ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವದ ಉಳಿವಿಗಾಗಿ ಉಡಾಳನ ವಿರುದ್ಧ ಎದ್ದುನಿಂತ ಅಮೆರಿಕ

Date:

ಜಾಗತಿಕ ಮಟ್ಟದಲ್ಲಿ ಅಮೆರಿಕ ಎಂದರೆ ಸೂಪರ್ ಪವರ್‍‌ವುಳ್ಳ ದೇಶ. ಆ ದೊಡ್ಡಣ್ಣನ ಇಮೇಜನ್ನು ಅಧ್ಯಕ್ಷ ಟ್ರಂಪ್, ಹತ್ತು ತಿಂಗಳ ಆಡಳಿತದಲ್ಲಿ ಇಳೆಗಿಳಿಸಿದ್ದಾರೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಉಡಾಳನ ವಿರುದ್ಧ ಅಮೆರಿಕದ ಜನ ಈಗ ದಂಗೆ ಎದ್ದಿದ್ದಾರೆ...

ತನ್ನನ್ನು ತಾನು ದೊಡ್ಡಣ್ಣ ಎಂದು ಕರೆದುಕೊಳ್ಳುವ ಅಮೆರಿಕ, ಪ್ರಪಂಚಕ್ಕೇ ಬುದ್ಧಿ ಹೇಳಲು ಮುಂದಾಗುವ ಮುಂದುವರೆದ ದೇಶ. ಇಂತಹ ದೇಶ ಈಗ ತಾನು ಆಯ್ಕೆ ಮಾಡಿಕೊಂಡ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಪ್ರತಿಭಟನೆಗಿಳಿದಿದೆ. ಆತನ ಸರ್ವಾಧಿಕಾರಿ ಧೋರಣೆಯ ವಿರುದ್ಧ ಸೆಟೆದು ನಿಂತಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟಕ್ಕಿಳಿದಿದೆ.

- Advertisement -

ಅಕ್ಟೋಬರ್ 18ರಂದು ಅಮೆರಿಕದ ಎಲ್ಲಾ 50 ರಾಜ್ಯಗಳಿಂದ ಸುಮಾರು 70 ಲಕ್ಷಕ್ಕೂ ಹೆಚ್ಚು ಜನರು 2,700ಕ್ಕೂ ಹೆಚ್ಚು ಸ್ಥಳಗಳಲ್ಲಿ ‘ಇನ್ನು ಮುಂದೆ ಟ್ರಂಪ್ ಬೇಡ’, ‘ನೋ ಕಿಂಗ್ಸ್’ ಘೋಷಣೆಗಳನ್ನು ಮೊಳಗಿಸಿದ್ದಾರೆ. ‘ಈ ಪ್ರತಿಭಟನೆಗೆ ಲಕ್ಷಾಂತರ ಅಮೆರಿಕನ್ನರು ಕೈ ಜೋಡಿಸಿದ್ದಾರೆ, ಆದರೆ ಅವರು ಅಮೆರಿಕವನ್ನು ದ್ವೇಷಿಸುವವರಲ್ಲ, ಪ್ರೀತಿಸುವವರು’ ಎಂದಿದ್ದಾರೆ. ‘ನೀವು ರಾಜನಾಗಿ ಆಳಲು, ನಾವು ಪ್ರಜೆಗಳಾಗಿ ಆಳಿಸಿಕೊಳ್ಳಲು ಬಯಸುವುದಿಲ್ಲ. ನಾವು ನಮ್ಮ ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳುತ್ತೇವೆ. ಅಮೆರಿಕ ಸರ್ವಾಧಿಕಾರದ ಕಡೆಗೆ ಸಾಗಲು ಬಿಡುವುದಿಲ್ಲ’ ಎಂದಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ನಡೆದ ಅತಿದೊಡ್ಡ ಸಂಘಟಿತ ಪ್ರತಿಭಟನೆ ಎಂದು ದಾಖಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಪ್ರತಿಭಟನಾಕಾರರು, ವಲಸಿಗರ ಮೇಲೆ ದಾಳಿಗಳು, ನಗರಗಳಲ್ಲಿ ಫೆಡರಲ್ ಪಡೆಗಳ ನಿಯೋಜನೆ, ಸರ್ಕಾರದ ಕೆಲಸದಿಂದ ವಜಾ ಮತ್ತು ತೀವ್ರ ಬಜೆಟ್ ಕಡಿತಗಳ ಬಗ್ಗೆ ಆಕ್ರೋಶಗೊಂಡಿದ್ದೇವೆ ಎಂದಿದ್ದಾರೆ. ನಮ್ಮದು ಪ್ರಜಾಪ್ರಭುತ್ವ, ನಾವು ಆಯ್ಕೆ ಮಾಡಿದ್ದು ಅಧ್ಯಕ್ಷನನ್ನು, ರಾಜನನ್ನಲ್ಲ. ಆದರೆ ಅವರು ರಾಜನಾಗಿದ್ದಾರೆ. ದರ್ಪ-ದೌರ್ಜನ್ಯ ತೋರತೊಡಗಿದ್ದಾರೆ. ಅಮೆರಿಕ ಅಧ್ಯಕ್ಷ ಸ್ಥಾನದ ಘನತೆ-ಗೌರವಗಳನ್ನು ಗಾಳಿಗೆ ತೂರಿದ್ದಾರೆ. ಹಾಗಾಗಿ ಅವರ ವಿರುದ್ಧ ಸಂಘಟಿತರಾಗಿದ್ದೇವೆ, ಅವರ ದುರಾಡಳಿತವನ್ನು ವಿರೋಧಿಸುತ್ತಿದ್ದೇವೆ ಎಂದಿದ್ದಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸಂಘಪರಿವಾರದ ಹುನ್ನಾರಗಳನ್ನು ಅರಿತ ದಲಿತರು

ವಿಪರ್ಯಾಸವೆಂದರೆ, ಶಾಂತಿಯುತ ಪ್ರತಿಭಟನೆಗಳಿಗೆ ಪ್ರತಿಕ್ರಿಯಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಟ್ರುತ್ ಸಾಮಾಜಿಕ ಮಾಧ್ಯಮ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಎಐನಿಂದ ಸೃಷ್ಟಿಸಲಾದ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಆ ವೀಡಿಯೊದಲ್ಲಿ ಟ್ರಂಪ್ ಹಣೆಯ ಮೇಲೆ ‘ರಾಜ’ ಎಂಬ ಹೆಸರಿನ ಕಿರೀಟ ತೊಟ್ಟಿದ್ದಾರೆ. ತಮ್ಮನ್ನು ರಾಜನಂತೆ ಚಿತ್ರಿಸಿಕೊಂಡಿದ್ದಾರೆ. ಫೈಟರ್ ಜೆಟ್‌ನ ಪೈಲೆಟ್ ಸ್ಥಾನದಲ್ಲಿ ಕೂತು, ಪ್ರತಿಭಟನಾಕಾರರ ಮೇಲೆ ಮಲ ಸುರಿಸುತ್ತಿದ್ದಾರೆ.  

ರಿಪಬ್ಲಿಕನ್ ಪಕ್ಷದ ನಾಯಕ, 79ರ ಹರೆಯದ ಡೊನಾಲ್ಡ್ ಟ್ರಂಪ್ ಮೂಲತಃ ರಾಜಕಾರಣಿಯಲ್ಲ, ಉದ್ಯಮಿ. ಪ್ರತಿಯೊಂದು ನಡೆಯಲ್ಲೂ ವ್ಯಾಪಾರ, ಲಾಭ ನೋಡುವ ಆಸಾಮಿ. ಅದು ಗೊತ್ತಿದ್ದರೂ ಅಮೆರಿಕದ ‘ಬುದ್ಧಿವಂತ’ ಮತದಾರರು ಟ್ರಂಪ್ ಅವರನ್ನು ಆಯ್ಕೆ ಮಾಡಿಕೊಂಡರು. ಈ ಹಿಂದೆ ಅಧ್ಯಕ್ಷರಾಗಿದ್ದ ಬರಾಕ್‌ ಒಬಾಮಾ ವ್ಯಕ್ತಿತ್ವಕ್ಕೆ ವಿರುದ್ಧವಾದ; ರಾಜತಾಂತ್ರಿಕ ನಡವಳಿಕೆಗಳ ಬಗ್ಗೆ ಅರಿವಿರದ; ವಿದೇಶಾಂಗ ನೀತಿಯ ಮಹತ್ವ ತಿಳಿಯದ ಟ್ರಂಪ್ ಅವರನ್ನು ಆಯ್ಕೆ ಮಾಡಿಕೊಂಡ ಕಾರಣಕ್ಕೆ, ಕೇವಲ ಹತ್ತು ತಿಂಗಳ ಅವರ ಆಡಳಿತಕ್ಕೆ ಬೆಚ್ಚಿಬಿದ್ದಿದ್ದಾರೆ.

ಜಾಗತಿಕ ಮಟ್ಟದಲ್ಲಿ ಅಮೆರಿಕ ಎಂದರೆ ಸೂಪರ್ ಪವರ್‍‌ವುಳ್ಳ ದೇಶ. ಆ ದೊಡ್ಡಣ್ಣನ ಇಮೇಜನ್ನು ಟ್ರಂಪ್ ಈಗ ಇಳೆಗಿಳಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕಿರಬೇಕಾದ ಸಾರ್ವಜನಿಕ ಸಭ್ಯತೆ ಮತ್ತು ಶಿಷ್ಟಾಚಾರಕ್ಕೆ ಕಳಂಕ ತಂದಿದ್ದಾರೆ. ಆಮದು-ರಫ್ತು, ಸುಂಕ ಹಾಗೂ ವಲಸೆನೀತಿಯನ್ನು ವಿಪರೀತಕ್ಕೆ ಕೊಂಡೊಯ್ದಿದ್ದಾರೆ.

ಅದಕ್ಕಿಂತ ಹೆಚ್ಚಾಗಿ, ಅಮೆರಿಕ ಎಂದಾಕ್ಷಣ ಎಲ್ಲರೂ ಇಷ್ಟಪಡುವುದು ಅಭಿಪ್ರಾಯಭೇದ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವ ದೇಶ ಎಂಬ ಕಾರಣಕ್ಕೆ. ಆದರೆ ಟ್ರಂಪ್ ಆಡಳಿತದಲ್ಲಿ ಸಂವಾದಕ್ಕೆ, ಬಂಡಾಯಕ್ಕೆ ಆಸ್ಪದವಿಲ್ಲ. ವಲಸೆ ಪರವಿದ್ದ ಕಾರಣಕ್ಕೆ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಅವರನ್ನು ಅಧಿಕಾರಗ್ರಹಣದ ದಿನವೇ ದೂರವಿಡಲಾಯಿತು. ಸ್ನೇಹಿತನಂತಿದ್ದು ಚುನಾವಣೆ ಗೆಲ್ಲಿಸಿದ ಎಲಾನ್ ಮಸ್ಕ್‌, ಟ್ರಂಪ್‌ರನ್ನು ಟೀಕಿಸಿದ ಕಾರಣಕ್ಕೆ ಸರ್ಕಾರದಿಂದ ಹೊರದಬ್ಬಲಾಯಿತು. ಇನ್ನು ಸರ್ಕಾರದ ವಿರುದ್ಧ ದನಿ ಎತ್ತುವ ಮಾಧ್ಯಮಗಳನ್ನು, ಟೀಕಿಸುವ ಬುದ್ಧಿಜೀವಿ ವಲಯವನ್ನು ಹತ್ತಿಕ್ಕಲಾಯಿತು.

ಇನ್ನು ಟ್ರಂಪ್ ಅಧಿಕಾರಕ್ಕೇರುತ್ತಿದ್ದಂತೆಯೇ ಐಸಿಇ(Immigration and Customs Enforcement) ಎಂಬ ಪಡೆ ಹುಟ್ಟುಹಾಕಿದರು. ಈ ಪಡೆಗೆ ಸಾಂವಿಧಾನಿಕ ಪರಮಾಧಿಕಾರ ನೀಡಿದರು. ಈ ಪಡೆ ಎಲ್ಲಿಂದ ಬರುತ್ತದೆ, ಏನು ಮಾಡುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ; ಯಾರು ಕೇಳುವಂತೆಯೂ ಇಲ್ಲ. ಈ ತಂಡ ಮುಖ್ಯವಾಗಿ ವಲಸೆಗಾರರ ವಿರುದ್ಧ ಕಠಿಣ ಕ್ರಮಗೊಳ್ಳಲು ನಿಯೋಜನೆಗೊಂಡಿದ್ದರೂ, ಅದು ಅದರ ವ್ಯಾಪ್ತಿ ಮೀರಿ ದುಂಡಾವರ್ತನೆಗಿಳಿದಿದೆ. ಈ ಪಡೆ ಒಂದು ರೀತಿಯಲ್ಲಿ ಹಿಟ್ಲರ್ ಕಾಲದ ನಾಜಿ ಪಡೆಯಂತಾಗಿದೆ. ಅಮೆರಿಕದ ನಾಗರಿಕರನ್ನು ಹಿಂಸಿಸುತ್ತಿದೆ. ದೇಶಕ್ಕೆ ಕೆಟ್ಟ ಹೆಸರು ತರುತ್ತಿದೆ.  

ದುರದೃಷ್ಟಕರ ಸಂಗತಿ ಎಂದರೆ, ಅಮೆರಿಕವು ಯಾರೋ ಪುಂಡರ ಕೈವಶವಾಗಿ, ಏಕಾಧಿಪತ್ಯ ರಾಷ್ಟ್ರವಾಗಿ ಕುಸಿಯುತ್ತಿದ್ದರೂ, ಅದನ್ನು ತಡೆಯಲು-ಪ್ರಶ್ನಿಸಲು ಸಮರ್ಥವಾದ ವಿರೋಧ ಪಕ್ಷವಿಲ್ಲ. ಡೆಮಾಕ್ರಟಿಕ್ ಪಾರ್ಟಿಯು ಸದನ ಮತ್ತು ಸೆನೆಟ್‌ನಲ್ಲಿ ಅಲ್ಪಮತವಿರುವುದರಿಂದ, ದಿಟ್ಟ ನಿಲುವು ತಳೆಯುವ, ಹೋರಾಡುವ ಸ್ಥಿತಿಯಲ್ಲಿಲ್ಲ. ಟ್ರಂಪ್ ಆಡಳಿತವು ಪ್ರಜಾಪ್ರಭುತ್ವ ಸಂಸ್ಥೆಗಳಿಗೆ ಕಿರುಕುಳ ನೀಡುತ್ತಿದ್ದು, ನಾಗರಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದ್ದರೂ, ವಿರೋಧ ಪಕ್ಷದಿಂದ ಸಾಂಕೇತಿಕ ಸವಾಲು ಕೂಡ ಇಲ್ಲ. ಇದು ಸಹಜವಾಗಿಯೇ ಡೊನಾಲ್ಡ್ ಟ್ರಂಪ್‌ ಸರ್ವಾಧಿಕಾರಿಯಂತಾಗಲು ಪರೋಕ್ಷವಾಗಿ ಸಹಕರಿಸುತ್ತಿದೆ.

ಇದನ್ನು ಓದಿದ್ದೀರಾ?: RSS- ನೂರು ವರ್ಷಗಳು : ಬಿಟ್ಟರೂ ಬಿಡದ ತಾತ್ವಿಕ ಪ್ರಶ್ನೆಗಳು

ಹೀಗಾಗಿ ಅಮೆರಿಕದ ನಾಗರಿಕರೇ ಎದ್ದು ನಿಂತಿದ್ದಾರೆ, ಬೀದಿಗಿಳಿದಿದ್ದಾರೆ, ನೋ ಕಿಂಗ್ಸ್ ಎಂದು ಕೂಗುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, ಪ್ರಪಂಚದ ನಾನಾ ದೇಶಗಳಲ್ಲಿ, ಜನರ ಆಶೋತ್ತರಗಳಿಗೆ ಸ್ಪಂದಿಸದ ಸರ್ಕಾರಗಳ ವಿರುದ್ಧ ದಂಗೆ ಎದ್ದ ಉದಾಹರಣೆಗಳಿವೆ. ಹೀಗಿದ್ದೂ ಟ್ರಂಪ್, ತಮ್ಮ ವರ್ತನೆಗಳನ್ನು ತಿದ್ದಿಕೊಳ್ಳದೆ ಇರುವುದು, ಪ್ರತಿಭಟನಾಕಾರರ ಮೇಲೆ ಮಲ ಸುರಿಯುವುದು- ವಿನಾಶಕಾಲೇ ವಿಪರೀತ ಬುದ್ಧಿಯಂತೆ ಕಾಣುತ್ತಿದೆ. ಟ್ರಂಪ್‌ರನ್ನು ಆಪ್ತ ಸ್ನೇಹಿತನೆಂದು ಒಪ್ಪಿ, ಅಪ್ಪಿಕೊಂಡಿರುವ ಭಾರತದ ಪ್ರಧಾನಿ ಮೋದಿ ಕೂಡ ಅದೇ ಹಾದಿಯಲ್ಲಿದ್ದಾರೆ. ಪ್ರಜಾಪ್ರಭುತ್ವ ಪಾಲಿಸುತ್ತಿರುವ ಭಾರತಕ್ಕೂ ಇದು ಎಚ್ಚರಿಕೆಯ ಗಂಟೆಯಾಗಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಹಬ್ಬ-ಆಚರಣೆಗಳೇ ಬಿಜೆಪಿಯ ದ್ವೇಷದ ಅಸ್ತ್ರ; ಜನತೆ ಎಚ್ಚೆತ್ತುಕೊಳ್ಳಲಿ!

ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಧಾರ್ಮಿಕ ಆಚರಣೆಗಳ ಪಾವಿತ್ರ್ಯವನ್ನು ಹಾಳುಗೆಡವುವ, ಹಬ್ಬಗಳನ್ನು...

ಈ ದಿನ ಸಂಪಾದಕೀಯ | ಪ್ರಜಾ ಸೇವೆ ಪ್ರಚಾರವೂ ಇರಲಿ, ಪ್ರಜೆಗಳ ಬದುಕಿನಲ್ಲಿ ಬದಲಾವಣೆಯನ್ನೂ ತರಲಿ

ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಜನರಿಗೆ ತಲುಪಲು ಪ್ರಚಾರ ಮುಖ್ಯ; ಅದಕ್ಕಿಂತ ಸಾಮಾನ್ಯರ...

ಈ ದಿನ ಸಂಪಾದಕೀಯ | ಭಿನ್ನಮತಗಳ ನಡುವೆ BRICS ಶೃಂಗಸಭೆ; ಒಮ್ಮತ ಸಾಧಿಸುವುದೇ ಸವಾಲು!

ಇರಾನ್-ಯುಎಇ ಉದ್ವಿಗ್ನತೆ, ರಷ್ಯಾ-ಪಶ್ಚಿಮ ರಾಷ್ಟ್ರಗಳ ಸಂಘರ್ಷ, ಏಷ್ಯಾ ದೈತ್ಯರ ಆಂತರಿಕ ತಿಕ್ಕಾಟಗಳು...

ಈ ದಿನ ಸಂಪಾದಕೀಯ | ಪಾದಯಾತ್ರೆಯ ಪಾವಿತ್ರ್ಯತೆಯನ್ನು ಬಿಜೆಪಿ ಮುಖಂಡರು ಮಣ್ಣುಗೂಡಿಸಿದರೇ?

ದೇಶದಲ್ಲಿ ಇಲ್ಲಿಯವರೆಗೆ ಜರುಗಿದ ಪಾದಯಾತ್ರೆಗಳು ಜನರ ಸಮಸ್ಯೆಗಳನ್ನು ಹೊತ್ತು ನಡೆದ ಹೆಜ್ಜೆಗಳಾಗಿದ್ದವು,...