ಕಲಬುರಗಿಯಲ್ಲಿ ನೀರಿನ ಹಾಹಾಕಾರ: ಉಜನಿ ಡ್ಯಾಮ್‌ನಿಂದ ರಾಜ್ಯದ ಪಾಲಿನ 15 ಟಿಎಂಸಿ ನೀರು ಬಿಡುಗಡೆಗೆ‌ ರೈತರ ಒತ್ತಾಯ

Date:

ಈ ವರ್ಷ 2026ರ ಜೂನ್, ಜುಲೈ ತಿಂಗಳಲ್ಲಿ ಮಳೆ ಕೈ ಕೊಟ್ಟಿರುವುದರಿಂದ ರೈತರ ಜಿವನಾಡಿಯಾಗಿರುವ ಬೆಳೆಗಳಾದ ಕಬ್ಬು, ಹತ್ತಿ ಮೆಣಸಿನಕಾಯಿ ಸೇರಿದಂತೆ ಇತರೆ ನೀರಾವರಿ ಬೆಳೆಗಳು ಒಣಗುತ್ತಿವೆ ದನಕರುಗಳಿಗೆ, ಪ್ರಾಣಿ ಪಕ್ಷಿಗಳಿಗೆ ಮತ್ತು ಸಾರ್ವಜನಿಕ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಕಲಬುರಗಿ ಜಿಲ್ಲೆಯ ಸುಮಾರು ಹಳ್ಳಿಗಳಿಗೆ ಉಜನಿ ಡ್ಯಾಮ್ ಮೂಲಕ ನೀರು ಸರಬರಾಜಾಗುತ್ತದೆ. ಈಗ ಸಾರ್ವಜನಿಕರು, ಪ್ರಾಣಿ ಪಕ್ಷಿಗಳು, ದನಕರುಗಳ ಹಿತದೃಷ್ಟಿಯಿಂದ ಹಾಗೂ ರೈತರ ಉಳಿವಿಗಾಗಿ ನಮ್ಮ ಪಾಲಿನ ನೀರನ್ನು ಹರಿಸಬೇಕು ಎಂಬುದು ರೈತರ ಆಗ್ರಹವಾಗಿದೆ.

ಕಲಬುರಗಿ ಜಿಲ್ಲೆಯಲ್ಲಿ ಮಳೆ ಕೊರತೆಯಾಗಿರುವುದರಿಂದ ಹೆಸರು, ಉದ್ದು, ತೊಗರಿ ಸೇರಿದಂತೆ ಮುಂಗಾರು ಬಿತ್ತನೆ ಕುಂಠಿತವಾಗಿದೆ. ಹಾಗಾಗಿ ಬರಗಾಲವೆಂದು ಘೋಷಿಸಬೇಕು. ಆಲಮಟ್ಟಿ ಡ್ಯಾಮ್‌ನಿಂದ ಕೃಷ್ಣಾ ಮೇಲ್ದಂಡೆ ಯೋಜನೆಯ ಭೀಮಾ ನದಿ ನೀರನ್ನು ನಂಬಿದ ರೈತರು ಕಬ್ಬುಬೆಳೆ ಬಿತ್ತನೆ ಮಾಡಿದ್ದಾರೆ. ಹಾಗಾಗಿ ಈ ರೈತರಿಗೆ ಮತ್ತು ಕಲಬುರಗಿ ಜಿಲ್ಲೆಯ ದನಕರುಗಳಿಗೆ, ಪ್ರಾಣಿಪಕ್ಷಿಗಳಿಗೆ ಅನುಕೂಲವಾಗುವಂತೆ ಸೊನ್ ಬ್ಯಾರೆಜ್(ಇಂದ್ರಪುರಿ ಬ್ಯಾರೆಜ್)ನಿಂದ ಗಾಣಗಾಪುರದವರೆಗೆ ಆಲಮಟ್ಟಿ ಡ್ಯಾಮ್‌ನಿಂದ 2ಟಿಎಂಸಿ ನೀರು ಹರಿಸಬೇಕು. ಮಹಾರಾಷ್ಟ್ರ ಉಜನಿ ಡ್ಯಾಮ್‌ನಿಂದ ಹರಿಸಬೇಕಾಗಿರುವ ನಮ್ಮ ಪಾಲಿನ 15 TMC ನೀರನ್ನು ಬಿಡುಗಡೆ ಮಾಡಬೇಕು. ಗಾಣಗಾಪುರ ದತ್ ಕ್ಷೇತ್ರದ ಭಕ್ತಾದಿಗಳಿಗೆ ಶುದ್ದೀಕರಣಕ್ಕೆ, ಕುಡಿಯುವ ನೀರಿಗೆ, ದನಕರುಗಳಿಗೆ ನೀರೊದಗಿಸಬೇಕು. ಅಲ್ಲದೆ ಕಣಿಕಿ ಗೋ ಶಾಲೆ ತೆರೆಯಬೇಕು.

- Advertisement -

ಎಲ್ ನಿನೋ ಪರಿಣಾಮ ರಾಜ್ಯಾದ್ಯಂತ ಬರಗಾಲದ ಛಾಯೆ ಆವರಿಸಿದೆ. ಕಲಬುರಗಿ ಜಿಲ್ಲಾದ್ಯಂತ ಜೂನ್, ಜುಲೈ ತಿಂಗಳಲ್ಲಿ ವಾಡಿಕೆಯಷ್ಟು ಮಳೆಯಾಗದೆ ರೈತರು ಚಿಂತಾಜನಕರಾಗಿದ್ದಾರೆ. ಮುಂಗಾರು ಬಿತ್ತನೆಗೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಾಲ ಸೂಲ ಮಾಡಿ ಬಿತ್ತನೆ ಬೀಜ, ರಸಗೊಬ್ಬರ ಖರಿದಿಸಿದ್ದಾರೆ. ಕಲಬುರಗಿ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಅಲ್ಪಸ್ವಲ್ಪ ಬಿತ್ತನೆಯನ್ನೂ ಮಾಡಿದ್ದಾರೆ. ಮೊಳಕೆ ಒಡೆದ ಬೆಳೆಗಳಾದ ಹೆಸರು, ಉದ್ದು, ತೊಗರಿ, ಸೋಯಾ ಬೆಳೆಗಳಿಗೆ ತೇಂವಾಂಶದ ಕೊರತೆಯಾಗಿದ್ದು, ಬಿಸಲಿನ ತಾಪಮಾನಕ್ಕೆ ಒಣಗುತ್ತಿವೆ. ರೈತರ ರೊಕ್ಕದ ಮಾಲು ಹೆಸರು, ಉದ್ದು ಸಂಪೂರ್ಣವಾಗಿ ಕೈ ಕೊಟ್ಟಂತಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಅಸ್ಸಾಂ, ಬಿಹಾರ ಕತ್ತಲಲ್ಲಿ ಮುಳುಗಿದಾಗ ಮೋದಿಗೆ ‘ಆಶೀರ್ವಾದ್ ಕಾ...

ದೆಹಲಿಯಲ್ಲಿ ಕಟ್ಟಡ ಕುಸಿದು ವಿದ್ಯಾರ್ಥಿಗಳು ಹೆಣವಾದಾಗ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆಘಾತಗೊಂಡು ಎಳೆ ಜೀವಗಳು ಸಾವಿನ ದಾರಿ ಹಿಡಿದಾಗ, ತಮ್ಮ ಹಕ್ಕುಗಳಿಗಾಗಿ ದೇಶದ ಯುವಜನ ಬೀದಿಗಿಳಿದಾಗ, ಕೊನೆಗೆ ನೈಸರ್ಗಿಕ ವಿಕೋಪದಿಂದ ದೇಶದ ಜನ...

ಚುನಾವಣಾ ಕಳ್ಳತನ: ಎದುರಾಳಿಗಳೇ ಮಾಯವಾದರೆ! ನಂದಿಗ್ರಾಮದ ಟ್ರೇಲರ್ –...

ಮತದಾನಕ್ಕೂ ಮುನ್ನ ಎದುರಾಳಿಯೇ ಕಣದಿಂದ ಮಾಯವಾದರೆ, ಅದನ್ನು ಚುನಾವಣೆ ಎನ್ನಬಹುದೇ? ನಂದಿಗ್ರಾಮದ ಬೆಳವಣಿಗೆಗಳು 2027ರ ಉತ್ತರ ಪ್ರದೇಶ ಚುನಾವಣೆಗೂ ಗಂಭೀರ ಸವಾಲು ಒಡ್ಡುವಂತಿವೆ ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ನಂದಿಗ್ರಾಮದ...

ಡಿಜಿಟಲ್ ಇಂಡಿಯಾಕ್ಕೆ ಹಿನ್ನಡೆ; ಮೋದಿ ನೀತಿಯಿಂದ ಮತ್ತೆ ನಗದಿನತ್ತ...

ಸರ್ಕಾರದ ಈ ನಿರ್ಧಾರ ಜನಸಾಮಾನ್ಯರಿಗೆ ಎಷ್ಟು ಕಿರಿಕಿರಿ ಉಂಟುಮಾಡಿದೆ ಎಂಬುದನ್ನು 'ಲೋಕಲ್ ಸರ್ಕಲ್ಸ್' (Local Circles) ನಡೆಸಿದ 32,000ಕ್ಕೂ ಹೆಚ್ಚು ಜನರ ಸಮೀಕ್ಷೆ ಬಟಾಬಯಲು ಮಾಡಿದೆ. ಸಮೀಕ್ಷೆಯ ಪ್ರಕಾರ, ಕೇವಲ ಶೇ.17ರಷ್ಟು ವರ್ತಕರು...

ಮಳೆ ಹೋಗಿ ಅಟ್ಟ ಸೇರಿದ್ದರಿಂದ ಮುಂಗಾರು ಬಿತ್ತನೆ ಕುಂಠಿತವಾಗಿದೆ. ಮುಂಗಾರು ಬೆಳೆಗಳು ರೈತರಿಗೆ ಲಾಗೋಡಿಗಾಗಿ ಆಸರೆಯಾಗುತ್ತಿದ್ದವು. ಪಾವು(ಸೇರು) ದಾಣಿ(ಧಾನ್ಯ) ಮಾಲು ಇಲ್ಲದೆ ರೈತರ ಬದುಕು ಅಧೊಗತಿಯಾಗಿದೆ. ಮುಂದೆ ಕುಟುಂಬದ ಬದುಕು ನಡೆಸುವುದು ಹೇಗೆ? ದನಕರುಗಳಿಗೆ ಕಣಿಕಿ(ಮೇವು) ಹೇಗೆ ಹೊಂದಿಸುವುದು ಎಂಬ ಚಿಂತೆ ಬಹಳ ಗಂಭಿರವಾಗಿದ್ದು, ರೈತರು ಚಿಂತಾಜನಕರಾಗಿದ್ದಾರೆ.

ಅಂತರ್ಜಲ ಬತ್ತುತ್ತಿದ್ದು, ಬೋರ್‌ವೆಲ್‌ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾತ್ತಿದೆ. ತೊಗರಿ ನಾಡು ಬರಡಾಗಿದೆ. ಮಳೆ ಇಲ್ಲದೆ ಕಬ್ಬು ಒಣಗುತ್ತಿದೆ. ಮಹಾರಾಷ್ಟ್ರ ಪುಣೆ ಉಜನಿ ಡ್ಯಾಮ್‌ನಿಂದ ಕರ್ನಾಟಕ ನಮ್ಮ ನೀರಿನ ಪಾಲು 15 TMC ನೀರು ಬಿಡಲು ಸರ್ಕಾರ ಮುಂದಾಗಿ ರೈತರ ನೆರವಿಗೆ ನಿಲ್ಲಬೇಕು ಎಂಬುದು ರೈತ ಸಂಘದ ಒತ್ತಾಯವಾಗಿದೆ

ಕೃಷ್ಣಾ ನದಿಯ ಉಪನದಿಯಾದ ಭೀಮಾ ನದಿಯ ಮೇಲೆ ನಿರ್ಮಿಸಲಾದ ಉಜನಿ ಅಣೆಕಟ್ಟು , ಭೀಮಾ ಅಣೆಕಟ್ಟು ಅಥವಾ ಭೀಮಾ ನೀರಾವರಿ ಯೋಜನೆ ಎಂದೂ ಕರೆಯಲ್ಪಡುತ್ತದೆ. ಇದು ಭಾರತದ ಮಹಾರಾಷ್ಟ್ರ ರಾಜ್ಯದ ಸೋಲಾಪುರ ಜಿಲ್ಲೆಯ ಮಾಧಾ ತಾಲೂಕಿನ ಉಜನಿ ಗ್ರಾಮದ ಬಳಿ ಇರುವ ಮಣ್ಣು ತುಂಬುವ ಮತ್ತು ಕಲ್ಲಿನ ಗುರುತ್ವಾಕರ್ಷಣೆಯ ಅಣೆಕಟ್ಟು .

ಕರ್ನಾಟಕದಲ್ಲಿ ನೀರಿನ ಹಾಹಾಕಾರ ತುಂಬಾ ಗಂಭೀರವಾಗಿದೆ. ಭೀಮಾ ನದಿಯ ಮೇಲೆ ನೆಲೆಗೊಂಡಿರುವ 117 ಟಿಎಂಸಿ ನೀರಿನ ಸಾಮರ್ಥ್ಯವಿರುವ ಅಣೆಕಟ್ಟು ಪ್ರಾಥಮಿಕವಾಗಿ ಪುಣೆಯ ಮೇಲಿನ ಜಲಾನಯನ ಪ್ರದೇಶದಿಂದ(ಉದಾ. ಖಡಕ್ವಾಸ್ಲಾ ವೃತ್ತ) ಒಳಹರಿವು ಮತ್ತು ಹೊರಹರಿವನ್ನು ಹೊಂದಿದೆ. ಮಹಾರಾಷ್ಟ್ರದಲ್ಲಿರುವ ಉಜನಿ ಅಣೆಕಟ್ಟು(ಭೀಮಾ ಅಣೆಕಟ್ಟು) ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ನೀರಿನ ಚಲನಶೀಲತೆ ಹರಿವಿನ ದಿಕ್ಕು: ಭೀಮಾ ನದಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಹರಿಯುತ್ತದೆ. ಆದ್ದರಿಂದ, ನೀರು ಮಹಾರಾಷ್ಟ್ರದಿಂದ ಕೆಳಮುಖವಾಗಿ ಕರ್ನಾಟಕದ ಸೀಮೆಯಾದ ಕಲಬುರಗಿಗೂ ಹರಿಯುತ್ತದೆ. ಸಾಂದರ್ಭಿಕವಾಗಿ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಬಿಕ್ಕಟ್ಟನ್ನು ನಿವಾರಿಸಲು ಉಜನಿ ಮತ್ತು ಕೊಯ್ನಾ ಜಲಾಶಯಗಳಿಂದ ಭೀಮಾ ಮತ್ತು ಕೃಷ್ಣಾ ನದಿಗಳಿಗೆ ನೀರನ್ನು ಬಿಡುಗಡೆ ಮಾಡುವಂತೆ ಮಹಾರಾಷ್ಟ್ರವನ್ನು ಆಗ್ರಹಿಸುವುದು ವಾಸ್ತವವಾಗಿ ಕರ್ನಾಟಕವೇ ಆಗಿದೆ. ಕರ್ನಾಟಕದ ನೀರಿನ ಪಾಲನ್ನು ಉಜನಿ ಡ್ಯಾಮ್‌ನಿಂದ ಬಿಡಬೇಕು.

ಕರ್ನಾಟಕದ ನಾಯಕತ್ವವು ಪ್ರಸ್ತುತ ಕೊರತೆಯನ್ನು ನೀಗಿಸಲು ನೀರು ಬಿಡುಗಡೆ ಮಾಡುವಂತೆ ರೈತ ಸಂಘ ಒತ್ತಾಯಿಸುತ್ತದೆ.

ವಿವರಪ್ರಮಾಣ
ಅಣೆಕಟ್ಟಿನ ಪ್ರಕಾರಸಂಯೋಜಿತ ಭೂಭರ್ತಿ ಮತ್ತು ಗುರುತ್ವಾಕರ್ಷಣೆ
ನದಿಭೀಮಾ ನದಿ
ಎತ್ತರ56.4 ಮೀಟರ್ (185 ಅಡಿ)
ಉದ್ದ2,534 ಮೀಟರ್ / 2.534 ಕಿ.ಮೀ. (8,314 ಅಡಿ)
ಕ್ರೆಸ್ಟ್ ಅಗಲ6.7 ಮೀಟರ್ (22 ಅಡಿ)
ಅಣೆಕಟ್ಟಿಗೆ ಬಳಸಿದ ವಸ್ತುಗಳ ಪ್ರಮಾಣ33,20,000 ಘನ ಮೀಟರ್ (43,40,000 ಘನ ಯಾರ್ಡ್)
ದ್ವಾರಗಳ ಸಂಖ್ಯೆ41
ಸ್ಪಿಲ್‌ವೇ ಪ್ರಕಾರಕಾಂಕ್ರೀಟ್
ಸ್ಪಿಲ್‌ವೇ ಸಾಮರ್ಥ್ಯಸೆಕೆಂಡಿಗೆ 15,717 ಘನ ಮೀಟರ್ (5,55,000 ಘನ ಅಡಿ/ಸೆಕೆಂಡ್)

ಅಣೆಕಟ್ಟಿನ ಪ್ರಮುಖ ಅಳತೆಗಳು

ಎತ್ತರ, ಒಟ್ಟು ಉದ್ದ ಮತ್ತು ಕ್ರೆಸ್ಟ್ ಅಗಲ — ಮೀಟರ್‌ಗಳಲ್ಲಿ.

ವಿವರಮೀಟರ್
ಎತ್ತರ56.4
ಉದ್ದ2,534
ಕ್ರೆಸ್ಟ್ ಅಗಲ6.7

ಅನ್ನದಾತರು ಸಾಲ ಭಾದೆ ತಾಳಲಾರದೆ ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿವೆ. ರೈತರ ಒಕ್ಕಲುತನ ಬೀದಿಪಾಲಾಗುತ್ತಿದೆ. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬ ಗಾದೆ ಮಾತು ಹುಸಿಯಾಗುತ್ತಿದೆ. ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಸಂಪೂರ್ಣವಾಗಿ ನೆಲಕಚ್ಚಿದ್ದು, ಬೆಂಬಲ ಬೆಲೆ ಇಲ್ಲದೆ ಅನ್ನದಾತರು ನೇಣಿಗೆ ಶರಣಾಗುತ್ತಿದ್ದಾರೆ. ನಮ್ಮನ್ನು ಆಳುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಂಬಲ ಬೆಲೆ ಬಗ್ಗೆ ತಿರುಗಿ ನೊಡುತ್ತಿಲ್ಲ; ಕಿಂಚಿತ್ತೂ ಕಾಳಜಿ ಇಲ್ಲದಂತಾಗಿದೆ. ಕೇವಲ ಮೊಸಳೆ ಕಣ್ಣೀರು ಸುರಿಸುತ್ತಿರುವ ರೈತ ವಿರೋಧಿ ನೀತಿ ಕೈ ಬಿಟ್ಟು ರೈತರ ನೆರವಿಗೆ ಧಾವಿಸಬೇಕು. ಅಲ್ಪ ಸ್ವಲ್ಪ ಬೇಸಿಗೆ ನೀರಾವರಿ ಬೆಳೆಗಳಿಗಾದರೂ ಆಲಮಟ್ಟಿ ಡ್ಯಾಮ್‌ನಿಂದ ಕೃಷ್ಣಾ ಮೇಲ್ದಂಡೆ ಮೂಲಕ ಭೀಮಾ ನದಿಗೆ 2 ಟಿಎಂಸಿ ನೀರು ಹರಿಸಿ ಅಫಜಲಪುರ ಸೊನ್ ಬ್ಯಾರೇಜ್‌ನಿಂದ ಗಾಣಗಾಪುರ ಘತ್ತರ್ಗಿವರೆಗೆ ನೀರು ಹರಿಸಿ, ದನಕರುಗಳಿಗೆ, ಪ್ರಾಣಿ-ಪಕ್ಷಿಗಳಿಗೆ ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರು ಬಿಡಬೇಕು.

ಗಾಣಗಾಪುರ ದತ್ತ ಕ್ಷೇತ್ರಕ್ಕೆ ಬರುವಂತಹ ಯಾತ್ರಿಕರಿಗೆ ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಶುದ್ಧ ನೀರಿಲ್ಲದೆ ಅನಿವಾರ್ಯವಾಗಿ ಗಬ್ಬು ನಾರುತ್ತಿರುವ ನೀರನ್ನೇ ಕುಡಿಯುವ ದುಃಸ್ಥಿತಿ ನಿರ್ಮಾಣವಾಗಿದೆ. ಈ ಗಲೀಜು ನೀರಿನಿಂದ ರೋಗ ರುಜುಣಿ ಕಾಲರ ಹರಡುವ ಸಂಭವವಿದೆ ತಕ್ಷಣವೇ ಸಾರ್ವಜನಿಕ ಶುದ್ದಿಕರಣ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು

ನಮ್ಮ ಭಾಗದಲ್ಲಿ ಹೆಸರಾಂತವಾದ ಭಿಮಾ ನದಿ ನೀರಿನ ಮೇಲೆ ನಂಬಿ ಕುಳಿತ ಜನರಿಗೆ ನಿರಡಿಕೆಯಾದ ಸಮಯದಲ್ಲಿ ಮಹಾರಾಷ್ಟ್ರ ರಾಜ್ಯದ ಪುಣೆ ಉಜನಿ ಡ್ಯಾಮ್ ನಿಂದ ನಿರು ಬಿಡಲಾರದೆ ನೆನೆಗುದಿಗೆ ಹಾಕಿ ಕರ್ನಾಟಕದ ಕಲಬುರಗಿ ಜಿಲ್ಲೆಯ ಅನ್ನದಾತರಿಗೆ ಅನ್ಯಾಯ ಮಾಡಿದಂತಾಗಿದೆ ರೈತ ಸಮುದಾಯದ ಜನರು ಹನಿ ಕುಡಿಯುವ ನೀರಿಗಾಗಿ ಜನರು ಪರದಾಡುವಂತಾಗಿದೆ ಕರ್ನಾಟಕ ರಾಜ್ಯ ಸರ್ಕಾರ ಮಾನ್ಯ ಮುಖ್ಯಮಂತ್ರಿಗಳು ಮತ್ತು ಕರ್ನಾಟಕ ರಾಜ್ಯದ ನಿರಾವಾರಿ ಮಂತ್ರಿಗಳು ತಕ್ಷಣವೇ ಉಜನಿ ಡ್ಯಾಮ್ ನಿಂದ ನೀರು ನಮ್ಮ ಕರ್ನಾಟಕದ ಪಾಲಿನ 15 TMC ನೀರು ಬಿಡಿಸಲು ಕರ್ನಾಟಕ ರಾಜ್ಯ ಸರ್ಕಾರ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರ ಜಂಟಿ ಸಭೆ ಕರೆದು ಉಜನಿ ಡ್ಯಾಮ್ ನಿಂದ ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಅಫಜಲಪುರ ಭೀಮಾ ನದಿಗೆ ನಮ್ಮ ನೀರಿನ ಪಾಲು 15 TMC ಬಿಡಿಸಲು ರೈತ ಸಂಘ ಒತ್ತಾಯಿಸುತ್ತದೆ.

ಕೃಷ್ಣಾ ಜಲ ವಿವಾದದ ನ್ಯಾಯಮಂಡಳಿ-2 ಕೃಷ್ಣಾ ನೀರು ಹಂಚಿಕೆ ವಿಧಾನವನ್ನು 2010 ಡಿಸೆಂಬರ್‌ 30ರಂದು ಆದೇಶ ಪ್ರಕಟಿಸಿತ್ತು. ಹೆಚ್ಚುವರಿ ಹರಿವುಗಳಿಗಾಗಿ ನದಿತೀರದ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶಕ್ಕೆ ಕೃಷ್ಣಾ ಜಲ ವಿವಾದದ ನ್ಯಾಯಮಂಡಳಿ-2 ಮಾಡಿದ ನೀರಿನ ಶೇ.65ರಷ್ಟು ಹಂಚಿಕೆಯು ಈ ಕೆಳಗಿನಂತಿದೆ:

ಕ್ರ.ಸಂ.ರಾಜ್ಯಹಂಚಿಕೆ (ಟಿ.ಎಂ.ಸಿ.)
1ಮಹಾರಾಷ್ಟ್ರ81
2ಕರ್ನಾಟಕ177
3ಆಂಧ್ರ ಪ್ರದೇಶ190

ಕರ್ನಾಟಕಕ್ಕೆ ಹಂಚಿಕೆಯಾದ 177 ಟಿ.ಎಂ.ಸಿ.ಯ ವಿವರ

ವಿವರಟಿ.ಎಂ.ಸಿ.
ಕೃಷ್ಣಾ ಮೇಲ್ದಂಡೆ ಯೋಜನೆ (ಕೆ.ಜೆ.ವಿ.ಎನ್.-2) ಹಂತ–3ಕ್ಕೆ ಹಂಚಿಕೆ130.90
ಉಳಿದ ನೀರು (ಇತರೆ ಬಳಕೆಗಳಿಗೆ)46.10
ಒಟ್ಟು177.00


ಕರ್ನಾಟಕಕ್ಕೆ ಕೊಟ್ಟಿರುವ 177 ಟಿಎಂಸಿ ನೀರಿನ, 130.90 ಟಿಎಂಸಿ ನೀರನ್ನು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಹಂಚಿಕೆ ಮಾಡಿಲಾಗಿದೆ ಎಂದು ನ್ಯಾಯ ಮಂಡಳಿ ಹೇಳುತ್ತದೆ. ಡ್ಯಾಮ್

ಆಲಮಟ್ಟಿ ಅಣೆಕಟ್ಟಿಯಿಂದ ಬಿಡುಗಡೆಯಾಗುವ ನೀರನ್ನು ನಾರಾಯಣಪುರ ಎಡದಂಡೆ ಕಾಲುವೆ(Narayanpur Left Bank Canal) ಡಿಸ್ಟ್ರಿಬ್ಯೂಟರ್-84ದ ಹಳ್ಳದಿಂದ ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್ (Son Barrage)ಗೆ ನೀರನ್ನು ತಲುಪಿಸಲಾಗುತ್ತದೆ. ಅಲ್ಲಿ ಈಗಾಗಲೇ ಸೊನ್ನ ಬ್ಯಾರೇಜ್‌ನಲ್ಲಿ ಸುಮಾರು 1.5 ಟಿಎಂಸಿ ನೀರು ಸಂಗ್ರಹವಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಹಾಗೂ ಗಾಣಗಾಪುರ ಯಾತ್ರಿಕರು ಘತ್ತರ್ಗಿಯಿಂದ ಗಾಣಗಾಪುರದವರೆಗೆ ಭೀಮಾ ನದಿಯಲ್ಲಿ ನೀರನ್ನು ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿದ್ದೀರಾ? ಕಾವೇರಿ ಜಲಾಶಯಗಳಿಗೆ ಹೆಚ್ಚಿದ ಒಳಹರಿವು: ಕರ್ನಾಟಕ–ತಮಿಳುನಾಡು ನೀರು ಹಂಚಿಕೆ ಬಿಕ್ಕಟ್ಟು ಸದ್ಯಕ್ಕೆ ಶಮನವೇ?

ಈ ವರ್ಷ 2026ರ ಜೂನ್, ಜುಲೈ ತಿಂಗಳಲ್ಲಿ ಮಳೆ ಕೈ ಕೊಟ್ಟಿರುವುದರಿಂದ ರೈತರ ಜಿವನಾಡಿಯಾಗಿರುವ ಬೆಳೆಗಳಾದ ಕಬ್ಬು, ಹತ್ತಿ ಮೆಣಸಿನಕಾಯಿ ಸೇರಿದಂತೆ ಇತರೆ ನೀರಾವರಿ ಬೆಳೆಗಳು ಒಣಗುತ್ತಿವೆ ದನಕರುಗಳಿಗೆ, ಪ್ರಾಣಿ ಪಕ್ಷಿಗಳಿಗೆ ಮತ್ತು ಸಾರ್ವಜನಿಕ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಕಲಬುರಗಿ ಜಿಲ್ಲೆಯ ಸುಮಾರು ಹಳ್ಳಿಗಳಿಗೆ ಉಜನಿ ಡ್ಯಾಮ್ ಮೂಲಕ ನೀರು ಸರಬರಾಜಾಗುತ್ತದೆ. ಈಗ ಸಾರ್ವಜನಿಕರು, ಪ್ರಾಣಿ ಪಕ್ಷಿಗಳು, ದನಕರುಗಳ ಹಿತದೃಷ್ಟಿಯಿಂದ ಹಾಗೂ ರೈತರ ಉಳಿವಿಗಾಗಿ ನಮ್ಮ ಪಾಲಿನ ನೀರನ್ನು ಹರಿಸಬೇಕು ಎಂಬುದು ರೈತರ ಆಗ್ರಹವಾಗಿದೆ.

IMG 20251129 WA0000
ಶರಣಬಸಪ್ಪ ಮಮಶೆಟ್ಟಿ
+ posts

ಸಾಮಾಜಿಕ ಹೋರಾಟಗಾರರು, ಕರ್ನಾಟಕ ಪ್ರಾಂತ ರೈತ ಸಂಘ ಕಲಬುರಗಿ ಜಿಲ್ಲಾ ಮುಖಂಡರು.

ಪೋಸ್ಟ್ ಹಂಚಿಕೊಳ್ಳಿ:

ಶರಣಬಸಪ್ಪ ಮಮಶೆಟ್ಟಿ
ಶರಣಬಸಪ್ಪ ಮಮಶೆಟ್ಟಿ
ಸಾಮಾಜಿಕ ಹೋರಾಟಗಾರರು, ಕರ್ನಾಟಕ ಪ್ರಾಂತ ರೈತ ಸಂಘ ಕಲಬುರಗಿ ಜಿಲ್ಲಾ ಮುಖಂಡರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ 2025: ದೇಶದಲ್ಲೇ ಮೂರನೇ ಸ್ಥಾನಕ್ಕೆ ಜಿಗಿದ ಕರ್ನಾಟಕ!

ದೇಶದಲ್ಲಿ ಎಲೆಕ್ಟ್ರಿಕ್ ವಾಹನ (EV) ಬಳಕೆಯ ವಿಸ್ತರಣೆ ಮತ್ತು ಅಗತ್ಯ ಮೂಲಸೌಕರ್ಯ...

ಕಾಪು : ಕೊಬ್ಬರಿ ಸಂಸ್ಕರಣಾ ಘಟಕದಲ್ಲಿ ಅಗ್ನಿ ಅವಘಡ; ಲಕ್ಷಾಂತರ ರೂ. ನಷ್ಟ

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಸುಭಾಷ್ ನಗರದಲ್ಲಿರುವ ಕೊಬ್ಬರಿ ಸಂಸ್ಕರಣಾ ಘಟಕವೊಂದರಲ್ಲಿ...

ಅದಾನಿ-ಅಂಬಾನಿ, ದೋವಲ್, ಭಾಗವತ್ ಹೈಜಾಕ್ ಮಾಡಿದ ವ್ಯವಸ್ಥೆ: ಫೋಟೋ ಪ್ರದರ್ಶಿಸಿ ಹೇಗೆಂದು ವಿವರಿಸಿದ ರಾಹುಲ್ ಗಾಂಧಿ

"ದೇಶವನ್ನು ನಿರ್ಮಿಸಬೇಕಾದ ವಿದ್ಯಾರ್ಥಿಗಳ ಭವಿಷ್ಯವನ್ನು ಇಂದಿನ ವ್ಯವಸ್ಥೆಯು ಧಮನ ಮಾಡುತ್ತಿದ್ದು, ಇಡೀ...

ಔರಾದ್‌ ತಾಲೂಕು ʼಬರʼ ಘೋಷಣೆಗಾಗಿ ಬೀದಿಗಿಳಿದ ರೈತರು, 10 ದಿನ ಗಡುವು ನೀಡಿದ ಶಾಸಕ ಪ್ರಭು ಚವ್ಹಾಣ

ಬೀದರ್‌ ಜಿಲ್ಲೆಯ ಔರಾದ (ಬಿ) ತಾಲ್ಲೂಕನ್ನು ಕೂಡಲೇ ಬರಪೀಡಿತ ಘೋಷಿಸಿ ರೈತರಿಗೆ...