ಅಮೆರಿಕ ರಹಸ್ಯ ದಾಖಲೆಗಳ ದುರ್ಬಳಕೆ: ಎಫ್‌ಬಿಐನಿಂದ ಭಾರತೀಯ ಕಾರ್ಯತಂತ್ರ ತಜ್ಞನ ಬಂಧನ

Date:

ಭಾರತೀಯ ಮೂಲದ ಪ್ರಮುಖ ಅಮೆರಿಕನ್ ಕಾರ್ಯತಂತ್ರ ತಜ್ಞ ಮತ್ತು ದಕ್ಷಿಣ ಏಷ್ಯಾ ನೀತಿ ಸಲಹೆಗಾರ ಆಶ್ಲೆ ಟೆಲ್ಲಿಸ್ (64) ಅವರನ್ನು ಅಮೆರಿಕದ ಎಫ್‌ಬಿಐ ರಹಸ್ಯ ದಾಖಲೆಗಳನ್ನು ದುರ್ಬಳಕೆ ಮತ್ತು ಚೀನಾ ಸರ್ಕಾರಿ ಅಧಿಕಾರಿಗಳೊಂದಿಗೆ ಗುಪ್ತ ಸಭೆಗಳನ್ನು ನಡೆಸಿದ ಆರೋಪದ ಮೇಲೆ ಬಂಧಿಸಿದೆ. ವರ್ಜಿನಿಯಾದ ವಿಯೆನ್ನಾದಲ್ಲಿರುವ ಅವರ ಮನೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪುಟಗಳ ಪ್ರಮುಖ ರಹಸ್ಯಗಳು ಮತ್ತು ರಹಸ್ಯ ದಾಖಲೆಗಳನ್ನು ಪತ್ತೆ ಮಾಡಲಾಗಿದೆ ಎಂದು ನ್ಯಾಯಾಂಗ ವರದಿಗಳು ಬಹಿರಂಗಪಡಿಸಿವೆ.

- Advertisement -

ಆಶ್ಲೆ ಟೆಲ್ಲಿಸ್ ಅವರ ಮೇಲೆ ಅಮೆರಿಕದ ರಾಷ್ಟ್ರರಕ್ಷಣಾ ರಹಸ್ಯ ದಾಖಲೆಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದಾನೆ ಎಂಬ ಗಂಭೀರ ಆರೋಪ ಹೊರಿಸಲಾಗಿದೆ. ಅಮೆರಿಕದ ನ್ಯಾಯಾಂಗ ಇಲಾಖೆಯ ಮಾಹಿತಿ ಪ್ರಕಾರ, ಟೆಲ್ಲಿಸ್ ಅವರ ವರ್ಜೀನಿಯಾ ರಾಜ್ಯದ ವಿಯೆನ್ನಾ ನಿವಾಸದಲ್ಲಿ ಶೋಧ ನಡೆಸಿದಾಗ, ಸಾವಿರಕ್ಕೂ ಹೆಚ್ಚು ಪುಟಗಳ ಪ್ರಮುಖ ರಹಸ್ಯಗಳು ಮತ್ತು ರಹಸ್ಯ ದಾಖಲೆಗಳು ಪತ್ತೆಯಾಗಿವೆ. ಇವುಗಳಲ್ಲಿ ಕೆಲವು ದಾಖಲೆಗಳು ಲಾಕ್ ಕ್ಯಾಬಿನೆಟ್‌ಗಳು, ಬಾಸ್ಮೆಂಟ್ ಕಚೇರಿ, ಹಾಗೂ ಕಸದ ಚೀಲಗಳಲ್ಲಿ ಇರಿಸಲ್ಪಟ್ಟಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ತನಿಖಾ ವರದಿ ಪ್ರಕಾರ, ಟೆಲ್ಲಿಸ್ ಅವರು 2025ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಅಮೆರಿಕದ ರಕ್ಷಣಾ ಹಾಗೂ ವಿದೇಶಾಂಗ ಇಲಾಖೆಗಳ ಕಟ್ಟಡಗಳಿಂದ ರಹಸ್ಯ ದಾಖಲೆಗಳನ್ನು ಮುದ್ರಿಸಿ ತೆಗೆದುಕೊಂಡಿದ್ದರು. ಸಿಸಿಟಿವಿ ದೃಶ್ಯದಲ್ಲಿ ಅವರು ಲೆದರ್ ಬ್ರಿಫ್‌ಕೇಸ್‌ನೊಂದಿಗೆ ಕಟ್ಟಡದಿಂದ ಹೊರಬರುವ ದೃಶ್ಯ ದಾಖಲಾಗಿರುವುದಾಗಿ ಎಫ್‌ಬಿಐ ಹೇಳಿದೆ. ಅಕ್ಟೋಬರ್ 11ರಂದು ಎಫ್‌ಬಿಐ ತಂಡವು ಟೆಲ್ಲಿಸ್ ಅವರ ಮನೆಯಲ್ಲಿ ಶೋಧ ನಡೆಸಿದಾಗ ಅವರು ಸಹಕಾರ ನೀಡಿದ್ದು, ಲ್ಯಾಪ್‌ಟಾಪ್ ತೆರೆಯಲು ತಮ್ಮ ಬೆರಳಚ್ಚು ನೀಡಿ, ಕ್ಯಾಬಿನೆಟ್‌ಗಳ ಕೀಲಿಗಳನ್ನು ಒದಗಿಸಿದ್ದಾರೆಂದು ವರದಿಯಾಗಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪಟೇಲರನ್ನು ಹೈಜಾಕ್ ಮಾಡುವುದು ಆರ್‌ಎಸ್‌ಎಸ್‌ಗೆ ಸುಲಭವಲ್ಲ!

ಈ ಪ್ರಕರಣದಲ್ಲಿ ಚೀನಾ ಸಂಪರ್ಕವೂ ಚರ್ಚೆಗೆ ಕಾರಣವಾಗಿದೆ. ಎಫ್‌ಬಿಐ ಪ್ರಕಾರ, ಟೆಲ್ಲಿಸ್ ಕಳೆದ ಕೆಲವು ವರ್ಷಗಳಲ್ಲಿ ಚೀನಾ ಸರ್ಕಾರದ ಅಧಿಕಾರಿಗಳೊಂದಿಗೆ ಹಲವಾರು ಬಾರಿ ಭೇಟಿಯಾಗಿದ್ದಾರೆ. 2025ರ ಸೆಪ್ಟೆಂಬರ್ 15ರಂದು ವರ್ಜೀನಿಯಾದ ಫೇರ್‌ಫ್ಯಾಕ್ಸ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ ಅವರು ಚೀನಾದ ಅಧಿಕಾರಿಯೊಬ್ಬರೊಂದಿಗೆ ಭೇಟಿ ನಡೆಸಿ ದಾಖಲೆ ನೀಡಿದ್ದಾರೆ ಎನ್ನಲಾಗಿದೆ. ಇದೇ ರೀತಿ 2023ರ ಏಪ್ರಿಲ್‌ನಲ್ಲಿ ನಡೆದ ಮತ್ತೊಂದು ಸಭೆಯಲ್ಲಿ ಇರಾನ್–ಚೀನಾ ಸಂಬಂಧಗಳು ಮತ್ತು ಕೃತಕ ಬುದ್ಧಿಮತ್ತೆ ಕುರಿತು ಚರ್ಚೆ ನಡೆದಿತ್ತು ಎಂಬ ಮಾಹಿತಿ ಹೊರಬಂದಿದೆ.

ಅಮೆರಿಕದ ಈಸ್ಟರ್ನ್ ಡಿಸ್ಟ್ರಿಕ್ಟ್ ಆಫ್ ವರ್ಜೀನಿಯಾದ ಯುಎಸ್ ಅಟಾರ್ನಿ ಲಿಂಡ್ಸೆ ಹ್ಯಾಲಿಗನ್ ಅವರು ನೀಡಿದ ಹೇಳಿಕೆಯಲ್ಲಿ, ”ಈ ಪ್ರಕರಣ ರಾಷ್ಟ್ರದ ಸುರಕ್ಷತೆಯ ಮೇಲೆ ಗಂಭೀರ ಧಕ್ಕೆಯನ್ನುಂಟುಮಾಡುವಂತಹದ್ದು. ನಾವು ದೇಶದ ಜನರನ್ನು ಎಲ್ಲ ವಿಧದ ಆತಂಕಗಳಿಂದ ರಕ್ಷಿಸಲು ಬದ್ಧರಾಗಿದ್ದೇವೆ. ಆರೋಪಗಳು ಸಾಬೀತಾದರೆ ಟೆಲ್ಲಿಸ್ ಅವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 2.5 ಲಕ್ಷ ಡಾಲರ್‌ಗಳ (ಸುಮಾರು ₹2.1 ಕೋಟಿ) ದಂಡ ವಿಧಿಸುವ ಸಾಧ್ಯತೆಯಿದೆ” ಎಂದಿದ್ದಾರೆ.

ಆಶ್ಲೆ ಟೆಲ್ಲಿಸ್ ಮುಂಬೈ ಮೂಲದವರು. ಅವರು ಮುಂಬೈನ ಸೇಂಟ್ ಗ್ಸೇವಿಯರ್ಸ್ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿ, ನಂತರ ಶಿಕಾಗೋ ವಿಶ್ವವಿದ್ಯಾಲಯದಿಂದ ರಾಜಕೀಯಶಾಸ್ತ್ರದಲ್ಲಿ ಎಂಎ ಮತ್ತು ಪಿಎಚ್‌ಡಿ ಪಡೆದಿದ್ದಾರೆ. 2001ರಿಂದ ಅಮೆರಿಕ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅವರು, ಹಲವು ಆಡಳಿತಗಳಿಗೆ ಭಾರತ–ದಕ್ಷಿಣ ಏಷ್ಯಾ ನೀತಿಗಳ ಕುರಿತ ಸಲಹೆಗಾರರಾಗಿದ್ದರು. ಪ್ರಸ್ತುತ ಅವರು ವಾಷಿಂಗ್ಟನ್‌ನ ಕಾರ್ನೆಗಿ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಶನಲ್ ಪೀಸ್ ಸಂಸ್ಥೆಯ ಹಿರಿಯ ಸಂಶೋಧಕರಾಗಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ-ಅದಾನಿ ಸಾಕ್ಷ್ಯಚಿತ್ರ ಹಂಚಿಕೆ; 24 ಎಕ್ಸ್ ಖಾತೆದಾರರಿಗೆ ಮುಂಬೈ ಪೊಲೀಸರ ನೋಟಿಸ್

ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ಗೌತಮ್ ಅದಾನಿ ಅವರನ್ನು ಕುರಿತ...

5 ವರ್ಷಗಳ ಬಳಿಕ ಮಗನೊಂದಿಗೆ ಮ್ಯಾನ್ಮಾರ್‌ ನಾಯಕಿ ಆಂಗ್ ಸಾನ್ ಸೂ ಕಿ ಮಾತು; ಯಾರೀ ʼಶಾಂತಿʼ ದೂತೆ?

ಮ್ಯಾನ್ಮಾರ್‌ನ ಪ್ರಜಾಪ್ರಭುತ್ವದ ಧೀಮಂತ ನಾಯಕಿ ಹಾಗೂ ನೋಬೆಲ್ ಶಾಂತಿ ಪ್ರಶಸ್ತಿ ವಿಜೇತೆ...

ಮಧುಮೇಹಿಗಳಿಗೆ ಸಿಹಿಸುದ್ದಿ: ಇನ್ಸುಲಿನ್, ಮಾತ್ರೆಗಳ ಹಂಗಿಲ್ಲದೆ ‘ಶುಗರ್’ ನಿಯಂತ್ರಿಸುವ ಹೊಸ ಸಾಧನ!

ಇನ್ಸುಲಿನ್ ಮತ್ತು ನಿರಂತರ ಮಾತ್ರೆಗಳ ಹಂಗಿಲ್ಲದೆ ಮಧುಮೇಹವನ್ನು (ಸಕ್ಕರೆ ಕಾಯಿಲೆ) ಪರಿಣಾಮಕಾರಿಯಾಗಿ...

ಶಾಂತಿ ಮಾತುಕತೆ ಬೆನ್ನಲ್ಲೇ ಕೀವ್ ಮೇಲೆ ರಷ್ಯಾ ಕ್ಷಿಪಣಿ ದಾಳಿ; 2 ಸಾವು, 34 ಮಂದಿಗೆ ಗಾಯ

ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸುವ ಕುರಿತು ಅಮೆರಿಕದ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆದ ಕೆಲವೇ...