ಧರ್ಮ ಮೀರಿ ದೇಶ ಕಟ್ಟಿದ ಆಜಾದ್‌ ಅವರ ಚಿಂತನೆ ಇಂದಿಗೂ ಪ್ರಸ್ತುತ: ಡಾ. ಎ ನಾರಾಯಣ

Date:

“ಮೌಲಾನಾ ಆಜಾದ್‌ ಧರ್ಮನಿರಪೇಕ್ಷ ಭಾರತ ನಿರ್ಮಾಣದಲ್ಲಿ ಬದ್ಧರಾಗಿದ್ದರು. ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಆಗಬಾರದು ಎಂದು ಅವರು ತೀವ್ರವಾಗಿ ವಿರೋಧಿಸಿದರು. ಮುಸ್ಲಿಮರು ಈ ದೇಶದ ಅವಿಭಾಜ್ಯ ಅಂಗವೆಂದು ಬೋಧಿಸಿದರು. ವಿಭಜನೆಯಿಂದ ಎರಡೂ ದೇಶಗಳ ಅಲ್ಪಸಂಖ್ಯಾತರು ಶಾಶ್ವತ ಅಸುರಕ್ಷತೆ ಅನುಭವಿಸುತ್ತಾರೆ ಎಂದು ಅವರು ಮುಂಚಿತವಾಗಿಯೇ ಎಚ್ಚರಿಸಿದ್ದರು”ಎಂದು ಅಜಿತ್ ಪ್ರೇಮ್‌ಜೀ ಫೌಂಡೇಶನ್‌ನ ಪ್ರಾಧ್ಯಾಪಕ, ರಾಜಕೀಯ ವಿಶ್ಲೇಷಕ ಮತ್ತು ಅಂಕಣಕಾರ ಡಾ ಎ ನಾರಾಯಣ ಅಭಿಪ್ರಾಯಪಟ್ಟರು.

- Advertisement -

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವತಿಯಿಂದ ಇಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ದಿನದಲ್ಲಿ ಮಾತನಾಡಿದ ಅವರು, “ಆಜಾದ್‌ ಅವರು ಭಾರತದ ಮೊದಲ ಶಿಕ್ಷಣ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ತಾಂತ್ರಿಕ ಮತ್ತು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಐಐಟಿಗಳು, ಯೂನಿವರ್ಸಿಟಿ ಗ್ರಾಂಟ್ ಕಮಿಷನ್ (UGC), ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ICCR), ಕೇಂದ್ರ ಸಾಹಿತ್ಯ, ಸಂಗೀತ ನಾಟಕ ಮತ್ತು ಲಲಿತಕಲಾ ಅಕಾಡೆಮಿಗಳ ಸ್ಥಾಪನೆಯಲ್ಲಿ ಅವರು ಮುಂಚೂಣಿಯಲ್ಲಿದ್ದರು. ಇಂದಿನ ತಾಂತ್ರಿಕ ಭಾರತಕ್ಕೆ ಅಂದಿನ ಕಾಲದಲ್ಲೇ ಬುನಾದಿ ಹಾಕಿದವರು ಮೌಲಾನಾ ಆಜಾದ್‌” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

“ಜಾತಿ, ಧರ್ಮಗಳ ಎಲ್ಲೆ ಮೀರಿ ಈ ದೇಶದ ಶಿಕ್ಷಣ ವ್ಯವಸ್ಥೆ ಕಟ್ಟಿದ ಮಹಾನ್‌ ನಾಯಕ ಮೌಲಾನಾ ಅಬುಲ್‌ ಕಲಾಂ ಆಜಾದ್‌ ಅವರ ಚಿಂತನೆಗಳು ಇಂದಿಗೂ ಪ್ರಸ್ತುತ. ಮೌಲಾನಾ ಅಬುಲ್ ಕಲಾಂ ಆಜಾದ್‌ ಅವರ ಕತೆ ಈ ದೇಶದ ಸ್ವಾತಂತ್ರ್ಯ ಹೋರಾಟದ ಕಥೆಯೇ ಆಗಿದೆ. ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ಭಾರತದ ಶಿಕ್ಷಣ ವ್ಯವಸ್ಥೆಯ ಶಿಲ್ಪಿ ಅವರು. ಆಜಾದ್‌ ಅವರ ಜೀವನ ಗಾಥೆಯನ್ನು ಎರಡು ಆಯಾಮಗಳಿಂದ ಓದಬಹುದು. ಒಂದು- ಸ್ವಾತಂತ್ರ್ಯ ಹೋರಾಟದ ನಾಯಕತ್ವ; ಇನ್ನೊಂದು- ಸ್ವಾತಂತ್ರ್ಯಾನಂತರ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಅವರ ಕೌಶಲ್ಯ. ʼಗಾಂಧಿʼ ಸಿನಿಮಾದಲ್ಲಿ ಗಾಂಧಿ, ನೆಹರು, ಪಟೇಲ್ ಹಾಗೂ ಆಜಾದ್‌ ಅವರ ಪಾತ್ರ ಕಾಣಸಿಗುವುದು ಸಾಂಕೇತಿಕವಲ್ಲ. ಅದು ಸ್ವಾತಂತ್ರ್ಯ ಸಂಗ್ರಾಮದ ನಾಲ್ಕು ಗಾಲಿಗಳಲ್ಲಿ ಒಬ್ಬರಾಗಿದ್ದ ಆಜಾದ್‌ ಅವರ ಇತಿಹಾಸಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ” ಎಂದು ವಿಶ್ಲೇಷಿಸಿದರು.

WhatsApp Image 2025 11 11 at 4.43.05 PM
ಮೌಲಾನಾ ಅಬುಲ್‌ ಕಲಾಂ ಆಜಾದ್

“1889ರಲ್ಲಿ ಜನಿಸಿದ ಆಜಾದ್‌ ಕೇವಲ 17ನೇ ವಯಸ್ಸಿನಲ್ಲಿ ಬಂಗಾಳ ವಿಭಜನೆ ವಿರುದ್ಧ ಸಿಡಿದಿದ್ದರು. 1905ರಲ್ಲಿ ಅಲ್-ಹಿಲಾಲ್ ಪತ್ರಿಕೆಯನ್ನು ಆರಂಭಿಸಿ ಬ್ರಿಟಿಷರ ವಿರುದ್ಧ ತೀಕ್ಷ್ಣವಾಗಿ ಬರೆಯಲಾರಂಭಿಸಿದರು. ಮುಂದೆ ಬ್ರಿಟಿಷರು ಆ ಪತ್ರಿಕೆಯನ್ನೇ ನಿಷೇಧಿಸುವ ಮಟ್ಟಿಗೆ ಅವರ ಬರಹಗಳು ಪರಿಣಾಮಕಾರಿಯಾಗಿದ್ದವು. ನಂತರ ಮತ್ತೊಂದು ಪತ್ರಿಕೆ ಪ್ರಾರಂಭಿಸಿ ಹೋರಾಟ ಮುಂದುವರೆಸಿದರು. 1916ರಲ್ಲಿ ಬಂಧನಕ್ಕೊಳಗಾಗಿ ನಾಲ್ಕು ವರ್ಷ ಜೈಲಿನಲ್ಲಿದ್ದರೂ, ಬರವಣಿಗೆ ಮತ್ತು ಚಿಂತನೆ ಮುಂದುವರೆಸಿದರು. 1920ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಚಳವಳಿಗೆ ಸೇರ್ಪಡೆಯಾದ ಆಜಾದ್‌ ಅವರನ್ನು 35ನೇ ವಯಸ್ಸಿನಲ್ಲಿ ಗಾಂಧೀಜಿ ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಿದರು. ಅಸಹಕಾರ ಚಳವಳಿಯ ನಂತರ ಉಂಟಾದ ಸಂಘರ್ಷದ ಸಮಯದಲ್ಲಿ ಪಕ್ಷವನ್ನು ಒಗ್ಗೂಡಿಸಿ ನಯವಾಗಿ ಮುನ್ನಡೆಸಿದ ಅವರ ಸಾಮರ್ಥ್ಯವೇ ಅವರಿಗೆ ನಾಯಕತ್ವದ ಸ್ಥಾನ ಮಾನ ತಂದುಕೊಟ್ಟಿತ್ತು. 1940–44ರ ಅವಧಿಯಲ್ಲಿ ಕಾಂಗ್ರೆಸ್‌ನ ಅಧ್ಯಕ್ಷರಾಗಿ, ಅತ್ಯಂತ ಉಗ್ರ ಪರಿಸ್ಥಿತಿಯಲ್ಲೂ ದೇಶವನ್ನು ಏಕತೆಯೊಂದಿಗೆ ಮುನ್ನಡೆಸಲು ಸತತ ಪ್ರಯತ್ನಪಟ್ಟರು. ʼವಿಷಮ, ಗೊಂದಲ ಪರಿಸ್ಥಿತಿಯಲ್ಲೂ ದೃಢ ಸಂಕಲ್ಪದಿಂದ, ಸ್ಪಷ್ಟ ಆಲೋಚನೆಗಳಿಂದ ಪರ-ವಿರೋಧದ ಎರಡೂ ಗುಂಪುಗಳನ್ನು ಒಟ್ಟಿಗೆ ಮುನ್ನಡೆಸಬಲ್ಲ ಸಾಮರ್ಥ್ಯವೇ ನಿಜವಾದ ನಾಯಕತ್ವʼ ಅದು ಆಜಾದ್‌ ಅವರಿಗೆ ಒಲಿದುಬಂದಿತ್ತು ಎಂದು ನಿಸ್ಸಂಶಯವಾಗಿ ಹೇಳಬಹುದು” ಎಂದು ಹೇಳಿದರು.

ಇದನ್ನೂ ಓದಿ: ಬೆಂಗಳೂರು | ಬೈಕಿನಲ್ಲಿ ಡ್ರಾಪ್ ಕೊಡದ ನೆಪ: ಮಂಗಳೂರು ಮೂಲದ ನೌಕರ ಸಹಿತ ಇಬ್ಬರಿಗೆ ಹಲ್ಲೆ; ಓರ್ವನ ಬಂಧನ

“ನಾನು ಇಂಗ್ಲೆಂಡಿನಲ್ಲಿ ಉನ್ನತ ಶಿಕ್ಷಣ ಪಡೆಯುವ ವೇಳೆ ಗಮನಿಸಿದ ಪ್ರಮುಖ ಅಂಶವೆಂದರೆ, ಅಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ನಡುವೆ ಅಂತರವಿಲ್ಲ. ಶ್ರೀಮಂತರು, ಬಡವರು ಎಲ್ಲರೂ ಸರ್ಕಾರಿ ಶಾಲೆಗಳಲ್ಲೇ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಾರೆ. ಎಲ್ಲ ವರ್ಗದ ಮಕ್ಕಳು ಒಂದೇ ತರಗತಿಯಲ್ಲಿ ಕಲಿಯುತ್ತಾರೆ. ಇದನ್ನೇ ‘ಕಾಮನ್‌ ಸ್ಕೂಲಿಂಗ್‌ ಸಿಸ್ಟಮ್‌’ ಎನ್ನುತ್ತಾರೆ. ಈ ವ್ಯವಸ್ಥೆಯನ್ನು ಭಾರತದಲ್ಲೂ ಅಳವಡಿಸಬೇಕು ಎನ್ನುವುದು ಮೌಲಾನಾಆಜಾದ್‌ ಅವರ ಕನಸಾಗಿತ್ತು. ಶಿಕ್ಷಣ ಯಾರಿಗಾದರೂ ಸಿಗುವ ಸೌಲಭ್ಯವಲ್ಲ, ಅದು ಪ್ರತಿಯೊಬ್ಬರ ಹಕ್ಕು ಎಂಬ ನಂಬಿಕೆಯನ್ನೇ ಆಜಾದ್‌ ಅವರು ಬಿತ್ತಿದ್ದರು. ಅಬುಲ್ ಕಲಾಂ ಆಜಾದ್‌ ಅವರ ಬದುಕು ಮತ್ತು ಚಿಂತನೆಗಳು ಭಾರತದ ಶಿಕ್ಷಣ ಮತ್ತು ರಾಷ್ಟ್ರದ ಏಕತೆಯ ಪಾಠವಾಗಿದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಕ್ಫ್ ಮತ್ತು ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಿವಾಜಿನಗರ ಶಾಸಕ ರಿಜ್ವಾನ್‌ ಅರ್ಷದ್‌, ಮುಖ್ಯಮಂತ್ರಿಗಳ ರಾಜ್ಯ ಕಾರ್ಯದರ್ಶಿ ಹಾಗೂ ಶಾಸಕ ನಸೀರ್‌ ಅಹಮದ್‌, ಮೈನಾರಿಟಿ ಕಮಿಷನ್‌ ಅಧ್ಯಕ್ಷ ನಿಸಾರ್‌ ಅಹಮದ್‌, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಮೆಹರೋಜ್‌ ಖಾನ್‌ ಸೇರಿದಂತೆ ಇಲಾಖೆಯ ಮುಖಂಡರು, ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ಮನುಷ್ಯಕೇಂದ್ರಿತ ವೈಜ್ಞಾನಿಕ ಚಿಂತನೆ ಅತ್ಯಗತ್ಯ: ಡಾ. ರಾಜಪ್ಪ ದಳವಾಯಿ

ಮನುಷ್ಯನಿಗಿಂತ ಧರ್ಮ, ದೇವರು, ದೇವಾಲಯಗಳು ಹಾಗೂ ಧಾರ್ಮಿಕ ಸಂಸ್ಥೆಗಳು ಮುಖ್ಯವಾಗುವ ಪರಿಸ್ಥಿತಿ...

ಹಾಸನ | ಭಗತ್ ಸಿಂಗ್ ಕೇವಲ ಕ್ರಾಂತಿಕಾರಿಯಲ್ಲದೆ ವೈಜ್ಞಾನಿಕ ಮನೋಭಾವ ಉಳ್ಳವರಾಗಿದ್ದರು: ಡಾ. ಎಚ್ ಆರ್ ಸ್ವಾಮಿ

ಭಗತ್ ಸಿಂಗ್ ಅವರನ್ನು ಕೇವಲ ಒಬ್ಬ ಕ್ರಾಂತಿಕಾರಿ ಅಥವಾ ಸ್ವಾತಂತ್ರ್ಯ ಹೋರಾಟಗಾರನಾಗಿ...