ಈ ದಿನ ಸಂಪಾದಕೀಯ | ಮೋದಿ ಹೇಳಿದ್ದ ಹಸಿ ಸುಳ್ಳು-‘ನಾನೂ ತಿನ್ನುವುದಿಲ್ಲ, ತಿನ್ನಲೂ ಬಿಡುವುದಿಲ್ಲ’

Date:

2014ರಲ್ಲಿ ಅಧಿಕಾರ ಹಿಡಿದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇದೀಗ ತನ್ನ ಭ್ರಷ್ಟಾಚಾರವನ್ನು ಬಯಲಿಗೆ ಎಳೆದಿರುವ ಮೂವರು ಸಿಎಜಿ ಅಧಿಕಾರಿಗಳಿಗೆ ವರ್ಗಾವಣೆಯ ದಂಡನೆ ವಿಧಿಸಿದೆ. ಸಂಸತ್ತಿನ ಇತ್ತೀಚಿನ ಆಗಸ್ಟ್ ತಿಂಗಳ ಮಳೆಗಾಲದ ಅಧಿವೇಶನದಲ್ಲಿ ಮೋದಿ ಸರ್ಕಾರದ ಮೂರು ಭಾರೀ ಭ್ರಷ್ಟಾಚಾರ ಪ್ರಕರಣಗಳ ಕುರಿತು ವರದಿಗಳನ್ನು ಮಂಡಿಸಿತ್ತು ಸಿಎಜಿ.

ಸಿಎಜಿ ವರದಿಗಳಲ್ಲಿ 2G ತರಂಗಾಂತರ ಹಂಚಿಕೆ ಕುರಿತು ಮಾಡಲಾಗಿದ್ದ ‘ಕಾಲ್ಪನಿಕ ಭ್ರಷ್ಟಾಚಾರ’ ಕುರಿತ ಹುಸಿ ತುತ್ತೂರಿಯನ್ನು ಬಿಜೆಪಿ ತಾನು ಪ್ರತಿಪಕ್ಷವಾಗಿದ್ದಾಗ ಆಕಾಶದೆತ್ತರಕ್ಕೆ ಊದಿತ್ತು. ಮತದಾರರು ಮನಮೋಹನ್‌ ಸಿಂಗ್ ನೇತೃತ್ವದ ಯುಪಿಎ ಸರ್ಕಾರವನ್ನು 2014ರಲ್ಲಿ ಮನೆಗೆ ಕಳಿಸಿದ್ದರು. ಈ ಆಪಾದನೆಯೇ ಆಧಾರರಹಿತ. ಕೆಲ ಜನರು ಕಲಾವಂತಿಕೆಯಿಂದ ಕೆಲವು ಆಯ್ದ ಮಾಹಿತಿಗಳನ್ನು ಪೋಣಿಸಿ, ಅಂಕಿ ಅಂಶಗಳನ್ನು ಅಗಣಿತವಾಗಿ ಉತ್ಪ್ರೇಕ್ಷೆ ಮಾಡಿ ಹಗರಣವನ್ನು ಸೃಷ್ಟಿಸಿದ್ದಾರೆ ಎಂದು ದೆಹಲಿಯ ವಿಶೇಷ ಸಿಬಿಐ ಕೋರ್ಟು 2017ರ ಅಂತ್ಯದಲ್ಲಿ ತೀರ್ಪು ನೀಡಿತು.

2014ರಲ್ಲಿ ಅಧಿಕಾರ ಹಿಡಿದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇದೀಗ ತನ್ನ ಭ್ರಷ್ಟಾಚಾರವನ್ನು ಬಯಲಿಗೆ ಎಳೆದಿರುವ ಮೂವರು ಸಿಎಜಿ ಅಧಿಕಾರಿಗಳಿಗೆ ವರ್ಗಾವಣೆಯ ದಂಡನೆ ವಿಧಿಸಿದೆ. ಸಂಸತ್ತಿನ ಇತ್ತೀಚಿನ ಆಗಸ್ಟ್ ತಿಂಗಳ ಮಳೆಗಾಲದ ಅಧಿವೇಶನದಲ್ಲಿ ಮೋದಿ ಸರ್ಕಾರದ ಮೂರು ಭಾರೀ ಭ್ರಷ್ಟಾಚಾರ ಪ್ರಕರಣಗಳ ಕುರಿತು ವರದಿಗಳನ್ನು ಮಂಡಿಸಿತ್ತು ಸಿಎಜಿ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮೋದಿ ಸರ್ಕಾರದ ಆಯುಷ್ಮಾನ್ ಭಾರತ ಯೋಜನೆ ಮತ್ತು ಹೆದ್ದಾರಿ ನಿರ್ಮಾಣದಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಬಯಲಿಗೆಳೆದ ಸಿ.ಎ.ಜಿ. ಯ (ಕಂಪ್ಟ್ರೋಲರ್ ಅಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ) ಈ ಅಧಿಕಾರಿಗಳ ವರ್ಗಾವಣೆ ಖಂಡನೀಯ. ಅತೂರ್ವ ಸಿನ್ಹಾ, ಅಶೋಕ್ ಸಿನ್ಹಾ ಹಾಗೂ ದತ್ತಪ್ರಸಾದ್ ಸೂರ್ಯಕಾಂತ್ ಶಿರ್ಸಾ ಈ ವರದಿಗಳನ್ನು ನೀಡಿದ್ದ ಅಧಿಕಾರಿಗಳು. ಮೋದಿ ಸರ್ಕಾರ ಅವರನ್ನು ವರ್ಗಾವಣೆಯ ಶಿಕ್ಷೆಗೆ ಗುರಿ ಮಾಡಿದೆ. ಒಬ್ಬರನ್ನು ಕೇರಳಕ್ಕೂ, ಮತ್ತೊಬ್ಬರನ್ನು ರಾಜಭಾಷಾ ಇಲಾಖೆಗೂ, ಇನ್ನೊಬ್ಬರನ್ನು ಕಾನೂನು ಘಟಕಕ್ಕೆ ವರ್ಗಾಯಿಸಲಾಗಿದೆ.

ಇದೇ ಬಿಜೆಪಿಯು ತಾನು ಪ್ರತಿಪಕ್ಷದ ಸ್ಥಾನದಲ್ಲಿದ್ದಾಗ ಸಿಎಜಿ ವರದಿಗಳನ್ನು ಮಾರಕಾಸ್ತ್ರಗಳನ್ನಾಗಿ ಬಳಸಿಕೊಂಡು ಅಧಿಕಾರಕ್ಕೆ ಬಂದದ್ದುಂಟು. ಸಂವಹನ ತರಂಗಾಂತರ ಗುಚ್ಛಗಳ (ಸ್ಪೆಕ್ಟ್ರಮ್) ಹಂಚಿಕೆಯಲ್ಲಿ 1.76 ಲಕ್ಷ ಕೋಟಿ ರುಪಾಯಿಗಳ ‘ಕಾಲ್ಪನಿಕ ನಷ್ಟ’ ಸಂಭವಿಸಿದೆ ಎಂಬುದಾಗಿ ಅಂದಿನ ಸಿಎಜಿ ವಿನೋದ್ ರೈ ವರದಿ ನೀಡಿದ್ದರು. ಈ ವರದಿಯನ್ನು ಹಿಡಿದುಕೊಂಡು ಅಂದಿನ ಮನಮೋಹನ ಸಿಂಗ್ ಸರ್ಕಾರಕ್ಕೆ ಕಡು ಭ್ರಷ್ಟಾಚಾರದ ಮಸಿ ಬಳಿದಿತ್ತು ಬಿಜೆಪಿ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ 2014ರಿಂದ ಸಿಎಜಿ ವರದಿಗಳ ಮಂಡನೆ ವಿರಳ ಅಥವಾ ವಿಳಂಬ ಆಗಿ ಹೋಗಿರುವುದೊಂದು ಕೌತುಕವೇ ಸರಿ. ಮೋದಿ ಕಾಲದ ಗೋದಿ ಮೀಡಿಯಾ ಕೂಡ ಸಿಎಜಿ ವರದಿಗಳ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ.

ಮೂವರು ಅಧಿಕಾರಿಗಳ ವರ್ಗಾವಣೆಗೆ ಕಾಂಗ್ರೆಸ್ ಪಕ್ಷ ಕಟುವಾಗಿ ಪ್ರತಿಕ್ರಿಯಿಸಿದೆ ಮತ್ತು ಈ ಪ್ರತಿಕ್ರಿಯೆ ಸರ್ವಥಾ ಸಮರ್ಥನೀಯ. ಮೌನ ಮತ್ತು ಬೆದರಿಕೆಯ ಪರದೆಯ ಹಿಂದೆ ಮೋದಿ ಸರ್ಕಾರ ಮಾಫಿಯಾ ವೈಖರಿಯ ಕಾರ್ಯಾಚರಣೆ ನಡೆಸಿದೆ. ಮೋದಿ ಸರ್ಕಾರದ ಭ್ರಷ್ಟಾಚಾರದತ್ತ ಬೆರಳು ತೋರಿದವರನ್ನು ಬೆದರಿಸಲಾಗುತ್ತದೆ ಇಲ್ಲವೇ ಸ್ಥಾನಭ್ರಷ್ಟರನ್ನಾಗಿಸುತ್ತದೆ ಎಂಬುದು ಕಾಂಗ್ರೆಸ್ ಆಪಾದನೆ.

ದ್ವಾರಕಾ ಎಕ್ಸ್‌ಪ್ರೆಸ್ ವೇ ಯೋಜನಾವೆಚ್ಚವನ್ನು 1400 ಪಟ್ಟು ಹೆಚ್ಚಿಸಲಾಗಿದೆ. 3,600 ಕೋಟಿ ರುಪಾಯಿಗಳಷ್ಟು ಹಣವನ್ನು ಹೆದ್ದಾರಿ ನಿರ್ಮಾಣ ಯೋಜನೆಗಳಿಂದ ತಿರುಗಿಸಿ ಬೇರೆ ಉದ್ದೇಶಗಳಿಗೆ ಬಳಸಲಾಗಿದೆ. ಬಿಡ್ಡಿಂಗ್ ಪ್ರಕ್ರಿಯೆಗಳು ದೋಷಪೂರ್ಣವಾಗಿವೆ. ಭಾರತ್ ಮಾಲಾ ಯೋಜನಾವೆಚ್ಚವನ್ನು ಹಣದುಬ್ಬರದ ಹೆಸರಿನಲ್ಲಿ ಶೇ.60ರಷ್ಟು ಹೆಚ್ಚಿಸಲಾಗಿದೆ. ಆಯುಷ್ಮಾನ್ ಭಾರತ ಯೋಜನೆಯಡಿ ಮರಣ ಹೊಂದಿದ ರೋಗಿಗಳ ಹೆಸರಿನಲ್ಲಿ ಲಕ್ಷಾಂತರ ‘ಕ್ಲೇಮ್’ಗಳನ್ನು ಮಾಡಲಾಗಿದೆ. ಕನಿಷ್ಠ ಏಳೂವರೆ ಲಕ್ಷ ಫಲಾನುಭವಿಗಳನ್ನು ಏಕೈಕ ಮೊಬೈಲ್ ನಂಬರ್‌ಗೆ ಜೋಡಿಸಲಾಗಿದೆ. ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯು ಬಡಜನರಿಗೆ ಆರೋಗ್ಯ ವಿಮೆಯ ಸೌಕರ್ಯ ಕಲ್ಪಿಸುವ ಆಶಯ ಹೊಂದಿದೆ.
ದ್ವಾರಕಾ ಎಕ್ಸಪ್ರೆಸ್ ವೇ ಯೋಜನೆಯ ಮೂಲ ಯೋಜನಾ ವೆಚ್ಚ ಪ್ರತಿ ಕಿಲೋಮೀಟರ್ ನಿರ್ಮಾಣಕ್ಕೆ 18.2 ಕೋಟಿ ರುಪಾಯಿ. ಸಿಎಜಿ ವರದಿಯ ಪ್ರಕಾರ ಈ ವೆಚ್ಚವನ್ನು 251 ಕೋಟಿ ರುಪಾಯಿಗೆ ಹೆಚ್ಚಿಸಲಾಗಿದೆ.

ಸಿಎಜಿಯು ಸಾಂವಿಧಾನಿಕ ಮಾನ್ಯತೆ ಹೊಂದಿದ ಸ್ವತಂತ್ರ ಸ್ವಾಯತ್ತ ಸಂಸ್ಥೆ. ಸರ್ಕಾರದ ಮರ್ಜಿ ಹಿಡಿಯಬೇಕಿಲ್ಲ. ಈ ವರ್ಗಾವಣೆಗಳನ್ನು ಮೋದಿ ಸರ್ಕಾರ ಕೂಡಲೇ ರದ್ದು ಮಾಡಬೇಕು ಮತ್ತು ವರದಿಗಳಲ್ಲಿ ಪ್ರಸ್ತಾಪವಾಗಿರುವ ಅಕ್ರಮಗಳ ಕುರಿತು ವಿಚಾರಣೆ ನಡೆಸಬೇಕು.

ನಾನೂ (ಲಂಚ) ತಿನ್ನುವುದಿಲ್ಲ, ಬೇರೆಯವರೂ (ಲಂಚ) ತಿನ್ನಲು ಬಿಡುವುದಿಲ್ಲ (ನ ಖಾವೂಂಗಾ, ನ ಖಾನೇ ದೂಂಗಾ) ಎಂಬ ಮೋದಿಯವರ ಭರವಸೆ, ಕಳೆದ ಒಂಬತ್ತೂವರೆ ವರ್ಷಗಳ ಅವರ ಆಡಳಿತದಲ್ಲಿ ಬಾರಿ ಬಾರಿಗೆ ಮುಖವಡಿಯಾಗಿ ಬಿದ್ದು ಮಣ್ಣು ಮುಕ್ಕಿದೆ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಸರ್ವಾಧಿಕಾರದತ್ತ ದೇಶ ದಾಪುಗಾಲು ಹಾಕುತ್ತಿಲ್ಲವೇ? ಅವರಿಗಾದದ್ದು ನಮಗಾಗುವುದಿಲ್ಲವೇ?

ಹಿಟ್ಲರ್ ಮತ್ತು ಪುಟಿನ್ ಮಾಡಿದಂತೆ, ಮೋದಿ ಅವರು ದೇಶದಲ್ಲಿ ವಿರೋಧ ಪಕ್ಷಗಳಿಲ್ಲದಂತೆ,...

ಈ ದಿನ ಸಂಪಾದಕೀಯ | ಮರೆಯಲಾರದ, ಮರೆಯಬಾರದ ಮನಮೋಹನ ಈ ಸಿಂಗ್

ಮನಮೋಹನ್ ಸಿಂಗ್ ಎಂದೂ ಅಧಿಕಾರ ಚಲಾಯಿಸಲಿಲ್ಲ, ಹಣ ಮಾಡಲಿಲ್ಲ, ಪ್ರಚಾರ ಬಯಸಲಿಲ್ಲ,...

ಈ ದಿನ ಸಂಪಾದಕೀಯ | ನಿರ್ಮಲಾ ಸೀತಾರಾಮನ್‌ ಮುಕ್ತಮನಸ್ಸಿನಿಂದ ಚರ್ಚೆಯಲ್ಲಿ ಭಾಗವಹಿಸುವರೇ ?

ನಿರ್ಮಲಾ ಸೀತಾರಾಮನ್‌ ಅವರು ರಾಜ್ಯದ ಪ್ರಜ್ಞಾವಂತರು ಸಿದ್ದಪಡಿಸಿರುವ ವೇದಿಕೆಗೆ ಬಂದು ಮುಕ್ತ...