ಅಲ್ಲಮನ ಅನನ್ಯ ಪದಪ್ರಯೋಗಗಳು | ನಡೆದಡೆ ನುಡಿದಡೆ 

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ನಡೆದಡೆ ನುಡಿದಡೆ
ನಡೆದಡೆ ನಡೆಗೆಟ್ಟ ನಡೆಯ ನಡೆವುದಯ್ಯಾ
ನುಡಿದಡೆ ನುಡಿಗೆಟ್ಟ ನುಡಿಯ ನುಡಿವುದಯ್ಯಾ
ಒಡಲ ಹಿಡಿದಡೆ ಹಿಡಿಯದೆ ಹಿಡಿವುದಯ್ಯಾ
ಕೂಡುವಡೆ ಕೇಡಿಲ್ಲದ ಕೂಟವ ಕೂಡುವುದಯ್ಯಾ
ಗುಹೇಶ್ವರಾ ನಿಮ್ಮಲ್ಲಿ ನಿಲುವುದಯ್ಯಾ  

- Advertisement -

ವಚನಾರ್ಥ:
ಶರಣನ ನಡೆ ಮತ್ತು ನುಡಿಯನ್ನು ಕೇಂದ್ರೀಕರಿಸಿ ಬರೆದ ವಚನ. ಶರಣನ ನಡೆ ಮತ್ತು ನುಡಿ ದೈವ ನಿಯಂತ್ರಿತ ಎಂಬ ಭಾವ. ಶರಣ ಸ್ಥಲದ ತುತ್ತ ತುದಿಯನ್ನು ತಲುಪಿದ ಶರಣನಲ್ಲಿ ತನ್ನತನ ತೊರೆದು ಹೋಗಿರುತ್ತದೆ. ಶರಣ ನಡತೆ, ಮಾತುಕತೆ ಅವನವಾಗಿರುವುದಿಲ್ಲ. ಅವು ಅವನ ಸುಪ್ತ ಮನಸ್ಸಿನೊಳಗಿಂದ ಹೊಮ್ಮವ ಅವನ ನಿಯಂತ್ರಣವನ್ನು ಮೀರಿ ಕಾಣಿಸಿಕೊಳ್ಳುವಂತಹವು. ಅವು ನಡೆಗೆಟ್ಟವು ಅವು ನುಡಿಗೆಟ್ಟವು. ಅವಕ್ಕೆ ಪ್ರಜ್ಞಾಪೂರ್ವಕ ಔಪಚಾರಿಕ ರೂಪರೇಷೆ ಇರುವುದಿಲ್ಲ. ಶರಣನು ಉಣ್ಣುವುದು, ಉಡುವುದು, ಉಪವಾಸಿಸುವುದು ಎಲ್ಲವೂ ಭಿನ್ನವೆಂಬಂತೆ ಭಾಸವಾಗುವುದು ಇದೇ ಕಾರಣಕ್ಕಾಗಿ. ರಾಮಕೃಷ್ಣ ಪರಮಹಂಸರ ನಡವಳಿಕೆಗಳಲ್ಲಿ ಇಂತಹ ವೈಚಿತ್ರ್ಯಗಳು ಕಂಡು ಬರುತ್ತಿದ್ದವು ಎಂದು ಅವರ ಬಗೆಗಿನ ಚರಿತ್ರೆಯಲ್ಲಿ ಹೇಳಲಾಗಿದೆ. ಇದು ಅತ್ಯುನ್ನತ ಆಧ್ಯಾತ್ಮಿಕ ಸ್ಥಿತಿ. ಗುಹೇಶ್ವರನು ಶರಣನ ಒಡಲೊಳಗಿದ್ದು ಒಡಲಿಗೆ ಆಧಾರವಾಗಿ ಒಡಲ ಹಿಡಿಯದೆ ಒಡಲ ಬೆಳಗುತ್ತಾನೆ. ಶರಣ ದೈವದೊಂದಿಗೆ ಕೂಡುವ ಕೂಟ ಕೇಡಿಲ್ಲದ್ದು, ಕಳಂಕವಿಲ್ಲದ್ದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಪದ ಪ್ರಯೋಗಾರ್ಥ:
ಶರಣ ನಡೆದಡೆ ಹೇಗಿರುತ್ತದೆ, ನುಡಿದಡೆ ಹೇಗಿರುತ್ತದೆ ಎಂಬ ವಿಭಿನ್ನ ಕಲ್ಪನೆ ಈ ವಚನದ ವಸ್ತು. ಶರಣ ಭಾವದಲ್ಲಿ “ನಡೆಸಲು ನೀನು ನಡೆವೆನು ನಾನು, ನುಡಿಸಲು ನೀನು ನುಡಿವೆನು ನಾನು, ನಗಿಸಲು ನೀನು ನಗುವೆನು ನಾನು” ಎಂಬ ನಿಲುವು ಒಡಮೂಡಿರುತ್ತದೆ. ಈ ಸಾಲುಗಳು ಗಾಳಿಮಾತು ಚಿತ್ರಕ್ಕಾಗಿ ಚಿ. ಉದಯಶಂಕರ್ ಬರೆದು ಎಸ್. ಜಾನಕಿ ಅತ್ಯದ್ಭುತವಾಗಿ ಹಾಡಿರುವ ಚಿತ್ರಗೀತೆಯವು. ನಡೆಸುವ ಮತ್ತು ನುಡಿಸುವ ಪದಗಳನ್ನು ಅಲ್ಲಮನ ವಚನದಿಂದ ಆಧರಿಸಿ ಆರಂಭವಾಗುವ ಚಿತ್ರಗೀತೆ ಮುಂದಿನ ಚರಣದಲ್ಲಿ ಬಸವಣ್ಣನ ವಚನವನ್ನು ಅವಲಂಬಿಸುತ್ತದೆ. ಎನ್ನ ಕಾಯವ ದಂಡಿಗೆಯ ಮಾಡಯ್ಯಾ, ಎನ್ನ ನರವ ತಂತಿಯ ಮಾಡಯ್ಯಾ, ಎನ್ನ ಬೆರಳ ಕಡ್ಡಿಯ ಮಾಡಯ್ಯಾ, ಬತ್ತೀಸ ರಾಗವ ಹಾಡಯ್ಯಾ, ಉರದಲೊತ್ತಿ ಬಾರಿಸು ಎಂಬ ವಚನದ ಸಾಲುಗಳು “ವೀಣೆಯು ನಾನು ವೈಣಿಕ ನೀನು ತಂತಿಯ ಮೀಟದೆ ನುಡಿಯುವುದೇನು ಬಯಸಿದ ರಾಗ ನುಡಿಸಿ ನೀ ನಲಿದಾಗ ನನಗೂ ಆನಂದ ನಿನ್ನಿಂದ” ಎಂಬಲ್ಲಿ ಬಸವಣ್ಣ ಹೇಳಿದ ಬತ್ತೀಸ ರಾಗ ಉದಯಶಂಕರರ ಗೀತೆಯಲ್ಲಿ ಬಯಸಿದ ರಾಗ ಆಗುತ್ತದೆ. ಶರಣನ ನಡೆ ನುಡಿಗಳು ಹೀಗಿರುತ್ತವೆ ಎಂದು ವ್ಯಾಖ್ಯಾನಿಸುವ ಈ ವಚನ ಅಲ್ಲಮನದೇ ಸ್ವಗತದಂತೆ, ಅನುಭೂತಿಯಂತೆ ವ್ಯಕ್ತವಾಗಿದೆ.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಒಡಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅಗ್ನಿಸ್ತಂಭದ ರಕ್ಷೆ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅವಳ ಕಣ್ಣೋಟ | ಡೊರೊಥಿ- ಸ್ವೀಕಾರದಾಚೆಗೆ, ಒಳಗೊಳ್ಳುವಿಕೆಯ ಕಡೆಗೆ…

ಇದೊಂದು ಪರಿಪೂರ್ಣ ಸಿನಿಮಾ ಅಲ್ಲ. ಕೆಲವು ತಿರುವುಗಳು ಸರಳವಾಗಿವೆ. ಕೆಲವು ಪಾತ್ರಗಳು...

ಅಲ್ಲಮನ ಅನನ್ಯ ಪದಪ್ರಯೋಗಗಳು | ತಂದೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಅವಳ ಕಣ್ಣೋಟ | ಲಿಪ್‌ಸ್ಟಿಕ್‌ನ ಬಣ್ಣದ ಕೆಳಗೆ ಹುದುಗಿದ ಕನಸುಗಳು

ಭಾರತೀಯ ಚಿತ್ರರಂಗಕ್ಕೆ ಮಹಿಳೆಯ ಆಸೆ, ಲೈಂಗಿಕತೆ, ದಾಂಪತ್ಯದೊಳಗಿನ ಅಸಮಾನತೆ ಮತ್ತು ಸ್ವಾತಂತ್ರ್ಯದ...

ಕಾಲಮಾನ | ದೇಹವೇ ನೈತಿಕ ಹೋರಾಟದ ತಾಣವಾದಾಗ…

ಉಪವಾಸ ಸತ್ಯಾಗ್ರಹ ಬಲಪ್ರಯೋಗದ ಬದಲು ಸ್ವಯಂಪ್ರೇರಿತ ವೇದನೆ/ಯಾತನೆಯನ್ನು ಅವಲಂಬಿಸುತ್ತದೆ. ಅದು ಮಣಿಸುವುದಕ್ಕಿಂತಲೂ...