ಈ ದಿನ ಸಂಪಾದಕೀಯ | ಪೆರಿಯಾರ್- ಅಂಬೇಡ್ಕರ್ ಹೆಸರು ಹೇಳಿಕೊಂಡು ಜ್ಯೋತಿಷಿಗೆ ಮಣೆ ಹಾಕುವುದು ಡಂಭಾಚಾರ

Date:

ಸರ್ಕಾರಗಳು ಜನತೆಯಲ್ಲಿ ವೈಚಾರಿಕ ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಬೇಕೇ ವಿನಾ ಮೂಢನಂಬಿಕೆಗಳನ್ನು ಅಲ್ಲ. ಮತದಾರರು ಅಪಾರ ನಿರೀಕ್ಷೆಯನ್ನು ಇಟ್ಟುಕೊಂಡಿರುವ ಸರ್ಕಾರದ ಮುಖ್ಯಮಂತ್ರಿಯಾಗಿರುವ ವಿಜಯ್ ಜೋಸೆಫ್ ಆದ್ಯತೆಗಳು ಬೇರೆಯೇ ಆಗಿರಬೇಕು. ಆರಿಸಿ ಬರುತ್ತಲೇ ಇಂತಹ ಕ್ಷುಲ್ಲಕ ವಿವಾದವನ್ನು ಮೈಮೇಲೆ ಹಾಕಿಕೊಂಡದ್ದು ನಿರಾಸೆ ಉಂಟು ಮಾಡುವ ಸಂಗತಿ. ಅಂಬೇಡ್ಕರ್-ಪೆರಿಯಾರ್ ಹೆಸರು ಹೇಳಿದವರು ಮಾಡುವ ಕೆಲಸವಲ್ಲ ಇದು.

- Advertisement -

ಜನತೆಯನ್ನು ಶೋಷಿಸಿ ವಂಚಿಸುವ ವಿಚಾರಹೀನ ಆಚರಣೆಯೆಂದು ಜ್ಯೋತಿಷ್ಯವನ್ನು ಕಟುವಾಗಿ ಟೀಕಿಸಿದ್ದರು ಪೆರಿಯಾರ್. ಈ ಸಂಗತಿಯನ್ನು ಕುರಿತು ‘ಕುಡಿ ಅರಸು’ ಎಂಬ ತಮ್ಮ ನಿಯತಕಾಲಿಕಕ್ಕೆ 1930ರಲ್ಲಿ ಅವರು ಸಂಪಾದಕೀಯವನ್ನೇ ಬರೆದಿದ್ದುಂಟು. ಅಂಧಶ್ರದ್ಧೆಗಳು ಮತ್ತು ಜಾತಿವ್ಯವಸ್ಥೆಯ ದಬ್ಬಾಳಿಕೆಯನ್ನು ವಿರೋಧಿಸಿ ಪೆರಿಯಾರ್ ನಡೆಸಿದ್ದ ಭಾರೀ ಆಂದೋಲನದಲ್ಲಿ ಜ್ಯೋತಿಷ್ಯದ ಕಪಟವನ್ನು ಸಾರುವುದೂ ಸೇರಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಬ್ರಾಹ್ಮಣ್ಯವು ತನ್ನ ‘ಶ್ರೇಷ್ಠತೆ’ಯನ್ನು ಉಳಿಸಿಕೊಳ್ಳಲು ಮತ್ತು ಬ್ರಾಹ್ಮಣೇತರರನ್ನು ತನ್ನ ಪ್ರಭಾವವಲಯದಲ್ಲಿ ಕಟ್ಟಿ ಹಾಕಲು  ಜ್ಯೋತಿಷ್ಯವನ್ನು ಹತಾರಿನಂತೆ ಬಳಸಿದೆ ಎಂಬುದು ಪೆರಿಯಾರ್ ಅವರ ಸ್ಪಷ್ಟ ನಿಲುವಾಗಿತ್ತು. ಕೆಂಡ ಕಾರುವ ನಿರೀಶ್ವರವಾದಿಯಾಗಿದ್ದರು. ದೇವರು ಇಲ್ಲ. ದೇವರನ್ನು ಸೃಷ್ಟಿಸಿದವನು ಮೂರ್ಖ. ದೇವರ ಹೆಸರನ್ನು ಹಬ್ಬಿಸುವವನು ಫಟಿಂಗ ಮತ್ತು ಪೂಜಿಸುವವನು ಅನಾಗರಿಕ ಎಂದೆಲ್ಲ ಹೇಳಿದ್ದವರು ಈರೋಡ್ ವೆಂಕಟನಾಯಕರ್ ರಾಮಸ್ವಾಮಿ ಎಂಬ ಪೆರಿಯಾರ್. ಆದರೆ ತಮಿಳುನಾಡು ಮೂಢನಂಬಿಕೆಗಳು ಮತ್ತು ವಿಚಾರಹೀನ ಆಚಾರಗಳಲ್ಲಿ ಮುಳುಗಿದೆ. ಸೆಪ್ಟಂಬರ್ 17ರಂದು ಪೆರಿಯಾರ್ ಜಯಂತಿ ಆಚರಣೆಗಷ್ಟೇ ದ್ರಾವಿಡ ಪಕ್ಷಗಳು ಸೀಮಿತವಾಗಿ ಹೋಗಿರುವುದು ದುರಂತ. ದಲಿತರ ಮೇಲೆ ಬರ್ಬರ ದೌರ್ಜನ್ಯಗಳು ಈಗಲೂ ಅವಿರತವಾಗಿ ನಡೆಯುತ್ತಿವೆ. ಮರ್ಯಾದೆಗೇಡು ಹತ್ಯೆಗಳು ಮಾಮೂಲಾಗಿ ಹೋಗಿವೆ. ಸಿನೆಮಾತಾರೆಗಳಿಗೆ ಗುಡಿ ಕಟ್ಟಲಾಗುತ್ತಿದೆ.

ದ್ರಾವಿಡ ಚಳವಳಿಯ ನಿಜ ಅನುಯಾಯಿಗಳು ಜ್ಯೋತಿಷ್ಯ ಮತ್ತು ಹಸ್ತಸಾಮುದ್ರಿಕೆಯಂತಹ ಅವಿಚಾರಗಳಿಂದ ದೂರವಿರಬೇಕು. ಪೆರಿಯಾರ್ ವಿಚಾರಕ್ಕೆ ತದ್ವಿರುದ್ಧವಿರುವ ಬಿಜೆಪಿಯ ಜೊತೆ ಈಗಲೂ ಕೈ ಜೋಡಿಸಿದೆ. ಒಂದು ಕಾಲಕ್ಕೆ  ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಭಾಗವೇ ಆಗಿತ್ತು ಡಿಎಂಕೆ.

ಅಣ್ಣಾ ಡಿಎಂಕೆ ಮತ್ತು ಡಿಎಂಕೆಯಿಂದ ದೂರ ಉಳಿದು ಮೂರನೆಯ ಪರ್ಯಾಯ ಪಕ್ಷ ಕಟ್ಟಿ ಸರ್ಕಾರ ರಚಿಸಿದ್ದಾರೆ ಸಿನೆಮಾ ನಟ ವಿಜಯ್ ಜೋಸೆಫ್. ಇವರು ಕೂಡ ಪೆರಿಯಾರ್ ಹೆಸರು ಹೇಳಿದವರೇ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪೆರಿಯಾರ್ ಅವರ ಸಮಾಧಿಗೂ ಭೇಟಿ ನೀಡಿ ಗೌರವ ಸಲ್ಲಿಸಿದವರು.

ಆದರೇನಂತೆ, ಪೆರಿಯಾರ್ ಸಮಾಧಿಗೆ ಗೌರವ ಸಲ್ಲಿಸುತ್ತ, ಅದೇ ಉಸಿರಿನಲ್ಲಿ ತಮ್ಮ ಆಪ್ತವಲಯದ ಜ್ಯೋತಿಷಿಯೊಬ್ಬಾತನನ್ನು ಮುಖ್ಯಮಂತ್ರಿಯ ವಿಶೇಷ ಕರ್ತವ್ಯಾಧಿಕಾರಿಯನ್ನಾಗಿ ನೇಮಿಸಿಕೊಂಡಿದ್ದಾರೆ. ತಮ್ಮ ಸರ್ಕಾರಕ್ಕೆ ಬೆಂಬಲ ನೀಡಿದ ಎಡಪಕ್ಷಗಳು ಮತ್ತು ವಿಡುದಲೈ ಚಿರುತಗಳ್ ಕಚ್ಚಿಯ ಟೀಕೆ-ಟಿಪ್ಪಣಿಗಳಿಗೆ ಮಣಿದು ಈ ನೇಮಕದ ಆದೇಶವನ್ನು ರದ್ದುಗೊಳಿಸಿದ್ದಾರೆ. ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ಎಂಬ ಈ ಜ್ಯೋತಿಷಿ  ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೂ ಅಚ್ಚುಮೆಚ್ಚಿನವರಾಗಿದ್ದವರು. ಕಡೆಗೆ ತಾವು ಹೇಳಿದ್ದ ಜ್ಯೋತಿಷ್ಯ ಸುಳ್ಳಾಗಿ ಆಕೆಯ ಅವಕೃಪೆಗೆ ತುತ್ತಾಗಿ ಅರ್ಧಚಂದ್ರ ಪ್ರಯೋಗ ಅನುಭವಿಸಿದವರು. ಆಡಳಿತದಲ್ಲಿ ಅನುಭವ ಇಲ್ಲದವರಿಗೆ ಮುಖ್ಯಮಂತ್ರಿ ಕಚೇರಿಯಲ್ಲೇನು ಕೆಲಸ? ವರ್ಷದ ಹಿಂದೆ ವಿಜಯ್ ಅವರ ಜಾತಕವನ್ನು ಟೀವಿ ಮೇಲೆ ನೋಡಿ ಇವರ ಪಕ್ಷ ಅಧಿಕಾರಕ್ಕೆ ಬರುತ್ತದೆಂದು ಭವಿಷ್ಯ ನುಡಿದಿದ್ದ ವೆಟ್ರಿವೇಲ್ ಅವರಿಗೆ ವಿಜಯ್ ಋಣ ಸಂದಾಯ ಮಾಡುವುದಿದ್ದರೆ ಅದಕ್ಕೆ ತಮ್ಮ ಕಿಸೆಯಿಂದ ಸಂಭಾವನೆ ಕೊಡಬೇಕು.

ಮೊದಲನೆಯದಾಗಿ ಪೆರಿಯಾರ್ ಸಮಾಧಿಗೆ ಗೌರವ ಸಲ್ಲಿಸುವ ಸಾರ್ವಜನಿಕ ಪ್ರದರ್ಶನ ಮಾಡಿ, ಜ್ಯೋತಿಷಿಯನ್ನು ತಮ್ಮ ಕಚೇರಿಯ ವಿಶೇಷ ಕರ್ತವ್ಯಾಧಿಕಾರಿಯನ್ನಾಗಿ ನೇಮಕ ಮಾಡಿಕೊಳ್ಳುವುದು ಡಂಭಾಚಾರ. ಎರಡನೆಯದಾಗಿ ತಮಗೆ ಜ್ಯೋತಿಷ್ಯದಲ್ಲಿ ನಂಬಿಕೆಯಿದ್ದ ಮಾತ್ರಕ್ಕೆ ತೆರಿಗೆದಾರರ ಹಣ ತೆತ್ತು ಜ್ಯೋತಿಷಿಯನ್ನು ನೇಮಕ ಮಾಡಿಕೊಳ್ಳುವುದು ಸರ್ಕಾರಿ ಸ್ಥಾನಮಾನದ ನಿರ್ಲಜ್ಜ ದುರುಪಯೋಗ. ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟ ಹಿರಿಯರು ಪ್ರಜಾಪ್ರಭುತ್ವವನ್ನು ಆರಿಸಿಕೊಂಡರೇ ವಿನಾ ರಾಜಪ್ರಭುತ್ವವನ್ನು ಅಲ್ಲ. ಹೀಗಾಗಿ ಆಸ್ಥಾನಗಳು- ಜ್ಯೋತಿಷಿಗಳಿಗೆ ಜನತಾಂತ್ರಿಕ ವ್ಯವಸ್ಥೆಯಲ್ಲಿ ಜಾಗವಿಲ್ಲ. ಸರ್ಕಾರಗಳು ಸಾಮಾಜಿಕ ನ್ಯಾಯ, ಸಮಾನತೆ, ಜನಕಲ್ಯಾಣ ಕುರಿತು ತಲೆಕೆಡಿಸಿಕೊಳ್ಳಬೇಕೇ ವಿನಾ ಜ್ಯೋತಿಷ್ಯಶಾಸ್ತ್ರಕ್ಕೆ ಅಲ್ಲಿ ಕೆಲಸವಿಲ್ಲ. ವಿಚಾರವಾದ ಎಂಬುದು ಘೋಷಣೆ ಭಾಷಣಗಳಿಗೆ ಸೀಮಿತಗೊಂಡು ಆಚರಣೆಯಲ್ಲಿ ಕಾಣೆಯಾದರೆ ಪೆರಿಯಾರ್, ಅಣ್ಣಾದುರೈ ಹೆಸರುಗಳನ್ನು ಹೇಳುವುದು ಅರ್ಥಶೂನ್ಯ.

ಸರ್ಕಾರಗಳು ಜನತೆಯಲ್ಲಿ ವೈಚಾರಿಕ ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಬೇಕೇ ವಿನಾ ಮೂಢನಂಬಿಕೆಗಳನ್ನು ಅಲ್ಲ. ತಮಿಳುನಾಡಿನ ಸರ್ಕಾರ ಮಾತ್ರವಲ್ಲ, ಯಾವ ಸರ್ಕಾರಗಳಲ್ಲೂ ಇಂತಹ ಅರ್ಥಹೀನತೆಗೆ ಅವಕಾಶ ಇರಕೂಡದು. ಹೊಸದಾಗಿ ಆರಿಸಿ ಬಂದು, ಮತದಾರರು ಅಪಾರ ನಿರೀಕ್ಷೆಯನ್ನು ಇಟ್ಟುಕೊಂಡಿರುವ ಸರ್ಕಾರದ ಮುಖ್ಯಮಂತ್ರಿಯಾಗಿರುವ ವಿಜಯ್ ಜೋಸೆಫ್ ಆದ್ಯತೆಗಳು ಬೇರೆಯೇ ಆಗಿರಬೇಕು. ಆರಿಸಿ ಬರುತ್ತಲೇ ಇಂತಹ ಕ್ಷುಲ್ಲಕ ವಿವಾದವನ್ನು ಮೈಮೇಲೆ ಹಾಕಿಕೊಂಡದ್ದು ನಿರಾಸೆ ಉಂಟು ಮಾಡುವ ಸಂಗತಿ. ಅಂಬೇಡ್ಕರ್-ಪೆರಿಯಾರ್ ಹೆಸರು ಹೇಳಿದವರು ಮಾಡುವ ಕೆಲಸವಲ್ಲ ಇದು. 

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಅರ್ಹ ಮತದಾರರ ಹಕ್ಕು ಕಸಿಯಲು ಬಿಡುವುದಿಲ್ಲ: ಎಂ ಬಿ ಪಾಟೀಲ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಸಂದರ್ಭದಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರ...

ಮೈಸೂರು | ಅ.13ರಂದು ಯುವ ದಸರಾ ಉದ್ಘಾಟಿಸಲಿರುವ ನಟ ಪ್ರಭುದೇವ್‌

2026ರ ಯುವ ದಸರಾ ಕಾರ್ಯಕ್ರಮವನ್ನು ಅಕ್ಟೋಬರ್ 13ರಂದು ಖ್ಯಾತ ನೃತ್ಯ ನಿರ್ದೇಶಕ...

ಯಾದಗಿರಿ–ಶಹಾಪುರ ಬೈಪಾಸ್‌ ರೈಲ್ವೆ ಮೇಲ್ಸೇತುವೆ, ಭೀಮಾ ನದಿ ಬ್ರಿಡ್ಜ್ ದುರಸ್ತಿಗೆ ಉಮೇಶ ಕೆ. ಮುದ್ನಾಳ ಆಗ್ರಹ

ಯಾದಗಿರಿ ನಗರದ ಗುರುಶಿಣಗಿ ಮೂಲಕ ಶಹಾಪುರಕ್ಕೆ ಸಂಪರ್ಕ ಕಲ್ಪಿಸುವ ಯಾದಗಿರಿ–ಶಹಾಪುರ ಬೈಪಾಸ್...