ದಿಲ್ಲಿ ಮಾತು | ಬೆಳೆಯುತ್ತಿರುವ ಹಿಂದುತ್ವದ ಕುತುಬ್ ಮಿನಾರ್

Date:

ನಾನು ವಾಸಿಸುವ ನೋಯಿಡಾ ಕ್ಷೇತ್ರದಲ್ಲಿ ಸುಮಾರು ಹತ್ತು ಕಿಲೋ ಮೀಟರುಗಳ ದೂರದಲ್ಲಿರುವ ನೋಯಿಡಾ ಸೆಕ್ಟರ್ 15A ದಲ್ಲಿ ದೇವಸ್ಥಾನ ಕಟ್ಟುವ ವಿಷಯಕ್ಕೆ ಸಂಬಂಧಿಸಿ ಎರಡು ಬಣಗಳು ಕಾದಾಡುತ್ತಿವೆ. ಈಗಿನ ಸರ್ಕಾರ ದೇವಾಲಯಕ್ಕಾಗಿ ಜಾಗ ನೀಡಲು ಆರಂಭಿಸಿದಾಗಿನಿಂದ ಇಂತಹ ಘಟನೆಗಳು ಸಾಮಾನ್ಯವಾಗಿವೆ. ನೋಯ್ಡಾದ ಸೆಕ್ಟರ್–15ರಲ್ಲಿ ಇರುವ ವೃಂದಾವನ್ ಪಾರ್ಕ್ ಹೌಸಿಂಗ್ ಸೊಸೈಟಿಯಲ್ಲಿ ದೇವಾಲಯದ ವಿಷಯವಾಗಿ ಜನರಲ್ಲಿ ಜಗಳ ಉಂಟಾಗಿದೆ.

- Advertisement -

ಕಿಚಿ ಕಿಚಿ ಗದ್ದಲ, ಯುದ್ಧಭೀತಿ, ತಲ್ಲಣ, ದೇಶಕ್ಕೆ ದೇಶಗಳೇ ನಶಿಸುತ್ತಿರುವ, ಮನುಷ್ಯನ ಜೀವಕ್ಕೆ ಬೆಲೆಯೇ ಇಲ್ಲದ ಈ ಕಾಲದಲ್ಲಿ ನಮ್ಮ ಭಾವನೆಗಳನ್ನು, ನಮ್ಮ ಆಶಯಗಳನ್ನು, ಮುಕ್ತವಾಗಿ ಅಭಿವ್ಯಕ್ತಿಸಲಾರದ ಸ್ಥಿತಿಯೊಂದು ನಮ್ಮ ಸುತ್ತಲೂ ನಿರ್ಮಾಣಗೊಂಡಿದೆ. ಅನೇಕರು ಈ ಒಳದ್ವಂದ್ವದಲ್ಲಿ ಸಿಲುಕಿ ಏನನ್ನೂ ಮಾಡಲಾರದ ಸ್ಥಿತಿಯಲ್ಲಿ ಅಸಹಾಯಕರಾಗಿ ಬದುಕುತ್ತಿದ್ದೇವೋ ಎಂಬಂತಹ ಅಂತರ್ಯುದ್ಧದಲ್ಲಿ ಹೋರಾಡುತ್ತಿದ್ದೇವೆ. ಪರಂಪರೆಯ ಹೊರೆಯನ್ನು ಹೊತ್ತುಕೊಂಡು ನಡೆಯಬೇಕೋ ಇಲ್ಲಾ ಒತ್ತಡಗಳಿಗೆ ವಿರುದ್ಧವಾಗಿ ಬಂಡಾಯ ಏಳಬೇಕೋ, ಇಲ್ಲಾ ನಿರ್ಲಿಪ್ತರಾಗಿ ನಡೆಯುತ್ತಿರುವುದನ್ನು ನೋಡುತ್ತಾ ಯಥಾಸ್ಥಿತಿವಾದವನ್ನು ಒಪ್ಪಿಕೊಂಡು ಸುಮ್ಮನಿದ್ದುಬಿಡಬೇಕೋ?  

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ನಾವು ಎಂತಹ ಕಾಲದಲ್ಲಿ ವಾಸಿಸುತ್ತಿದ್ದೇವೆ ಎಂದು ಒಂದು ಕ್ಷಣ ಯೋಚಿಸಲೂ ಭಯವಾಗುತ್ತದೆ. ಒಂದು ಕಡೆ ಯುದ್ಧ ನಿರತ ದೇಶಗಳಿಂದಾಗಿ ಮಾನವ ಜೀವನ ದುಸ್ಥರಗೊಳ್ಳುತ್ತಿದೆ. ಅಡುಗೆ ಅನಿಲ, ವಾಣಿಜ್ಯ ಅನಿಲದ ಕೊರತೆಯಿಂದಾಗಿ ಸೂರತ್ತಿನಲ್ಲಿ ಲಕ್ಷಾಂತರ ಜನ ಕಾರ್ಮಿಕರು ಉದ್ಯೋಗ ತೊರೆದು ಮತ್ತೆ ತಮ್ಮ ಹಳ್ಳಿಗಳತ್ತ ಸಾಗುತ್ತಿದ್ದಾರೆ. ರುಪಾಯಿಯ ಮುಖಬೆಲೆ ನೆಲಕಚ್ಚಿ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಜನ ಹೊಟ್ಟೆಪಾಡಿನ  ಜೀವನೋಪಾಯಕ್ಕಾಗಿ ಬಡಿದಾಡುತ್ತಿದ್ದರೆ  ಹೊಟ್ಟೆ ತುಂಬಿದ ಜನ ದೇವಸ್ಥಾನ, ಮಂದಿರ ಮಸೀದಿಗಳ ಹೆಸರಿನಲ್ಲಿ ಮಗ್ನರಾಗಿದ್ದಾರೆ. ಜಾತಿ- ಧರ್ಮ, ದೇವರುಗಳ ಹೆಸರಿನಲ್ಲಿ ಮನೆ ಮನೆಗಳಲ್ಲಿ ಜನ ವಿಭಜಿತರಾಗಿದ್ದಾರೆ, ನಾವು ವಾಸಿಸುವ ಸೊಸೈಟಿ, ಅಪಾರ್ಟ್‌ಮೆಂಟುಗಳಲ್ಲಿ ಜನರು ವಿಭಜಿತರಾಗಿದ್ದಾರೆ. ಆಫೀಸು, ಕಚೇರಿಗಳಲ್ಲಿ ಜನರು ವಿಭಜಿತರಾಗಿದ್ದಾರೆ. ಎಲ್ಲಿಯೇ ನೋಡಿ ಜನರಲ್ಲಿ ರೊಚ್ಚು, ಕೋಪ, ವಿವೇಚನಾರಹಿತ ವಾದ ವಿವಾದಗಳ ಹಗ್ಗ ಜಗ್ಗಾಟದಲ್ಲಿಯೇ ಇಡೀ ಜಗತ್ತು ಮುಳುಗಿದೆ. ಕೆಲ ದಿನಗಳ ಹಿಂದೆ “ದಿ ವೈರ್” ನ ಪತ್ರಕರ್ತೆ ಆರ್ಫಾ ಖಾನಂ ಶೇರವಾನಿ ಅವರ ಒಂದು ವಿಡಿಯೋ ನೋಡಿದ ಬಳಿಕ  ಮನಸ್ಸು ಇನ್ನಷ್ಟು ಕಲಕಿಹೋಗಿದೆ.

ನಾನು ವಾಸಿಸುವ ನೋಯಿಡಾ ಕ್ಷೇತ್ರದಲ್ಲಿ ಸುಮಾರು ಹತ್ತು ಕಿಲೋ ಮೀಟರುಗಳ ದೂರದಲ್ಲಿರುವ ನೋಯಿಡಾ ಸೆಕ್ಟರ್ 15A ದಲ್ಲಿ ದೇವಸ್ಥಾನ ಕಟ್ಟುವ ವಿಷಯಕ್ಕೆ ಸಂಬಂಧಿಸಿ ಎರಡು ಬಣಗಳು ಕಾದಾಡುತ್ತಿವೆ. ಈಗಿನ ಸರ್ಕಾರ ದೇವಾಲಯಕ್ಕಾಗಿ ಜಾಗ ನೀಡಲು ಆರಂಭಿಸಿದಾಗಿನಿಂದ ಇಂತಹ ಘಟನೆಗಳು ಸಾಮಾನ್ಯವಾಗಿವೆ. ನೋಯ್ಡಾದ ಸೆಕ್ಟರ್–15ರಲ್ಲಿ ಇರುವ ವೃಂದಾವನ್ ಪಾರ್ಕ್ ಹೌಸಿಂಗ್ ಸೊಸೈಟಿಯಲ್ಲಿ ದೇವಾಲಯದ ವಿಷಯವಾಗಿ ಜನರಲ್ಲಿ ಜಗಳ ಉಂಟಾಗಿದೆ. ಈ ಸೊಸೈಟಿಯಲ್ಲಿ ನಿವೃತ್ತ ಅಧಿಕಾರಿಗಳು, ವಕೀಲರು, ನ್ಯಾಯಾಧೀಶರು, ಡಾಕ್ಟರ್, ಪ್ರೊಫೆಸರ್‌ಗಳು ಮುಂತಾದ ಉಚ್ಚವರ್ಗದ ಜನ ವಾಸಿಸುತ್ತಿದ್ದಾರೆ. ಇವರಲ್ಲಿ ಒಂದು ಗುಂಪು ದೇವಾಲಯ ಬಯಸುತ್ತದೆ, ಇನ್ನೊಂದು ಗುಂಪು ಬೇಡವೆನ್ನುತ್ತದೆ. ಸುತ್ತಲೂ ಗಿಡಮರಗಳಿಂದ ತುಂಬಿದ ಈ ಹೌಸಿಂಗ್ ಸೊಸೈಟಿಯ ಎದುರಿನ ವಿಶಾಲವಾದ ಉದ್ಯಾನದಲ್ಲಿ ದೇವಾಲಯ ಕಟ್ಟುವ ಯೋಜನೆ ತೀವ್ರಗೊಂಡ ಕಾರಣಕ್ಕೆ ಪ್ರತಿಭಟನೆ, ಪರ ವಿರೋಧದ ಬಣಗಳು ಪರಸ್ಪರ  ಕಚ್ಚಾಡುತ್ತಿವೆ.

Noida 3

ಭಾನುವಾರ ದೇವಾಲಯ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದವರನ್ನು ‘ಹಿಂದೂ ಧರ್ಮದ ವಿರೋಧಿಗಳು, ದೇಶದ್ರೋಹಿಗಳು” ಎಂದು ಕರೆಯುತ್ತಾ ವಿರೋಧ ನಡೆಯಿತು. “ಉದ್ಯಾನ ಉದ್ಯಾನವಾಗಿಯೇ ಇರಲಿ, ಅದರಲ್ಲಿ ದೇವಾಲಯ ಬೇಡ! ಸುತ್ತಮುತ್ತಲೇ ಇಷ್ಟೊಂದು ದೇವಾಲಯಗಳಿವೆ, ಇನ್ನೊಂದು ಯಾಕೆ ಬೇಕು? ಇದಕ್ಕಾಗಿ ಪಾರ್ಕಿನ ಮರಗಳನ್ನು ಕಡಿದು, ಇಲ್ಲಿ ವಾಸಿಸುವವರ ಶಾಂತಿಯನ್ನು ಕಸಿದುಕೊಳ್ಳುವಿರಾ? ಮಕ್ಕಳಿಗೆ ಆಡಲು, ಹಿರಿಯ ನಾಗರಿಕರಿಗೆ ಬೆಳಗಿನ ನಡಿಗೆ, ವಿಶ್ರಾಂತಿ, ನೂರಾರು ಹಕ್ಕಿಪಿಕ್ಕಿಗಳಿಗೆ ಆಶ್ರಯವಾಗಿರುವ ಈ ಪಾರ್ಕನ್ನು ಹಾಳುಗೆಡವಬೇಕೆ?” ಎಂದು ಕೆಲವರ ತರ್ಕ. ದೇವಾಲಯ ನಿರ್ಮಾಣಕ್ಕಾಗಿ ನೋಯ್ಡಾ ಪ್ರಾಧಿಕಾರ ಪಾರ್ಕ್ ಜಮೀನು ನೀಡುವ ನೋಟಿಸ್‌ ವಿರುದ್ಧ ಸೊಸೈಟಿಯ ಅರವತ್ತು ಸದಸ್ಯರು ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. 

‘ಸ್ಕ್ರೋಲ್’ ವರದಿಯ ಪ್ರಕಾರ, ಈ ದೇವಾಲಯದ ಯೋಜನೆಯ ಹಿಂದೆ ನೊಯಿಡಾ ಪ್ರದೇಶದ ಸಂಸದ ಮಹೇಶ್ ಶರ್ಮಾ ಇದ್ದಾರೆ; ನೋಯ್ಡಾದಲ್ಲಿ 128 ದೇವಾಲಯಗಳನ್ನು ನಿರ್ಮಿಸುವ ಗುರಿ ನೀಡಲಾಗಿದೆ ಎಂದು ಹೇಳಲಾಗಿದೆ.  ಇದರಿಂದ, ಬಿಜೆಪಿ ಸರ್ಕಾರ ಇರುವ ಎಲ್ಲೆಡೆ ಇಂತಹ ಗುರಿಗಳನ್ನು ನೀಡಲಾಗುತ್ತಿದೆಯೆಂಬ ಅನುಮಾನ ಮೂಡುತ್ತದೆ.” ಎನ್ನುತ್ತದೆ.

ಇದೇ ಯೋಜನೆಯ ಪ್ರಣಾಳಿಕೆಯ ಭಾಗವಾಗಿ ಅಲ್ಲಲ್ಲಿ “ಹಿಂದೂ ಸಮ್ಮೇಳನ”ಗಳನ್ನು ನಡೆಸುತ್ತಿದೆ. ಹಿಂದೂ ಸಮ್ಮೇಳನದ ಮುಖ್ಯ ಉದ್ದೇಶ “ಸಮಾಜದಲ್ಲಿ ಹಿಂದುತ್ವದ ಭಾವನೆಯನ್ನು ಸ್ಪಷ್ಟಗೊಳಿಸುವುದು” ಅದರ ಮುಂದುವರಿದ ಭಾಗವಾಗಿ ದೇವಾಲಯಗಳ ನಿರ್ಮಾಣ ಯೋಜನೆ. ಇದನ್ನೇ ಜನರಲ್ಲಿ ಅಭಿವೃದ್ಧಿ ಎಂದು ಬಿಂಬಿಸಲಾಗುತ್ತಿದೆ. ಮೂರ್ಖರನ್ನಾಗಿ ಪರಿವರ್ತಿಸುತ್ತಿದೆ ಜನರನ್ನು. 2047ರಲ್ಲಿ ನಮ್ಮೆದುರು ನಿರ್ಮಾಣವಾಗುವ ಅಭಿವೃದ್ಧಿ ಭಾರತದಲ್ಲಿ ಪ್ರತಿ ನಾಲ್ಕು ಅಡಿಗೊಮ್ಮೆ ಒಂದು ದೇವಾಲಯ ಇರುತ್ತದೆ; ವಿಶ್ವದಲ್ಲೇ ಅತಿ ಹೆಚ್ಚು ದೇವಾಲಯಗಳಿರುವ ದೇಶ ಭಾರತ ಎಂದು ಘೋಷಿಸಲಾಗುತ್ತದೆ! ಭಾರತ ಈಗ ವಿಶ್ವಗುರು ಆಗಿಬಿಟ್ಟಂತೆ! ತಟ್ಟೆ ಬಡಿಯುತ್ತಾರೆ, ಚಪ್ಪಾಳೆ ತಟ್ಟುತ್ತಾರೆ, ಯೋಚಿಸುವ ಮಿದುಳನ್ನೂ, ಶಕ್ತಿಯನ್ನೂ ಕಳಕೊಂಡ ಮೂರ್ಖ ಜನ!    

ಮೊ ಕೊ ಕಹಾಂ ಢೂಂಡೆರೆ ಬಂದೆ , ಮೈ ತೋ ತೇರೆ ಪಾಸ್ ಮೇ, ನಾ ಮೈ ದೇವಲ್, ನಾ ಮೈ ಮಸ್ಜಿದ್, ನಾ ಕಾಬೇ ಕೈಲಾಸ್ ಮೇ” 

ಎಲ್ಲಿ ಅರಸುವೆ ಎನ್ನ ಎಲೈ ಭಕ್ತನೇ, ನಿನ್ನ ಅಂತರಂಗದ ಅರಿವಿನಲ್ಲೇ ನಾನಿರುವೆ. ಗುಡಿಯೊಳಗಿಲ್ಲ, ಮಸೀದಿಯೊಳಗಿಲ್ಲ, ಕಾಶಿ ಕೈಲಾಸದ ಹಾದಿಯಲ್ಲೂ ನಾನಿಲ್ಲ! ಎಂದು ದೇವಾಲಯ, ಮಸೀದಿ, ಕಾಶಿ, ಕೈಲಾಸದ ಕಲ್ಪನೆಯನ್ನೂ ತಿರಸ್ಕರಿಸಿದ ಕಬೀರರ ನಾಡಿನಲ್ಲಿ ಇಂದು ಜನ ಅಡಿಗಡಿಗೊಂದು ದೇವಾಲಯ ಬೇಕೆಂದು ಹೋರಾಡುತ್ತಿದ್ದಾರೆ.  

ನಮ್ಮ ಕನ್ನಡದ ವಚನ ಸಾಹಿತ್ಯದಲ್ಲಿ ಈ ವಿಚಾರ ಬಹಳ ಆಳವಾಗಿ ಮತ್ತು ಸ್ಪಷ್ಟವಾಗಿ ವ್ಯಕ್ತವಾಗಿದೆ. 12ನೇ ಶತಮಾನದ ಶಿವಶರಣರು “ದೇಹವೇ ದೇಗುಲ” ಎಂಬ ಕ್ರಾಂತಿಕಾರಕ ಪರಿಕಲ್ಪನೆಯನ್ನು ನೀಡಿದವರು.  ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ“ಎಂದು ಪ್ರತಿಪಾದಿಸಿದ ಇತಿಹಾಸ ನಮ್ಮದು. ಗುಡಿ-ಗೋಪುರಗಳಿಗಿಂತ ಮನುಷ್ಯನ ಅಂತರಂಗ ಮತ್ತು ಪವಿತ್ರವಾದ ಕಾಯಕವೇ ಮುಖ್ಯ ಎಂದು ಸಾರುವ ಅನೇಕ ವಚನಗಳಿವೆ.

ದೇವರನ್ನು ನಂಬುವ ಪರಿಸರವನ್ನೂ ಪ್ರೇಮಿಸುವ ಜನರಿಗೆ, ವಾಯು ಮಾಲಿನ್ಯದ ಬಗ್ಗೆ ಅರಿವಿರುವ ಜನರಿಗೆ ನಲವತ್ತು ಐವತ್ತು ವರುಷಗಳ ಪುರಾತನ ಮರಗಳನ್ನು ಕಡಿದು ದೇವಸ್ಥಾನ ನಿರ್ಮಿಸುವುದು ಮೂರ್ಖತನವೆನಿಸಿದರೆ ದೇವಸ್ಥಾನ ಬೇಕು ಎಂದು ಸಮರ್ಥಿಸುತ್ತಿರುವವರಿಗೆ ಮರಗಳನ್ನು ಕತ್ತರಿಸಿದರೂ ಅಡ್ಡಿಯಿಲ್ಲ ದೇವಸ್ಥಾನ ಮಾತ್ರ ಬೇಕೇ ಬೇಕಂತೆ. ಎರಡೂ ಕಡೆಯ ಮಹಿಳೆಯರನ್ನು ಆರ್ಫಾ ಖಾನ್ ಪ್ರಶ್ನಿಸುತ್ತಿದ್ದರು. ಮೊದಲು ಸರಿಯಾಗಿಯೇ ಮಾತಾಡುತ್ತಿದ್ದ ಮಹಿಳೆಯರು ಹಠಾತ್ತಾಗಿ ಪತ್ರಕರ್ತೆಯನ್ನೇ “ನೀನು ಹಿಂದೂ ವಿರೋಧಿ, ಇಲ್ಲಿ ನಿಮ್ಮ ಆಟ ನಡೆಸಬೇಡಿ, ವಿಷಯ ಪಲ್ಲಟ ಮಾಡಿ ಮಾತಾಡಬೇಡಿ” ಇತ್ಯಾದಿಯಾಗಿ ಮಾತಿನ ಪ್ರಹಾರ ಮಾಡತೊಡಗಿದ್ದರು. ಆರ್ಫಾ ಅತ್ಯಂತ ತಾಳ್ಮೆಯಿಂದ ನಿಭಾಯಿಸಿದರು. ಆದರೆ, ವ್ಯಾಕುಲಗೊಳಿಸಿದ್ದು ಜನರ ಹಿಂದುತ್ವದ ಸಮೂಹಸನ್ನಿಯನ್ನು.

ತಿಂಗಳುಗಟ್ಟಲೆ ಅನೇಕ ಕಡೆ “ವಿಶಾಲ ಹಿಂದೂ ಮಹಾ ಸಮ್ಮೇಳನಗಳನ್ನು” ಆಯೋಜಿಸಿ ನಡೆಸಿದ ಬಗ್ಗೆ ಹೇಳಿದೆ.  ನಾನು ವಾಸಿಸುತ್ತಿರುವ ಸೊಸೈಟಿಯಲ್ಲಿ“ ಹಮೇ ಗರ್ವ ಹೈ ಹಮ್ ಹಿಂದೂ ಹೈ” ಎನ್ನುವ ಬ್ಯಾನರ ಇನ್ನೂ ಹಾಗೇ ಇದೆ. ದೊಡ್ಡ ಹವನ ಕುಂಡವನ್ನು ನಿರ್ಮಿಸಿ ಹೋಮ ಹವನ, ಅನ್ನ ಸಂತರ್ಪಣೆ ಇತ್ಯಾದಿ ಜೋರಾಗಿ ನಡೆಸುತ್ತಿದೆ ಒಂದು ವರ್ಗ. ನನ್ನ ಮಗನಿರುವ ಸೊಸೈಟಿಯಲ್ಲಿಯೂ ಇಂತಹದ್ದೇ ವಿಶಾಲ ಹಿಂದೂ ಮಹಾ ಸಮ್ಮೇಳನ” ಡಿಸೆಂಬರಿನ ಚಳಿಗಾಲದಲ್ಲಿ ನಡೆಯಿತು. ವಿಶಾಲವಾದ ಮಂಟಪ ಹಾಕಿ, ಅತಿಥಿಗಳಾಗಿ ಬಂದಿದ್ದ ಯಾರು ಯಾರೋ ಮಹಾಗಣ್ಯರೆಲ್ಲ ನಮ್ಮ ಹಿಂದೂ ಧರ್ಮದ ಇತಿಹಾಸ ಮಹತ್ವ ಅಂತೆಲ್ಲ ಅದ್ಭುತವಾಗಿ ಭಾಷಣ ಮಾಡಿದರು.  

ಒಬ್ಬನಂತೂ ಇಲ್ಲಿನ ಬಹು ಅಂತಸ್ತಿನ ಕಟ್ಟಡಗಳ ಮನೆಗಳಲ್ಲಿ ಹೋಗಿ ನೋಡಿ – ಒಂದೇ ಒಂದು ಮನೆಯಲ್ಲಿ ನಿಮಗೆ ಭಗವದ್ಗೀತೆಯ ಒಂದು ಪುಸ್ತಕವೂ ಸಿಗೋದಿಲ್ಲ. ವೇದಗಳ ಪುಸ್ತಕ ಸಿಗೋದಿಲ್ಲ” ಎಂದು ರೋಷಾವೇಶದಲ್ಲಿ ಮಾತನಾಡುತ್ತಿದ್ದರು. (ಇವರೇನು ವೇದಗಳನ್ನು ಓದಿಕೊಂಡವರಲ್ಲ, ಉನ್ಮಾದವನ್ನು ಹುಟ್ಟುಹಾಕುವ ಉಪದ್ರವಿಗಳು!) ಹಿಂದೂ ಮುಸ್ಲಿಮರ ಬಗ್ಗೆಯೂ ಭಾಷಣಗಳಾದವು. ಧ್ವನಿವರ್ಧಕದ ಗಂಟಲು ಎಷ್ಟು ಜೋರಾಗಿತ್ತೆಂದರೆ ಸರಿಯಾಗಿ ಕೇಳುತ್ತಿದ್ದಿಲ್ಲ. ಭವ್ಯ ಪೆಂಡಾಲಿನ ಎದುರುಗಡೆಯೇ ಬಾಲ್ಕನಿ ಇದ್ದು ನಾವು ಬಾಗಿಲು ಭದ್ರಪಡಿಸಿಕೊಂಡಿರಬೇಕಾಯ್ತು. ಅದರಲ್ಲೇ ಅಲ್ಪಸ್ವಲ್ಪ ಕಿವಿಗೆ ಬೀಳುತ್ತಿತ್ತು. ಧ್ವನಿವರ್ಧಕ ಗಂಟಲು ಹರಿದುಕೊಳ್ಳುತ್ತಿತ್ತು.

ಇನ್ನು ನಮ್ಮ ನೆರೆಮನೆಯವರು ಮದುವೆಗೆ ಹೋಗುವಂತೆ ಸಿದ್ಧರಾಗಿ ಕೇಸರಿ ಬಣ್ಣದ ಶಾಲು, ಗುಲಾಬಿ ಬಣ್ಣದ ಪೇಟ ಕಟ್ಟಿಕೊಂಡು ಬೆಲ್ ಮಾಡಿ ನಮ್ಮನ್ನೂ ಆಹ್ವಾನಿಸಿದರು. “ಬನ್ನಿ ಬನ್ನಿ, ಅರೆ ಭಾಯ್ –“ನಾವೆಲ್ಲ ಹಿಂದೂಗಳಲ್ಲವೇ ?  ಮಹಾ ಸಮ್ಮೇಳನ ನಡೆಯುತ್ತಿದೆ,  ಊಟವಿದೆ, ಬನ್ನಿ” ಸರಿ ಸರಿ ಎಂದು ಸಾಗಹಾಕಿದೆವು.

ಇದೆಲ್ಲ ನೋಡಿದರೆ ಅಚ್ಚರಿಯಾಗುತ್ತದೆ. ಕಿರಿಕಿರಿಯಾಗುತ್ತದೆ. ದಿಗ್ಭ್ರಮೆ ಎನಿಸುವುದು- ಈ ಮೊದಲು ಈ ದೇಶದ ಜನರಿಗೆ ತಾವು ಹಿಂದೂಗಳೆಂದು ಗೊತ್ತಿರಲಿಲ್ಲವೇ? ಈಗ ಪ್ರತ್ಯೇಕವಾಗಿ ಹೇಳಬೇಕಿದೆಯೇ? ಅಷ್ಟಕ್ಕೂ ಈಗ “ಹಿಂದೂ“ ಪದವನ್ನು ಜನರ ಭಾವನೆಗಳನ್ನು ಕೆಣಕಬಲ್ಲ ಹರಿತವಾದ ಪದವನ್ನಾಗಿಸಿ ಅದಕ್ಕೆ ನಂಜನ್ನು ಬೆರೆಸಿ ದೇಶದ ಜನರನ್ನು ದಾರಿತಪ್ಪಿಸುತ್ತಿಲ್ಲವೇ? ಕುತುಬ್ ಮಿನಾರಿನಂತೆ ಎತ್ತರಕ್ಕೆ ಎದ್ದು ನಿಂತ ಕೋಮುವಾದವೆಂಬ ಗೋಡೆಯ ಆಚೆ ಈಚೆಗೆ  ಹರಿದು ಹಂಚಿಹೋದ ಜನರು ತೊಗಲುಗೊಂಬೆಗಳಂತಾಗಿ ಯಾರೋ ಒಂದಿಷ್ಟು ಜನ ಆಡಿಸಿದಂತೆ ಅವರ ತಾಳಕ್ಕೆ ತಕ್ಕಂತೆ ಕುಣಿಯತೊಡಗಿದ್ದಾರೆ. ಈ ಕೋಮುದ್ವೇಷದ ಕುತುಬ್ ಮಿನಾರನ್ನು ದಾಟಬಲ್ಲೆವೆ?

ಈ ದೇವಾಲಯ ಕಚ್ಚಾಟದ ವಿಷಯವಾಗಿ ಹಿಂದಿಯ ಹಿರಿಯ ಕವಿ ವಿಷ್ಣು ನಾಗರ್ ಒಂದು ಕಡೆ ಬರೆಯುತ್ತಾರೆ –

“ದೇವಾಲಯವೇ ದೇವಾಲಯ. ಎಲ್ಲಿ ನೋಡಿದರೂ ದೇವಾಲಯ; ಆದರೂ ಇನ್ನೂ ದೇವಾಲಯ ಬೇಕಂತೆ. ದೇವಾಲಯ ತಿನ್ನುವ ವಸ್ತುವಲ್ಲ,ಕುಡಿಯುವ ವಸ್ತುವಲ್ಲ, ಧರಿಸುವುದೂ ಅಲ್ಲ, ಹೊದ್ದುಕೊಳ್ಳುವುದಲ್ಲ. ದೇವಾಲಯ ಗಾಳಿಯಲ್ಲ, ನೀರಲ್ಲ, ಬೆಟ್ಟವಲ್ಲ,ಮೈದಾನವಲ್ಲ! ಆದರೂ ದೇವಾಲಯವೇ ಅತ್ಯಾವಶ್ಯಕವೆಂದು ಹೇಳಲಾಗುತ್ತಿದೆ. ದೇವಾಲಯ ಕಟ್ಟಲು ನೆರೆಹೊರೆಯವರು ಪರಸ್ಪರ ಜಗಳವಾಡಿದರೂ ಪರವಾಗಿಲ್ಲ, ಆದರೆ ದೇವಾಲಯಗಳು ಕಟ್ಟಲ್ಪಡಲೇಬೇಕು.

“..ನಂತರ ಜನರು ದೇವಾಲಯವನ್ನೇ ತಿನ್ನುವರು, ದೇವಾಲಯವನ್ನೇ ಕುಡಿಯುವರು. ದೇವಾಲಯವೇ ನ್ಯಾಯಾಲಯ, ದೇವಾಲಯವೇ ಪೊಲೀಸ್ ಠಾಣೆ, ದೇವಾಲಯವೇ ಶಾಲೆ, ದೇವಾಲಯವೇ ಆಸ್ಪತ್ರೆ ! ದೇವಾಲಯವೇ 2047ರ ಅಭಿವೃದ್ಧಿ ಭಾರತ ! ಇಷ್ಟು ದೇವಾಲಯಗಳನ್ನು ಕಟ್ಟಿಕೊಂಡು ಭಾರತ— “ನಿಮ್ಮ ಅಭಿವೃದ್ಧಿ ಎಲ್ಲಿದೆ?  ನೀವು ದೇವಾಲಯಗಳನ್ನು ಕಟ್ಟಲೇ ಇಲ್ಲ!” ಎಂದು ಚೀನಾವನ್ನು ಚುಡಾಯಿಸಬಹುದು.

ಇದೀಗ ದೇವಾಲಯವೇ ಎಐ, ದೇವಾಲಯವೇ ವಿಜ್ಞಾನ, ದೇವಾಲಯವೇ ತಂತ್ರಜ್ಞಾನ! ದೇವಾಲಯ ಇದ್ದರೆ ಅನ್ನ, ನೀರು, ಉದ್ಯೋಗ, ಗಾಳಿ, ಮನೆ, ಶಾಲೆ, ವಿಶ್ವವಿದ್ಯಾಲಯ ಯಾವುದೂ ಬೇಡ ! ದೇವಾಲಯವೇ ಆಮ್ಲಜನಕ. ಈ ಆಮ್ಲಜನಕವನ್ನೇ ಉಸಿರಾಡಿಕೊಂಡು ಬದುಕಿರಿ ! ಮತ್ತು ದೇವಾಲಯ, ದೇವರನ್ನು ನಂಬದವರಿಗೆ ಮತ್ತೆ “ಪಾಕಿಸ್ತಾನಕ್ಕೆ ಹೋಗಿ” ಎಂದು ಹೇಳಲಾಗುತ್ತದೆ; ಸುಪ್ರೀಂ ಕೋರ್ಟ್ ಕೂಡ “ಹೌದು, ಈಗ ನೀವು ಪಾಕಿಸ್ತಾನಕ್ಕೆ ಹೋಗಿ “ ಎನ್ನಬಹುದು.

 ಈ ಸಂದರ್ಭವನ್ನು ಬಹುಶಃ ಇದಕ್ಕಿಂತ ಹರಿತವಾಗಿ, ಕಟುವಾಗಿ, ಚಾಟಿ ಬೀಸಿನಂತೆ ಬರೆಯಲು ಸಾಧ್ಯವಿಲ್ಲ ಎನಿಸುತ್ತದೆ. ಹೇಗಾಗಿ ಹೋಗಿದೆ ಈ ದೇಶ !

ಹಿಂದೆ ಮಾಯಾವತಿ ಆಡಳಿತವಿದ್ದಾಗ ಇದೇ ನೊಯಿಡಾದಲ್ಲಿನ ಫಿಲ್ಮ್ ಸಿಟಿ ಹಾಗೂ ಇದೇ ಸೆಕ್ಟರ್ 15A ಎದುರಿನಲ್ಲಿದ್ದ ವಿಶಾಲವಾದ (82 ಎಕರೆ) ಉದ್ಯಾನವನ್ನು ನಾಶಪಡಿಸಿ ಸುಮಾರು 685 ಕೋಟಿ ಹಣದ ಹೊಳೆ ಹರಿಸಿ ಅಲ್ಲಿ “ದಲಿತ ಪ್ರೇರಣಾ ಸ್ಥಳ” ವೆಂಬ ಹೆಸರಿನಲ್ಲಿ ಬೌದ್ಧ ದೇಗುಲ ಶೈಲಿಯ ಭವ್ಯಕಟ್ಟಡವನ್ನು ನಿರ್ಮಿಸಿದ್ದರು. ಹಿಂದುಳಿದ ವರ್ಗಗಳ ಹಿತರಕ್ಷಣೆಗಾಗಿ ಹೋರಾಡಿದ ಪ್ರಮುಖ ನಾಯಕರ ಮೂರ್ತಿಗಳನ್ನು ಸ್ಥಾಪಿಸಿದ್ದು ವಿವಾದವಾಗಿತ್ತು (ಗೌತಮ ಬುದ್ಧ ಸಂತ ರವಿದಾಸ್, ಜ್ಯೋತಿಬಾ ಫುಲೆ, ನಾರಾಯಣ ಗುರು, ಬಿ.ಆರ್. ಅಂಬೇಡ್ಕರ್, ಕಾನ್ಶಿರಾಮ್ (ಬಿಎಸ್ಪಿ ಸ್ಥಾಪಕರು) ಹಾಗೂ ಮಾಯಾವತಿ (ಸ್ವತಃ ಅವರ ಪ್ರತಿಮೆ). ಈ ಎಲ್ಲಾ ಪ್ರತಿಮೆಗಳನ್ನು ಸ್ಥಾಪಿಸುವುದರೊಂದಿಗೆ  ಮಾಯಾವತಿಯವರು ಜೀವಂತವಾಗಿರುವಾಗಲೇ ತಮ್ಮ ಸ್ವಂತ ಪ್ರತಿಮೆಯನ್ನು ಮತ್ತು ಅವರ ರಾಜಕೀಯ ಗುರುಗಳಾದ ಕಾನ್ಶಿರಾಮ್ ಅವರ ಪ್ರತಿಮೆಗಳನ್ನು ಸರ್ಕಾರಿ ವೆಚ್ಚದಲ್ಲಿ ಸ್ಥಾಪಿಸಿದ್ದು ದೊಡ್ಡ ಮಟ್ಟದ ವಿವಾದ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟಕ್ಕೆ ಕಾರಣವಾಗಿತ್ತು.  

ಇದಾದ ಸುಮಾರು ಎರಡು ದಶಕಗಳ ನಂತರ ಪುನಃ ಇದೇ ನೊಯಿಡಾದ ಸುಂದರವಾದ ಹಚ್ಚ ಹಸುರು ಹೊದ್ದ ವಿಶಾಲವಾದ ಉದ್ಯಾನವನ್ನು ನಾಶಪಡಿಸುವ ಯೋಜನೆ ರೂಪುಗೊಂಡಿದೆ. ಈ ಸರ್ಕಾರ ದೇವಾಲಯ ನಿರ್ಮಿಸಲು ನಿರ್ಧರಿಸಿದ್ದರೆ ಅದು ಮಾಡಿಯೇ ತೀರುತ್ತದೆ. ಆದರೆ ನಿತ್ಯ ಬೆಳಗಾದರೆ ಒಬ್ಬರ ಮುಖವನ್ನು ಒಬ್ಬರು ನೋಡುವ ಸೊಸೈಟಿ ಸಮುಚ್ಚಯದ ಈ ಜನರು ದೇವಾಲಯದ ವಿಷಯಕ್ಕಾಗಿ ಪರಸ್ಪರ ಶತ್ರುಗಳಂತಾಗಿದ್ದು ವಿಷಾದನೀಯ.  ಜನರನ್ನು ಹೇಗೆ ರೊಚ್ಚಿಗೆಬ್ಬಿಸಬೇಕು, ಜನರನ್ನು ಹೇಗೆ ತಮ್ಮ ಅಜೆಂಡಾಗಳಿಗೆ ಬಳಸಿಕೊಳ್ಳಬೇಕು ಎಂದು ಈ ಸರ್ಕಾರಕ್ಕೆ ಚೆನ್ನಾಗಿ ಗೊತ್ತು. ಜನರನ್ನು ಎರಡು ಬಣಗಳಾಗಿ, ಎರಡು ಧರ್ಮದವರಾಗಿ, ಎರಡು ವಿಭಿನ್ನ ವಿಚಾರವಾದಿಗಳಾಗಿ ಒಡೆದು ಹೊಸ ದ್ವೇಷದ ಅಸಹಿಷ್ಣುತೆಯ ರಾಷ್ಟ್ರವಾದವನ್ನು ಕಟ್ಟಲಾಗುತ್ತಿದೆ. ಅದಕ್ಕೆ ಜನರು ಬಲಿಯಾಗಿದ್ದಾರೆ, ಆಗುತ್ತಿದ್ದಾರೆ ಅಷ್ಟೇ.

ಅದರಿಂದ ಮೇಲೇಳಬೇಕಾದವರೂ ಅವರೇ. ಅವರೇ ಎಚ್ಚರಗೊಳ್ಳಬೇಕಾಗಿದೆ. ಅಂತಹ ಎಚ್ಚರವನ್ನು, ಒಳನೋಟವನ್ನು ಈ ದೇಶದ ಜನತೆ ಕಂಡುಕೊಳ್ಳಬೇಕಿದೆ. ದೇವಾಲಯವನ್ನು ಕಟ್ಟುವವರು ಹೃದಯಗಳನ್ನು ಒಡೆಯುತ್ತಿರುವರು. “ಮಂದಿರ್ ಗಿರ್ತಾ ಫಿರ್ ಬನ್ ಜಾತಾ, ದಿಲ್ ಕೋ ಕೌನ ಬನಾತಾ? ದೇವಾಲಯ ಬಿದ್ದರೆ ಮತ್ತೆ ಕಟ್ಟಬಹುದು, ಆದರೆ ಒಡೆದ ಮನಸುಗಳನ್ನು ಕಟ್ಟುವರಾರು?

WhatsApp Image 2025 11 17 at 5.18.15 PM
ರೇಣುಕಾ ನಿಡಗುಂದಿ
+ posts

ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ರೇಣುಕಾ ನಿಡಗುಂದಿ
ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನ ಕಲ್ಯಾಣ | ಏಳ್ನೂರೆಪ್ಪತ್ತು ಅಮರಗಣಂಗಳ ಶ್ರೀಪಾದಕ್ಕೆ ಶರಣೆಂದು ಬದುಕಿದೆನು ಕಾಣಾ!

ಎನಗೆ ಗುರುಸ್ಥಲವ ತೋರಿದಾತ ಸಂಗನ ಬಸವಣ್ಣನು. ಎನಗೆ ಲಿಂಗಸ್ಥಲದ ತೋರಿದಾತ ಚನ್ನಬಸವಣ್ಣನು....

ಅಲ್ಲಮನ ಅನನ್ಯ ಪದಪ್ರಯೋಗಗಳು | ನಡೆದಡೆ ನುಡಿದಡೆ 

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ವಚನ ಕಲ್ಯಾಣ | ಮರ್ತ್ಯಲೋಕದ ಮಹಾಮನೆ ಶೂನ್ಯವಾಯಿತ್ತಲ್ಲಾ ಬಸವಣ್ಣಾ…

ಬಸವಣ್ಣಾ, ನೀವು ಮರ್ತ್ಯಕ್ಕೆ ಬಂದು ನಿಂದಡೆ ಭಕ್ತಿಯ ಬೆಳವಿಗೆ ದೆಸೆದೆಸೆಗಲ್ಲಾ ಪಸರಿಸಿತ್ತಲ್ಲಾ!...

ಅವಳ ಕಣ್ಣೋಟ | ‘ಗಾಂಧಾರಿ’: ಕಣ್ಣು ಕಳೆದುಕೊಂಡವಳು, ಕುರುಡಳಂತೆ ನಟಿಸಿದವಳು

ಮಕ್ಕಳ ಕಳ್ಳಸಾಗಣೆಯ ಜಾಲವನ್ನು ಚಿತ್ರದ ಕೇಂದ್ರ ಸಮಸ್ಯೆಯಾಗಿ ಇಟ್ಟಿರುವುದು ಮಹತ್ವದ ಸಂಗತಿ....