ಈ ದಿನ ಸಂಪಾದಕೀಯ | ಕೊಪ್ಪಳದ ಸುತ್ತಮುತ್ತ ನಡೆದಿರುವ ‘ಕಪ್ಪು ಕೊಲೆ’ಗಳನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕು!

Date:

ಕಾರ್ಖಾನೆಗಳ ವಿಸ್ತರಣೆಯನ್ನು ಸರ್ಕಾರ ಕೂಡಲೇ ತಡೆಯಬೇಕು. ಬಲ್ದೋಟ ಆವರಣದಲ್ಲಿ ಬಂದಿಯಾಗಿರುವ ಬಸಾಪುರ ಕೆರೆ ನೀರು ಸಾರ್ವಜನಿಕರಿಗೆ ಸಿಗುವಂತಾಗಬೇಕು. ತುಂಗಭದ್ರಾ ನದಿಗೆ ತಾಜ್ಯ ಬಿಡುಗಡೆಯನ್ನು ನಿಲ್ಲಿಸಬೇಕು. ಬಾಧಿತ ಗ್ರಾಮಗಳ ಜನರ ಆರೋಗ್ಯ ಸಮೀಕ್ಷೆ ನಡೆಸಿ, ಅನಾರೋಗ್ಯಪೀಡಿತರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಬೇಕು

ಕೊಪ್ಪಳ ತಾಲ್ಲೂಕಿನ ನಿವಾಸಿಗಳ ಸಂಕಟ ಹೇಳತೀರದು. ರಾಜಧಾನಿ ಬೆಂಗಳೂರಿಗೆ ಹತ್ತಿರ ಇದ್ದಿದ್ದರೆ ಈ ಬವಣೆ ಇಷ್ಟು ಹೊತ್ತಿಗೆ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಗಮನ ಸೆಳೆಯುತ್ತಿತ್ತು. ರಾಜಧಾನಿಯಿಂದ ದೂರವಿರುವ ಹಳ್ಳಿ ಜನರ ಸಂಕಟಗಳು ಅರಣ್ಯ ರೋದನವೇ ಆಗಿಹೋಗಿದೆ.

- Advertisement -

ಸಮೃದ್ಧ ಕಬ್ಬಿಣದ ಅದಿರು ಗಣಿಗಳ ಸಾಮೀಪ್ಯ ಮತ್ತು ತುಂಗಭದ್ರಾ ನದಿಯ ಧಾರಾಳ ನೀರು ಉಕ್ಕು ಮತ್ತು ಬೀಡು ಕಬ್ಬಿಣ ತಯಾರಿಕೆಯ ಘಟಕಗಳನ್ನು ಕೊಪ್ಪಳ ತಾಲ್ಲೂಕಿನತ್ತ ಸೆಳೆದಿದೆ. ಕನಿಷ್ಠ ಬಂಡವಾಳ ಹೂಡಿ, ಗರಿಷ್ಠ ಲಾಭ ಸಂಪಾದಿಸತೊಡಗಿವೆ. ಮಾಲಿನ್ಯ ನಿಯಂತ್ರಣ ಕ್ರಮಗಳ ಮೇಲೆ ಬಂಡವಾಳ ಹೂಡುತ್ತಿಲ್ಲ. ಹೂಡಿರುವ ಘಟಕಗಳು ವಿದ್ಯುತ್ ಉಳಿಸುವ ಸಲುವಾಗಿ ಅವುಗಳನ್ನು ಕಾರ್ಯಾಚರಣೆಗೆ ಇಳಿಸಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಕನಕಪುರ, ಬಸಾಪುರ, ಕೀಡದಾಳ, ಚಿಕ್ಕಬಾಗನಾಳ, ಲಚನಕೇರಿ, ಗಿಣಿಗೇರ, ಹಾಲವರ್ತಿ, ಅಲ್ಲಾನಗರ, ಕಾಸನಖಂಡಿ, ಕುಣಿಕೇರಿ, ಕುಣಿಕೇರಿ ತಾಂಡ ಮುಂತಾದ 20ಕ್ಕೂ ಹೆಚ್ಚು ಗ್ರಾಮವಾಸಿಗಳ ಬದುಕುಗಳು ಈ ಮಾಲಿನ್ಯದ ವಿಷವೃತ್ತಕ್ಕೆ ಸಿಲುಕಿವೆ. ಆರೋಗ್ಯ ಹದಗೆಟ್ಟಿರುವ ನಿವಾಸಿಗಳು ಕೊಪ್ಪಳ ಟೌನ್ ಇಲ್ಲವೇ ಹೊಸಪೇಟೆಗೆ ಗುಳೆ ಹೋಗಿದ್ದಾರೆ.

ಕಪ್ಪು ದೂಳು ಸರ್ವಾಂತರಿಯಾಮಿ ಆಗಿ ಹೋಗಿದೆ. ನಿರಂತರ ಗಾಳಿಗೆ ತೂರಲ್ಪಡುವ ಈ ದೂಳು ಕವಿಯದಿರುವ ಜಡ ವಸ್ತುಗಳು ಅಥವಾ ಜೀವಂತ ಪ್ರಾಣಿಗಳು ಇಲ್ಲವೇ ಇಲ್ಲ. ಹೊಲಗಳಲ್ಲಿನ ಬೆಳೆಗಳನ್ನೂ ಕವಿಯುವ ಕಪ್ಪು ದೂಳು, ಮನುಷ್ಯರ ಉಸಿರಿಗೆ ಸೇರಿ ಮೂಗು ಗಂಟಲು ಶ್ವಾಸಕೋಶಗಳಿಗೆ ಇಳಿಯುವ ದೂಳು. ರೈತರು ಬೆಳೆಯುವ ಹೂವು ಹಣ್ಣು ಧಾನ್ಯಗಳನ್ನು ಕವಿದು ಕಡುಕಪ್ಪಾಗಿಸುವ ದೂಳು. ದನಗಳಿಗೆ ಹಾಕುವ ಮೇವನ್ನೂ ಹೊರಗಿನಿಂದ ತರಿಸಬೇಕಲ್ಲದೆ, ಅದನ್ನು ಹೆಚ್ಚು ಕಾಲ ಸಂಗ್ರಹಿಸಿ ಇಡುವಂತಿಲ್ಲ. ಹೀಗಾಗಿ ದನಕರು, ಕುರಿ. ಮೇಕೆ ಸಾಕಣೆ ಅಸಾಧ್ಯವಾಗಿ ಹೋಗಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕೋಟಿ ಕೋಟಿ ಅಲೆಮಾರಿಗಳನ್ನು ನಿಕೃಷ್ಟವಾಗಿ ನಡೆಸಿಕೊಳ್ಳುವುದು ದೇಶ ಎನಿಸಿಕೊಳ್ಳಲಾರದು

ಕುಟುಂಬಕ್ಕೆ ಕುಟುಂಬಗಳೇ ಇಡಿಯಾಗಿ ಮಾಲಿನ್ಯದ ಕಾಯಿಲೆಗಳಿಗೆ ತುತ್ತಾಗಿವೆ. ಚರ್ಮ ಸಂಬಂಧಿ ಕಾಯಿಲೆಗಳು, ಬಾಯಿ ಕ್ಯಾನ್ಸರ್, ಗರ್ಭಕಂಠ ಕ್ಯಾನ್ಸರ್, ಕ್ಷಯ ರೋಗ, ದೃಷ್ಟಿದೋಷ, ಅಲರ್ಜಿಗಳು, ಉಸಿರಾಟಕ್ಕೆ ಸಂಬಂಧಿಸಿದ ಮತ್ತು ಕಣ್ಣಿನ ಅಸ್ವಸ್ಥತೆಯನ್ನು ಎದುರಿಸಿವೆ. ದುಡಿದು ತಿನ್ನುವ ಈ ಜನ ಚಿಕಿತ್ಸೆಗೆಂದು ನಿತ್ಯ ಕೊಪ್ಪಳ ಟೌನ್ ಆಸ್ಪತ್ರೆಗೆ ಹೋಗುವುದು ಆಗದ ಮಾತು. ಶೇ.80ರಷ್ಟು ನಿವಾಸಿಗಳು ಒಣಕೆಮ್ಮು ಮತ್ತು ಅಸ್ಥಮಾಕ್ಕೆ ನೇರವಾಗಿ ಔಷಧಿ ಅಂಗಡಿಗಳಿಂದಲೇ ಮದ್ದು ಖರೀದಿಸುತ್ತಾರೆ.

ಸಂಬಂಧಪಟ್ಟ ಸರ್ಕಾರಿ ಇಲಾಖೆಗಳಿಗೆ ರೈತರಿಂದ ನಿವಾಸಿಗಳಿಂದ ಮಾಲಿನ್ಯವು ತಮ್ಮ ಬದುಕುಗಳನ್ನು ಅಧ್ವಾನ ಮಾಡಿರುವ ಕುರಿತು ರಾಶಿ ರಾಶಿ ದೂರುಗಳು ಬಂದು ಬಿದ್ದಿವೆ. ರೈತರ ಬೆಳೆಗಳು ದ್ಯುತಿ ಸಂಶ್ಲೇಷಣೆ ಕ್ರಿಯೆ ಇಲ್ಲದೆ ಸೊರಗಿವೆ, ಮಣ್ಣು ವಿಷವಾಗತೊಡಗಿದೆ. ಪರಿಣಾಮವಾಗಿ ಅರ್ಧಕ್ಕರ್ಧದಷ್ಟು ಬೆಳೆ ನಷ್ಟವಾಗುತ್ತಿದೆ ಎಂದು ಇತ್ತೀಚಿನ ಕೃಷಿ ಇಲಾಖೆಯ ಸಮೀಕ್ಷೆಯೇ ತಿಳಿಸಿದೆ. ರೈತರು 2008ರಿಂದ ಪ್ರತಿಭಟಿಸುತ್ತಿದ್ದಾರೆ. ಸಾವಿರಾರು ಜೀವಗಳನ್ನು ಕಾಪಾಡಬೇಕೆಂಬ ಕಾಳಜಿಯೇ ಇಲ್ಲವಾಗಿದೆ ಸರ್ಕಾರಗಳಿಗೆ ಎಂದಿದ್ದಾರೆ ಸ್ಥಳೀಯ ಹೋರಾಟಗಾರ-ಸಾಹಿತಿ ಅಲ್ಲಮಪ್ರಭು ಬೆಟ್ಟದೂರು. ಅವರ ನೇತೃತ್ವದ ಧರಣಿ ಸತ್ಯಾಗ್ರಹ 200 ದಿನಗಳನ್ನು ದಾಟಿದೆ.

ಕೊಪ್ಪಳ ಜಿಲ್ಲೆಯ ಹಿರೇಬಗನಾಳ ಗ್ರಾಮದ ಐದು ಕಿಲೋಮೀಟರುಗಳ ವ್ಯಾಸದಲ್ಲಿ ಕೆಂಪು ವರ್ಗೀಕರಣಕ್ಕೆ ಸೇರಿಸಲಾಗಿರುವ 24 ಭಾರೀ ಕೈಗಾರಿಕೆಗಳ ಕಾರ್ಯಾಚರಣೆಯಲ್ಲಿವೆ. ಈ ಪೈಕಿ 13 ಕೈಗಾರಿಕೆ ಘಟಕಗಳು ಬೀಡು ಕಬ್ಬಿಣ ತಯಾರಿಕೆಯವು. ಭಾರೀ ವಾಯು ಮಾಲಿನ್ಯ ಉಂಟು ಮಾಡುವಂತಹವು. ಹಿರೇಬಾಗನಾಳ ಮಾತ್ರವಲ್ಲದೆ ಕೊಪ್ಪಳ ತಾಲ್ಲೂಕಿನ ಸುಮಾರು 20 ಗ್ರಾಮಗಳು ಕಪ್ಪು ಇಲ್ಲಣ, ಬಿಳಿ ಬೂದಿ, ಕಂದು ಹೊಗೆ ಹಾಗೂ ಕಟುವಾದ ರಾಸಾಯನಿಕ ವಾಸನೆಗಳನ್ನು ವಾತಾವರಣಕ್ಕೆ ಚೆಲ್ಲುತ್ತಿವೆ. ಮಳೆಗಾಲದ ವಿನಾ ಇತರೆ ಋತುಗಳಲ್ಲಿ ಈ ತ್ಯಾಜ್ಯಗಳು ಗಾಳಿಯಲ್ಲೇ ತೇಲಾಡಿಕೊಂಡಿರುತ್ತವೆ. ಶಾಲಾ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿವೆ.

ಉಕ್ಕು ತಯಾರಿಕೆಯಲ್ಲಿ ಬಳಸಲಾಗುವ ಬೀಡು ಕಬ್ಬಿಣವ ಬಳಸಲಾಗುತ್ತದೆ. ಕಲ್ಲಿದ್ದಿಲು ಉರಿಸುವ ಈ ಭಟ್ಟಿಗಳು ಕಾರ್ಬನ್ ಮಾನಾಕ್ಸೈಡ್, ಕಾರ್ಬನ್ ಡೈಆಕ್ಸೈಡ್, ಸಲ್ಫರ್ ಡೈಆಕ್ಸೈಡ್, ನೈಟ್ರೋಜನ್ ಆಕ್ಸೈಡ್ಸ್ ನಂತಹ ಮಲಿನ ಅನಿಲಗಳನ್ನು ವಾತಾವರಣಕ್ಕೆ ಕಾರಿಕೊಳ್ಳುತ್ತಿವೆ. ಕಾರ್ಖಾನೆಗಳು ಬಳಸಿದ ನೀರನ್ನು ಸಂಸ್ಕರಿಸದೆ ನೇರವಾಗಿ ತುಂಗಭದ್ರಾ ನದಿಗೆ ಹರಿಸುತ್ತಿವೆ.

ಕೊಪ್ಪಳದ ಸುತ್ತಮುತ್ತಲ ಇಂತಹ ಹಲವು ಕೈಗಾರಿಕೆಗಳನ್ನು ಸ್ಥಾಪಿಸಿ ಮೂವತ್ತು ವರ್ಷಗಳೇ ಉರುಳಿವೆ. ಈ ಘಟಕಗಳು ಯಾವುದೇ ಎಗ್ಗಿಲ್ಲದೆ ಮಾಲಿನ್ಯ ನಿಯಂತ್ರಣ ವಿಧಿಗಳನ್ನು ಗಾಳಿಗೆ ತೂರಿವೆ. ಸುತ್ತಮುತ್ತಲ ಮಣ್ಣು, ಗಾಳಿ, ನೀರಿಗೆ ಮಾಲಿನ್ಯದ ವಿಷ ಕಕ್ಕಿವೆ.

ಸತತ ದೂಳು ಮತ್ತು ಹೊಗೆಯು ತೀವ್ರ ಗಂಟಲು ಸೋಂಕಿಗೆ ದಾರಿ ಮಾಡುತ್ತದೆ. ಹೀಗಾದಾಗ ಮಾತು ಹೊರಡುವುದೇ ದುಸ್ತರ ಎನಿಸುತ್ತದೆ. ರಕ್ತ ಬೆರೆತ ಕಫ, ಉಸಿರಾಟದ ಸೋಂಕುಗಳು, ಮತ್ತೆ ಮತ್ತೆ ಕಾಡುವ ನೆಗಡಿಯಿಂದ ಜನ ರೋಸಿ ಹೋಗಿದ್ದಾರೆ.

ಮುಂಜಾನೆಯ ವೇಳೆಗೆ ಈ ಸೀಮೆಯ ಬಾನೆಲ್ಲ ಕಪ್ಪು ಕಪ್ಪಾಗಿರುತ್ತದೆ. ಈ ಕಪ್ಪು ಸಾವಕಾಶವಾಗಿ ನೆಲಕ್ಕಿಳಿದು ಚರಾಚರಗಳಿಗೆ ಕಪ್ಪು ಹೊದಿಕೆ ಹೊದಿಸುತ್ತದೆ. ಒಡಲುಗಳ ಒಳಕ್ಕಿಳಿಯುತ್ತದೆ. ಬೆಳೆಯುವ ಬೆಳೆ, ತಿನ್ನುವ ಅನ್ನ, ಉಸಿರಾಡುವ ಗಾಳಿಗೆ ಸೇರುತ್ತದೆ.

ರಾಜ್ಯದ ಕೈಗಾರಿಕಾ ಮಂತ್ರಿ ಎಂ.ಬಿ. ಪಾಟೀಲರಿಗೆ ಈ ದುಸ್ಥಿತಿಯ ಅರಿವಾಗಿದೆ. ಆದರೆ ಯಾವುದೇ ಕ್ರಮ ಜರುಗಿಲ್ಲ. ಬಹುತೇಕ ಜನಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಕೈಗಾರಿಕೆಗಳ ಪರ ನಿಂತಿದ್ದಾರೆ. ಜನರ ಪರ ನಿಲ್ಲದಿರುವುದು ಎಂದರೆ ಕೈಗಾರಿಕೆಗಳು ಹಾಕುವ ಮೇವಿಗೆ ಬಾಯೊಡ್ಡಿರುವುದು ಎಂದೇ ಅರ್ಥ.

ಈ ಸೀಮೆಯ ಮೇಲೆ ಕೈಗಾರಿಕೆ ಮಾಲಿನ್ಯ ಉಂಟು ಮಾಡಿರುವ ಅನಾಹುತದ ಅಧ್ಯಯನಕ್ಕೆ ರಾಜ್ಯ ಸರ್ಕಾರ ಈಗಲೂ ಕ್ರಮ ಕೈಗೊಂಡಿಲ್ಲ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿಎಂ ನರೇಂದ್ರ ಸ್ವಾಮಿಯವರು ಇತ್ತೀಚೆಗೆ ಈ ಸೀಮೆಗೆ ಭೇಟಿ ನೀಡಿದ್ದರು. ಮೂಗು ಮುಚ್ಚಿಕೊಂಡೇ ಸ್ಥಳವೀಕ್ಷಣೆ ನಡೆಸಿದರು.

ಕೆಂಪು ವರ್ಗೀಕರಣದ ಕೈಗಾರಿಕೆಗಳನ್ನು ಭಾರೀ ವಾಯುಮಾಲಿನ್ಯ ಉಂಟು ಮಾಡುವ ಘಟಕಗಳೆಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರ್ಗೀಕರಿಸಿದೆ. ಅವುಗಳ ಮಾಲಿನ್ಯ ಸೂಚ್ಯಂಕ 60 ಅಥವಾ ಅದಕ್ಕಿಂತ ಹೆಚ್ಚು. ಅರ್ಥಾತ್ ಬಿಗಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಅರ್ಥ

ಬಲ್ದೋಟ ಕಂಪನಿ ತನ್ನ ಉಕ್ಕಿನ ಕಾರ್ಖಾನೆಯ ಉತ್ಪಾದನಾ ಸಾಮರ್ಥ್ಯದ ವಿಸ್ತರಣೆಗೆ ಕೈ ಹಾಕಿದೆ. 1,034 ಎಕರೆಯಲ್ಲಿ ಹಬ್ಬಲಿದೆ. ಈ ವಿಸ್ತರಣೆ ಆದಲ್ಲಿ ಕಪ್ಪು ದೂಳು ಕೊಪ್ಪಳದ ಒಂದೂವರೆ ಲಕ್ಷ ಜನರ ಬದುಕುಗಳನ್ನು ಬುಡಮೇಲು ಮಾಡುವುದು ನಿಶ್ಚಿತ ಎಂದಿದೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಮತ್ತು ಪರಿಸರ ಹಿತರಕ್ಷಣಾ ಜಂಟಿ ಕ್ರಿಯಾ ವೇದಿಕೆ.

ಕಾರ್ಖಾನೆಗಳ ವಿಸ್ತರಣೆಯನ್ನು ಸರ್ಕಾರ ಕೂಡಲೇ ತಡೆಯಬೇಕು. ಬಲ್ದೋಟ ಆವರಣದಲ್ಲಿ ಬಂದಿಯಾಗಿರುವ ಬಸಾಪುರ ಕೆರೆ ನೀರು ಸಾರ್ವಜನಿಕರಿಗೆ ಸಿಗುವಂತಾಗಬೇಕು. ತುಂಗಭದ್ರಾ ನದಿಗೆ ತಾಜ್ಯ ಬಿಡುಗಡೆಯನ್ನು ನಿಲ್ಲಿಸಬೇಕು. ಬಾಧಿತ ಗ್ರಾಮಗಳ ಜನರ ಆರೋಗ್ಯ ಸಮೀಕ್ಷೆ ನಡೆಸಿ, ಅನಾರೋಗ್ಯಪೀಡಿತರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂಬ ಸ್ಥಳೀಯರ ಬೇಡಿಕೆಗಳು ಅತ್ಯಂತ ನ್ಯಾಯಯುತವಾಗಿವೆ.

ರಾಜ್ಯ ಸರ್ಕಾರಕ್ಕೆ ಕೊಂಚವಾದರೂ ನದರಿದ್ದರೆ ತಕ್ಷಣವೇ ಗಂಭೀರ ಆಳ ಅಧ್ಯಯನವನ್ನು ಚುರುಕಾಗಿ ಮಾಡಿಸಿ, ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಅಣು ಅಣುವಾಗಿ ನಡೆಯುತ್ತಿರುವ ಈ ಸಾಮೂಹಿಕ ಕಗ್ಗೊಲೆಯನ್ನು ನಿಲ್ಲಿಸಬೇಕು.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಅ.24ರಿಂದ ಕಲ್ಯಾಣ ಪರ್ವ: ಭಿತ್ತಿ ಪತ್ರ ಬಿಡುಗಡೆ

ಬಸವಕಲ್ಯಾಣದ ಮಹಾ ಮಠದ ಮಹಾಮನೆ ಆವರಣದಲ್ಲಿ ಬಸವ ಧರ್ಮ ಪೀಠದ ವತಿಯಿಂದ...

ಅಸ್ಸಾಂ ಉಪಚುನಾವಣೆ ಅಖಾಡ: ಸಿಎಂ ಶರ್ಮಾ ಮತ್ತು ಕಾಂಗ್ರೆಸ್ ಸಂಸದರ ನಡುವೆ ‘ಬಿರಿಯಾನಿ vs ರಸ್ಕ್’ ವಾಕ್ಸಮರ!

ಅಸ್ಸಾಂನ ನಗಾಂವ್ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಪ್ರಚಾರ ಕಣದಲ್ಲಿ ರಾಜಕೀಯ...

ಶಿವಮೊಗ್ಗ | ರಂಗದಸರಾ ಪ್ರಯುಕ್ತ ಜಿಲ್ಲಾ ಮಟ್ಟದ ಏಕಪಾತ್ರಾಭಿನಯ ಸ್ಪರ್ಧೆ ಕಾರ್ಯಕ್ರಮ

ಶಿವಮೊಗ್ಗ ಮಹಾನಗರ ಪಾಲಿಕೆಯು ದಸರಾ-2026ರ ಪ್ರಯುಕ್ತ ರಂಗ ದಸರಾ-2026ರ ಅಡಿಯಲ್ಲಿ 15...

ಶಾಲಾ ಸಮಸ್ಯೆಗಳ ಕುರಿತು ಗ್ರಾಮ ಸಭೆಯಲ್ಲಿ ಧ್ವನಿ ಎತ್ತಿದ ವಿದ್ಯಾರ್ಥಿಗಳು; ಅಧಿಕಾರಿಗಳ ಮೆಚ್ಚುಗೆ-ಭರವಸೆ

ಸರ್ಕಾರಿ ಶಾಲಾ ವಿದ್ಯಾರ್ಥಿಗಳು ‘ವಿಶೇಷ ಗ್ರಾಮ ಸಭೆ’ಗಳಲ್ಲಿ ಪಾಲ್ಗೊಂಡು, ಪಂಚಾಯತ್ ಪ್ರತಿನಿಧಿಗಳು...