ಈಕ್ವೆಡಾರ್‌ನಲ್ಲಿ ಭೂಕಂಪ ; 13 ಸಾವು, ನೂರಾರು ಮಂದಿಗೆ ಗಾಯ

Date:

ಈಕ್ವೆಡಾರ್ ಹಾಗೂ ಉತ್ತರ ಪೆರುವಿನ ಕರಾವಳಿ ಪ್ರದೇಶದಲ್ಲಿ ಶನಿವಾರ ಸಂಭವಿಸಿದ ಭಾರೀ ಭೂಕಂಪದಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ. ನಗರದ ಅನೇಕ ಮನೆಗಳು ಹಾಗೂ ಕಟ್ಟಡಗಳು ಧರೆಗುರುಳಿ ಜನಜೀವನ ಅಸ್ತವ್ಯಸ್ತವಾಗಿದೆ.

ಭೂಕಂಪನದ ತೀವ್ರತೆ 6.8ರಷ್ಟು ಇದ್ದು, ಗುವಾಯಾಸ್ ಪ್ರಾಂತ್ಯದ ಬಾಲಾವೋ ನಗರದಿಂದ 10 ಕಿ.ಮೀ ದೂರದಲ್ಲಿನ, 66.4 ಕಿ.ಮೀ ಆಳದಲ್ಲಿ ಇದರ ಕೇಂದ್ರ ಬಿಂದುವನ್ನು ಗುರುತಿಸಲಾಗಿದೆ.

ಭೂಕಂಪನದಲ್ಲಿ ಸುಮಾರು 380 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಎಲ್ ಓರೋ ಪ್ರದೇಶದಲ್ಲಿ ಹೆಚ್ಚಿನ ಹಾನಿ ಉಂಟಾಗಿದೆ. ಕನಿಷ್ಠ 44 ಮನೆಗಳು ಸಂಪೂರ್ಣ ನಾಶವಾದರೆ, 90ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. 30 ಸರ್ಕಾರಿ ಕಟ್ಟಡಗಳು ಸೇರಿ ಸುಮಾರು 80ಕ್ಕೂ ಹೆಚ್ಚು ಕಟ್ಟಡಗಳಿಗೆ ಭೂಕಂಪನದಿಂದ ಹಾನಿಯಾಗಿದೆ.

ಹಲವು ಕಡೆ ರಸ್ತೆಗಳು ಕುಸಿದಿದ್ದು, ವಾಹನ ಸಂಚಾರ ನಿರ್ಬಂಧಿಸಲಾಗಿದೆ. ನಗರದ ಸಾಂಟಾ ರೋಸಾ ವಿಮಾನ ನಿಲ್ದಾಣದಲ್ಲಿಕೂಡ ಹಾನಿ ಉಂಟಾಗಿದೆ. ಆದರೆ ನಿಲ್ದಾಣದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿಲ್ಲ.

2016ರಲ್ಲಿ ಈಕ್ವೆಡಾರ್‌ನಲ್ಲಿ  ಪ್ರಬಲ ಭೂಕಂಪ ಸಂಭವಿಸಿ 700ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.

Suprabha
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಶ್ವ ಶೌಚಾಲಯ ದಿನದಂದು ಒಳಚರಂಡಿಗೆ ಇಳಿದ ಬಿಲ್ ಗೇಟ್ಸ್

ನವೆಂಬರ್‌ 19ರ ವಿಶ್ವ ಶೌಚಾಲಯ ದಿನದ ಅಂಗವಾಗಿ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌...

ವಿಶ್ವಕಪ್ ಫೈನಲ್‌ಗೂ ತಟ್ಟಿದ ಪ್ಯಾಲೆಸ್ತೀನ್ ಪರ ಹೋರಾಟ: ಮೈದಾನಕ್ಕೆ ನುಗ್ಗಿ ಕೊಹ್ಲಿಯನ್ನು ತಬ್ಬಿಕೊಂಡ ಯುವಕ

ಇಸ್ರೇಲ್ ಹಾಗೂ ಪ್ಯಾಲೆಸ್ತೀನ್‌ ನಡುವೆ ನಡೆಯುತ್ತಿರುವ ಸಂಘರ್ಷದ ಬಿಸಿ ಗುಜರಾತಿನ ಅಹ್ಮದಾಬಾದ್‌ನ...

ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾದ ಶೆನ್ನಿಸ್ ಪಲಾಸಿಯೋಸ್

ನಿಕರಾಗುವಾ ದೇಶದ ಶೆನ್ನಿಸ್ ಪಲಾಸಿಯೋಸ್ ಅವರು ಮಿಸ್ ಯೂನಿವರ್ಸ್ 2023 ಆಗಿ...