ಆರ್ಥಿಕ ಹಿನ್ನಡೆ ಎಲ್ಲಿಂದ ಶುರು ಆಯಿತು

Date:

- Advertisement -

ಜುಲೈ-ಸೆಪ್ಟೆಂಬರ್ ಅವಧಿಯ ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಬಹುಪಾಲು ಸೂಚಿಗಳು ಹೊರಬಿದ್ದಿವೆ. ಕೆಲವು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅವುಗಳಲ್ಲಿ ಒಂದಿಷ್ಟು ಹೊಂದಾಣಿಕೆಗಳು ಮತ್ತು ಸ್ಪಷ್ಟಣೆಗಳು ಇವೆಲ್ಲಾ ಇರುತ್ತವೆ. ಆದರೆ ಒಂದಂತೂ ಸ್ಪಷ್ಟ, ಆರ್ಥಿಕತೆಯ ಚೇತರಿಕೆ ಯಾವುದೇ ಸೂಚನೆಗಳೂ ಕಾಣುತ್ತಿಲ್ಲ. ಸರ್ಕಾರದ ಪ್ರಯತ್ನಗಳೆಲ್ಲಾ ವಿಫಲವಾಗುತ್ತಿವೆ. ಕಾರಣ ಸ್ಪಷ್ಟ, ಸರ್ಕಾರ ತಾನು ಮಾಡಿದ ತಪ್ಪುಗಳನ್ನು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಕಳೆದ ಐದು ವರ್ಷಗಳಿಂದ ಎನ್‌ಡಿಎ ಸರ್ಕಾರ ಹಲವು ತಪ್ಪು ಹೆಜ್ಜೆಗಳನ್ನು ಇಟ್ಟಿವೆ. ದುಸ್ಸಾಹಸಕ್ಕೆ ಕೈಹಾಕಿದೆ. ಅವೇ ಈಗಿನ ದುರಂತಕ್ಕೆ ಕಾರಣ. ಮಾಡಿಕೊಂಡ ಎಡವಟ್ಟುಗಳು ತೆಗೆದುಕೊಂಡ ತಪ್ಪು ಕ್ರಮಗಳು ಈಗಿನ ದುರಂತಕ್ಕೆ ಮುಖ್ಯವಾಗಿ ಕಾರಣ. ನಗದು ಆಮಾನೀಕರಣ ಅವುಗಳಲ್ಲಿ ಅತ್ಯಂತ ದೊಡ್ಡ ಹುಚ್ಚು ಸಾಹಸ. ಈಗ ಅದಕ್ಕೆ ವಾರ್ಷಿಕೋತ್ಸವ. ಇದು ಸರ್ಕಾರ ಮಾಡಿದ 10 ದೊಡ್ಡ ತಪ್ಪುಗಳನ್ನು ನೆನೆಸಿಕೊಳ್ಳುವುದಕ್ಕೆ ಸರಿಯಾದ ಸಮಯ. ಮೊದಲಿಗೆ 2014ರ ಆಗಸ್ಟ್ ತಿಂಗಳಿನಲ್ಲಿ ಪೆಟ್ರೋಲಿಯಂ ಬೆಲೆ ಅತ್ಯಂತ ಕುಸಿದಿದ್ದ ಸಂದರ್ಭದಿಂದ ಪ್ರಾರಂಭಿಸೋಣ. ಅದು ಸರ್ಕಾರಕ್ಕೆ ಸುಬೀಕ್ಷದ ಸಮಯ, ದುರಾದೃಷ್ಟ ಅಂದರೆ ಅದೇ ಸಮಯದಲ್ಲಿ ಕೃಷಿ ಸರಕುಗಳ ಬೆಲೆಯೂ ಪಾತಾಳಕ್ಕೆ ಕುಸಿದಿತ್ತು. ರೈತರ ಬೆನ್ನು ಮುರಿದಿದ್ದ ಸಮಯ ಅದು. ಹಲವರು ಆತ್ಮಹತ್ಯೆ ಮಾಡಿಕೊಂಡರು. ನಿಜವಾದ ಬಿಕ್ಕಟ್ಟನ್ನು ಗುರುತಿಸಿ ಪೆಟ್ರೋಲಿನಿಂದ ಸಿಕ್ಕ ಹೇರಳ ಲಾಭವನ್ನು ಕೃಷಿಗೆ ಬೇಕಾದ ವಸ್ತುಗಳನ್ನು ಕಡಿಮೆ ಬೆಲೆಗೆ ಒದಗಿಸಿ ನೆರವಾಗುವುದನ್ನು ಬಿಟ್ಟು ಲಾಭವನ್ನು ಪೋಲು ಮಾಡಿಬಿಟ್ಟಿತು.

ಆನಂತರ 2014-15ರಲ್ಲಿ ಜೋಡಿ ಕ್ಷಾಮಗಳು ಅಪ್ಪಳಿಸಿದವು. ಇದು ಅಪರೂಪದ ಘಟನೆ. ಕೃಷಿ ಬಿಕ್ಕಟ್ಟು ಮತ್ತಷ್ಟು ತೀವ್ರವಾಯಿತು. ಎರಡನೆಯ ತಪ್ಪು ಅಂದರೆ ಇದನ್ನು ನಿರ್ಲಕ್ಷಿಸಿದ್ದು, ಯಾವುದೇ ಸರ್ಕಾರ ಹೀಗೆ ಜೋಡಿ ಬರಗಾಲ ಎದುರಾದಾಗ ಮತ್ತು ಅಂತರರಾಷ್ಟ್ರೀಯ ಬೆಲೆಯ ಕುಸಿತದಿಂದ ಕೃಷಿ ವರಮಾನ ಕುಸಿದಾಗ ದೇಶದೊಳಗೆ ಅದರ ಬೆಲೆಯನ್ನು ಏರಿಸಬೇಕು ಅಥವಾ ಕನಿಷ್ಟ ಅದನ್ನು ಕಾಪಾಡಿಕೊಳ್ಳಬೇಕು. ಮತ್ತು ರೈತರನ್ನು ಬೆಂಬಲಿಸುವ ದೃಷ್ಟಿಯಿಂದ ಹೂಡಿಕೆಯನ್ನು ಹೆಚ್ಚಿಸಬೇಕು. ಆದರೆ ಸರ್ಕಾರ ಇದಕ್ಕೆ ವ್ಯತಿರಿಕ್ತ ವ್ಯತಿರಿಕ್ತವಾಗಿ ಹೂಡಿಕೆಯನ್ನು ತೀವ್ರವಾಗಿ ಕಡಿತಗೊಳಿಸಿತು. ಇದು ಸರ್ಕಾರದ ಮೂರನೆಯ ತಪ್ಪು, ಮತ್ತು ದೊಡ್ಡ ತಪ್ಪು.

ಇದನ್ನೂ ಓದಿ: ಟ್ರಂಪ್-ನೆತನ್ಯಾಹು ಎಂಬ ಅರಿವುಗೇಡಿಗಳ ಅಣುಬಾಂಬ್ ಯುದ್ಧ; ಮನುಕುಲ ಪ್ರಪಾತದತ್ತ!

2016ರ ವೇಳೆಗೆ ಕೃಷಿ ಆರ್ಥಿಕತೆ ಬಿಕ್ಕಟ್ಟಿಗೆ ಸಿಲುಕಿತ್ತು ಅನ್ನುವುದು ಸ್ಪಷ್ಟವಾಗಿತ್ತು. ನೈಜ ಕೂಲಿ ಮತ್ತು ಕೃಷಿ ವರಮಾನ ಇಳಿಯುತ್ತಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನರೇಗ ಯೋಜನೆಯನ್ನು ಯುಪಿಎ ಸರ್ಕಾರದ ಸೋಲುಗಳ “ಜೀವಂತ ಸ್ಮಾರಕ” ಎಂದು ಕರೆದಾಗಲೇ ಪರಿಸ್ಥಿತಿಗೆ ಸರ್ಕಾರದ ಪ್ರತಿಕ್ರಿಯ ಸ್ಪಷ್ಟವಾಗಿತ್ತು. ಸರ್ಕಾರ ಗ್ರಾಮೀಣ ಕೂಲಿಯನ್ನು ಮತ್ತು ಬೇಡಿಕೆಯನ್ನು ಉತ್ತಮಪಡಿಸುವುದಕ್ಕೆ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಬೇಕಾಗಿದ್ದ ಸಮಯದಲ್ಲಿ ನರೇಗ ಮತ್ತು ಇತರ ಗ್ರಾಮೀಣ ಅಭಿವೃದ್ಧಿಗೆ ಮಾಡಬೇಕಾದ ಖರ್ಚಲ್ಲಿ ದೊಡ್ಡ ಪ್ರಮಾಣದಲ್ಲಿ ಕಡಿತಗೊಳಿಸಿದರು. ಅದು ನಾಲ್ಕನೆಯ ತಪ್ಪು ಆನಂತರದ್ದು ಐದನೆಯ ತಪ್ಪು (ಅಥವಾ ದುಸ್ಸಾಹಸ):ನಗದು ಅಮಾನೀಕರಣ. ಈಗ ಅದರ ಮೂರನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ. ಅದು ಅನೌಪಚಾರಿಕ ಮತ್ತು ಗ್ರಾಮೀಣ ಆರ್ಥಿಕತೆಯ ಬೆನ್ನನ್ನು ಮುರಿಯಿತು. ಯಾವುದೇ ಘೋಷಿತ ಉದ್ದೇಶಗಳೂ ಈಡೇರಲಿಲ್ಲ. ಆದರೆ ದೀರ್ಘಕಾಲೀನ ಯಾತನೆಯನ್ನು ಸೃಷ್ಟಿಸಿತು. ಈಗಲೂ ಅದರ ಪರಿಣಾಮವನ್ನು ಅನುಭವಿಸುತ್ತಿದ್ದೇವೆ. ಬೇಡಿಕೆ ಕುಸಿದಿದೆ ಮತ್ತು ನಿರುದ್ಯೋಗ ಹೆಚ್ಚಿದೆ.

ಆರನೆಯ ತಪ್ಪು ಅಂದರೆ ಆತುರದಲ್ಲಿ ಜಿಎಸ್‌ಟಿಯನ್ನು ಜಾರಿಗೆ ತಂದಿದ್ದು, ಅದು ಅನೌಪಚಾರಿಕೆ ಆರ್ಥಿಕತೆಯ ಚೇತರಿಕೆಯ ಅಳಿದುಳಿದ ಭರವಸೆಯನ್ನು ನಾಶಮಾಡಿತು. ಅದರಿಂದ ಎಷ್ಟೋ ಉದ್ದಿಮೆಗಳು ಮುಚ್ಚಿಹೋದವು. ಅದರಿಂದ ಉಂಟಾದ ಉದ್ಯೋಗ ನಷ್ಟ ಇನ್ನೂ ಆ ಕ್ಷೇತ್ರವನ್ನು ಕಾಡುತ್ತಿದೆ.

ಏಳನೆಯ ತಪ್ಪು ಕೃಷಿ ಬಿಕ್ಕಟ್ಟಿಗೆ ದೂರಾಲೋಚನೆಯಿಲ್ಲದೆ ಕ್ರಮ ತೆಗೆದುಕೊಂಡಿದ್ದು, ಉಳಿದ ಸುಧಾರಣೆಗಳನ್ನು ಬಿಟ್ಟು ರಾಜಕೀಯ ಲಾಭಕ್ಕಾಗಿ ಸಾಲಮನ್ನಕ್ಕೆ ಕೈಹಾಕಿದ್ದು, ಇದರಿಂದ ಚುನಾವಣೆಯಲ್ಲಿ ಗೆಲ್ಲುವುದು ಸಾಧ್ಯವಾಯಿತು. ಆದರೆ ಸಾಲ ಮನ್ನಾ ಮಾಡುವುದಕ್ಕೆ ಆಪಾರ ಹಣ ವೆಚ್ಚ ಮಾಡಬೇಕಾಗಿ ಬಂದಿದ್ದರಿಂದ ರಾಜ್ಯ ಸರ್ಕಾರಗಳು ಕೃಷಿಗೆ ಬೆಂಬಲ ನೀಡುವಲ್ಲಿ ವಿಫಲವಾದವು. ಎಂಟನೆಯ ತಪ್ಪು ಅಂದರೆ ಚುನಾವಣೆಗೆ ಕೊಂಚ ಮೊದಲು ನಗದಿನಲ್ಲಿ ನೀಡಿದ ಭತ್ಯೆ ಇದಕ್ಕೂ ರಾಜಕೀಯ ಲೆಕ್ಕಾಚಾರವೇ ಕಾರಣ. ಇದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಅನುಕೂಲ ಮಾಡಿಕೊಟ್ಟಿರಬಹುದು. ಆದರೆ ಅವನ್ನು ವಿತ್ತೀಯ ಬಿಕ್ಕಟ್ಟಿಗೆ ತಳ್ಳಿ ಅರ್ಥಪೂರ್ಣ ಸುಧಾರಣೆಗೆ ಇದ್ದ ಅವಕಾಶವನ್ನು ಕಸಿದುಕೊಂಡಿತು.

ಒಂಬತ್ತನೆಯ ತಪ್ಪು ಅಂದರೆ ವಿತ್ತೀಯ ನಿರ್ವಹಣೆಯಲ್ಲಿ ಮಾಡಿಕೊಂಡ ತಪ್ಪನ್ನು ಸರಿಪಡಿಸುವುದಕ್ಕೆ ತೆರಿಗೆ ಅಧಿಕಾರಗಳ ಮೂಲಕ ಒತ್ತಾಯದಿಂದ ಕಂದಾಯವನ್ನು ಸಂಗ್ರಹಿಸಲು ಪ್ರಯತ್ನಿಸಿದ್ದು, ಬಂಡವಾಳ ವರಮಾನದ ಮೇಲಿನ ಕಂದಾಯ ಇತ್ಯಾದಿ ಅನವಾಶ್ಯಕ ಕ್ರಮಗಳನ್ನು ಬಳಸಿದ್ದು. ಇದ-ರಿಂದ ಭ್ರಷ್ಟಾಚಾರವಾಗಲಿ ಕಪ್ಪು ಹಣವಾಗಲಿ ಕಮ್ಮಿಯಾಗಲಿಲ್ಲ. ಬದಲಾಗಿ ಹಣಕಾಸಿನ ಸಂಸ್ಥೆಗಳಲ್ಲಿ ಮತ್ತು ಕಾರ್ಪೋರೇಷನ್ನುಗಳಲ್ಲಿ ಭಯ ಮತ್ತು ಆತಂಕ ಮೂಡಿಸಿತು. ಇದರಿಂದ ಹೂಡಿಕೆ ಮತ್ತು ಕಾರ್ಪೋರೇಟ್ ಸಾಲ ಕಡಿಮೆಯಾಯಿತು.

ಹತ್ತನೆಯ ತಪ್ಪು ಅಂದರೆ ಅಂಕಿ ಅಂಶವನ್ನು ಹತ್ತಿಕ್ಕಿದ್ದು ಮತ್ತು ಅವುಗಳನ್ನು ಬೇಕಾದಂತೆ ಮಾರ್ಪಡಿಸಿಕೊಂಡಿದ್ದು, ಇದರಿಂದ ನೇರವಾಗಿ ಆರ್ಥಿಕ ಪರಿಸ್ಥಿತಿ ಹಾಳಾಗಲಿಲ್ಲ ನಿಜ. ಆದರೆ ದೇಶದ ಸಾಂಖ್ಯಿಕ ವ್ಯವಸ್ಥೆಯ ಪಾಲುದಾರರಲ್ಲಿ ವಿಶ್ವಾಸ ಹಾಳಾಯಿತು. ಅಂಕಿ-ಅಂಶಗಳನ್ನು ಹತ್ತಿಕ್ಕುವುದಾಗಲಿ ಮತ್ತು ಬದಲಿಸುವುದಾಗಲಿ ಶೈಕ್ಷಣಿಕವಾಗಿ, ಮಾಧ್ಯಮಗಳಿಗೆ ಹಾನಿಕಾರಕ. ನೀತಿಗಳನ್ನು ರೂಪಿಸುವವರಿಗೂ ತೊಂದರೆಯೆ. ಅವರು ವಾಸ್ತವಾಂಶವನ್ನು ಬಳಸಿ ನೀತಿ ರೂಪಸಿಬೇಕೇ ಹೊರತು ನಂಬಿಕೆಗಳನ್ನು ಆದರಿಸಿಯಲ್ಲ, ತಪ್ಪುಗಳ ಈ ಪಟ್ಟಿ ಸಂಪೂರ್ಣ ಅಂತ ಅಲ್ಲ. ಆದರೆ ಏನು ಮಾಡಬೇಕು ಅನ್ನುವುದಕ್ಕೆ ಪಾಠವಾಗಬಹುದು. ಇವುಗಳಲ್ಲಿ ಕೆಲವನ್ನು ಸರಿಪಡಿಸುವುದಕ್ಕೆ ಆಗವುದಿಲ್ಲ. ಸರ್ಕಾರ ಕನಿಷ್ಠ ಬಿಕ್ಕಟ್ಟಿನ ತೀವ್ರತೆಯನ್ನು ಅರ್ಥಮಾಡಿಕೊಳ್ಳಬಹುದು. ಇವೆಲ್ಲಾ ಅನರ್ಥಗಳಿಂದ ಉಂಟಾಗಿರುವ ಮಹಾದುರಂತಗಳು ತಥ್ಯಾಂಶಗಳನ್ನು ಆಧರಿಸುವ ಬದಲು ನಂಬಿಕೆ ವಿಶ್ವಾಸಗಳನ್ನು ಆಧರಿಸಿದ್ದವು ಎಂದು ನೆನಪಿಸಿಕೊಳ್ಳಲು ನಗದು ಆಮಾನೀಕರಣದ ಮೂರನೇ ವಾರ್ಷಿಕೋತ್ಸವ ಒಂದು ಸೂಕ್ತವಾದ ಸಂದರ್ಭವಾಗಬೇಕು.

–ಹಿಮಾಂಶು
(ಹಿಮಾಂಶು ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯನಲ್ಲಿ ಸಹ ಪ್ರಾಧ್ಯಾಪಕರಾಗಿದ್ದು, ಸೆಂಟರ್ ಡೆ ಸೈನ್ಸಸ್ ಹ್ಯೂಮೇನ್ಸ್, ನವದೆಹಲಿ. ಇಲ್ಲಿ ವಿಸಿಟಿಂಗ್ ಫೆಲೋ ಆಗಿದ್ದಾರೆ.)

ChatGPT Image Jan 14 2026 05 19 46 PM 2

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್‌ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್‌ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.

https://Lokayatha.com

lokayatha logo 220x67 1
lokayatha.com
Website |  + posts

ಅರ್ಥಶಾಸ್ತ್ರವನ್ನು ಕುರಿತು ಪ್ರಕಟವಾಗಿರುವ ಬರಹಗಳು ಇಲ್ಲವೆ.

ಪೋಸ್ಟ್ ಹಂಚಿಕೊಳ್ಳಿ:

lokayatha.com
lokayatha.comhttps://lokayatha.com/
ಅರ್ಥಶಾಸ್ತ್ರವನ್ನು ಕುರಿತು ಪ್ರಕಟವಾಗಿರುವ ಬರಹಗಳು ಇಲ್ಲವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುದ್ಧದ ಆರ್ಥಿಕ ಮತ್ತು ರಾಜಕೀಯ ತಲ್ಲಣಗಳು

ಅಲೆಕ್ಸಾಂಡರ್ ಪೋಪ್ ಅವರು ಹೇಳಿದ್ದು ಸರಿ. "ತಪ್ಪು ಮಾಡುವುದು ಮನುಷ್ಯ ಸಹಜ...

ಕನಿಷ್ಠ ಕೂಲಿ ಖಾತ್ರಿಗೆ ಕಳೆದು ಹೋದ ಅವಕಾಶ

ಕಳೆದ ಕೆಲವು ತಿಂಗಳುಗಳಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ...

ಸೀಬೇ ನಿನ್ನಂಡ್ರೆ ನಂಗ್ಟಲು ಇಷ್ಟ

ನಾನು ಸಾಹಸದ ಕಥೆಗಳನ್ನೇ ಓದುತ್ತಾ ಪಟ್ಟಣದಲ್ಲಿ ಬೆಳೆದ ಹುಡುಗ. ನನಗೆ ಮರ...

16ನೇ ಹಣಕಾಸು ಆಯೋಗ -ನ್ಯೂನತೆಗಳು ಮತ್ತು ಆತಂಕಗಳು

ಹಿಂದಿನ ಆಯೋಗಗಳಿಗೆ ಹೋಲಿಸಿದರೆ 16ನೇ ಹಣಕಾಸು ಆಯೋಗಕ್ಕೆ ಹೆಚ್ಚಿನ ಸ್ವಾತಂತ್ರವಿತ್ತು. ಅದಕ್ಕೆ...