ಈ ದಿನ ಸಂಪಾದಕೀಯ | ಕೆಲಸಗಾರ ಕಂದಾಯ ಸಚಿವರು ಭಕ್ತರ ಕ್ಯೂ ಕಾಯಲು ನಿಲ್ಲುವುದು ತರವಲ್ಲ

Date:

ಹಾಸನಾಂಬೆಯ ಭಕ್ತರ ಕ್ಯೂ ಕಾದು ಮೆಚ್ಚುಗೆ ಪಡೆದ ಕೃಷ್ಣಬೈರೇಗೌಡರು, ಕಂದಾಯ ಇಲಾಖೆಯನ್ನು ಇನ್ನಷ್ಟು ಜನಸ್ನೇಹಿ ಇಲಾಖೆಯನ್ನಾಗಿ ಮಾಡುವತ್ತ ಮನಸ್ಸು ಮಾಡಲಿ. ಆ ಕೆಲಸಗಳು ಇತಿಹಾಸದ ಪುಟಗಳಲ್ಲಿ ಸ್ಥಾನ ಪಡೆಯುತ್ತವೆ ಎಂಬುದನ್ನು ಅರಿಯಲಿ.

ಹಾಸನಾಂಬ ದೇವಿ ದರ್ಶನಕ್ಕೆ ಇಂದು ತೆರೆ ಬಿದ್ದಿದೆ. ಅಕ್ಟೋಬರ್ 9ರಿಂದ 23ರವರೆಗೆ ನಡೆದ ಜಾತ್ರಾ ಮಹೋತ್ಸವದಲ್ಲಿ ಸರಿಸುಮಾರು 26 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿ ದರ್ಶನ ಭಾಗ್ಯ ಪಡೆದಿದ್ದಾರೆ. ಸಚಿವ ಕೃಷ್ಣಬೈರೇಗೌಡರ ಉಸ್ತುವಾರಿಯಲ್ಲಿ ಜಿಲ್ಲಾಡಳಿತ ದೊಡ್ಡ ಮಟ್ಟದಲ್ಲಿ ವ್ಯವಸ್ಥೆಗಳನ್ನು ಮಾಡಿತ್ತು. ಇದಕ್ಕೆ ಕಂದಾಯ ಇಲಾಖೆ, ಬ್ಯಾಂಕ್, ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂಸೇವಕರ ನೆರವೂ ಇತ್ತು. ಸುಮಾರು 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಮೂರು ಶಿಫ್ಟ್‌ಗಳಲ್ಲಿ ಭದ್ರತೆ, ದರ್ಶನ ನಿರ್ವಹಣೆ ಮತ್ತು ಇತರ ಸೌಲಭ್ಯಗಳಿಗಾಗಿ ನಿಯೋಜಿಸಲಾಗಿತ್ತು.

- Advertisement -

ಅಂದರೆ, ಜಿಲ್ಲಾ ಉಸ್ತುವಾರಿ ಸಚಿವರಿಂದ ಹಿಡಿದು ಇಡೀ ಜಿಲ್ಲಾಡಳಿತವೇ ಸುಮಾರು ಹದಿನೈದು ದಿನಗಳ ಕಾಲ ದೇವಿಯ, ಭಕ್ತರ ಸೇವೆಗೆ ಮುಡಿಪಾಗಿತ್ತು. ಅಷ್ಟೂ ದಿನಗಳ ಕಾಲ ಸರ್ಕಾರಿ ಕಚೇರಿಗಳ ಸೇವೆ ಸ್ಥಗಿತಗೊಂಡಿತ್ತು. ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡಲಾಗಿತ್ತು. ಇದು ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಆದದ್ದಲ್ಲ; ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ, ಜಿಲ್ಲಾಡಳಿತ ಸೇವೆಗೆ ನಿಲ್ಲುವುದು ತಪ್ಪಿಲ್ಲ. ಹಲವು ಧರ್ಮಗಳ ದೇಶದಲ್ಲಿ ಒಂದು ಧರ್ಮಕ್ಕಷ್ಟೇ ಸೀಮಿತವಾದ ದರ್ಶನಕ್ಕೆ ಹೀಗೆ ಸರ್ಕಾರಿ ಸೇವೆ ಸ್ಥಗಿತಗೊಳ್ಳುವುದು ಸರ್ಕಾರಕ್ಕಾಗಲೀ, ಜನರಿಗಾಗಲೀ ತಪ್ಪು ಎನಿಸುತ್ತಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಇದನ್ನು ಓದಿದ್ದೀರಾ?: ಬಡ ಕಾರ್ಮಿಕರ ಹೊಟ್ಟೆಯ ಮೇಲೆ ಮತ್ತೆ ಮೋದಿ ಹೊಡೆತ – ಇನ್ನು ಕಡುಕಠಿಣ ಪಿಎಫ್ ಹಿಂಪಡೆತ

ಹಾಸನವನ್ನು ಬಡವರ ಊಟಿ, ಮಲೆನಾಡಿನ ಹೆಬ್ಬಾಗಿಲು, ಶಿಲ್ಪಕಲೆಗಳ ಬೀಡು, ಹೊಯ್ಸಳರ ನಾಡು ಎಂದೆಲ್ಲ ಕರೆಯುತ್ತಾರೆ. ಮೊದಲು ಸಿಂಹಾಸನಪುರಿ ಎಂದು ಕರೆಯಲಾಗುತ್ತಿದ್ದ ಊರಿನಲ್ಲಿ ಹಾಸನಾಂಬೆ ನೆಲೆಯಾಗಿದ್ದರಿಂದ ಹಾಸನ ಎನ್ನುತ್ತಾರೆ. ಹಾಸನದ ಸಂತೆಮಾಳದಲ್ಲಿ ಒಂದು ಹುತ್ತ, ಆ ಹುತ್ತದ ಮುಂದೊಂದು ಕಲ್ಲು. ಸಂತೆಗೆ ಬರುವ ಸುತ್ತಮುತ್ತಲ ಹಳ್ಳಿಯ ಜನ ಆ ಕಲ್ಲುದೇವರಿಗೆ ಕೈಮುಗಿಯುತ್ತಿದ್ದರು. ಅಲ್ಲಿಯವರೆಗೆ ಅದು ಪುರದಮ್ಮನಾಗಿತ್ತು, ದೇಸಿ ದೇವತೆಯಾಗಿತ್ತು.

ಕಾಲಾನಂತರ ಪುರೋಹಿತರ ಆಗಮನವಾಯಿತು. ಪುರದಮ್ಮ ಹಾಸನಾಂಬೆಯಾಗಿ ಪರಿವರ್ತನೆಗೊಂಡಿತು. ಪೂಜೆ, ವ್ರತ, ಹೋಮ-ಹವನ ಹೆಚ್ಚಾಯಿತು. ಭಕ್ತರ ಸಂಖ್ಯೆ ದುಪ್ಪಟ್ಟಾಯಿತು. ಹಾಸನದ ಪುರದಮ್ಮ ವೈದಿಕರ ವಶವಾಗಿ ಪುರದಮ್ಮನ ಪುರಾವೆಯೇ ಇಲ್ಲದಂತಾಯಿತು.

ಹಾಸನಾಂಬೆಯ ಮಹಿಮೆ ಏನೆಂದರೆ, ವರ್ಷವೆಲ್ಲ ಬಾಗಿಲು ಬಂದ್‌ ಆಗಿದ್ದು, ದಸರಾ-ದೀಪಾವಳಿಯಲ್ಲಿ ಮಾತ್ರ ಬಾಗಿಲು ತೆಗೆಯುವಂಥಾದ್ದು. ಹೀಗಾಗಿ ದೇವಿಯ ದರ್ಶನಕ್ಕೆ ಒಂದು ವರ್ಷ ಕಾಯಬೇಕು. ವರ್ಷದ ನಂತರ ಅರ್ಚಕರು ದೇವಿಯ ಗರ್ಭಗುಡಿಯ ಬಾಗಿಲು ತೆರೆದಾಗ ಕಳೆದ ವರ್ಷ ಬಾಗಿಲು ಮುಚ್ಚಿದಾಗ ಹಚ್ಚಿಟ್ಟ ಎರಡು ಹಣತೆಗಳು ಉರಿಯುತ್ತಿರುತ್ತವೆ. ದೇವಿಗೆ ಮುಡಿಸಿದ್ದ ಹೂವು ಬಾಡದೆ ತಾಜಾತನದಲ್ಲೇ ಇರುತ್ತವೆ. ಇದು ಹಾಸನಾಂಬೆಯ ಮಹಿಮೆ.

ಈ ಮಹಿಮೆ 90ರ ದಶಕದಲ್ಲಿ ದೃಶ್ಯಮಾಧ್ಯಮಗಳಲ್ಲಿ ಪ್ರಸಾರವಾಗಿ ಪ್ರಚಾರ ಪಡೆಯಿತು. ದೇವರು, ಧರ್ಮ, ಸಂಪ್ರದಾಯ, ಆಚರಣೆ, ನಂಬಿಕೆ, ಭಕ್ತಿಗಳಲ್ಲಿ ಮುಳುಗೇಳುವ ಜನಸಾಗರವೇ ಹಾಸನದತ್ತ ಹರಿಯಿತು. ಗಣ್ಯರು, ಶ್ರೀಮಂತರು, ಸಿನೆಮಾ ನಟ-ನಟಿಯರು, ರಾಜಕಾರಣಿಗಳ ಸಂಖ್ಯೆ ಹೆಚ್ಚಾಯಿತು. ದೇವಿ ದರ್ಶನಕ್ಕೆ ಮುಗಿಬೀಳುವ ಭಕ್ತರಿಂದಾಗಿ, ಪುರೋಹಿತರ ಅದೃಷ್ಟ ಖುಲಾಯಿಸಿತು. ಜನಿವಾರದವರ ದೆಸೆಯಿಂದ ಹಾಸನಾಂಬೆ ಧಾರ್ಮಿಕತೆಯ ಜರತಾರಿ ಸೀರೆ ತೊಡುವಂತಾಯಿತು. ಬಡವರ ಊಟಿ ಎನಿಸಿಕೊಂಡಿದ್ದ ಹಾಸನ ಧಾರ್ಮಿಕ ಕ್ಷೇತ್ರವಾಯಿತು. ವೈಚಾರಿಕ ಚಿಂತನೆಯ, ರೈತ-ದಲಿತ ಚಳವಳಿಗಳ ಕಣವಾಗಿದ್ದ ಹಾಸನ, ಹೋರಾಟದ ಕೆಚ್ಚನ್ನು ಕಳೆದುಕೊಂಡಿತು. ಆ ಜಾಗವನ್ನು ಮತಮೌಢ್ಯ ಆಕ್ರಮಿಸಿಕೊಂಡಿತು.

ಕಳೆದ ವರ್ಷ ದೇವಿ ದರ್ಶನಕ್ಕೆ ಸೂಕ್ತ ಭದ್ರತೆ ಒದಗಿಸದ ಕಾರಣ ನೂಕುನುಗ್ಗಲು, ಕಾಲ್ತುಳಿತದಂತಹ ಅವಘಡ ಸಂಭವಿಸಿತು. ಈ ಬಾರಿ ಅಂತಹ ಅನಾಹುತ ಆಗಬಾರದೆಂದು ಎಚ್ಚೆತ್ತ ಕಾಂಗ್ರೆಸ್‌ ಸರ್ಕಾರ, ಅದರ ಉಸ್ತುವಾರಿಯನ್ನು ಸಚಿವ ಕೃಷ್ಣಬೈರೇಗೌಡರ ಹೆಗಲಿಗೆ ಹಾಕಿತು. ಅವರು ತಮ್ಮ ಬುದ್ಧಿಯನ್ನೆಲ್ಲ ಬಸಿದು, ಆಧುನಿಕ ತಂತ್ರಜ್ಞಾನದ ಸಹಕಾರ ಪಡೆದು ಭಕ್ತರಿಗೆ ಭದ್ರತೆ ಒದಗಿಸಿದರು. ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಿ ದೇವಿ ದರ್ಶನಕ್ಕೆ ಅನುವು ಮಾಡಿಕೊಟ್ಟರು. ಭಕ್ತರ ಪ್ರಶಂಸೆಗೂ ಪಾತ್ರರಾದರು. ಒಂದು ಅಂದಾಜಿನ ಪ್ರಕಾರ ಈ ಬಾರಿ 26 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿ, 22 ಕೋಟಿಗೂ ಹೆಚ್ಚು ಆದಾಯ ದೇವಸ್ಥಾನಕ್ಕೆ ಹರಿದು ಬಂದಿದೆಯಂತೆ. 

ವಿಪರ್ಯಾಸವೆಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಕೆಲಸ ಮಾಡುವ ಸಚಿವರ ಪೈಕಿ, ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡರೂ ಒಬ್ಬರು. ಸರ್ಕಾರಿ ಕಚೇರಿಗಳಿಗೆ ದಿಢೀರ್‌ ಭೇಟಿ ನೀಡುವುದಾಗಬಹುದು, ಕಾಗದ-ಪತ್ರಗಳ ವಿಲೇವಾರಿಯ ವಿಳಂಬವನ್ನು ನಿವಾರಿಸಿರುವುದಾಗಬಹುದು, ದಾಖಲೆಗಳ ಡಿಜಿಟಲೀಕರಣವಾಗಬಹುದು- ಒಟ್ಟಾರೆ ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳದಿದ್ದರೂ, ಕೆಲಸಗಳಾಗುತ್ತಿವೆ. ಇಲಾಖೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅಲ್ಲಿ ಕೃಷ್ಣಬೈರೇಗೌಡರ ದಕ್ಷತೆ ಮತ್ತು ಕಾರ್ಯಕ್ಷಮತೆ ಎದ್ದು ಕಾಣುತ್ತಿದೆ. 

ಜನರೊಂದಿಗೆ ಸರಳವಾಗಿ ಬೆರೆಯುವ, ಜನಪರವಾಗಿ ಚಿಂತಿಸುವ, ತರ್ಕಬದ್ಧ ವಿಚಾರ ಮಂಡನೆಗೆ ಮುಂದಾಗುವ ಕೃಷ್ಣಬೈರೇಗೌಡರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಸರ್ಕಾರಕ್ಕೆ ಹೆಸರು ತರಬಲ್ಲ; ಪಕ್ಷಕ್ಕೆ ಆಸ್ತಿಯಾಗಬಲ್ಲ ಸಮರ್ಥ ನಾಯಕನನ್ನಾಗಿ ರೂಪಿಸಬೇಕು, ಪ್ರೋತ್ಸಾಹಿಸಬೇಕು, ಪೋಷಿಸಬೇಕು. ಅದು ಬಿಟ್ಟು ಧಾರ್ಮಿಕ ಕೆಲಸಕ್ಕೆ, ಭಕ್ತರ ಕ್ಯೂ ಕಾಯಲಿಕ್ಕೆ ನಿಯೋಜಿಸುವುದು ಒಪ್ಪುತಕ್ಕ ವಿಚಾರವಲ್ಲ. ಅವರೂ ಕೂಡ ಉಸ್ತುವಾರಿ ಎಂದಾಕ್ಷಣ ಅಲ್ಲಿ ಹೋಗಿ ನಿಲ್ಲಬೇಕಿರಲಿಲ್ಲ.

ಇದನ್ನು ಓದಿದ್ದೀರಾ?: ಪ್ರಿಯಾಂಕ್ ಪರ ಕೆಬಿಜಿ ಪೋಸ್ಟ್: ಬಲಪಂಥೀಯ ಟೂಲ್‌ಕಿಟ್ ಪ್ರತಿಕ್ರಿಯೆ ಏನಿತ್ತು?

ಅಷ್ಟಕ್ಕೂ ಧಾರ್ಮಿಕ ವಿಚಾರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೆ, ಅದು ಜನರಲ್ಲಿ ಮತ್ತಷ್ಟು ಮೌಢ್ಯ ಬಿತ್ತುತ್ತದೆಯೇ ಹೊರತು, ಸರ್ಕಾರಕ್ಕೆ ಒಳ್ಳೆಯ ಹೆಸರು ತರುವುದಿಲ್ಲ. ಇನ್ನು ರಾಜಕೀಯವಾಗಿ ಸಾಫ್ಟ್‌ ಹಿಂದುತ್ವದ ಸೇವೆಗಳಿಂದಾಗಿ, ಬಿಜೆಪಿಗೆ ಅನುಕೂಲವಾಗುತ್ತದೆಯೇ ಹೊರತು ಕಾಂಗ್ರೆಸ್‌ ಪಕ್ಷಕ್ಕಲ್ಲ. 

ಊರು ದನ ಕಾದು ದೊಡ್ಡಬೋರೇಗೌಡ ಎನಿಸಿಕೊಂಡಂತೆ, ಹಾಸನಾಂಬೆಯ ಭಕ್ತರ ಕ್ಯೂ ಕಾದು ಮೆಚ್ಚುಗೆ ಪಡೆದ ಕೃಷ್ಣಬೈರೇಗೌಡರು, ಕಂದಾಯ ಇಲಾಖೆಯನ್ನು ಇನ್ನಷ್ಟು ಜನಸ್ನೇಹಿ ಇಲಾಖೆಯನ್ನಾಗಿ ಮಾಡುವತ್ತ ಮನಸ್ಸು ಮಾಡಲಿ. ಆ ಕೆಲಸಗಳು ಇತಿಹಾಸದ ಪುಟಗಳಲ್ಲಿ ಸ್ಥಾನ ಪಡೆಯುತ್ತವೆ ಎಂಬುದನ್ನು ಅರಿಯಲಿ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಹಬ್ಬ-ಆಚರಣೆಗಳೇ ಬಿಜೆಪಿಯ ದ್ವೇಷದ ಅಸ್ತ್ರ; ಜನತೆ ಎಚ್ಚೆತ್ತುಕೊಳ್ಳಲಿ!

ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಧಾರ್ಮಿಕ ಆಚರಣೆಗಳ ಪಾವಿತ್ರ್ಯವನ್ನು ಹಾಳುಗೆಡವುವ, ಹಬ್ಬಗಳನ್ನು...

ಈ ದಿನ ಸಂಪಾದಕೀಯ | ಪ್ರಜಾ ಸೇವೆ ಪ್ರಚಾರವೂ ಇರಲಿ, ಪ್ರಜೆಗಳ ಬದುಕಿನಲ್ಲಿ ಬದಲಾವಣೆಯನ್ನೂ ತರಲಿ

ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಜನರಿಗೆ ತಲುಪಲು ಪ್ರಚಾರ ಮುಖ್ಯ; ಅದಕ್ಕಿಂತ ಸಾಮಾನ್ಯರ...

ಈ ದಿನ ಸಂಪಾದಕೀಯ | ಭಿನ್ನಮತಗಳ ನಡುವೆ BRICS ಶೃಂಗಸಭೆ; ಒಮ್ಮತ ಸಾಧಿಸುವುದೇ ಸವಾಲು!

ಇರಾನ್-ಯುಎಇ ಉದ್ವಿಗ್ನತೆ, ರಷ್ಯಾ-ಪಶ್ಚಿಮ ರಾಷ್ಟ್ರಗಳ ಸಂಘರ್ಷ, ಏಷ್ಯಾ ದೈತ್ಯರ ಆಂತರಿಕ ತಿಕ್ಕಾಟಗಳು...

ಈ ದಿನ ಸಂಪಾದಕೀಯ | ಪಾದಯಾತ್ರೆಯ ಪಾವಿತ್ರ್ಯತೆಯನ್ನು ಬಿಜೆಪಿ ಮುಖಂಡರು ಮಣ್ಣುಗೂಡಿಸಿದರೇ?

ದೇಶದಲ್ಲಿ ಇಲ್ಲಿಯವರೆಗೆ ಜರುಗಿದ ಪಾದಯಾತ್ರೆಗಳು ಜನರ ಸಮಸ್ಯೆಗಳನ್ನು ಹೊತ್ತು ನಡೆದ ಹೆಜ್ಜೆಗಳಾಗಿದ್ದವು,...