ಪುನಃ ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದ ಟ್ರಂಪ್; 60ನೇ ಬಾರಿಯ ಹೇಳಿಕೆ ಎಂದು ಕಾಂಗ್ರೆಸ್ ವ್ಯಂಗ್ಯ

Date:

ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟನ್ನು ನಾನು ಪರಿಹರಿಸಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಬುಧವಾರ ನರೇಂದ್ರ ಮೋದಿ ನೇತೃತ್ವದ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಇದೀಗ ಇದು 60ನೇ ಬಾರಿಯ ಹೇಳಿಕೆಯಾಗಿದೆ ಎಂದು ವ್ಯಂಗ್ಯವಾಡಿದೆ.

- Advertisement -

ನಾನು ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದೆ ಎಂದು ಮಂಗಳವಾರ ಸೌದಿ ಅರೇಬಿಯ ಯುವರಾಜರೊಂದಿಗೆ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಪ್ರಜಾಪ್ರಭುತ್ವದ ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಈ ಕುರಿತು ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಜೈರಾಮ್ ರಮೇಶ್, “ಇಂತಹ ಹೇಳಿಕೆಗಳು ನಿಂತಂತೆ ಕಂಡು ಬಂದಾಗಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದನ್ನು ಮತ್ತೆ ಇಡೀ ಜಗತ್ತಿಗೆ ನೆನಪಿಸುತ್ತಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.

“ಸೌದಿ ಅರೇಬಿಯಾ ಯುವರಾಜರೊಂದಿಗೆ ಮಂಗಳವಾರ ನಡೆದ ದ್ವಿಪಕ್ಷೀಯ ಸಭೆಯ ವೇಳೆ, ನಾನು ಮಧ್ಯಪ್ರವೇಶಿಸಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ” ಎಂದು ಅವರು ಉಲ್ಲೇಖಿಸಿದ್ದಾರೆ.

ಇದನ್ನು ಓದಿದ್ದೀರಾ? ತಂತ್ರಜ್ಞಾನವು ಸಿನಿಮಾದಲ್ಲಿ ಏಕರೂಪತೆ ಹೇರುತ್ತಿದೆ: ನಿರ್ದೇಶಕ ಗಿರಿರಾಜ್

“ಖಂಡಿತವಾಗಿಯೂ ಅವರು ಇದೇ ಹೇಳಿಕೆಯನ್ನು ಇದಕ್ಕೂ ಮುನ್ನ ಸೌದಿ ಅರೇಬಿಯಾ, ಕತಾರ್, ಈಜಿಪ್ಟ್, ಬ್ರಿಟನ್, ನೆದರ್‌ಲ್ಯಾಂಡ್ಸ್ ಹಾಗೂ ಜಪಾನ್ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿನ ಮಾಧ್ಯಮ ಸಂವಾದಗಳಲ್ಲಿ ನೀಡಿದ್ದರು” ಎಂದೂ ಅವರು ನೆನಪಿಸಿದ್ದಾರೆ.

“ಇದೀಗ ಈ ಹೇಳಿಕೆಯ ಸಂಖ್ಯೆ 60ಕ್ಕೆ ತಲುಪಿದೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.

ಇದಕ್ಕೂ ಮುನ್ನ, ಸೌದಿ ಅರೇಬಿಯಾದ ಯುವರಾಜರೊಂದಿಗೆ ಮಂಗಳವಾರ ನಡೆದ ದ್ವಿಪಕ್ಷೀಯ ಸಭೆಯಲ್ಲಿ, “ನಾನು ವಾಸ್ತವವಾಗಿ ಈವರೆಗೆ ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ. ಮತ್ತೊಂದು ಯುದ್ಧ ಸ್ಥಗಿತಗೊಳ್ಳಲಿದೆ (ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರೊಂದಿಗೆ ಮಾತುಕತೆ ನಡೆಯುತ್ತಿದೆ) ಆದರೆ, ಇದು ಅಂದುಕೊಂಡಿದ್ದಕ್ಕೆ ದೀರ್ಘಕಾಲ ತೆಗೆದುಕೊಳ್ಳುತ್ತಿರುವುದರಿಂದ, ನನಗೆ ಪುಟಿನ್ ಬಗ್ಗೆ ಕೊಂಚ ಅಚ್ಚರಿಯಾಗಿದೆ. ಹೀಗಿದ್ದೂ, ನಾವು ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ಸ್ಥಗಿತಗೊಳಿಸಿದೆವು” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಶಾಂತ್ ಕಿಶೋರ್ ಆಪ್ತ, ‘ಜನ್ ಸುರಾಜ್’ ಡಿಜಿಟಲ್ ಮ್ಯಾನೇಜರ್ ರೈಲಿನಿಂದ ನಾಪತ್ತೆ, ನಿಗೂಢ ಸಾವು

ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ನೇತೃತ್ವದ 'ಜನ್ ಸುರಾಜ್ ಪಾರ್ಟಿ'ಯ (ಜೆಎಸ್‌ಪಿ)...

ಆಸ್ಕರ್‌ 2027 | ಇವೇ, ರೇಸ್‌ನಲ್ಲಿರುವ 9 ಬಹುನಿರೀಕ್ಷಿತ ಸಿನಿಮಾಗಳು!

2027ರ ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿ (ಆಸ್ಕರ್) ರೇಸ್‌ಗೆ ಈಗಿನಿಂದಲೇ ಕೌಂಟ್‌ಡೌನ್ ಆರಂಭವಾಗಿದೆ....

ದೆಹಲಿಯಲ್ಲಿ ಎಸ್‌ಸಿಒ ಸಾಂಸ್ಕೃತಿಕ ಶೃಂಗ: 2023ರ ನಂತರ ಪಾಕ್ ಸಚಿವರಿಗೆ ಭಾರತದ ಮೊದಲ ಆಹ್ವಾನ

ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) 10 ಸದಸ್ಯ ರಾಷ್ಟ್ರಗಳ ಪ್ರಥಮ 'ನಾಗರಿಕತೆಗಳ...