ಚಿಂತಾಮಣಿ | 10 ವರ್ಷ ಅಭಿವೃದ್ಧಿ ಮಾಡಲಿಲ್ಲ,ಮಾಡಿದ್ದು ಕುಚೇಷ್ಟೆ ಕುತಂತ್ರ : ಸಚಿವ ಡಾ.ಎಂ.ಸಿ.ಸುಧಾಕರ್

Date:

ಮಾಜಿ ಶಾಸಕರೊಬ್ಬರಿಗೆ ಜನರು10 ವರ್ಷ ಆಶೀರ್ವಾದ ಮಾಡಿದ್ದರು. ಅವರು ಅಭಿವೃದ್ಧಿ ಮಾಡಲಿಲ್ಲ.ಕುಚೇಷ್ಟೇ-ಕುತಂತ್ರಗಳನ್ನು ಮಾಡುವುದನ್ನೇ ಕರಗತ ಮಾಡಿಕೊಂಡಿದ್ದರು ಎಂದು ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ವಿರುದ್ದ ಸಚಿವ ಡಾ.ಎಂ.ಸಿ.ಸುಧಾಕರ್ ಪರೋಕ್ಷ ವಾಗ್ದಾಳಿ ನಡೆಸಿದರು.

- Advertisement -

ಚಿಂತಾಮಣಿ ನಗರದ ತಾಲೂಕು ಪಂಚಾಯತಿ ಕಛೇರಿಯ ಸಭಾಂಗಣದಲ್ಲಿ ಕೃಷಿ ವಿಶ್ವವಿದ್ಯಾಲಯ ಬೆಂಗಳೂರು, ಚಿಂತಾಮಣಿ ಕೃಷಿ ವಿಜ್ಞಾನಕೇಂದ್ರ,ಪಶು ಸಂಗೋಪನಾ ಇಲಾಖೆ, ಸಂಯುಕ್ತ ಆಶ್ರಯದಲ್ಲಿ,ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದವರ್ಗದವರಿಗೆ ಚಾಪ್‌ ಕಟರ್ ಮತ್ತು ಕೃಷಿ ಪರಿಕರಗಳ ಉಚಿತ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಡಿಸಿಸಿ ಬ್ಯಾಂಕ್ ಜಾಗ ತೆಗೆದುಕೊಂಡಿರುವುದು ಕ್ರೀಡಾಂಗಣ ನಿರ್ಮಾಣಕ್ಕಾಗಿಯೇ ಹೊರತು ಸ್ವಾರ್ಥಕ್ಕಲ್ಲ ಅದರಲ್ಲಿಯೂ ತಪ್ಪು ಹುಡುಕುವುದು ಸರಿಯಲ್ಲ.ನಮ್ಮ ವಿರೋಧಿಗಳು ಅರ್ಜಿಯನ್ನು ಸಲ್ಲಿಸಿ ತಕರಾರು ಮಾಡುವಂತಹ ಕೆಲಸದಲ್ಲಿ ತಲ್ಲಿನರಾಗಿರುವುದು ಎಷ್ಟರ ಮಟ್ಟಿಗೆ ಹೊಟ್ಟೆಯ ಉರಿ ಎಂಬುದನ್ನು ತಿಳಿಯಬಹುದಾಗಿದೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ತಿಳುವಳಿಕೆ ಇರುವವರು ನೀವುಗಳು ನಾನು ಇಷ್ಟೇಲ್ಲ ಕೆಲಸಗಳನ್ನು ಮಾಡುತ್ತಿದ್ದರೂ ಅದರಲ್ಲಿ ಒಂದಿಷ್ಟು ನನ್ನ ಸ್ವಾರ್ಥ,ವೈಯುಕ್ತಿಕ ಲಾಭಕ್ಕಾಗಿ ಮಾಡಿಲ್ಲ,ಒಂದು ಕೈಗಾರಿಕೆ ಪ್ರದೇಶ ಅಥವಾ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವಂತಹ ಕೆಲಸಕ್ಕಾಗಿ ನಿರ್ವಹಿಸುತ್ತಿದ್ದೇನೆಯೇ ಹೊರತು ದುರುದ್ದೇಶದಿಂದ ಕೂಡಿಲ್ಲವೆಂದು ನುಡಿದರು.

ಅಂತರ್ಜಲವೃದ್ಧಿ ಮುಂಗಾನಹಳ್ಳಿ ಹೋಬಳಿಯಲ್ಲಿ ನಿವರ್ಮಾಣವಾಗಿರುವ ಚೆಕ್ ಡ್ಯಾಂಗಳನ್ನು ನೀವು ನೋಡಿದರೆ ಅಂತರ್ಜಲದ ವೃದ್ಧಿಗೆ ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದೇನೆ.ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಒತ್ತನ್ನು ನೀಡಿದ್ದು ಇದರಿಂದ ಮಕ್ಕಳ ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸಲು ಮತ್ತು ಗೌರವಯುತವಾದ ಉದ್ಯೋಗ ಪಡೆದು ಅದರ ಮೂಲಕ ಆರ್ಥಿಕವಾಗಿ ಸ್ಥಿರವಾಗು ವಂತಹ ಕೆಲಸವಾಗುತ್ತದೆ. ಇವೆಲ್ಲವುಗಳಿಗಾಗಿ ನಾನು ಮಾಡುತ್ತಿರುವ ಆಲೋಚನೆಯಾಗಿದ್ದು,ಇದು ನನ್ನೊಬ್ಬನ ಆಲೋಚನೆಯಲ್ಲ ಬದಲಾಗಿ ನಮ್ಮ ಕುಟುಂಬದಲ್ಲಿ ನಮ ತಾತನಾದ ಎಂ ಸಿ ಆಂಜನೇಯರೆಡ್ಡಿ ಎ.ಚೌಡರೆಡ್ಡಿ ಕಾಲದಿಂದಲೂ ನಾವು ಜನಪರ ವಾದ ಕೆಲಸಗಳನ್ನು ನಿರ್ವಹಿಸಿ ಕೊಂಡು ಬರಲಾಗುತ್ತಿದೆಯೆಂದರು.

‘ನನ್ನ ವಿರೋಧಿಗಳು ಆರೋಪಗಳನ್ನು ಮಾಡುತ್ತಾರೆ.ಆದರೆ ಅವರು ಸತ್ಯ ವಾಸ್ತವಾಂಶ ಅರಿತು ಕಣ್ಣ ಮುಂದೆ ಇರುವ ಕೆಲಸಗಳನ್ನು ಗಮನಿಸಿ ಮಾಡಬೇಕಾಗುತ್ತದೆ.ಯಾವುದೇ ಸರ್ಕಾರಿ ಸಂಸ್ಥೆಗಳನ್ನು ನಡೆಸುತ್ತಿರುವುದು ಕೇವಲ ಜನರ ಒಳತಿಗಾಗಿ ಮಾತ್ರವೇ ಹೊರತು ವೈಯುಕ್ತಿಕ ಲಾಭದ ಉದ್ದೇಶಕ್ಕಲ್ಲ ವೆಂದರು. ನಮ್ಮ ಕುಟುಂಬದವರು ನನಗೆ ವಿದ್ಯಾಭ್ಯಾಸ,ಬದುಕುವ ದಾರಿಯನ್ನು ತೋರಿಸಿದ್ದಾರೆ ಆದರೆ ದುರುಪಯೋಗದ ಮಾರ್ಗವನು.ನಮಗೆ ನೀಡಿಲ್ಲವೆಂದು ಟೀಕಾಕಾರರಿಗೆ ತಿರುಗೇಟು ನೀಡಿದರು.

ಇದನ್ನು ಓದಿದ್ದೀರಾ..? ಚಿಕ್ಕಬಳ್ಳಾಪುರ | ಕೋರ್ಟಿನ ಮೂಲಕ ನ್ಯಾಯಪಡೆದ ಶಿಕ್ಷಕರಿಗೆ ನೇಮಕಾತಿಪತ್ರ ವಿತರಿಸಿದ ಡಿಡಿಪಿಐ

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ಮುನಿನಾರಾಯಣಪ್ಪ,ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಶ್ರೀನಾಥ್‌ ರೆಡ್ಡಿ,ಕೃಷಿವಿಶ್ವವಿದ್ಯಾಲಯ, ಕುರುಬೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಪಾಪಿರೆಡ್ಡಿ,ತಾಲೂಕು ಪಂಚಾಯಿತಿ ಇ ಓ ಎಸ್‌ಆನಂದ್,ಪೌರಾಯುಕ್ತ ಜಿ.ಎನ್.ಚಲಪತಿ, ಡಾ.ವೀರರಾಜು ಮತ್ತು ಸಿಡಿಪಿಒ ಮಹೇಶ್‌ ಬಾಬು ಸೇರಿದಂತೆ ಮತ್ತಿತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಶಾರ್ಜಾದಲ್ಲಿ ಹತ್ಯೆಗೀಡಾದ ಅಲ್ವಿನ್ ಪ್ರಕಾಶ್ ಕುಂದರ್‌ಗೆ ಹುಟ್ಟೂರಿನಲ್ಲಿ ಅಂತಿಮ ನಮನ

ಶಾರ್ಜಾದಲ್ಲಿ ಕಳೆದ ಜುಲೈನಲ್ಲಿ ನಿಗೂಢವಾಗಿ ಹತ್ಯೆಗೀಡಾದ ಕುಂದಾಪುರ ಪುರಸಭೆ ವ್ಯಾಪ್ತಿಯ ಹೊನ್ನನಕೇರಿ...

ಹಾಸನ |‘ನಾಸ್ತಿಕತೆ ಎಂದರೆ ಧರ್ಮವಿರೋಧವಲ್ಲ’; ಸಿಪಿಐಎಂ ಧರ್ಮೇಶ್ 

ಹಾಸನ ಜಿಲ್ಲೆಯ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ‘ಆಸ್ತಿಕತೆ ಮತ್ತು ನಾಸ್ತಿಕತೆ ವೈಯಕ್ತಿಕ ವಿಚಾರವೇ...

ಚಿಕ್ಕಮಗಳೂರು | ಕಸ್ತೂರಿರಂಗನ್ ವರದಿ: ವಿರೋಧಿಸಿ ಬೃಹತ್ ಪಾದಯಾತ್ರೆ 

ಮಲೆನಾಡಿನ ಜನರ ಪಾಲಿಗೆ 'ಮರಣಶಾಸನ'ವಾಗಿ ಪರಿಣಮಿಸಿರುವ ಅರಣ್ಯ ಕಾಯ್ದೆಗಳಲ್ಲೊಂದಾದ ಕಸ್ತೂರಿ ರಂಗನ್...

ಬಾಗಲಕೋಟೆ | ಸವಿತಾ ಸಮಾಜ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ಬಾಗಲಕೋಟೆಯ ಸವಿತಾ ಸಮಾಜ ಹಾಗೂ ಅದರ ಉಪಜಾತಿಗಳಿಗೆ ಸೇರಿದ ನಿರುದ್ಯೋಗಿಗಳು ಮತ್ತು...