ಖಾಲೆದಾ ಜಿಯಾ | ಪಶ್ಚಿಮ ಬಂಗಾಳದಿಂದ ಬಾಂಗ್ಲಾ ಗದ್ದುಗೆವರೆಗಿನ ಏಳುಬೀಳು

Date:

ಬಾಂಗ್ಲಾದೇಶದ ರಾಜಕೀಯದಲ್ಲಿ ಭಾರತ ವಿರೋಧಿ ನಿಲುವಿಗೆ ಹೆಸರಾದವರು ಖಾಲೆದಾ ಜಿಯಾ. ಆದರೆ ವಿಚಿತ್ರವೆಂದರೆ, ಈ’ಉಕ್ಕಿನ ಮಹಿಳೆ’ಯ ಬದುಕಿನ ಮೊದಲ ಉಸಿರು ಮತ್ತು ಬಾಲ್ಯದ ಹೆಜ್ಜೆಗಳು ಮೂಡಿದ್ದುಇದೇ ಭಾರತದ ಮಣ್ಣಿನಲ್ಲಿ. ಅವಿಭಜಿತ ಭಾರತದ ಬಂಗಾಳ ಪ್ರಾಂತ್ಯದಲ್ಲಿ ಜನಿಸಿ, ನಂತರ ಬಾಂಗ್ಲಾದೇಶದ ಪ್ರಧಾನಿಯಾದ ಅವರ ಹಾದಿ ದಕ್ಷಿಣ ಏಷ್ಯಾದ ರಾಜಕೀಯ ಇತಿಹಾಸದಷ್ಟೇ ಸಂಕೀರ್ಣವಾದದ್ದು.

- Advertisement -

1945ರ ಆಗಸ್ಟ್ 15ರಂದು ಭಾರತದ ಪಶ್ಚಿಮ ಬಂಗಾಳದ ಜಲ್ಪೈಗುರಿ (Jalpaiguri) ಜಿಲ್ಲೆಯಲ್ಲಿ ಖಾಲೆದಾ ಜಿಯಾ ಜನಿಸಿದರು.  ಖಾಲೆದಾ ತಂದೆ ಇಸ್ಕಂದರ್ ಮಜುಂದಾರ್ ಅಲ್ಲಿನ ಟೀ ಎಸ್ಟೇಟ್‌ ಒಂದರಲ್ಲಿ ವ್ಯವಹಾರ ನಡೆಸುತ್ತಿದ್ದರು. ಹೀಗಾಗಿ ಖಾಲೆದಾ ಅವರು ತಮ್ಮ ಆರಂಭಿಕ ಜೀವನವನ್ನು ಕಳೆದಿದ್ದು ಭಾರತದ ವಾತಾವರಣದಲ್ಲಿ. 1947ರ ದೇಶ ವಿಭಜನೆಯ ನಂತರ, ಅವರ ಕುಟುಂಬ ಆಗಿನ ಪಾಕಿಸ್ತಾನದ ಭಾಗವಾದ ದಿನಾಜ್‌ಪುರಕ್ಕೆ (ಈಗಿನ ಬಾಂಗ್ಲಾದೇಶ) ವಲಸೆ ಹೋಯಿತು. ಅವರು ಹುಟ್ಟಿದ್ದು ಭಾರತದಲ್ಲಿ ಎಂಬ ಸಂಗತಿಯೇ ಮುಂದೆ ಅವರ ರಾಜಕೀಯ ವಿರೋಧಿಗಳಿಗೆ ಟೀಕೆ ಮಾಡಲು ಅಸ್ತ್ರವಾಗಿದ್ದು ವಿಪರ್ಯಾಸ. ಆದರೂ ಅವರ ಬಾಲ್ಯದ ಸ್ಮೃತಿಗಳಲ್ಲಿ ಜಲ್ಪೈಗುರಿಯ ಚಹಾ ತೋಟಗಳ ಹಸಿರು ಮತ್ತು ಭಾರತೀಯ ಸಂಸ್ಕೃತಿಯ ಸಣ್ಣದೊಂದು ಎಳೆ ಇದ್ದೇ ಇತ್ತು.  

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸಂಘರ್ಷದ ಹಾದಿ

ರಾಷ್ಟ್ರಾಧ್ಯಕ್ಷ ಜಿಯಾವುರ್ ರೆಹಮಾನ್ ಅವರ ಪತ್ನಿಯಾಗಿ ಕೇವಲ ಕುಟುಂಬಕ್ಕೆ ಸೀಮಿತವಾಗಿದ್ದ ಖಾಲೆದಾ, 1981ರಲ್ಲಿ ಪತಿಯ ಹತ್ಯೆಯ ನಂತರ ಅನಿವಾರ್ಯವಾಗಿ ರಾಜಕೀಯಕ್ಕೆ ಧುಮುಕಿದರು. ಬಿಎನ್‌ಪಿ (ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ) ಅನಾಥವಾಗಬಾರದೆಂಬ ಕಾರಣಕ್ಕೆ ನಾಯಕತ್ವ ವಹಿಸಿಕೊಂಡ ಅವರು, ಅಂದಿನ ಮಿಲಿಟರಿ ಸರ್ವಾಧಿಕಾರಿ ಹುಸೇನ್ ಮೊಹಮ್ಮದ್ ಇರ್ಷಾದ್ ವಿರುದ್ಧದ ಪ್ರಜಾಪ್ರಭುತ್ವ ಪರ ಹೋರಾಟದಲ್ಲಿ ತೋರಿದ ಧೈರ್ಯ ಅವರನ್ನು ಜನಸಾಮಾನ್ಯರ ನಾಯಕಿಯನ್ನಾಗಿ ರೂಪಿಸಿತು.

khaleda zia 2

ಪ್ರಧಾನಿ ಪಟ್ಟ

1991ರಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದು ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಅವರು ಇತಿಹಾಸ ನಿರ್ಮಿಸಿದರು. ಅವರ ಆಡಳಿತದಲ್ಲಿ ದೇಶ ಸಂಸದೀಯ ಪ್ರಜಾಪ್ರಭುತ್ವಕ್ಕೆ ಮರಳಿತು. ಗ್ರಾಮೀಣ ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಶಾಲೆಗೆ ಹೋಗಲು ಪ್ರೋತ್ಸಾಹಧನ ನೀಡುವ ಅವರ ಯೋಜನೆ ಕ್ರಾಂತಿಕಾರಕವಾಗಿತ್ತು. ಮಹಿಳಾ ಸಬಲೀಕರಣದ ದೃಷ್ಟಿಯಿಂದ ಇದು ಜಾಗತಿಕ ಮಟ್ಟದಲ್ಲೂ ಮೆಚ್ಚುಗೆ ಗಳಿಸಿತು.

‘ಬ್ಯಾಟಲ್ ಆಫ್ ಬೇಗಮ್ಸ್’

ಖಾಲೆದಾ ಜಿಯಾ ಮತ್ತು ಶೇಖ್‌ ಹಸೀನಾ ನಡುವಿನ ದ್ವೇಷ ‘ಬ್ಯಾಟಲ್ಸ್ ಆಫ್ ಬೇಗಮ್ಸ್’ ಎಂದೇ ಕುಖ್ಯಾತಿ ಪಡೆಯಿತು. ಕುತೂಹಲಕಾರಿ ಸಂಗತಿಯಂದರೆ, 1971ರ ಬಾಂಗ್ಲಾ ವಿಮೋಚನಾ ಯುದ್ಧದ ಸಮಯದಲ್ಲಿ ಶೇಖ್‌ ಹಸೀನಾ ಭಾರತದಲ್ಲಿ ಆಶ್ರಯ ಪಡೆದಿದ್ದರೆ, ಖಾಲೆದಾ ಜಿಯಾ ಪಾಕಿಸ್ತಾನದ ಸೇನೆಯ ಕಸ್ಟಡಿಯಲ್ಲಿ ಢಾಕಾ ಕಂಟೋನ್ಮೆಂಟ್‌ನಲ್ಲೇ ಉಳಿದಿದ್ದರು. ಇದನ್ನೇ ಅವರು ತಮ್ಮ ರಾಜಕೀಯ ಭಾಷಣಗಳಲ್ಲಿ “ನಾನು ಯುದ್ಧದ ಸಮಯದಲ್ಲಿ ದೇಶ ಬಿಟ್ಟು ಓಡಿಹೋಗಲಿಲ್ಲ” ಎಂದು ಹೇಳಿಕೊಳ್ಳಲು ಬಳಸಿಕೊಂಡರು. ಈ ಇಬ್ಬರು ನಾಯಕಿಯರ ಜಗಳ ದೇಶದ ಆರ್ಥಿಕತೆಗೆ ಮತ್ತು ಶಾಂತಿಗೆ ದೊಡ್ಡ ಪೆಟ್ಟು ನೀಡಿತು.

ಇದನ್ನು ಓದಿದ್ದೀರಾ? 2025 ಹಿನ್ನೋಟ : ನಿರಾಸೆಯ ಕತ್ತಲಲ್ಲಿ ಮಿನುಗಿದ ಭರವಸೆಯ ಕ್ರೀಡಾ ನಕ್ಷತ್ರಗಳು

ವಿವಾದಗಳು, ಭ್ರಷ್ಟಾಚಾರದ ಆರೋಪಗಳು

ಖಾಲೆದಾ ಜಿಯಾ ಅವರ ಆಡಳಿತ ಭ್ರಷ್ಟಾಚಾರದ ಆರೋಪಗಳಿಂದ ಮುಕ್ತವಾಗಿರಲಿಲ್ಲ. ಅವರ ಪುತ್ರ ತಾರಿಕ್‌ ರೆಹಮಾನ್ ಆಡಳಿತದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಿದರು ಎಂಬ ಆರೋಪ ಬಲವಾಗಿತ್ತು. ‘ಜಿಯಾ ಆರ್ಪನೇಜ್‌ ಟ್ರಸ್ಟ್’ ಹಣ ದುರುಪಯೋಗ ಪ್ರಕರಣದಲ್ಲಿ ಅವರಿಗೆ ಜೈಲು ಶಿಕ್ಷೆಯೂ ಆಯಿತು. 2024ರಲ್ಲಿ ಅವಾಮಿ ಲೀಗ್‌ ರ್ಯಾಲಿಯ ಮೇಲೆ ನಡೆದ ಗ್ರೆನೇಡ್ ದಾಳಿಯ ಹಿಂದೆ ಬಿಎನ್‌ಪಿ ಕೈವಾಡವಿದೆ ಎಂಬ ಆರೋಪ ಅವರ ವರ್ಚಸ್ಸಿಗೆ ಮಸಿ ಬಳಿಯಿತು.

khaleda zia 11

ಮೂಲಭೂತವಾದಿ ಪಕ್ಷಗಳೊಂದಿಗೆ ಮೈತ್ರಿ

2001ರಲ್ಲಿ ಅಧಿಕಾರ ಹಿಡಿಯಲು ಕೆಲವು ಮೂಲಭೂತವಾದಿ ಪಕ್ಷಗಳೊಂದಿಗೆ ಅವರು ಮಾಡಿಕೊಂಡ ಮೈತ್ರಿ ದೊಡ್ಡ ವಿವಾದಕ್ಕೆ ಕಾರಣವಾಯಿತು. ಭಾರತದಲ್ಲಿ ಹುಟ್ಟಿದವರಾದರೂ, ಅವರ ರಾಜಕೀಯ ನಿಲುವು ಭಾರತಕ್ಕೆ ಕಂಟಕವಾಗುವಂತಹ ಶಕ್ತಿಗಳನ್ನು ಬೆಳೆಸಿತು. ಅವರ ಆಡಳಿತದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆದ ದೌರ್ಜನ್ಯಗಳನ್ನು ತಡೆಯಲು ವಿಫಲರಾಗಿದ್ದು ಅವರ ಆಡಳಿತದ ಕಪ್ಪು ಚುಕ್ಕೆ.

ಭಾರತದೊಂದಿಗಿನ ಸಂಬಂಧ

ಖಾಲೆದಾ ಜಿಯಾ ಹುಟ್ಟಿದ್ದು ಭಾರತದಲ್ಲಾದರೂ, ಅವರ ರಾಜಕೀಯ ಬೆಳೆದಿದ್ದು ‘ಭಾರತ ವಿರೋಧಿ’ ಅಲೆಯ ಮೇಲೆ. “ಅವಾಮಿ ಲೀಗ್‌ ಗೆದ್ದರೆ ಬಾಂಗ್ಲಾ ಭಾರತದ ಗುಲಾಮವಾಗುತ್ತದೆ” ಎಂದು ಪ್ರಚಾರ ಮಾಡುವ ಮೂಲಕ ಅವರ ರಾಷ್ಟ್ರೀಯವಾದಿ ಮತಗಳನ್ನು ಸೆಳೆಯುತ್ತಿದ್ದರು. ಅವರ ಕಾಲದಲ್ಲಿ ಈಶಾನ್ಯ ಭಾರತದ ಪ್ರತ್ಯೇಕತಾವಾದಿಗಳಿಗೆ ಬಾಂಗ್ಲಾದಲ್ಲಿ ಆಶ್ರಯ ಸಿಗುತ್ತಿದೆ ಎಂಬ ಆರೋಪವನ್ನು ಭಾರತ ನಿರಂತರವಾಗಿ ಮಾಡುತ್ತಿತ್ತು. ಆದರೂ, ನೆರೆಹೊರೆಯ ವಾಸ್ತವವನ್ನರಿತು ಕೊನೆಯ ಹಂತದಲ್ಲಿ ದ್ವಿಪಕ್ಷೀಯ ವ್ಯಾಪಾರಕ್ಕೆ ಸಂಬಂಧಿಸಿದಂತೆ ಭಾರತದೊಂದಿಗೆ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಂಡಿದ್ದರು. 2018ರಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿಯಾಗಿ ಜೈಲು ಸೇರಿದ ಖಾಲೆದಾ, ತೀವ್ರ ಅನಾರೋಗ್ಯದ ಕಾರಣದಿಂದಾಗಿ ಕೊನೆಯವರೆಗೂ ಗೃಹಬಂಧನ ಮತ್ತು ಆಸ್ಪತ್ರೆಯಲ್ಲೇ ಬದುಕು ಕಳೆದರು. ಶೇಖ್‌ ಹಸೀನಾ ಭಾರತಕ್ಕೆ ಪಲಾಯನ ಮಾಡಿ ಮುಹಮ್ಮದ್ ಯೂನುಸ್ ಅಧಿಕಾರ ಸ್ವೀಕರಿಸಿದ ನಂತರ ಸಾಯುವ ಕೊನೆ ದಿನಗಳ ಮುನ್ನ ಬಂಧನದಿಂದ ಬಿಡುಗಡೆಯಾಗಿದ್ದರು. 

khaleda zia 14

ಇತಿಹಾಸದ ಪುಟಗಳಲ್ಲಿ ಖಾಲೆದಾ

ಖಾಲೆದಾ ಜಿಯಾ ಅವರದ್ದು ಕೇವಲ ಒಬ್ಬ ರಾಜಕಾರಣಿಯ ಕಥೆಯಲ್ಲ; ಅದು ಭಾರತದಲ್ಲಿ ಹುಟ್ಟಿ, ಪಶ್ಚಿಮ ಬಂಗಾಳದಲ್ಲಿ ಬೆಳೆದು, ಅಲ್ಲಿನ ರಾಜಕೀಯದ ದಿಕ್ಕನ್ನೇ ಬದಲಿಸಿದ ಮಹಿಳೆಯೊಬ್ಬರ ಗಾಥೆ. ಸರ್ವಾಧಿಕಾರವನ್ನು ಮೆಟ್ಟಿ ನಿಂತು ‘ದೇಶನೇತ್ರಿ’(ದೇಶದ ನಾಯಕಿ) ಎನಿಸಿಕೊಂಡ ಅವರು, ಅಧಿಕಾರದ ಲಾಲಸೆ ಮತ್ತು ತಪ್ಪು ರಾಜಕೀಯದ ಆಯ್ಕೆಗಳಿಂದಾಗಿ ಪತನವನ್ನು ಕಂಡರು. ಭಾರತದ ಜಪ್ಪೈಗುರಿಯಿಂದ ಆರಂಭವಾದ ಅವರ ಜೀವನದ ಪಯಣ, ಇಂದು ಅಂತ್ಯ ಕಂಡಿದೆ. ದಕ್ಷಿಣ ಏಷ್ಯಾದ ಅತ್ಯಂತ ಪ್ರಭಾವಿ ಹಾಗೂ ಹಠಮಾರಿ ನಾಯಕಿಯಂದೇ ಗುರುತಿಸುತ್ತದೆ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಕವಿತೆ | ಏನೂ ಇಲ್ಲ- ನಾಸೆರ್ ಫಯ್ಜ್

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಇರಾನಿನ ಕವಿ ನಾಸೆರ್ ಫಯ್ಜ್ ಅವರ...

ಕರ್ನಾಟಕ SIR | ಮತ ಹಕ್ಕಿಗೇ ಕನ್ನ: ಪರಿಶೋಧನಾ ವರದಿ ಬಿಚ್ಚಿಟ್ಟ ಮತದಾರರ ಕಣ್ಣೀರ ಕಥನ

ಪ್ರಜಾಪ್ರಭುತ್ವದ ಅಡಿಪಾಯವೇ ಮತದಾರ ಮತ್ತು ಮತದಾನ. ಆದರೆ, ಈ ಅಡಿಪಾಯವನ್ನೇ ಕೆಡವುವ...

ಜಪಾನ್ ಅಂಗಳದಲ್ಲಿ ಮಿನುಗಿದ ಭಾರತದ ‘ಚಿನ್ನ’ದ ನಾರಿಯರು: ಕಷ್ಟಗಳನ್ನು ಮೆಟ್ಟಿ ನಿಂತ ಗೆಲುವಿನ ಗಾಥೆ

ಜಪಾನ್‌ನ ಐಚಿ ಪ್ರಾಂತ್ಯದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಭಾರತೀಯ...

ವ್ಯವಸ್ಥೆಯ ವೈಫಲ್ಯಕ್ಕೆ 32 ಬೈಗಾ ಕಂದಮ್ಮಗಳ ಬಲಿ: ಬುಡಕಟ್ಟು ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ?

ಕೇಂದ್ರ, ರಾಜ್ಯ ಸರ್ಕಾರಗಳು ಇಂತಹ ಅಳಿದುಳಿಯುತ್ತಿರುವ ಬುಡಕಟ್ಟು ಸಮುದಾಯದ ಕಡೆಗೆ ತಮ್ಮ...