ಈ ದಿನ ಸಂಪಾದಕೀಯ | ಕೋರೆಗಾಂವ್ ಭೀಮಾ ವಿಜಯೋತ್ಸವ ಎಂಬ ದಲಿತ ಅಸ್ಮಿತೆ

Date:

ಕೋರೆಗಾಂವ್ ನ ಈ ಯುದ್ಧ ಹೆಚ್ಚು ಕಾಲ ನಡೆಯಲಿಲ್ಲ. ಬ್ರಿಟಿಷರ 200 ಸೈನಿಕರು ಮತ್ತು ಪೇಶ್ವೆಯ 500 ಸೈನಿಕರು ಹತರಾಗಿದ್ದರು. ಆಂಗ್ಲೋ-ಮರಾಠಾ ಯುದ್ಧದಲ್ಲಿ ಅಂತಿಮ ಗೆಲುವು ಬ್ರಿಟಿಷರದಾಗಿತ್ತು. ಹೀಗಾಗಿ ಕೋರೆಗಾಂವ್ ನಲ್ಲಿ ಗೆಲುವಿನ ರಣಸ್ತಂಭ ಸ್ಮಾರಕವನ್ನು ನಿರ್ಮಿಸಿದರು. ಗೆದ್ದದ್ದು ಬ್ರಿಟಿಷ್ ಸೇನೆಯಾದರೂ ಸೇನೆಯಲಿ ಹೆಚ್ಚಿನ ಸಂಖ್ಯೆಯಲ್ಲಿದ್ದವರು ‘ಅಸ್ಪೃಶ್ಯ’ ಜನಾಂಗದ ಮಹಾರರು.

- Advertisement -

ದಲಿತ ಸ್ವಾಭಿಮಾನದ ಐತಿಹಾಸಿಕ ಅಸ್ಮಿತೆಯ ಪ್ರತೀಕಗಳಲ್ಲೊಂದು ಕೋರೆಗಾಂವ್ ಭೀಮಾ. ಪ್ರತಿವರ್ಷ ಜನವರಿ ಒಂದರಂದು ಮಹಾರಾಷ್ಟ್ರದ ಕೋರೆಗಾಂವ್ ಭೀಮಾದಲ್ಲಿ ನಡೆಯುವ ವಿಜಯೋತ್ಸವದಲ್ಲಿ ಲಕ್ಷಾಂತರ ದಲಿತರು ಪಾಲ್ಗೊಂಡು ಸಂಭ್ರಮಿಸುತ್ತಾರೆ. ನಾಳೆ (ಜನವರಿ 1) ಕೂಡ ಲಕ್ಷ ಲಕ್ಷ ದಲಿತರು ಕಲೆಯಲಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಪ್ರತಿವರ್ಷ ಜನವರಿ ಒಂದರಂದು ಮಹಾರರು ಸೇರಿದಂತೆ ದಲಿತರು ವಿಜಯಸ್ತಂಭ ಸ್ಮಾರಕಕ್ಕೆ ಗೌರವ ಸಲ್ಲಿಸಲು ಭೀಮಾ ಕೋರೆಗಾಂವ್ ಗ್ರಾಮದಲ್ಲಿ ಸೇರುತ್ತಾರೆ. 1818ರ ಜನವರಿ ಒಂದರಂದು ಬ್ರಿಟಿಷ್ ಸೇನೆಗೆ ಸೇರಿದ ಕೆಲವೇ ನೂರು ಮಹಾರ ಸೈನಿಕರು ಪೇಶ್ವೆಗಳ ಸೈನ್ಯವನ್ನು ಸದೆಬಡಿದು ಹಿಮ್ಮೆಟ್ಟಿಸಿದ್ದರು. 1927ರ ಜನವರಿ ಒಂದರಂದು ಡಾ.ಬಿ.ಆರ್.ಅಂಬೇಡ್ಕರ್ ಈ ಸ್ಥಳಕ್ಕೆ ಭೇಟಿ ನೀಡಿ ಮಹಾರ ಹುತಾತ್ಮರಿಗೆ ಗೌರವ ಸಲ್ಲಿಸಿದ್ದರು. ಅಂದಿನಿಂದ ಇಂದಿನ ತನಕ ಈ ಪದ್ಧತಿ ಮುಂದುವರೆದಿದೆ.

1818ರ ಜನವರಿ ಒಂದರಂದು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ 900 ಸೈನಿಕರು ಶಿರೂರಿನಿಂದ ಪುಣೆಗೆ ಹೆಜ್ಜೆ ಹಾಕಿದ್ದರು. ಎರಡನೆಯ ಬಾಜೀರಾವ್ ಪೇಶ್ವೆಯ 20 ಸಾವಿರ ಯೋಧರ ಸೇನೆ ಎದುರಾಗಿತ್ತು. ಕೋರೆಗಾಂವ್ ನ ಈ ಯುದ್ಧ ಹೆಚ್ಚು ಕಾಲ ನಡೆಯಲಿಲ್ಲ. ಬ್ರಿಟಿಷರ 200 ಸೈನಿಕರು ಮತ್ತು ಪೇಶ್ವೆಯ 500 ಸೈನಿಕರು ಹತರಾಗಿದ್ದರು. ಆಂಗ್ಲೋ-ಮರಾಠಾ ಯುದ್ಧದಲ್ಲಿ ಅಂತಿಮ ಗೆಲುವು ಬ್ರಿಟಿಷರದಾಗಿತ್ತು. ಹೀಗಾಗಿ ಕೋರೆಗಾಂವ್ ನಲ್ಲಿ ಗೆಲುವಿನ ರಣಸ್ತಂಭ ಸ್ಮಾರಕವನ್ನು ನಿರ್ಮಿಸಿದರು. ಗೆದ್ದದ್ದು ಬ್ರಿಟಿಷ್ ಸೇನೆಯಾದರೂ ಸೇನೆಯಲಿ ಹೆಚ್ಚಿನ ಸಂಖ್ಯೆಯಲ್ಲಿದ್ದವರು ‘ಅಸ್ಪೃಶ್ಯ’ ಜನಾಂಗದ ಮಹಾರರು. ಮೇಲ್ಜಾತಿ ಪೇಶ್ವಾ ಸೇನೆಯ ವಿರುದ್ಧ ಮಹಾರ್ ಗೆಲುವು ದಲಿತ ಹೆಮ್ಮೆಗೆ ಕಾರಣವಾಯಿತು. ವಿಶೇಷವಾಗಿ ಮಹಾರರು ಬಲಿಷ್ಠ ದೇಹವುಳ್ಳವರೂ, ಬಹುತೇಕರು ಸುಂದರಾಂಗರೂ, ಬುದ್ಧಿವಂತರೂ, ತ್ವರಿತ ಗ್ರಹಿಕೆಯವರೂ ಹಾಗೂ ಧೈರ್ಯಶಾಲಿಗಳೂ ಆಗಿದ್ದರೆಂದು ಮಹಾರರ ಕುರಿತು ಬ್ರಿಟಿಷ್ ಅಧಿಕಾರಿ ಹೆನ್ರಿ ಬೇಡನ್ ಪೊವೆಲ್ ಉಲ್ಲೇಖಿಸಿದ್ದಾನೆ.

ಮಹಾರರ ಸಮರ ಮೌಲ್ಯವನ್ನು ಬ್ರಿಟಿಷರು ಗುರುತಿಸಿದ್ದರು. ಶಿವಾಜಿ ಮಹಾರಾಜ ಕೂಡ ಮಹಾರರ ಈ ಗುಣವನ್ನು ಗುರುತಿಸಿದ್ದ. ಜ್ಯೋತಿರಾವ್ ಫುಲೆ ಅವರು ಶಿವಾಜಿ ಕುರಿತು ರಚಿಸಿರುವ ಲಾವಣಿಯಲ್ಲಿ ಈ ಉಲ್ಲೇಖ ಉಂಟು. ಮರಾಠಾ ಜಾತಿ ಅಸ್ಮಿತೆ ಕ್ಷತ್ರಿಯ ರೂಪ ತಾಳದೆ ಇನ್ನೂ ಕೃಷಿಯ ಜೊತೆ ತಳಕು ಹಾಕಿಕೊಂಡಿದ್ದ ಶಿವಾಜಿಯ ಕಾಲದಲ್ಲಿ ಮರಾಠರು ಮತ್ತು ಮಹಾರರ ನಡುವಣ ಕಂದಕ ಹಿರಿದಾಗಿರಲಿಲ್ಲ ಎನ್ನುತ್ತಾರೆ ಇತಿಹಾಸಕಾರರು. ಶಿವಾಜಿಯ ಕಾಲದಲ್ಲಿ ಮಹಾರ ಸೈನಿಕರು ಅನೇಕರು ಉನ್ನತ ಹುದ್ದೆಗೆ ಏರಿದ್ದರು. ಮುಂದೆ ಪೇಶ್ವೆಗಳ ಕಾಲದಲ್ಲಿ ಮಹಾರರ ಈ ಸ್ಥಾನಮಾನ ಕುಸಿಯಿತು. ಪೇಶ್ವೆಗಳು ಉನ್ನತಕುಲ ಕರ್ಮಠರೂ, ಅಸ್ಪೃಶ್ಯ ಪೀಡಕರೂ ಆಗಿದ್ದರು ಎಂದು ಇತಿಹಾಸಜ್ಞೆ ಶ್ರದ್ಧಾ ಕುಂಭೋಜ್ಕರ್ ಬರೆಯತ್ತಾರೆ. ಸಾರ್ವಜನಿಕ ಸ್ಥಳಗಳನ್ನು ಪ್ರವೇಶಿಸದಂತೆ ಮಹಾರರ ಮೇಲೆ ನಿಷೇಧ ಹೇರಿದ್ದರು ಪೇಶ್ವೆಗಳು. ಜಾತಿಯ ಕಟ್ಟುಪಾಡುಗಳ ಉಲ್ಲಂಘನೆಗೆ ಕ್ರೂರ ಶಿಕ್ಷೆ ವಿಧಿಸುತ್ತಿದ್ದರು. ಶಿವಾಜಿಯ ಕಾಲದಲ್ಲಿ ಮಹಾರರಿಗೆ ಇದ್ದ ಸಾಮಾಜಿಕ ಮತ್ತು ವೃತ್ತಿ ಸಂಬಂಧದ ಚಲನೆಯನ್ನು ಪೇಶ್ವೆಗಳು ಕತ್ತರಿಸಿ ಒಗೆದಿದ್ದರು. ಈ ಬಗೆಯ ಜಾತಿ ಆಧಾರಿತ ಕ್ರೌರ್ಯ ಮಹಾರರ ಸಾಮೂಹಿಕ ನೆನಪಿನಿಂದ ಈವರೆಗೂ ಅಳಿಸಿಲ್ಲ ಎನ್ನುತ್ತಾರೆ ಕುಂಭೋಜ್ಕರ್.

ಬ್ರಿಟಿಷರು ಬಾಂಬೆ ಆರ್ಮಿಗೆ ಸೈನಿಕರನ್ನು ನೇಮಕ ಮಾಡಿಕೊಂಡ ಅವಕಾಶವನ್ನು ಮಹಾರರು ಬಳಸಿಕೊಂಡರು. ಸೇನೆಗೆ ಸೇರುವ ಅವಕಾಶವನ್ನು ಸಾಮಾಜಿಕ ಮತ್ತು ಆರ್ಥಿಕ ಬಿಡುಗಡೆಯ, ತಮ್ಮ ಕಳೆದು ಹೋದ ವೈಭವವನ್ನು ಮರಳಿ ಗಳಿಸುವ ದಾರಿಯನ್ನಾಗಿ ಕಂಡುಕೊಂಡರು. ರಮೋಶಿ, ಮಹಾರ್ ಹಾಗೂ ಮಾಂಗ್ ನಂತಹ ಕೆಳಜಾತಿಗಳ ಯೋಧರನ್ನು ಒಳಗೊಂಡ ಪದಾತಿ ದಳವನ್ನು ಶಿವಾಜಿ ಕಟ್ಟಿದ್ದ ರೀತಿಯನ್ನು ಬ್ರಿಟಿಷರೂ ಅನುಕರಿಸಿದರು. ಪೇಶ್ವೆಗಳ ಆಡಳಿತದಲ್ಲಿ ಗುಲಾಮ ಬದುಕನ್ನು ಎದುರಿಸಿದ್ದ ಮಹಾರರು, ತಮ್ಮ ಪೀಡಕರ ಅಧೋಗತಿಯನ್ನು ಕಾಣಲು ಬ್ರಿಟಿಷ್ ಸೇನೆ ಸೇರಲು ಹಿಂದೆ ಮುಂದೆ ನೋಡಲಿಲ್ಲ. ಬ್ರಿಟಿಷ್ ಸೇನೆಯಲ್ಲಿ ಪರಾಕ್ರಮ ಮತ್ತು ನಿಯತ್ತಿನಿಂದ ದುಡಿದರು ಕದನದಲ್ಲಿ ಪ್ರಾಣತೆತ್ತ 22 ಮಹಾರ ಸೈನಿಕರ ಹೆಸರುಗಳನ್ನು ಬ್ರಿಟಿಷರು ಕೋರೆಗಾಂವ್ ನಲ್ಲಿ ತಾವು ನಿರ್ಮಿಸಿದ ವಿಜಯಸ್ತಂಭದಲ್ಲಿ ಕೆತ್ತಿಸಿದರು. ಆನಂತರದ ವರ್ಷಗಳಲ್ಲಿ ಮಹಾರರ ನೇಮಕವನ್ನು ಬ್ರಿಟಿಷರೂ ನಿಲ್ಲಿಸಿದರು.  ದಲಿತರ ಪಾಲಿಗೆ ಮೇಲ್ಜಾತಿಗಳ ದೌರ್ಜನ್ಯದ ವಿರುದ್ಧದ ವಿಜಯದ ಪ್ರತೀಕವಾಯಿತು ಕೋರೆಗಾಂವ್ ವಿಜಯಸ್ತಂಭ. ಬ್ರಿಟಿಷರು ಕಡೆಗಣಿಸಿದಂತೆಯೇ ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸ ರಚನೆಯಲ್ಲೂ ಮಹಾರರ ಸಮರ ಕೌಶಲ್ಯವನ್ನು ಮೂಲೆಗುಂಪು ಮಾಡಲಾಯಿತು. ಆದರೆ ತಮ್ಮ ಪಾಲಿನ ಪರಮಪೀಡಕರಾದ ಪೇಶ್ವೆಗಳ ಆಡಳಿತವನ್ನು ಕೊನೆಗಾಣಿಸಿದ ಕದನದಲ್ಲಿ ತಾವು ಮೆರೆದ ಪರಾಕ್ರಮದ ಹೆಮ್ಮೆಯು ಮಹಾರರ ಸಾಮೂಹಿಕ ನೆನಪಿನ ಕೋಶದಲ್ಲಿ ಎಂದೆಂದಿಗೂ ಜೀವಂತ ಉಳಿಯಿತು.

ಕೋರೆಗಾಂವ ಸನಿಹದ ಮತ್ತೊಂದು ಗ್ರಾಮದಲ್ಲಿ ಶಿವಾಜಿಯ ಮಗ ಸಂಭಾಜಿಯ ಸಮಾಧಿಯಿದೆ. ಅದರ ಪಕ್ಕದಲ್ಲಿರುವ ಮತ್ತೊಂದು ಪುಟ್ಟ ಸಮಾಧಿಯನ್ನು ‘ಅಸ್ಪೃಶ್ಯ’ ಮಹಾರ್ ಜಾತಿಗೆ ಸೇರಿದ ಗೋವಿಂದ ಗಾಯಕ್ವಾಡನದು ಎಂದು ವ್ಯಾಪಕವಾಗಿ ನಂಬಲಾಗಿದೆ. 1689ರಲ್ಲಿ ಔರಂಗಜೇಬನಿಂದ ಚಿತ್ರಹಿಂಸೆಗೀಡಾಗಿ ಕೊಲ್ಲಲ್ಪಟ್ಟ ಸಂಭಾಜಿಯ ದೇಹದ ಭಾಗಗಳನ್ನು ಹೊಲಿದು ಒಂದು ಮಾಡಿ ಆನಂತರ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದು ಇದೇ ಗೋವಿಂದ ಗಾಯಕ್ವಾಡ ಎಂದೂ ನಂಬಲಾಗಿದೆ. ಮರಾಠರು ಈ ಮಾತನ್ನು ಒಪ್ಪುವುದಿಲ್ಲ. ಸಂಭಾಜಿಯ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದು ಮರಾಠರೇ ವಿನಾ ದಲಿತರಲ್ಲ ಎಂಬುದು ಅವರ ವಾದ. ಕೀಳು ಕುಲದವರು ಬೇಡುವವರೇ ವಿನಾ ನೀಡುವವರಲ್ಲ. ಅವರಿಂದ ನೀಡಿಸಿಕೊಳ್ಳುವುದಕ್ಕಿಂತ ಅವಮಾನ ಮತ್ತೊಂದಿಲ್ಲ ಎಂಬ ಭೇದ ಭಾವದ ಮನುಷ್ಯವಿರೋಧಿ ಮನಸ್ಥಿತಿಯಿದು.

ಗೋವಿಂದ ಗಾಯಕ್ವಾಡನದೆಂದು ಹೇಳಲಾದ ಸಮಾಧಿಯ ಪಕ್ಕ ಫಲಕವೊಂದನ್ನು ನೆಡಲಾಗಿತ್ತು. ಸಂಭಾಜಿಯ ಅಂತ್ಯಕ್ರಿಯೆ ನೆರವೇರಿಸಿದ ಗಾಯಕ್ವಾಡನ ಸಮಾಧಿಯಿದು ಎಂದು ಸಾರುವ ಫಲಕವದು. 2018ರ ಜನವರಿ ಒಂದರಂದು ದಲಿತರ ಕೋರೆಗಾಂವ್ ಭೀಮಾ ವಿಜಯೋತ್ಸವ ಆಚರಣೆಗೆ ಮುನ್ನ ಈ ಫಲಕವನ್ನು ಕಿತ್ತೆಸೆದು ಸಮಾಧಿಯನ್ನು ವಿರೂಪಗೊಳಿಸಲಾಯಿತು. ಲಕ್ಷಾಂತರ ದಲಿತರು ಕೋರೆಗಾಂವ್ ಗೆ ಭೇಟಿ ನೀಡಲು ಒಂದೆರಡು ದಿನಗಳ ಮುನ್ನ ನಡೆದ ಈ ಕೃತ್ಯ ದಲಿತರು ಮತ್ತು ಮರಾಠರನ್ನು ಪರಸ್ಪರರ ವಿರುದ್ಧ ಎತ್ತಿ ಕಟ್ಟಲಾಗುತ್ತದೆ. ಹರಿದು ಹಂಚಿ ಹೋಗಿರುವ ದಲಿತರ ನಾಯಕ ರಾಮದಾಸ್ ಅಠಾವಳೆ ಈಗಾಗಲೇ ಎನ್.ಡಿ.ಎ. ಸರ್ಕಾರದಲ್ಲಿ ಮಂತ್ರಿಯಾಗಿದ್ದಾರೆ. ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಿ, ಅವರಿಗೆಂದು ಬೃಹತ್ ಸ್ಮಾರಕ ಸೌಧ ನಿರ್ಮಿಸಿ ದಲಿತರ ಕಣ್ಣಿಗೆ ಮಣ್ಣೆರಚಲಾಗುತ್ತಿದೆ.

ಸಮಸ್ತ ಹಿಂದು ಅಘಡಿ ಎಂಬ ಹಿಂದೂ ಸಂಘಟನೆಯ ಮುಖ್ಯಸ್ಥ ಮಿಲಿಂದ್ ಏಕಬೋಟೆ ಮತ್ತು ಶಿವ ಪ್ರತಿಷ್ಠಾನದ ಮನೋಹರ ಅಲಿಯಾಸ್ ಸಂಭಾಜಿ ಭಿಡೆ ಗುರೂಜಿ ಎಂಬುವರ ವಿರುದ್ಧ ಪೊಲೀಸರು ಕೇಸು ದಾಖಲಿಸಿದರು. ತುದಿಯಂಚಿನಲ್ಲೇ ಬಿದ್ದಿರುವ ತಮ್ಮ ಇತಿಹಾಸವನ್ನು ಮುಖ್ಯಧಾರೆಗೆ ತಂದು ಸ್ಥಾಪಿಸುವ ದಲಿತ ಅಸ್ಮಿತೆಯ ಮರುಪ್ರತಿಪಾದನೆ- ದಲಿತ ಮುಂದಾಳುಗಳ ಮೇಲಾಟ ಮತ್ತು ಅದಕ್ಕೆ ಎದುರಾಗಿ ತಲೆಯೆತ್ತಿದ ಬಲಪಂಥೀಯ ಶಕ್ತಿಗಳ ಕತೆಯಿದು

ಬ್ರಿಟಿಷರ ಅಡಿಯಲ್ಲಿ ದಲಿತ ಸೇನೆಯು, ಪೇಶ್ವೆಗಳ ಬಲಿಷ್ಠ ಜಾತಿಗಳ ಸೇನೆಯನ್ನು ಸೋಲಿಸಿದ ಐತಿಹಾಸಿಕ ಯುದ್ಧದ ಸಂಸ್ಮರಣೆಗಾಗಿ ಭೀಮಾ ಕೋರೆಗಾಂವ್‌ನಲ್ಲಿ ಲಕ್ಷಾಂತರ ದಲಿತರನ್ನು ಪ್ರಚೋದಿಸಿದ ಆಪಾದನೆಯನ್ನು ಸ್ವಾಮಿ ಮತ್ತು ಇತರೆ ಹದಿನೈದು ಮಂದಿಯ ಮೇಲೆ ಹೊರಿಸಿ ಬಂಧಿಸಲಾಗಿತ್ತು. ಪ್ರಧಾನಿಯವರ ಹತ್ಯೆಗೆ ಸಂಚು ನಡೆಸಿದರೆಂಬ ಆಪಾದನೆಯನ್ನೂ ಇವರ ಮೇಲೆ ಹೇರಲಾಗಿದೆ.

ಭೀಮಾ ಕೋರೆಗಾಂವ್ ಪ್ರಕರಣದ ಇತರೆ 13 ಮಂದಿ ಬಂಧಿತರೂ ಹ್ಯಾಕಿಂಗ್ ಸಂಚಿನ ಬಲಿಪಶುಗಳಾಗಿದ್ದರೆ ಆಶ್ಚರ್ಯವಿಲ್ಲ ಎಂದೂ ಆರ್ಸೆನಾಲ್- ವಾಷಿಂಗ್ಟನ್ ಪೋಸ್ಟ್ ವರದಿ ಹೇಳಿದೆ.

200 ವರ್ಷಗಳಿಂದ ತಣ್ಣಗೆ ಮಲಗಿದ್ದ ಈ ಕೋರೆಗಾಂವ್ ಭೀಮಾ ಗ್ರಾಮ 2018ರ ಜನವರಿಯಲ್ಲಿ ಹಠಾತ್ತನೆ ಸಿಡಿದು ಹಿಂಸಾಚಾರದ ತಪ್ಪು ಕಾರಣಗಳಿಗಾಗಿ ದೇಶವ್ಯಾಪಿ ಪ್ರಚಾರ ಪಡೆಯಿತು. ಹಿಂದುತ್ವ ಶಕ್ತಿಗಳು ಮತ್ತು ದಲಿತ ಅಸ್ಮಿತೆಯ ಪ್ರತಿಪಾದನೆಯಿಂದ ಉಂಟಾಗಿದ್ದ ಬಿಗುವಿನ ಪರಿಸ್ಥಿತಿ ಈ ಹಿಂಸಾಚಾರದ ಹಿಂದಿತ್ತು. ಕೋರೆಗಾಂವ್ ಭೀಮಾ ವಿಜಯೋತ್ಸವವು ಪೇಶ್ವೆಗಳ ದಲಿತವಿರೋಧಿ ಬ್ರಾಹ್ಮಣಶಾಹಿ ಆಳ್ವಿಕೆಯ ಅಂತ್ಯವನ್ನು ಪ್ರತಿನಿಧಿಸುತ್ತದೆ.

ಇದನ್ನೂ ಓದಿ 2025ರ ಭಾರತ | ಚುನಾವಣೆಗಳು, ಅಧಿಕಾರ ಬದಲಾವಣೆ ಮತ್ತು ಪ್ರಜಾಪ್ರಭುತ್ವ ಪ್ರತಿರೋಧ

ಆಚರಣೆಯಲ್ಲಿ ಅಂಬೇಡ್ಕರ್ ಸಿದ್ಧಾಂತವನ್ನು ಇಡಿಯಾಗಿ ವಿರೋಧಿಸಿ, ನಿತ್ಯದ ಬದುಕಿನಲ್ಲಿ ದಲಿತ ದ್ವೇಷವನ್ನು ಕಾರುವ ಜಾತಿ ವರ್ಗಗಳ ಜೊತೆ ನಿಲ್ಲುತ್ತಿರುವ ಆಳುವವ ವರ್ಗ ಅಂಬೇಡ್ಕರ್ ಅವರಿಗೆ ತೋರುವ ಆದರವು ಅಪ್ಪಟ ಕಪಟ.

ದಲಿತರ ಮತಗಳನ್ನು ಸೆಳೆಯುವ ಒಂದು ಪ್ರತಿಮೆ- ಪ್ರತೀಕ- ಸ್ಮಾರಕವಾಗಿ ಪಕ್ಷ ಪರಿವಾರಗಳು ಅಂಬೇಡ್ಕರ್ ವರ್ಚಸ್ಸನ್ನು ದೋಚತೊಡಗಿವೆ. ನಿಜದ ಅಂಬೇಡ್ಕರ್ ಮತ್ತು ಅವರ ವಿಚಾರಧಾರೆಯನ್ನು ಬಗೆ ಬಗೆಯಾಗಿ ಕೊಲ್ಲಲಾಗುತ್ತಿದೆ. ಫಾದರ್ ಸ್ಟ್ಯಾನ್ ಸ್ವಾಮಿ ಅವರಿಗೆ ಅಗತ್ಯ ಚಿಕಿತ್ಸೆ ನೀಡದೆ ಜೈಲಿನಲ್ಲಿಯೇ ‘ಕೊಲ್ಲಲಾಯಿತು’.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ನಕಲಿ ಆಹಾರ ಮತ್ತು ಔಷಧ: ಜನರ ಜೀವದ ಜೊತೆ ಚೆಲ್ಲಾಟ

ಆಹಾರ ಮತ್ತು ಔಷಧಗಳ ಉತ್ಪಾದನೆ, ಸಂಗ್ರಹಣೆ ಹಾಗೂ ವಿತರಣಾ ವ್ಯವಸ್ಥೆಯಲ್ಲಿ ನಡೆಯುವ...

ಈ ದಿನ ಸಂಪಾದಕೀಯ | ಸಾಮರಸ್ಯ ಇರಲೆನ್ನುವ ಆರೆಸ್ಸೆಸ್, ಸಮಾನತೆ ಬೇಕೆಂದು ಸಾರುವುದಿಲ್ಲವೇಕೆ?

ಜಾತಿಪದ್ಧತಿಯೊಂದಿಗೆ ರಾಜಿ ಮಾಡಿಕೊಂಡ ಆರೆಸ್ಸೆಸ್ ಪ್ರಣೀತ ಸಾಮರಸ್ಯ ವಾದದಿಂದ ಅಸ್ಪೃಶ್ಯರು, ದಲಿತರು...

ಈ ದಿನ ಸಂಪಾದಕೀಯ | ಅಮೆರಿಕ ದಾದಾಗಿರಿಗೆ ಮೋದಿ ಮೌನ- ರಾಜತಾಂತ್ರಿಕತೆಯಲ್ಲ, ಶರಣಾಗತಿ!

ಅಮೆರಿಕ ಜೊತೆಗಿನ ಭಾರತದ ನಂಟು 'ಸಮಾನ ಸಾರ್ವಭೌಮತ್ವ'ದ ಮೇಲೆ ಆಧಾರಿತವಾಗಿರಬೇಕೇ ಹೊರತು,...

ಈ ದಿನ ಸಂಪಾದಕೀಯ | ಯಾರು ದೇಶದ್ರೋಹಿಗಳು? ಮೋದಿ ಭಾರತದ ಹೊಸ ನಿರೂಪಣೆ ಅಪಾಯಕಾರಿ

ಮೋದಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿಯೇತರ ಪಕ್ಷಗಳ ಮುಖಂಡರನ್ನು, ಬಿಜೆಪಿ ವಿರೋಧಿಗಳನ್ನು,...