ಈ ದಿನ ಸಂಪಾದಕೀಯ | ಇದು ಡಬಲ್ ಎಂಜಿನ್ ಸರ್ಕಾರವಲ್ಲ, ಎರಡು ನಾಲಗೆಯ ಸರ್ಕಾರ

Date:

ಬೆಲೆ ಏರಿಕೆ, ಭ್ರಷ್ಟಾಚಾರ, ವಂಶ ಪಾರಂಪರ್ಯ ರಾಜಕಾರಣದ ಬಗ್ಗೆ ಮಾತನಾಡದ ಮೋದಿ; ಗೋಧ್ರಾ ಹತ್ಯಾಕಾಂಡದ ಬಿಬಿಸಿ ವರದಿಗೆ, ಅದಾನಿ ಹಗರಣಕ್ಕೆ, ಪುಲ್ವಾಮಾ ದುರಂತಕ್ಕೆ ಉತ್ತರಿಸದ ಮೋದಿ; ಕೇವಲ ಮತಗಳಿಗಾಗಿ `ಅಮೃತಕಾಲ’ದ ಬಗ್ಗೆ ಮಾತನಾಡಿದರೆ, ಕೇಳಿಸಿಕೊಂಡು ಸುಮ್ಮನಿರಬೇಕೇ? 

`ದೇಶದ ಪ್ರಧಾನಿ ವಿಶ್ವ ನಾಯಕ ನರೇಂದ್ರ ಮೋದಿ ನನಗೆ ಫೋನ್ ಮಾಡಿ ಪಕ್ಷ ನಿಷ್ಠೆಗೆ ಪ್ರಶಂಸೆ ವ್ಯಕ್ತಪಡಿಸಿದರು. ನೀವು ಒಳ್ಳೆ ಕೆಲಸ ಮಾಡಿದ್ದೀರಿ ಎಂದು ಹೇಳಿದರುʼ ಎಂದು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪ್ರಧಾನಿಯೇ ಖುದ್ದಾಗಿ ಶಾಸಕನಿಗೆ ಫೋನ್ ಮಾಡಿದ್ದನ್ನು ವಿಡಿಯೋ ಮಾಡಿಸಿ ಹಂಚಿದ್ದಾರೆ.

ಇದು ಈಶ್ವರಪ್ಪನವರಿಗೆ ಜೀವಮಾನದ ಅತ್ಯದ್ಭುತ ಕ್ಷಣಗಳಲ್ಲಿ ಒಂದಾಗಿರಬಹುದು. ಪ್ರಧಾನಿ ಕೂಡ ಪಕ್ಷ ನಿಷ್ಠೆಗೆ ಪ್ರಶಂಸಿಸಿರಬಹದು. ಆದರೆ ಇದು ಅವರಿಬ್ಬರ ನಡುವೆ ನಡೆದಿರುವ ಸಂಭಾಷಣೆಯಾದರೂ, ಇದರ ಹಿಂದೆ ಅಡಗಿರುವ ಹಲವು ಸಂಗತಿಗಳನ್ನು ದೇಶದ ಜನತೆ ಅರಿಯುವ ಅಗತ್ಯವಿದೆ.

ಬಿಜೆಪಿಯವರು 70 ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷದ ಬೆಲೆ ಏರಿಕೆ, ಭ್ರಷ್ಟಾಚಾರ, ವಂಶ ಪಾರಂಪರ್ಯ ರಾಜಕಾರಣವನ್ನು ಉಗ್ರವಾಗಿ ಟೀಕಿಸಿದವರು. ದೇಶ ಅಧೋಗತಿಗಿಳಿಯಲು ಕಾಂಗ್ರೆಸ್ಸಿನ ಕೆಟ್ಟ ಆಡಳಿತವೇ ಕಾರಣವೆಂದು ಹೇಳುತ್ತಲೇ, ಜನರಲ್ಲಿ ಹೊಸ ಆಸೆ ಹುಟ್ಟಿಸಿದವರು. ಭರಪೂರ ಭರವಸೆಗಳನ್ನು ಕೊಟ್ಟು ಅಧಿಕಾರಕ್ಕೇರಿದವರು.  

ಕೇಂದ್ರದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೇರಿ 9 ವರ್ಷಗಳಾಯಿತು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೂರೂವರೆ ವರ್ಷಗಳಾಯಿತು. ಇಷ್ಟು ವರ್ಷ ಈ ಡಬಲ್ ಎಂಜಿನ್ ಸರ್ಕಾರ ಮಾಡಿದ್ದೇನು? ಹೆಚ್ಚಿಗೆ ಬೇಡ, ಈಶ್ವರಪ್ಪ ಮತ್ತು ಮೋದಿಯ ನಡೆಗಳನ್ನಷ್ಟೇ ನೋಡಿ.

ಶಿವಮೊಗ್ಗದ ಅಡಿಕೆ ಮಂಡಿಯಲ್ಲಿ ಕೆಲಸಕ್ಕಿದ್ದ ಈಶ್ವರಪ್ಪನವರು, 1989ರಲ್ಲಿ ಮೊದಲ ಬಾರಿಗೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಶಾಸಕರಾದರು. 2008ರಲ್ಲಿ ಮೊದಲ ಬಾರಿಗೆ ಸಚಿವರಾದರು. ನೀರಾವರಿ, ಇಂಧನ, ಕಂದಾಯ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಗಳಂತಹ ತೂಕದ ಖಾತೆಗಳನ್ನು ನಿರ್ವಹಿಸಿದರು. ರಾಜ್ಯದ ಉಪಮುಖ್ಯಮಂತ್ರಿಯೂ ಆದರು.

ಈಶ್ವರಪ್ಪನವರು 2008ರ ಚುನಾವಣೆಯಲ್ಲಿ 4 ಕೋಟಿ, 2013ರ ಚುನಾವಣೆಯಲ್ಲಿ 7 ಕೋಟಿ ಮತ್ತು 2018ರ ಚುನಾವಣೆಯಲ್ಲಿ 10 ಕೋಟಿ ಆಸ್ತಿ ಇರುವುದಾಗಿ ಚುನಾವಣಾ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ. ಇದು ಅಧಿಕೃತ. ಬೇನಾಮಿ ಎಷ್ಟು ಎಂದು ಶಿವಮೊಗ್ಗದ ಜನ ಹೇಳಬಲ್ಲರು, ಇರಲಿ. 2012ರಲ್ಲಿ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಾಯುಕ್ತ ಈಶ್ವರಪ್ಪನವರ ಮನೆ ಮೇಲೆ ದಾಳಿ ನಡೆಸಿದಾಗ, ಹಲವು ನೋಟು ಎಣಿಕೆ ಯಂತ್ರಗಳು ಸಿಕ್ಕಿದ್ದವು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮೋದಿಯವರ ಸೇಡಿನ ಕ್ರಮ ರಾಹುಲ್‌ಗೆ ವರವಾಗುವುದೇ?

ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪರಿಗೆ ಪರಿಚಿತರಾಗಿದ್ದ, ಬಿಜೆಪಿಯ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್, ರಸ್ತೆ ಕಾಮಗಾರಿ ಗುತ್ತಿಗೆ ಪಡೆದಿದ್ದರು. ಕಾಮಗಾರಿ ಪೂರೈಸಲು 4 ಕೋಟಿ ಸಾಲ ಮಾಡಿದ್ದು, ಬಿಲ್ ಕೇಳಿದಾಗ, ಈಶ್ವರಪ್ಪ ಮತ್ತು ಸಹಚರರು ಕಮಿಷನ್‌ಗಾಗಿ ಕಿರುಕುಳ ನೀಡಿದ್ದರು.

ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ತಮ್ಮದೇ ಸರ್ಕಾರದ ಕೆ.ಎಸ್. ಈಶ್ವರಪ್ಪ ಮತ್ತು ಸಹಚರರು ಕಮಿಷನ್‌ಗಾಗಿ ಕಿರುಕುಳ ನೀಡುತ್ತಿದ್ದಾರೆಂದು, ಏಪ್ರಿಲ್ 12, 2022ರಂದು ಮುಖ್ಯಮಂತ್ರಿಗೆ, ಪ್ರಧಾನಿ ನರೇಂದ್ರ ಮೋದಿಗೆ ಮತ್ತು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಅಂದೇ ಉಡುಪಿ ಹೋಟೆಲ್ಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದು ಡಬಲ್ ಎಂಜಿನ್ ಸರ್ಕಾರ ಪಡೆದ ಬಲಿ. ಬಿಜೆಪಿಯ ಬಲಿಗೆ ಈಗ ವರ್ಷವಾಗಿದೆ. ಒಂದು ವರ್ಷವಾದರೂ ಮೃತ ಸಂತೋಷ್ ಪಾಟೀಲ್ ಕುಟುಂಬಕ್ಕೆ ಸಹಾಯ, ಸಾಂತ್ವನ ಹೇಳದ ಡಬಲ್ ಎಂಜಿನ್ ಸರ್ಕಾರ, ಕೊಲೆಗೆ ಕಾರಣರಾದವರಿಗೆ ಪ್ರಧಾನಿಯೇ ಖುದ್ದು ಕರೆ ಮಾಡಿ ಪ್ರಶಂಸಿಸಿದ್ದಾರೆ.

ಕೆ.ಎಸ್. ಈಶ್ವರಪ್ಪ ಶೂದ್ರ ಸಮುದಾಯಕ್ಕೆ ಸೇರಿದವರು. ವಿರೋಧಿಗಳನ್ನು ಹಣಿಯಲು ಮತ್ತು ಮುಸ್ಲಿಮರ ಬಗ್ಗೆ ಕೆಟ್ಟದಾಗಿ ಮಾತನಾಡಲು ಈಶ್ವರಪ್ಪನವರ ನಾಲಗೆಯನ್ನು ಕಳೆದ 30 ವರ್ಷಗಳಿಂದ ಬಿಜೆಪಿ ಬಳಸಿಕೊಂಡಿತು. ಈಗ ಈ ನಾಲಗೆ ಮೊನಚು ಕಳೆದುಕೊಂಡಿದೆ.; ಪ್ರಧಾನಿಗಳ ಪ್ರಶಂಸೆಯ ಮಾತುಗಳ ಮೂಲಕ ಸುಮ್ಮನಿರಿಸಲಾಗಿದೆ.  

ಆದರೆ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರ 40% ಕಮಿಷನ್ ಪತ್ರಕ್ಕೆ, ಬಸನಗೌಡ ಪಾಟೀಲ್ ಯತ್ನಾಳರ 2,500 ಕೋಟಿ ಕೊಟ್ಟವನು ಸಿಎಂ ಎಂಬ ಹೇಳಿಕೆಗೆ, ಶಾಸಕ ಮಾಡಾಳ್ ವಿರೂಪಾಕ್ಷಪ್ಪನ ಬಂಧನಕ್ಕೆ ಬಾಯಿ ಬಿಡದ ಮೋದಿ; ಬೊಮ್ಮಾಯಿ ಸರ್ಕಾರದ ಬೆಲೆ ಏರಿಕೆ, ಭ್ರಷ್ಟಾಚಾರ, ವಂಶ ಪಾರಂಪರ್ಯ ರಾಜಕಾರಣದ ಬಗ್ಗೆ ಮಾತನಾಡದ ಮೋದಿ; ಗೋಧ್ರಾ ಹತ್ಯಾಕಾಂಡದ ಬಿಬಿಸಿ ವರದಿಗೆ, ಅದಾನಿ ಹಗರಣಕ್ಕೆ, ಪುಲ್ವಾಮಾ ದುರಂತಕ್ಕೆ ಉತ್ತರಿಸದ ಮೋದಿ; ಕೇವಲ ಮತಗಳಿಗಾಗಿ `ಅಮೃತಕಾಲ’ದ ಬಗ್ಗೆ ಮಾತನಾಡಿದರೆ, ಕೇಳಿಸಿಕೊಂಡು ಸುಮ್ಮನಿರಬೇಕೇ?

ಈಶ್ವರಪ್ಪನವರ ಹರಿತ ನಾಲಗೆಗೆ ನಿವೃತ್ತಿ ಬೇಕೆಂದು ಬಿಜೆಪಿಯೇ ಬಯಸುವುದಾದರೆ, ದೇಶದ ಜನತೆಯ ಪ್ರಶ್ನೆಗಳಿಗೆ ಉತ್ತರಿಸಲಾಗದೆ ನೈತಿಕತೆ ಕಳೆದುಕೊಂಡಿರುವ ಮೋದಿಯವರ ನಾಲಗೆಗೂ ನಿವೃತ್ತಿ ಬೇಕಲ್ಲವೇ? ಇದು ಡಬಲ್ ಎಂಜಿನ್ ಸರ್ಕಾರವೇ ಅಥವಾ ಎರಡು ನಾಲಗೆಯ ಸರ್ಕಾರವೇ? ಜನರೇ ನಿರ್ಧರಿಸಬೇಕು.  

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಸರ್ಕಾರಿ ಅನುದಾನಿತ ಉತ್ಸವಗಳೆಲ್ಲ ಸರಳಗೊಳ್ಳಲಿ

ಈಗಾಗಲೇ ಹಂಪಿ ಉತ್ಸವ ಮತ್ತು ಮೈಸೂರು ದಸರಾವನ್ನು ಸರಳವಾಗಿ ನಡೆಸಲು ಸರ್ಕಾರ...

‘ಈ ದಿನ’ ಸಂಪಾದಕೀಯ | ಹಣ-ಹೆಸರು ಗಳಿಕೆಗೆ ಧರ್ಮವೇ ಸುಲಭದ ಸಾಧನ

ಕಾವಿಧಾರಿಗಳು, ಬಾಬಾಗಳ, ಧರ್ಮದ ಬಗ್ಗೆ ದೊಡ್ಡ ಗಂಟಲಲ್ಲಿ ಚೀರುವವರನ್ನು ನಾವು ಸದಾ...

’ಈ ದಿನ’ ಸಂಪಾದಕೀಯ| 2029ರ ಕನಸಿಗೆ ಈಗಲೇ ‘ಟೋಪಿ’ ಹೊಲಿದ ಮೋದಿ ಮಂತ್ರವಾದಿ

ಮಹಿಳೆಯರಿಗೆ ಅರ್ಧ ಅವಕಾಶ ನೀಡುವ, ಸಮಾನತೆಯಿಂದ ನಡೆಸಿಕೊಳ್ಳುವ ನಿಜ ಇರಾದೆ ಮೋದಿ...

ಈ ದಿನ ಸಂಪಾದಕೀಯ | ಅರ್ಚಕರಾಗಿ ದಲಿತರು, ಮಹಿಳೆಯರ ನೇಮಕ ಕ್ರಾಂತಿಕಾರಿ ಹೆಜ್ಜೆಯೇ? ದೇಶ ಬದಲಾಯಿತೇ?

1972ರಿಂದ 2023ರವರೆಗಿನ ನಿರಂತರ ಹೋರಾಟದಿಂದ; ದೇವಸ್ಥಾನಗಳಲ್ಲಿ ಅರ್ಚಕರಾಗಿ ದಲಿತರು ಮತ್ತು ಮಹಿಳೆಯರ...