ಶುರುವಾದ ಹೊಸ ಸೈಬರ್ ಅಪರಾಧ: ಯಾಮಾರಿದರೆ ಕ್ಷಣಾರ್ಧದಲ್ಲಿ ನಿಮ್ಮ ಖಾತೆಯ ಹಣ ಮಾಯ

Date:

ತಂತ್ರಜ್ಞಾನ ಯುಗದಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರೂ ನಮ್ಮ ಹಣ ಹಾಗೂ ಡಿಜಿಟಲ್‌ ಮಾಹಿತಿ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಸೈಬರ್‌ ಅಪರಾಧಿಗಳು ದಿನದಿಂದ ದಿನಕ್ಕೆ ವಿನೂತನ ಸೈಬರ್‌ ತಂತ್ರಜ್ಞಾನಗಳನ್ನು ಅಳವಡಿಸಿ ನಮ್ಮ ಬ್ಯಾಂಕ್‌ ಖಾತೆಯಲ್ಲಿದ್ದ ಹಣಕ್ಕೆ ಕನ್ನ ಹಾಕುತ್ತಾರೆ. ಕ್ಷಣಕ್ಷಣಕ್ಕೂ ಜಾಗರೂಕರಾಗಿರಬೇಕಾದ ಸನ್ನಿವೇಷ ಈಗ ಎದುರಾಗಿದೆ. ಇಂಟರ್‌ನೆಟ್‌, ಫೋನ್‌ ಕರೆಗಳು, ಲಿಂಕ್‌ಗಳು, ಡಿಜಿಟಲ್ ಕರೆ, ಸಂದೇಶಗಳು ಮಾತ್ರವಲ್ಲ ಪರಿಚಿತರನ್ನು ನಂಬಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

- Advertisement -

ಹತ್ತಾರು ಸೈಬರ್‌ ವಂಚನೆಗಳ ಜೊತೆಗೆ ಈಗೊಂದು ಹೊಸ ವಿಧಾನದ ಸೈಬರ್‌ ಅಪರಾಧ ಶುರುವಾಗಿದೆ. ನಿಮ್ಮ ಜೊತೆಯಲ್ಲಿದ್ದೆ ನಿಮಗೆ ಗೊತ್ತೆ ಆಗದ ರೀತಿಯಲ್ಲಿ ನಿಮ್ಮನ್ನು ವಂಚಿಸುತ್ತಾರೆ. ನೂತನ ವಂಚನೆಯ ಬಗ್ಗೆ ಜೆರೋಧಾ ಸಹ ಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ನಿತಿನ್‌ ಅವರು ತಮ್ಮ ವಿಡಿಯೋದಲ್ಲಿ ವಂಚಕರು ಯಾರನ್ನು ಗುರಿಯಾಗಿರಿಸಿಕೊಳ್ಳುತ್ತಾರೆ, ಈ ರೀತಿಯ ವಂಚನೆಗಳಿಂದ ಸಾಮಾನ್ಯ ಜನರು ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದನ್ನು ವಿವರಿಸಿದ್ದಾರೆ.

ಅಪರಿಚಿತ ವ್ಯಕ್ತಿ ನಿಮ್ಮ ಬಳಿ ಬಂದು, ನನ್ನ ಫೋನ್‌ ಕಳೆದು ಹೋಗಿದೆ ಅಥವಾ ಬಿಟ್ಟು ಬಂದಿದ್ದೇನೆ ನನಗೆ ತುರ್ತು ಕರೆ ಮಾಡುವುದಿದೆ, ಸ್ವಲ್ಪ ನಿಮ್ಮ ಮೊಬೈಲ್ ನೀಡುತ್ತೀರಾ ಎಂದು ಕೇಳುತ್ತಾರೆ. ಅಮಾಯಕ ಜನರು ಮನ ಕರಗಿಯೋ ಅಥವಾ ಆತನನ್ನು ನಂಬಿ ತಮ್ಮ ಮೊಬೈಲ್‌ ಫೋನ್‌ಅನ್ನು ಆತನಿಗೆ ಕೊಡಬಹುದು. ಆದರೆ ಇದೊಂದು ವಂಚನೆಯ ಹೊಸ ವಿಧಾನವಾಗಿದೆ. ಆ ವ್ಯಕ್ತಿ ನಿಮ್ಮ ಒಟಿಪಿಯನ್ನು ಪ್ರತಿಬಂಧಿಸುವ ಮೂಲಕ ನಿಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಖಾಲಿ ಮಾಡಿಬಿಡಬಹುದು. ವಂಚಕ ನಿಮಗೆ ಅರಿವಿಲ್ಲದೆಯೇ ಮೋಸಗೊಳಿಸುತ್ತಾನೆ.

ವಂಚಕ ನಿಮ್ಮ ಮೊಬೈಲ್ ಅನ್ನು ಬಳಸುತ್ತಿರುವಂತೆ ನಟಿಸಿ ಇಲ್ಲೆ ನೆಟ್‌ವರ್ಕ್‌ ಸಿಗುತ್ತಿಲ್ಲವೆಂದು ಸ್ವಲ್ಪ ದೂರ ಹೋಗಿ ವಂಚನೆಯ ಹೊಸ ಆಪ್‌ಗಳನ್ನು ಡೌನ್‌ಲೋಡ್ ಮಾಡಬಹುದು ಇಲ್ಲವೇ ವೈಯಕ್ತಿಕ ಮಾಹಿತಿಯನ್ನು ಡೌನ್ ಲೋಡ್ ಮಾಡಲು ಅಸ್ತಿತ್ವದಲ್ಲಿರುವ ಅಪ್ಲಿಕೇಶನ್‌ಗಳನ್ನು ತೆರೆಯಬಹುದು ಅಥವಾ ನಿಮಗೆ ಬರುವ ಕರೆ, ಬ್ಯಾಂಕ್ ಅಲರ್ಟ್‌ ಸಂದೇಶ ಸೇರಿದಂತೆ ಎಲ್ಲವು ತನ್ನ ಮೊಬೈಲ್ ನಂಬರ್‌ಗೆ ಬರುವಂತೆ ನಿಮ್ಮ ಫೋನ್ ಸೆಟ್ಟಿಂಗ್ಸ್ ಬದಲು ಮಾಡಬಹುದು.

ಈ ಸುದ್ದಿ ಓದಿದ್ದೀರಾ? ಸೈಬರ್‌ ಜಗತ್ತಿನ ಕರಾಳ ಮುಖ ಡಿಜಿಟಲ್‌ ಅರೆಸ್ಟ್: ಎಚ್ಚರ ವಹಿಸದಿದ್ದರೆ ಹಣ, ಜೀವನ ಎರಡೂ ಮಾಯ!

ನಂತರ ವಂಚಕರಿಗೆ ಬ್ಯಾಂಕ್ ಅಕೌಂಟ್ ಖಾತೆಯ ವಿವರ, ಒಟಿಪಿ ಲಭ್ಯವಾಗುವ ಮೂಲಕ ಅನಧಿಕೃತವಾಗಿ ನಿಮ್ಮ ಖಾತೆಯಲ್ಲಿದ್ದ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳಬಹುದು. ಅಷ್ಟೇ ಅಲ್ಲ ನಿಮ್ಮ ಮೊಬೈಲ್‌ನ ಪಾಸ್ ವರ್ಡ್ಸ್‌ಗಳನ್ನು ಬದಲಾಯಿಸಬಹುದು. ಒಂದು ಬಾರಿ ತನ್ನಿಷ್ಟಕ್ಕೆ ಸೆಟ್ಟಿಂಗ್ಸ್‌ಗಳನ್ನು ಬದಲಾಯಿಸಿಕೊಂಡರೆ ಸುಲಭವಾಗಿ ನಿಮ್ಮ ಖಾತೆಯಲ್ಲಿನ ಹಣವನ್ನು ನಿಮಗೆ ಅರಿವಿಲ್ಲದೆ ಮೋಸಗಾರರು ವಂಚಿಸುತ್ತಾರೆ. ನಿಮ್ಮ ಬ್ಯಾಂಕ್‌ ಖಾತೆಯಲ್ಲಿದ್ದ ದುಡ್ಡೆಲ್ಲ ಕ್ಷಣಾರ್ಧದಲ್ಲಿ ಖಾಲಿಯಾಗುತ್ತದೆ. ಈ ಕಾರಣದಿಂದ ಇಂತಹ ವಂಚನೆಗಳಿಂದ ನೀವು ನಿಮ್ಮನ್ನು ರಕ್ಷಿಸಿಕೊಳ್ಳಬೇಕು.

ಆದ್ದರಿಂದ ಯಾರೇ ನಿಮ್ಮ ಬಳಿ ಮೊಬೈಲ್ ಕೇಳಿದರೂ ಅವರ ಕೈಗೆ ನೇರವಾಗಿ ಮೊಬೈಲ್ ಕೊಡಬೇಡಿ. ಒಂದು ವೇಳೆ ಯಾರಾದರು ನಿಮ್ಮಲ್ಲಿ ಮೊಬೈಲ್ ಕೊಡುವಂತೆ ವಿನಂತಿಸಿಕೊಂಡರೆ, ಅವರಿಗೆ ಬೇಕಾದವರ ನಂಬರ್ ಡಯಲ್ ಮಾಡಿ, ಫೋನ್ ಸ್ಪೀಕರ್ ಅನ್ನು ಆನ್ ಮಾಡಿ ಮಾತನಾಡಿಸಬೇಕು ಎಂದು ನಿತಿನ್ ಕಾಮತ್ ವಿಡಿಯೋದಲ್ಲಿ ಸಲಹೆ ನೀಡಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಐ ಸ್ಮಾರ್ಟ್ ಗ್ಲಾಸ್‌ಗಳ ರಹಸ್ಯ ಚಿತ್ರೀಕರಣಕ್ಕೆ ತಡೆ: ಡಿಜಿಟಲ್ ಲೋಕದಲ್ಲಿ ಸದ್ದು ಮಾಡುತ್ತಿದೆ ಹೊಸ ಆ್ಯಪ್

ತಂತ್ರಜ್ಞಾನ ಬೆಳೆದಂತೆ ಖಾಸಗಿತನಕ್ಕೆ ಧಕ್ಕೆಯಾಗುತ್ತಿರುವ ಆತಂಕದ ನಡುವೆಯೇ, ರಹಸ್ಯವಾಗಿ ವಿಡಿಯೊ ಅಥವಾ...

ಎಐ ವೇಗಕ್ಕೆ ತಡೆ ನೀಡಲು ಜಾಗತಿಕ ಕೂಗು: ಭುಗಿಲೆದ್ದ ಅಮೆರಿಕ–ಚೀನಾ ತಾಂತ್ರಿಕ ಜಟಾಪಟಿ

ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಅತಿವೇಗದ ಓಟಕ್ಕೆ ಕಡಿವಾಣ ಹಾಕಿ, ಸುರಕ್ಷತೆಗೆ...

ಐಫೋನ್ 18 ಪ್ರೊ ಸರಣಿ ಬಿಡುಗಡೆ: ಭಾರತದಲ್ಲಿ ಹಳೆಯ ಐಫೋನ್ ಮಾದರಿಗಳ ಬೆಲೆ ಭಾರಿ ಏರಿಕೆ

ಆ್ಯಪಲ್ ಕಂಪನಿಯು ತನ್ನ ನೂತನ 'ಐಫೋನ್ 18 ಪ್ರೊ' ಸರಣಿಯನ್ನು ಮಾರುಕಟ್ಟೆಗೆ...

ಸೈಬರ್ ವಂಚಕರ ಹೊಸ ಅಸ್ತ್ರ: ಏನಿದು frozen screen ಯುಪಿಐ ಸ್ಕ್ಯಾಮ್?

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮೂಲಕ ಹಣದ ವಹಿವಾಟು ಅತ್ಯಂತ ಸಾಮಾನ್ಯವಾಗಿದೆ....