಸೌಮ್ಯ ಆಗ್ರಹ

Date:

“ನನ್ನ ಮಗಳನ್ನು ಕೊಲೆ ಮಾಡಿರುವ ಅಪ್ರಾಪ್ತನಿಗೆ ಶಿಕ್ಷೆ ಕೊಡಿಸುವ ಮೂಲಕ ಬಾಲನ್ಯಾಯ ಕಾಯ್ದೆ ತಿದ್ದುಪಡಿಯಾಗಬೇಕು” ಎಂದು ಇತ್ತೀಚೆಗೆ ಕೊಲೆಗೀಡಾದ ವಿದ್ಯಾರ್ಥಿನಿ ಪ್ರಬುದ್ಧಳ ತಾಯಿ ಸೌಮ್ಯ ಕೆ ಆರ್‌ ಒತ್ತಾಯಿಸಿದರು.

- Advertisement -

ಬುಧವಾರ ಫ್ರೀಡಂ ಪಾರ್ಕಿನಲ್ಲಿ ಹೆಣ್ಣುಮಕ್ಕಳ ಕೊಲೆಗಳ ವಿರುದ್ಧ ಪ್ರಗತಿಪರ ಸಂಘಟನೆಗಳು ಆಯೋಜಿಸಿದ್ದ ಹಕ್ಕೊತ್ತಾಯ ಸಭೆಯಲ್ಲಿ ಅವರು ಭಾವುಕರಾಗಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

“ನನಗೆ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಕಾನೂನಿನ ಲೋಪದೋಷದಿಂದಾಗಿ ಇಂದು ನಾನು ಕಾನೂನು ಹೋರಾಟ ಮಾಡುವಂತಾಗಿದೆ. ಕೊಲೆಗಾರನನ್ನು ಕೊಲೆಗಾರ ಎನ್ನುವಂತೆ ಇಲ್ಲ. ಕೊಲೆಗಾರನ ಕುಟುಂಬದವರ ಹೆಸರೆತ್ತುವಂತಿಲ್ಲ. ಬಾಲಕ, ಅಪ್ರಾಪ್ತ ಎಂಬುದು ನಂಬರ್‌ ಅಷ್ಟೇ. ಆತನಿಗೆ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸುವ ಮನಸ್ಥಿತಿಯಿದೆ ಎಂಬುದನ್ನು ನೋಡಿದರೆ ಆತ ದೊಡ್ಡವರು ಮಾಡುವ ಅಪರಾಧ ಮಾಡಿದ್ದಾನೆ. ಆತನಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆ ಆಗಬೇಕು. ತಪ್ಪಿಸಿಕೊಳ್ಳಲು ಅವಕಾಶ ನೀಡಬಾರದು” ಎಂದು ಒತ್ತಾಯಿಸಿದರು.

“ಮಗಳ ಸಾವಿನ ನೋವು ಒಂದು ಕಡೆ, ಮತ್ತೊಂದು ಕಡೆ ಮಗಳ ಕೊಲೆಗಾರನಿಗೆ ಶಿಕ್ಷೆ ಕೊಡಿಸಲಾರದೇ ಒದ್ದಾಡುತ್ತಿದ್ದೇನೆ. ಅಪ್ರಾಪ್ತರು ಅಪಘಾತ ಮಾಡಿದಾಗ ಪೋಷಕರನ್ನು ಬಂಧಿಸುತ್ತಾರೆ. ನನ್ನ ಮಗಳನ್ನು ಕೊಲೆ ಮಾಡಿದವನಿಗೆ ಹತ್ತೇ ದಿನದಲ್ಲಿ ಜಾಮೀನು ಕೊಟ್ಟಿದ್ದಾರೆ. ಹಾಗಿದ್ದರೆ ಸಮಾಜಕ್ಕೆ ಯಾವ ಸಂದೇಶ ಕೊಟ್ಟಿದ್ದೇವೆ. ಆರೋಪಿಯ ಹಿಂದೆ ಯಾರಿದ್ದಾರೆ ಎಂದು ಪೊಲೀಸರು ತನಿಖೆ ಮಾಡಬೇಕು. ಕಳ್ಳತನ ಮಾಡಿದ್ದನ್ನು ಪೋಷಕರಿಗೆ ತಿಳಿಸುತ್ತೇನೆ ಎಂದ ಮಾತ್ರಕ್ಕೆ ಕೊಂದುಬಿಡುವುದಾ? ಹಾಗಿದ್ದರೆ, ಆ ಬಾಲಕನ ಪೋಷಕರು ಎಂತಹ ಸಂಸ್ಕಾರ ಕೊಟ್ಟಿದ್ದಾರೆ? ” ಎಂದು ಪ್ರಶ್ನಿಸಿದರು.

ಜ್ಯುವಿನಲ್‌ ಜಸ್ಟಿಸ್‌ ಕಾಯ್ದೆ (J J Act) ಪ್ರಕಾರ ಅಪ್ರಾಪ್ತ ಅಪರಾಧಿಗಳನ್ನು ಬಂಧಿಸಬಾರದು, ಶಿಕ್ಷಿಸಬಾರದು. ಆದಿವಾಸಿ ಮಕ್ಕಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಕಾಯ್ದೆಯಲ್ಲಿ ಕೆಲವು ತಿದ್ದುಪಡಿ ಮಾಡಲಾಗಿದೆ. ಆದರೆ, ಇದರಿಂದ ಸಮಾಜಕ್ಕೆ ಯಾವ ಸಂದೇಶ ಹೋಗುತ್ತದೆ? ಬಾಲಕರು ಕೊಲೆ, ಅತ್ಯಾಚಾರ ಏನೇ ಆದರೂ ಮಾಡಬಹುದಾ? ಇದರಿಂದ ಪ್ರೇರಣೆಯಾಗಿ ಹದಿನಾರು ವರ್ಷದೊಳಗಿನ ಬಾಲಕರಿಂದ ಕೊಲೆ ಮಾಡಿಸಬಹುದು. ನನ್ನ ಮಗಳ ಕೊಲೆಗಾರನಿಗೆ ಶಿಕ್ಷೆ ಆಗಲೇ ಬೇಕು. ಯಾವುದೇ ಕಾರಣದಿಂದ ಬಿಡುವ ಹಾಗಿಲ್ಲ. ಆ ಮೂಲಕವೇ ಕಾನೂನು ತಿದ್ದುಪಡಿಯಾಗಬೇಕು. ಅದಕ್ಕಾಗಿ ಹೋರಾಟ ಮಾಡೋಣ” ಎಂದು ಸೌಮ್ಯ ಒತ್ತಾಯಿಸಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ ಮತ್ತು ಮೇಕೆ

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು...

ನಮ್ಮ ಕಾಲಿನ ಮುಳ್ಳನ್ನು ನಾವೇ ತೆಗೆಯಬೇಕು, ಪಿತೃಪ್ರಧಾನತೆಯ ಭೀತಿ ಮೀರಿ, ಲಕ್ಷ್ಮಣ ರೇಖೆ ದಾಟಿ: ಆರ್ ಸುನಂದಮ್ಮ

ಮಹಿಳೆಯರು ನಮ್ಮ ಕಾಲಿನ ಮುಳ್ಳನ್ನು ನಾವೇ ತೆಗೆಯಬೇಕು. ಪಿತೃಪ್ರಧಾನತೆಯ ಭೀತಿ ಮೀರಿ,...

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು...

ನಾಳೆ ‘ಕೊಂದವರು ಯಾರು?’ ರಾಷ್ಟ್ರೀಯ ವಿಚಾರ ಸಂಕಿರಣ: ಪಿತೃಪ್ರಧಾನತೆ, ಹೊಣೆಗಾರಿಕೆ ಕುರಿತು ಚರ್ಚೆಗೆ ವೇದಿಕೆ

ಕರ್ನಾಟಕದ ‘ನಾವೆದ್ದು ನಿಲ್ಲದಿದ್ದರೆ' ಸಂಘಟನೆಯು ಆರಂಭಿಸಿರುವ 'ಕೊಂದವರು ಯಾರು? Who Killed...