ಉರಿಗೌಡ-ನಂಜೇಗೌಡ ಸೃಷ್ಟಿಕರ್ತರಿಗೆ ಈ ಪುಸ್ತಕ ಸವಾಲು: ಸಿದ್ದನಗೌಡ ಪಾಟೀಲ್‌

Date:

“ಉರಿಗೌಡ ಮತ್ತು ನಂಜೇಗೌಡರ ಸೃಷ್ಟಿಕರ್ತರಿಗೆ ಎದುರಾಗಿ ಈ ಪುಸ್ತಕ ಬಂದಿದೆ. ಇತಿಹಾಸ ಮಾತ್ರವಲ್ಲ, ವಿಜ್ಞಾನವನ್ನು ಹಾಗೂ ಭವಿಷ್ಯವನ್ನೂ ಸಹ ತಿರುಚಲಾಗುತ್ತಿದೆ” ಎಂದು ಹಿರಿಯ ಚಿಂತಕ ಸಿದ್ದನಗೌಡ ಪಾಟೀಲ್‌ ಹೇಳಿದರು.

- Advertisement -

ಬೆಂಗಳೂರಿನಲ್ಲಿ ಪತ್ರಕರ್ತ ನವೀನ್ ಸೂರಿಂಜೆ ಅವರು ರಚಿಸಿರುವ ‘ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಟಿಪ್ಪು ಮತ್ತು ಹೈದರ್‌ ವಿಚಾರವನ್ನು ಆಗಿನ ಕಾಲಘಟ್ಟವನ್ನು ನಿಂತು ಅಧ್ಯಯನ ಮಾಡುವುದು ಅವಶ್ಯಕತೆ ಇದೆ. ಆದರೆ ಇವತ್ತು ಮಾಡುತ್ತಿರುವ ಅಪಪ್ರಚಾರದ ವಿರುದ್ಧ ನವೀನ್‌ ಸೂರಿಂಜೆ ಬರೆದಿದ್ದಾರೆ” ಎಂದು ಅಭಿಮತ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

“ಟಿಪ್ಪು ಬ್ರಿಟಿಷ್‌ ವಿರೋಧಿಯಾಗಿದ್ದ ಎಂದು ಹೇಳದ ಸಂಘಪರಿವಾರದವರು, ಹಿಂದೂ ವಿರೋಧಿ ಎಂದು ಬಿಂಬಿಸುತ್ತಾರೆ. ಕರ್ನಾಟಕದಲ್ಲಿ ವೈದಿಕ ರಾಜಕಾರಣ ಮಾಡುತ್ತಿರುವ ಸಂಘರ್ಷವನ್ನು ಬಿಜೆಪಿಯವರು ಮುಚ್ಚಿಟ್ಟಿದ್ದಾರೆ. ಬಿಟ್ಟಿದೇವ, ವಿಷ್ಣವರ್ಧನ ಹೇಗೆ ಆದ ಎಂದು ಕೇಳಿದರೆ ಅವರ ಬಳಿ ಉತ್ತರವಿಲ್ಲ” ಎಂದು ಹೇಳಿದರು.

ಟಿಪ್ಪು ಪುಸ್ತಕ ಬಿಡುಗಡೆ 2

“ಇತಿಹಾಸದ ಘಟನೆಗಳನ್ನು ಇಟ್ಟುಕೊಂಡು ಪ್ರಚೋದನೆ ಮಾಡುವ ಹಂತಕ್ಕೆ ಕರ್ನಾಟಕ ಬಂದು ನಿಂತಿದೆ. ಟಿಪ್ಪು ಅವರಲ್ಲಿದ್ದ ವಸಾಹತು ಶಾಹಿ ವಿರೋಧಿ ಪ್ರಜ್ಞೆ ಇವತ್ತಿಗೂ ಅವಶ್ಯಕತೆ ಆಗಿದೆ. ಇರಾನ್ ನಾಶ ಆಗಬೇಕು ಎಂದು ಭಯಸಿದವರು ಈಗ ಎಲ್‌ಪಿಜಿ ಸಮಸ್ಯೆ ಆದ ಮೇಲೆ ಯುದ್ಧ ನಿಲ್ಲಬೇಕು ಅಂತ ಹೇಳುತ್ತಾರೆ. ಭಾರತವನ್ನು ನಿಯಂತ್ರಿಸುತ್ತಿರುವುದು ಮೋದಿನಾ? ಅಥವಾ ಟ್ರಂಪ್‌?” ಎಂದು ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕರಾದ ಬಂಜಗೆರೆ ಜಯಪ್ರಕಾಶ್‌ ಅವರು ಮಾತನಾಡಿ “ಇತಿಹಾಸವನ್ನು ವಸ್ತು ನಿಷ್ಟವಾಗಿ ನೋಡಬೇಕು. ಆದರೆ ಇತಿಹಾಸವನ್ನು ತಿರುಚಿ ಟಿಪ್ಪುವನ್ನು ಕಳನಾಯಕನನ್ನಾಗಿ ಮಾಡಲಾಗುತ್ತಿದೆ. ಅದಕ್ಕಾಗಿ ಕರಾವಳಿಯಲ್ಲಿ ಮರೆಮಾಚಿದ ಸತ್ಯವನ್ನು ನವೀನ್‌ ಸೂರಿಂಜೆ ಪುಸ್ತಕದ ಮೂಲಕ ನಮ್ಮೆದುರಿಟ್ಟಿದ್ದಾರೆ” ಎಂದರು.

“ಮೈಸೂರು ರಾಜರಿಗೆ ರಾಜ್ಯವನ್ನು ಕಟ್ಟಲು ಅರ್ಹತೆ ಇದ್ದಂತೆ, ಟಿಪ್ಪುವಿಗೂ ರಾಜ್ಯವನ್ನು ಕಟ್ಟಲು ಅರ್ಹತೆ ಇತ್ತು. ಅದಕ್ಕಾಗಿ ಆತನ ಬಳಿ ತೋಳ್ಬಲವಿತ್ತು. ಜೊತೆಗೆ ಬಹಳ ತಿಳುವಳಿಕೆ ಇದ್ದಂತಹ ಆಡಳಿತಗಾರನಾಗಿದ್ದ. ಟಿಪ್ಪುವನ್ನು‌ ಕಳನಾಯಕನನ್ನಾಗಿ ಮೊದಲು ಚಿತ್ರಿಸಿದವರು ಬ್ರಿಟಿಷರು. ಈಗ ಟಿಪ್ಪುವನ್ನು‌ ವಿರೋಧಿಸುತ್ತಿರುವರು ಬ್ರಿಟಿಷರ ಸ್ನೇಹಿತರು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ, ಇತಿಹಾಸಕಾರರು ಡಾ.ರುಚಿಕಾ ಶರ್ಮ, ಹಿರಿಯ ಪತ್ರಕರ್ತ ಸುದೀಪ್ತೋ ಮೊಂಡಲ್‌, ಪುಸ್ತಕದ ಕತೃ ನವೀನ್‌ ಸೂರಿಂಜೆ, ನಿರೂಪಕಿ ಧನಲಕ್ಷ್ಮೀ ದೇವರಾಜ್‌ ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ಮನುಷ್ಯಕೇಂದ್ರಿತ ವೈಜ್ಞಾನಿಕ ಚಿಂತನೆ ಅತ್ಯಗತ್ಯ: ಡಾ. ರಾಜಪ್ಪ ದಳವಾಯಿ

ಮನುಷ್ಯನಿಗಿಂತ ಧರ್ಮ, ದೇವರು, ದೇವಾಲಯಗಳು ಹಾಗೂ ಧಾರ್ಮಿಕ ಸಂಸ್ಥೆಗಳು ಮುಖ್ಯವಾಗುವ ಪರಿಸ್ಥಿತಿ...

ಹಾಸನ | ಭಗತ್ ಸಿಂಗ್ ಕೇವಲ ಕ್ರಾಂತಿಕಾರಿಯಲ್ಲದೆ ವೈಜ್ಞಾನಿಕ ಮನೋಭಾವ ಉಳ್ಳವರಾಗಿದ್ದರು: ಡಾ. ಎಚ್ ಆರ್ ಸ್ವಾಮಿ

ಭಗತ್ ಸಿಂಗ್ ಅವರನ್ನು ಕೇವಲ ಒಬ್ಬ ಕ್ರಾಂತಿಕಾರಿ ಅಥವಾ ಸ್ವಾತಂತ್ರ್ಯ ಹೋರಾಟಗಾರನಾಗಿ...